ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g19 ನಂ. 3 ಪು. 3
  • ಆಧುನಿಕ ಜೀವನಕ್ಕೆ ಪ್ರಾಚೀನ ಪುಸ್ತಕ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಆಧುನಿಕ ಜೀವನಕ್ಕೆ ಪ್ರಾಚೀನ ಪುಸ್ತಕ
  • ಎಚ್ಚರ!—2019
  • ಅನುರೂಪ ಮಾಹಿತಿ
  • ಎಚ್ಚರ! ಪತ್ರಿಕೆಯ ಈ ಸಂಚಿಕೆಯಲ್ಲಿ: ಬದುಕನ್ನೇ ಬದಲಾಯಿಸುವ ಪುಸ್ತಕ—ಅದು ಯಾವುದು?
    ಎಚ್ಚರ!—2019
  • ಪರಿವಿಡಿ
    ಎಚ್ಚರ!—2019
  • ಆಧುನಿಕ ಜೀವನಕ್ಕೆ ಪ್ರಾಯೋಗಿಕವಾದೊಂದು ಗ್ರಂಥ
    ಸಕಲ ಜನರಿಗಾಗಿರುವ ಒಂದು ಗ್ರಂಥ
  • 4 | ಬೈಬಲ್‌ನಲ್ಲಿರೋ ಸಲಹೆಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2023
ಇನ್ನಷ್ಟು
ಎಚ್ಚರ!—2019
g19 ನಂ. 3 ಪು. 3
ಒಬ್ಬ ಮ್ಯೂಸಿಯಮ್‌ನಲ್ಲಿ ಹಳೇ ಬೈಬಲ್‌ಗಳನ್ನು ನೋಡುತ್ತಿದ್ದಾನೆ

ಆಧುನಿಕ ಜೀವನಕ್ಕೆ ಪ್ರಾಚೀನ ಪುಸ್ತಕ

ತುಂಬಾ ಜನರು ಬೈಬಲನ್ನು ಒಂದು ಧಾರ್ಮಿಕ ಪುಸ್ತಕ ಅಂತ ಕರೆಯುತ್ತಾರೆ. ಆದರೆ, ಬೈಬಲ್‌ ಒಂದು ಧಾರ್ಮಿಕ ಪುಸ್ತಕ ಮಾತ್ರ ಅಲ್ಲ. ಅದರಲ್ಲಿ ಜೀವನ ನಡೆಸಲು ಬೇಕಾದ ಪ್ರಾಯೋಗಿಕ ಸಲಹೆಗಳು ಸಹ ಇವೆ.

ಕೆಲವು ಜನರು ಬೈಬಲನ್ನು ಓದಿ, ಅದರಲ್ಲಿರುವ ಸಲಹೆಗಳನ್ನು ಅನ್ವಯಿಸಿ ಹೇಗೆಲ್ಲಾ ಪ್ರಯೋಜನ ಪಡೆದಿದ್ದಾರೆ ಅಂತ ಗಮನಿಸಿ.

“ಈಗ, ನನ್ನ ಆರೋಗ್ಯ ಚೆನ್ನಾಗಿದೆ. ಜೊತೆಗೆ ಮನಃಶಾಂತಿನೂ ಇದೆ. ಯಾವಾಗಲೂ ಖುಷಿ ಖುಷಿಯಾಗಿರ್ತೀನಿ. ಒಳ್ಳೇ ಜೀವನ ನಡೆಸ್ತಿದ್ದೀನಿ.”—ಫಿಯೋನೆ.

“ಬೈಬಲ್‌ ಓದೋದ್ರಿಂದ, ನನ್ನ ಜೀವನಕ್ಕೆ ಒಂದು ಉದ್ದೇಶ ಮತ್ತು ಅರ್ಥ ಸಿಕ್ಕಿದೆ.”—ಎಲೆನಾ.

“ನನ್ನ ಜೀವ್ನ ಮುಂಚೆಗಿಂತ ಚೆನ್ನಾಗಿದೆ. ಈಗ ನಾನು ಕೆಲಸಕ್ಕಿಂತ ನನ್ನ ಕುಟುಂಬಕ್ಕೆ ಜಾಸ್ತಿ ಸಮಯ ಕೊಡ್ತೀನಿ.”—ಆ್ಯಂಡ್ರೀವ್‌.

ಈ ರೀತಿಯ ಉದಾಹರಣೆಗಳು ಇಷ್ಟೇ ಅಲ್ಲ, ಹಲವಾರಿವೆ. ಅನೇಕರಿಗೆ, ತಮ್ಮ ಜೀವನಕ್ಕೆ ಬೇಕಾದ ಪ್ರಾಯೋಗಿಕ ಸಲಹೆಗಳು ಬೈಬಲ್‌ನಲ್ಲಿ ಸಿಕ್ಕಿದೆ.

ಈ ಕೆಳಗಿನ ವಿಷಯಗಳಲ್ಲಿ ಬೈಬಲ್‌ ಹೇಗೆ ಸಹಾಯ ಮಾಡುತ್ತೆ ಅಂತ ನೋಡಿ . . .

  • ಆರೋಗ್ಯ

  • ಮನಃಶಾಂತಿ

  • ಕುಟುಂಬ ಮತ್ತು ಬಂಧುಮಿತ್ರರು

  • ಹಣಕಾಸಿನ ಸಮಸ್ಯೆ

  • ದೇವರೊಂದಿಗೆ ಸ್ನೇಹ

ಮುಂದಿನ ಲೇಖನಗಳು ಬೈಬಲ್‌ ದೇವರಿಂದ ಬಂದಿರುವ ಪುಸ್ತಕ ಮತ್ತು ಅದರಲ್ಲಿ ನಮ್ಮ ಜೀವನ ನಡೆಸಲು ಬೇಕಾದ ಪ್ರಾಯೋಗಿಕ ಸಲಹೆಗಳಿವೆ ಅಂತ ತೋರಿಸುತ್ತವೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ