ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g 4/13 ಪು. 14-15
  • ಅಶ್ಲೀಲ ಚಿತ್ರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಅಶ್ಲೀಲ ಚಿತ್ರ
  • ಎಚ್ಚರ!—2013
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಅಶ್ಲೀಲ ಚಿತ್ರ ನೋಡುವುದನ್ನು ಬೈಬಲ್‌ ಖಂಡಿಸುತ್ತಾ?
  • ವ್ಯಭಿಚಾರದ ವರೆಗೆ ಹೋಗದಿದ್ದರೂ ಅಶ್ಲೀಲ ಚಿತ್ರಗಳನ್ನು ನೋಡೋದು ತಪ್ಪಾ?
  • ಅಶ್ಲೀಲ ಚಿತ್ರಗಳಿಂದ ದೂರವಿರಲು ನಿಮಗೆ ಯಾವ ಸಹಾಯವಿದೆ?
  • ಅಶ್ಲೀಲ ಸಾಹಿತ್ಯದಿಂದ ಉಂಟಾಗುವ ಹಾನಿ
    ಎಚ್ಚರ!—2003
  • ಅಶ್ಲೀಲ ಚಿತ್ರಗಳನ್ನ ನೋಡೋದು ತಪ್ಪು ಯಾಕೆ?
    ಯುವಜನರ ಪ್ರಶ್ನೆಗಳು
  • “ಅಶ್ಲೀಲ ಚಿತ್ರ ಅಥವಾ ವಿಡಿಯೋಗಳನ್ನ ನೋಡೋದ್ರಲ್ಲಿ ತಪ್ಪೇನಿದೆ?”
    ಕಾವಲಿನಬುರುಜು: ಈ ಜಗತ್ತನ್ನು ನಾನು ಬದಲಾಯಿಸಬೇಕಾಗಿಲ್ಲ
  • ಲಂಪಟ ವಿಷಯ ವರ್ಣನೆ ಅಪಾಯಕರವಾಗಿರುವುದಕ್ಕೆ ಕಾರಣ
    ಎಚ್ಚರ!—1992
ಇನ್ನಷ್ಟು
ಎಚ್ಚರ!—2013
g 4/13 ಪು. 14-15

ಬೈಬಲಿನ ದೃಷ್ಟಿಕೋನ

ಅಶ್ಲೀಲ ಚಿತ್ರ

ಅಶ್ಲೀಲ ಚಿತ್ರ ನೋಡುವುದನ್ನು ಬೈಬಲ್‌ ಖಂಡಿಸುತ್ತಾ?

“ಒಬ್ಬ ಸ್ತ್ರೀಯನ್ನು ಕಾಮೋದ್ರೇಕಭಾವದಿಂದ ನೋಡುತ್ತಾ ಇರುವ ಪ್ರತಿಯೊಬ್ಬನು ಈಗಾಗಲೇ ತನ್ನ ಹೃದಯದಲ್ಲಿ ಅವಳೊಂದಿಗೆ ವ್ಯಭಿಚಾರ ಮಾಡಿದವನಾಗಿದ್ದಾನೆ.” —ಮತ್ತಾಯ 5:28.

ಇದು ನಿಮಗೆ ಮಹತ್ವದ್ದೇಕೆ? ಇವತ್ತು ಅಶ್ಲೀಲ ಚಿತ್ರ ಎಲ್ಲೆಲ್ಲೂ ರಾರಾಜಿಸುತ್ತಿದೆ. ಎಲ್ಲರ ಕೈಗೆಟುಕುತ್ತಿದೆ. ನೀವು ದೇವರಿಗೆ ಇಷ್ಟವಾಗುವಂಥ ರೀತಿ ಬದುಕಲು ಬಯಸುವವರಾದರೆ ಮತ್ತು ಸಂತೋಷದ ಬಾಳನ್ನು ಬಾಳಲು ಇಷ್ಟಪಡುವವರಾದರೆ ಅಶ್ಲೀಲ ಚಿತ್ರಗಳನ್ನು ನೋಡುವುದರ ಬಗ್ಗೆ ದೇವರ ಅನಿಸಿಕೆ ಏನೆಂದು ತಿಳಿದುಕೊಳ್ಳಲೇಬೇಕು.

ಬೈಬಲ್‌ ಏನು ಹೇಳುತ್ತೆ? ಬೈಬಲ್‌ನಲ್ಲಿ ಅಶ್ಲೀಲ ಚಿತ್ರಗಳ ಬಗ್ಗೆ ನೇರವಾಗಿ ಏನೂ ಹೇಳಲಾಗಿಲ್ಲ. ಹಾಗಿದ್ದರೂ ಅಶ್ಲೀಲ ಚಿತ್ರಗಳನ್ನು ನೋಡುವುದು ಬೈಬಲ್‌ನಲ್ಲಿರೋ ಅನೇಕ ತತ್ವಗಳಿಗೆ ವಿರುದ್ಧವಾಗಿದೆ.

ಅದರಲ್ಲಿ ಒಂದು ತತ್ವದ ಬಗ್ಗೆ ನೋಡೋಣ. ವಿವಾಹಿತ ವ್ಯಕ್ತಿಯೊಬ್ಬ ಪರಸ್ತ್ರೀಯನ್ನು “ನೋಡುತ್ತಾ” ಇರುವುದಾದರೆ ಆಕೆಯ ಮೇಲೆ ಲೈಂಗಿಕ ಕಾಮನೆಯನ್ನು ಬೆಳೆಸುತ್ತಾ ಹೋಗುತ್ತಾನೆ. ಇದು ಕೊನೆಗೆ ವ್ಯಭಿಚಾರಕ್ಕೆ ನಡೆಸುತ್ತದೆ. ಈ ತತ್ವ, ಅನೈತಿಕ ಸಂಬಂಧ ಇಟ್ಟುಕೊಳ್ಳುವ ಆಸೆಯಿಂದ ಅಶ್ಲೀಲ ಚಿತ್ರವನ್ನು “ನೋಡುತ್ತಾ” ಇರುವ ವಿವಾಹಿತರು ಮತ್ತು ಅವಿವಾಹಿತರಿಗೂ ಅನ್ವಯಿಸುತ್ತೆ. ಈ ನಡತೆಯನ್ನು ದೇವರು ಅಂಗೀಕರಿಸಲ್ಲ. ದೇವರಿಗೆ ಅದು ಅಸಹ್ಯ.

ವ್ಯಭಿಚಾರದ ವರೆಗೆ ಹೋಗದಿದ್ದರೂ ಅಶ್ಲೀಲ ಚಿತ್ರಗಳನ್ನು ನೋಡೋದು ತಪ್ಪಾ?

“ಜಾರತ್ವ, ಅಶುದ್ಧತ್ವ, ಕಾಮಾಭಿಲಾಷೆ, ದುರಾಶೆ, ವಿಗ್ರಹಾರಾಧನೆಯಾಗಿರುವ ಲೋಭ ಮುಂತಾದ . . . ಸ್ವಭಾವಗಳನ್ನು ಸಾಯಿಸಿರಿ.”—ಕೊಲೊಸ್ಸೆ 3:5, ಪವಿತ್ರ ಗ್ರಂಥ ಭಾಷಾಂತರ.

ಜನರು ಏನು ಹೇಳುತ್ತಾರೆ? ಅಶ್ಲೀಲ ಚಿತ್ರಗಳನ್ನು ನೋಡುವುದಕ್ಕೂ ಅನೈತಿಕ ನಡತೆಗೂ ಅಂತಹ ಕೊಂಡಿ ಏನಿಲ್ಲ ಅಂತ ಸಂಶೋಧಕರು ನೆನಸುತ್ತಾರೆ. ಹೀಗಿರುವಾಗ ಅಶ್ಲೀಲ ಚಿತ್ರಗಳನ್ನು ನೋಡೋದರಲ್ಲಿ ಏನು ತಪ್ಪು?

ಬೈಬಲ್‌ ಏನು ಹೇಳುತ್ತೆ? “ಅಶ್ಲೀಲವಾದ ತಮಾಷೆ”ಯನ್ನೇ ಬೈಬಲ್‌ ತಪ್ಪು ಅನೈತಿಕ ಅಂತ ಹೇಳುತ್ತೆ. (ಎಫೆಸ 5:3, 4) ಹಾಗಂದ ಮೇಲೆ ಅಶ್ಲೀಲ ಚಿತ್ರಗಳನ್ನು ನೋಡುವುದು ಇನ್ನೆಷ್ಟು ದೊಡ್ಡ ತಪ್ಪು! ಈಗ ಸಿಗುವ ಅಶ್ಲೀಲ ಚಿತ್ರಗಳಲ್ಲಿ ವ್ಯಭಿಚಾರ, ಸಲಿಂಗಕಾಮ ಹಾಗೂ ಹಾದರದಲ್ಲಿ ಒಳಗೂಡುತ್ತಿರುವ ಚಿತ್ರಣಗಳಿರುತ್ತವೆ. ಕಾಮಪ್ರಚೋದಕವಾದ ಇಂಥ ಚಿತ್ರಗಳನ್ನು ನೋಡುವುದು ಖಂಡಿತವಾಗ್ಲೂ ಅಶ್ಲೀಲವಾದ ತಮಾಷೆಗಿಂತ ತುಂಬಾನೇ ದೊಡ್ಡ ತಪ್ಪು.

ಅನೈತಿಕ ಕ್ರಿಯೆಗಳಲ್ಲಿ ಒಳಗೂಡುವಂತೆ ಅಶ್ಲೀಲ ಚಿತ್ರಗಳು ಪ್ರಚೋದಿಸುತ್ತಾ ಇಲ್ವಾ ಅನ್ನೋ ವಿಷಯದಲ್ಲಿ ಸಂಶೋಧಕರು ಇನ್ನೂ ಗೊಂದಲದಲ್ಲಿದ್ದಾರೆ. ಆದರೆ ಅಶ್ಲೀಲ ಚಿತ್ರಗಳನ್ನು ನೋಡುವುದು ಆಧ್ಯಾತ್ಮಿಕತೆಗೆ ಮಾರಕ ಮತ್ತು ದೇವರು ಅದನ್ನು ಗಂಭೀರ ತಪ್ಪಾಗಿ ಪರಿಗಣಿಸುತ್ತಾರೆಂದು ಬೈಬಲ್‌ ಸ್ಪಷ್ಟವಾಗಿ ತಿಳಿಸುತ್ತೆ. ‘ಕಾಮಾಭಿಲಾಷೆ, ದುರಾಶೆ ಮುಂತಾದ ಸ್ವಭಾವಗಳನ್ನು ಸಾಯಿಸಿರಿ’ ಅಂತ ಎಚ್ಚರಿಕೆ ಕೊಡುತ್ತೆ. (ಕೊಲೊಸ್ಸೆ 3:5) ಆದರೆ ಅಶ್ಲೀಲ ಚಿತ್ರಗಳನ್ನು ನೋಡುವವರು ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಾರೆ. ಅಂಥ ಕೆಟ್ಟ ಆಶೆಗಳನ್ನು ಸಾಯಿಸುವ ಬದಲು ಅದಕ್ಕೆ ನೀರೆರೆದು ಬೆಳೆಸುತ್ತಾರೆ.

ಅಶ್ಲೀಲ ಚಿತ್ರಗಳಿಂದ ದೂರವಿರಲು ನಿಮಗೆ ಯಾವ ಸಹಾಯವಿದೆ?

“ಕೆಟ್ಟದ್ದನ್ನಲ್ಲ, ಒಳ್ಳೆಯದನ್ನು ಅನುಸರಿಸಿರಿ . . . ಕೆಟ್ಟದ್ದನ್ನು ದ್ವೇಷಿಸಿರಿ, ಒಳ್ಳೇದನ್ನು ಪ್ರೀತಿಸಿರಿ.”—ಆಮೋಸ 5:14, 15.

ಬೈಬಲ್‌ ಏನು ಹೇಳುತ್ತೆ? ಕುಡುಕರು, ಕಳ್ಳರು, ಸ್ವಚ್ಛಂದ ಸಂಭೋಗದಲ್ಲಿ ಒಳಗೂಡಿದ್ದ ವ್ಯಕ್ತಿಗಳು ತಮ್ಮ ಕೆಟ್ಟ ಚಟಗಳನ್ನು ಬಿಟ್ಟು ಬದಲಾಗಿದ್ದರ ಬಗ್ಗೆ ಬೈಬಲ್‌ ಹೇಳುತ್ತೆ. (1 ಕೊರಿಂಥ 6:9-11) ಅವರಿಗೆ ಯಾವುದು ಸಹಾಯ ಮಾಡಿತು? ದೇವರ ವಾಕ್ಯ. ಅದನ್ನು ಕಲಿತು ಪಾಲಿಸಿದ್ದರಿಂದ ಕೆಟ್ಟದ್ದನ್ನು ದ್ವೇಷಿಸಲು ಅವರಿಗೆ ಸಾಧ್ಯವಾಯಿತು.

ಅಶ್ಲೀಲ ಚಿತ್ರಗಳನ್ನು ನೋಡುವ ಚಟವಿರುವ ವ್ಯಕ್ತಿ ಅದರ ದುಷ್ಪರಿಣಾಮಗಳ ಬಗ್ಗೆ ಯೋಚಿಸುವಲ್ಲಿ ಅವನಿಗೆ ಆ ಕೆಟ್ಟ ಚಾಳಿಯ ಬಗ್ಗೆ ಅಸಹ್ಯ ಭಾವನೆ ಮೂಡಿ ಅದನ್ನು ದ್ವೇಷಿಸಲು ಪ್ರಾರಂಭಿಸುತ್ತಾನೆ. ಯೂಟಾ ಸ್ಟೇಟ್‌ ವಿಶ್ವವಿದ್ಯಾನಿಲಯ ನಡೆಸಿದ ಇತ್ತೀಚಿನ ಅಧ್ಯಯನದ ವರದಿ ಏನೆಂದರೆ ಅಶ್ಲೀಲ ಚಿತ್ರಗಳನ್ನು ನೋಡುವವರು “ಖಿನ್ನತೆಯಿಂದ ಬಳಲುತ್ತಾರೆ, ಯಾರೊಟ್ಟಿಗೂ ಬೆರೆಯದೇ ಒಬ್ಬಂಟಿಯಾಗಿ ಇರುತ್ತಾರೆ, ಸಂಬಂಧಗಳನ್ನು ಹಾಳುಮಾಡಿಕೊಳ್ಳುತ್ತಾರೆ.” ಇದರೊಟ್ಟಿಗೆ ಇನ್ನೂ ಅನೇಕ ಕೆಟ್ಟ ಪರಿಣಾಮಗಳನ್ನು ಎದುರಿಸುತ್ತಾರೆ. ಅಲ್ಲದೆ ಈಗಾಗಲೇ ನೋಡಿದಂತೆ ನಾವು ಅಶ್ಲೀಲ ಚಿತ್ರಗಳನ್ನು ವೀಕ್ಷಿಸುವುದು ದೇವರಿಗೆ ಹೇಯ. ಈ ಕೆಟ್ಟ ಚಟ ದೇವರೊಟ್ಟಿಗಿನ ಸಂಬಂಧವನ್ನು ಹಾಳುಮಾಡುತ್ತೆ. ಇದಕ್ಕಿಂತ ದೊಡ್ಡ ನಷ್ಟ ಮತ್ತೇನಿದೆ ಹೇಳಿ.

ಒಳ್ಳೇದನ್ನು ಪ್ರೀತಿಸೋಕೆ ಕಲಿಯಲು ಬೈಬಲ್‌ ನಮಗೆ ನೆರವಾಗುತ್ತೆ. ಬೈಬಲನ್ನು ಹೆಚ್ಚೆಚ್ಚು ಕಲಿತಂತೆ ಅದರಲ್ಲಿರುವ ಮಟ್ಟಗಳಿಗನುಸಾರ ಬದುಕುವ ನಮ್ಮ ಆಸೆ ಕೂಡ ಬಲವಾಗುತ್ತೆ. ಆ ಮಟ್ಟಗಳನ್ನು ಪ್ರೀತಿಸತೊಡಗುತ್ತೀವಿ. ಈ ಪ್ರೀತಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸದಂತೆ ದೃಢಸಂಕಲ್ಪ ಮಾಡಲು ನಮಗೆ ನೆರವಾಗುತ್ತೆ. “ಯಾವ ನೀಚವಾದ ಕಾರ್ಯವನ್ನೂ ದೃಷ್ಟಿಸುವದಿಲ್ಲ” ಅನ್ನೋ ದೃಢಸಂಕಲ್ಪ ಮಾಡೋಣ.—ಕೀರ್ತನೆ 101:3. ◼ (g13-E 03)

[ಪುಟ 14ರಲ್ಲಿರುವ ಚಿತ್ರ]

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ