ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ed ಪು. 31
  • ಸಮಾಪ್ತಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸಮಾಪ್ತಿ
  • ಯೆಹೋವನ ಸಾಕ್ಷಿಗಳು ಮತ್ತು ಶಿಕ್ಷಣ
  • ಅನುರೂಪ ಮಾಹಿತಿ
  • ಯೆಹೋವನ ಸಾಕ್ಷಿಗಳು ನಿಜ ಕ್ರೈಸ್ತರಾ?
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
  • ‘ನಾವು ನಂಬುವುದನ್ನೇ ನೀವೂ ನಂಬಬೇಕು’ ಎಂದು ಯೆಹೋವನ ಸಾಕ್ಷಿಗಳು ಮಕ್ಕಳಿಗೆ ಒತ್ತಾಯಿಸುತ್ತಾರಾ?
    ಯೆಹೋವನ ಸಾಕ್ಷಿಗಳ ಕುರಿತು ಜನರು ಕೇಳುವ ಪ್ರಶ್ನೆಗಳು
  • ನೀವೇನನ್ನು ನಂಬುತ್ತೀರೊ ಅದಕ್ಕೆ ಆಧಾರವೇನು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
  • ದೈವಿಕ ಮೂಲತತ್ತ್ವಗಳು ನಡೆಸುವ ಹಾಗೆ ನಿಮ್ಮ ಹೆಜ್ಜೆಗಳನ್ನಿಡಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
ಇನ್ನಷ್ಟು
ಯೆಹೋವನ ಸಾಕ್ಷಿಗಳು ಮತ್ತು ಶಿಕ್ಷಣ
ed ಪು. 31
ಪುಟ 31ರಲ್ಲಿರುವ ಚಿತ್ರ

ಸಮಾಪ್ತಿ

ಯೆಹೋವನ ಸಾಕ್ಷಿಗಳ ಎಲ್ಲ ಧಾರ್ಮಿಕ ನಂಬಿಕೆಗಳನ್ನು ತಿಳಿಸುವುದು ಈ ಬ್ರೋಷರಿನ ಉದ್ದೇಶವಾಗಿರಲಿಲ್ಲ. ಅದರ ಬದಲು, ಸಾಕ್ಷಿಗಳು ನಂಬುವಂತಹ ಕೆಲವೊಂದು ತತ್ತ್ವಗಳನ್ನು ನಾವು ವಿವರಿಸಲು ಪ್ರಯತ್ನಿಸಿದ್ದೇವೆ. ಅಷ್ಟುಮಾತ್ರವಲ್ಲದೆ, ನಿಮ್ಮ ವಿದ್ಯಾರ್ಥಿಯ ತಂದೆ ಅಥವಾ ತಾಯಿ, ಇಲ್ಲವೇ ಇಬ್ಬರೂ ಸಾಕ್ಷಿಗಳಾಗಿರುವಲ್ಲಿ, ಆ ವಿದ್ಯಾರ್ಥಿಯ ಮೇಲೆ ಯಾವ ರೀತಿಯ ಕುಟುಂಬ ಪ್ರಭಾವಗಳು ಪರಿಣಾಮವನ್ನು ಬೀರುತ್ತವೆಂಬುದನ್ನು ಸ್ಪಷ್ಟವಾಗಿ ತೋರಿಸಲು ಪ್ರಯತ್ನಿಸಿದ್ದೇವೆ.

ಯೆಹೋವನ ಸಾಕ್ಷಿಗಳು ತಮ್ಮ ಮಕ್ಕಳ ಆತ್ಮಿಕ ಬೆಳವಣಿಗೆಗೆ ಅತ್ಯಧಿಕ ಮಹತ್ವವನ್ನು ಕೊಡುತ್ತಾರೆ. ಮತ್ತು ಇದು ಬೇರೆ ಕ್ಷೇತ್ರಗಳಲ್ಲಿ ತಮ್ಮ ಮಕ್ಕಳ ಬೆಳವಣಿಗೆಯನ್ನು ವರ್ಧಿಸುತ್ತದೆಂಬ ಭರವಸೆ ಅವರಿಗಿದೆ. ಅವರ ನಂಬಿಕೆಗಳು ಮತ್ತು ಅವರು ಪಾಲಿಸುವ ತತ್ತ್ವಗಳು, ಅವರ ಜೀವಿತಗಳಿಗೆ ಅರ್ಥವನ್ನು ಕೊಡುತ್ತವೆ ಮಾತ್ರವಲ್ಲ, ದಿನನಿತ್ಯದ ಸಮಸ್ಯೆಗಳೊಂದಿಗೆ ವ್ಯವಹರಿಸಲೂ ಸಹಾಯಮಾಡುತ್ತವೆ. ಇದರೊಂದಿಗೆ, ಆ ನಂಬಿಕೆಗಳು ಮತ್ತು ತತ್ತ್ವಗಳು, ಅವರು ಜೀವನಪರ್ಯಂತ ಉತ್ಸುಕ ವಿದ್ಯಾರ್ಥಿಗಳು ಮತ್ತು ಒಳ್ಳೆಯ ನಾಗರಿಕರಾಗಿರುವಂತೆ ಪ್ರಯತ್ನಿಸಲು ಪ್ರಚೋದಿಸಬೇಕು.

ಸಾಕ್ಷಿಗಳು ಜೀವನವನ್ನು ವಾಸ್ತವಿಕ ದೃಷ್ಟಿಕೋನದಿಂದ ನೋಡಲು ಪ್ರಯಾಸಪಡುವುದರಿಂದಲೇ ಅವರು ಶಿಕ್ಷಣಕ್ಕೆ ತುಂಬ ಮಹತ್ವವನ್ನು ಕೊಡುತ್ತಾರೆ. ಆದುದರಿಂದ, ಸಾಧ್ಯವಿರುವಷ್ಟರ ಮಟ್ಟಿಗೆ ನಿಮ್ಮೊಂದಿಗೆ ಜೊತೆಗೂಡಿ ಕೆಲಸ​ಮಾಡುವುದು ಅವರ ಬಯಕೆಯಾಗಿದೆ. ಅವರು ತಮ್ಮ ವತಿಯಿಂದ, ಮನೆಗಳಲ್ಲಿ ಮತ್ತು ಲೋಕದಾದ್ಯಂತ ಆರಾಧನೆಯ ಸ್ಥಳಗಳಲ್ಲಿ ಮಕ್ಕಳು ಈ ಫಲಪ್ರದ ಸಹಯೋಗದಲ್ಲಿ ತಮ್ಮ ಪಾತ್ರವನ್ನು ಚೆನ್ನಾಗಿ ನಿರ್ವಹಿಸುವಂತೆ ಉತ್ತೇಜಿಸುತ್ತಾ ಇರುವರು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ