ಬೆಲೆ ಏರಿಕೆಯ ಬರೆಗೆ ಔಷಧಿ!
ನಂಬಿಕೆ ಇಡಿ
‘ಬೆಲೆ ಜಾಸ್ತಿ ಆಗ್ತಿದೆ, ಆದ್ರೆ ನನ್ನ ಆದಾಯ ಕಡಿಮೆ ಆಗ್ತಿದೆ’ ಅಂತ ನಿಮಗೆ ಅನಿಸ್ತಿದ್ಯಾ? ‘ಹೀಗಾದ್ರೆ ನಾನೂ ನನ್ನ ಕುಟುಂಬ ಮುಂದೆ ಹೆಂಗಪ್ಪಾ ಜೀವನ ಮಾಡೋದು?’ ಅನ್ನೋ ಚಿಂತೆ ಆಗ್ತಿದ್ಯಾ? ಬೆಲೆ ಏರಿಕೆಯ ಬರೆಯಿಂದ ನಿಮಗೆ ದಿಕ್ಕೇ ತೋಚದಂತೆ ಆಗಿರಬಹುದು. ಆದ್ರೆ ಈ ಕಷ್ಟದ ಪರಿಸ್ಥಿತಿನ ಎದುರಿಸೋಕೆ ನಂಬಿಕೆ ನಿಮಗೆ ಆಸ್ತಿ ತರ ಸಹಾಯ ಮಾಡುತ್ತೆ.
ಇದನ್ನ ತಿಳ್ಕೊಳೋದು ಯಾಕೆ ಮುಖ್ಯ?
ಮುಂದೆ ಒಳ್ಳೇದಾಗುತ್ತೆ ಅಂತ ನಂಬೋ ಜನ ಅದನ್ನ ಬರೀ ಹೇಳಿ ಸುಮ್ಮನಾಗಲ್ಲ. ಅವ್ರಲ್ಲಿರೋ ಆ ನಂಬಿಕೆ ಅವ್ರ ಪರಿಸ್ಥಿತಿನ ಸುಧಾರಿಸೋಕೆ ಅವ್ರನ್ನ ಪ್ರೇರಿಸುತ್ತೆ, ಅವ್ರಿಗೆ ಬೇಕಾಗೋ ಶಕ್ತಿ ಕೊಡುತ್ತೆ. ಉದಾಹರಣೆಗೆ, ನಂಬಿಕೆ ಇಡೋ ಜನ್ರಿಗೆ ಏನೆಲ್ಲಾ ಪ್ರಯೋಜ್ನ ಇದೆ ಅಂತ ನೋಡಿ . . .
ಕಷ್ಟದ ಪರಿಸ್ಥಿತಿನ ಚೆನ್ನಾಗಿ ನಿಭಾಯಿಸ್ತಾರೆ
ಜೀವನನ ಹೊಂದಿಸ್ಕೊತಾರೆ
ಒಳ್ಳೆ ನಿರ್ಧಾರ ಮಾಡ್ತಾರೆ, ಇದ್ರಿಂದ ಅವ್ರ ಆರೋಗ್ಯ ಚೆನ್ನಾಗಿರುತ್ತೆ
ನೀವೇನು ಮಾಡಬಹುದು?
1. ಪವಿತ್ರ ಗ್ರಂಥ ನಿಮಗೆ ಹೇಗೆ ಸಹಾಯ ಮಾಡುತ್ತೆ ಅಂತ ತಿಳ್ಕೊಳ್ಳಿ. ಪವಿತ್ರ ಗ್ರಂಥದಲ್ಲಿ ಬೆಲೆ ಏರಿಕೆಯ ಸಮಸ್ಯೆಗಳನ್ನ ಹೇಗೆ ನಿಭಾಯಿಸಬಹುದು ಅನ್ನೋದಕ್ಕೆ ಒಳ್ಳೊಳ್ಳೆ ಸಲಹೆಗಳಿವೆ. ಈ ಸಲಹೆಗಳನ್ನ ನೀವು ಚೆನ್ನಾಗಿ ತಿಳ್ಕೊಂಡ್ರೆ, ನಿಮ್ಮ ಜೀವನದಲ್ಲಿ ಈಗಿರೋ ಕಷ್ಟಗಳನ್ನ ಮತ್ತು ಮುಂದೆ ಬರೋ ಸಮಸ್ಯೆಗಳನ್ನ ಚೆನ್ನಾಗಿ ನಿಭಾಯಿಸೋಕೆ ಕಲಿತೀರ.
2. ಭವಿಷ್ಯದ ಬಗ್ಗೆ ಪವಿತ್ರ ಗ್ರಂಥ ಏನು ಹೇಳುತ್ತೆ ಅಂತ ತಿಳ್ಕೊಳ್ಳಿ. ಪವಿತ್ರ ಗ್ರಂಥದಲ್ಲಿ ವಿವೇಕದ ಎಂಥೆಂಥ ಮಾತುಗಳಿವೆ ಗೊತ್ತಾ? ಅದನ್ನೆಲ್ಲಾ ನೋಡಿದ್ರೆ, ಭವಿಷ್ಯದ ಬಗ್ಗೆ ಈ ಪುಸ್ತಕ ಇನ್ನೂ ಏನೇನು ಹೇಳುತ್ತೆ ಅಂತ ತಿಳ್ಕೊಬೇಕು ಅಂತ ನಿಮಗೆ ಆಸೆ ಆಗುತ್ತೆ. ಉದಾಹರಣೆಗೆ, “ನಿಮ್ಮ ಭವಿಷ್ಯ ಚೆನ್ನಾಗಿರಬೇಕು, ನೀವು ಒಳ್ಳೇದನ್ನ ಎದುರುನೋಡಬೇಕು” ಅಂತ ದೇವರು ಬರೀ ಬಾಯಿಮಾತಿಗೆ ಹೇಳಿಲ್ಲ. ಇದನ್ನ ನಿಜ ಮಾಡ್ತೀನಿ ಅಂತ ಮಾತು ಕೊಟ್ಟಿದ್ದಾನೆ. (ಯೆರೆಮೀಯ 29:11) ಇದನ್ನೆಲ್ಲ ನಿಜ ಮಾಡೋಕೆ ದೇವರು ತನ್ನ ಆಳ್ವಿಕೆನ ಈ ಭೂಮಿಗೆ ತರ್ತಾನೆ.
ದೇವರ ಆಳ್ವಿಕೆ ಅಂದ್ರೇನು? ಅದು ಏನು ಮಾಡುತ್ತೆ?
ದೇವರ ಆಳ್ವಿಕೆ ಒಂದು ಸರ್ಕಾರ ಆಗಿದೆ. ಇದು ಇಡೀ ಭೂಮಿನ ಸ್ವರ್ಗದಿಂದ ಆಳುತ್ತೆ. (ದಾನಿಯೇಲ 2:44; ಮತ್ತಾಯ 6:10) ಭೂಮಿಯಲ್ಲಿರೋ ಕಷ್ಟ, ಬಡತನ ಮತ್ತು ಪ್ರತಿಯೊಂದು ನೋವನ್ನ ತೆಗೆದು ಹಾಕುತ್ತೆ. ಭೂಮಿಯಲ್ಲಿ ಶಾಂತಿ, ಸಮೃದ್ಧಿಯನ್ನ ತುಂಬುತ್ತೆ. ಇದೆಲ್ಲ ನಿಜಾನಾ? ಪವಿತ್ರ ಗ್ರಂಥ ಹೇಳೋ ಕೆಲವು ವಚನಗಳನ್ನ ನೀವೇ ನೋಡಿ.
ಲಕ್ಷಾಂತರ ಜನ ಈ ಮಾತುಗಳನ್ನ ನಂಬ್ತಾರೆ. ಯಾಕಂದ್ರೆ “ಸುಳ್ಳು ಹೇಳೋಕೆ ಸಾಧ್ಯಾನೇ ಇಲ್ಲದ ದೇವರು” ಇದನ್ನ ಹೇಳಿದ್ದಾನೆ. (ತೀತ 1:2) ಹಾಗಾಗಿ ನೀವೇ ಈ ಪವಿತ್ರ ಗ್ರಂಥವನ್ನ ಓದಿ ಈ ಎಲ್ಲ ವಿಷಯಗಳನ್ನ ತಿಳ್ಕೊಳ್ಳಿ. ಪವಿತ್ರ ಗ್ರಂಥ ನಿಮಗೆ ನಂಬಿಕೆ ಕೊಡುತ್ತೆ. ಇದು ಕಷ್ಟ ಸಮಸ್ಯೆ ನಿಭಾಯಿಸೋಕೆ ಬೇಕಾಗಿರೋ ಬಲ ತುಂಬುತ್ತೆ ಮತ್ತು ಭವಿಷ್ಯದಲ್ಲಿ ಒಳ್ಳೇದಾಗುತ್ತೆ ಅನ್ನೋ ಧೈರ್ಯ ತುಂಬುತ್ತೆ.