ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • bh ಪು. 200-ಪು. 201 ಪ್ಯಾ. 5
  • ಯೇಸು ಕ್ರಿಸ್ತನು-ವಾಗ್ದತ್ತ ಮೆಸ್ಸೀಯನು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೇಸು ಕ್ರಿಸ್ತನು-ವಾಗ್ದತ್ತ ಮೆಸ್ಸೀಯನು
  • ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?
  • ಅನುರೂಪ ಮಾಹಿತಿ
  • ಮೆಸ್ಸೀಯನ ಪ್ರವಾದನೆಗಳು ಯೇಸುವೇ ಮೆಸ್ಸೀಯ ಅಂತ ತೋರಿಸಿಕೊಡುತ್ತಾ?
    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
  • ಮೆಸ್ಸೀಯನನ್ನು ಎದುರುನೋಡಿದರು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • ಯೇಸು ಕ್ರಿಸ್ತನು ದೇವರ ಜ್ಞಾನಕ್ಕೆ ಕೀಲಿ ಕೈ
    ನಿತ್ಯಜೀವಕ್ಕೆ ನಡೆಸುವ ಜ್ಞಾನ
  • ಮೆಸ್ಸೀಯನನ್ನು ಕಂಡುಕೊಂಡರು!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
ಇನ್ನಷ್ಟು
ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?
bh ಪು. 200-ಪು. 201 ಪ್ಯಾ. 5

ಪರಿಶಿಷ್ಟ

ಯೇಸು ಕ್ರಿಸ್ತನು—ವಾಗ್ದತ್ತ ಮೆಸ್ಸೀಯನು

ಮೆಸ್ಸೀಯನನ್ನು ಗುರುತಿಸಲು ನಮಗೆ ಸಹಾಯಮಾಡಲಿಕ್ಕಾಗಿ ಅನೇಕ ಮಂದಿ ಬೈಬಲ್‌ ಪ್ರವಾದಿಗಳು ಆ ವಾಗ್ದತ್ತ ವಿಮೋಚಕನ ಜನನ, ಶುಶ್ರೂಷೆ ಮತ್ತು ಮರಣದ ಕುರಿತು ವಿವರಗಳನ್ನು ಒದಗಿಸುವಂತೆ ಯೆಹೋವ ದೇವರು ಅವರನ್ನು ಪ್ರೇರಿಸಿದನು. ಈ ಬೈಬಲ್‌ ಪ್ರವಾದನೆಗಳೆಲ್ಲವೂ ಯೇಸು ಕ್ರಿಸ್ತನಲ್ಲಿ ನೆರವೇರಿದವು. ಅವು ಬೆರಗುಗೊಳಿಸುವಷ್ಟು ನಿಷ್ಕೃಷ್ಟವೂ ಸವಿವರವೂ ಆಗಿವೆ. ಇದನ್ನು ದೃಷ್ಟಾಂತಿಸಲಿಕ್ಕಾಗಿ, ಮೆಸ್ಸೀಯನ ಜನನ ಮತ್ತು ಬಾಲ್ಯದ ಬಗ್ಗೆ ಮುಂತಿಳಿಸಲಾದ ಕೆಲವು ಪ್ರವಾದನೆಗಳನ್ನು ನಾವು ಪರಿಗಣಿಸೋಣ.

ಮೆಸ್ಸೀಯನು ಅರಸ ದಾವೀದನ ವಂಶಜನಾಗಿರುವನೆಂದು ಪ್ರವಾದಿ ಯೆಶಾಯನು ಮುಂತಿಳಿಸಿದನು. (ಯೆಶಾಯ 9:7) ಯೇಸು ವಾಸ್ತವದಲ್ಲಿ ದಾವೀದನ ವಂಶದಲ್ಲೇ ಜನಿಸಿದನು.—ಮತ್ತಾಯ 1:1, 6-17.

ದೇವರ ಇನ್ನೊಬ್ಬ ಪ್ರವಾದಿಯಾದ ಮೀಕನು, ಈ ಮಗು ಕಟ್ಟಕಡೆಗೆ ಒಬ್ಬ “ಆಳತಕ್ಕವನು” ಆಗುವನೆಂದು ಮತ್ತು ಅವನು ‘ಎಫ್ರಾತದ ಬೇತ್ಲೆಹೇಮ್‌’ನಲ್ಲಿ ಜನಿಸುವನೆಂದು ಮುಂತಿಳಿಸಿದನು. (ಮೀಕ 5:2) ಯೇಸುವಿನ ಜನನದ ಸಮಯದಲ್ಲಿ, ಇಸ್ರಾಯೇಲಿನಲ್ಲಿ ಬೇತ್ಲೆಹೇಮ್‌ ಎಂಬ ಹೆಸರಿನ ಎರಡು ಪಟ್ಟಣಗಳಿದ್ದವು. ಒಂದು, ದೇಶದ ಉತ್ತರ ಭಾಗದಲ್ಲಿದ್ದ ನಜರೇತಿನ ಬಳಿ ಇತ್ತು, ಮತ್ತು ಇನ್ನೊಂದು ಯೆಹೂದದಲ್ಲಿದ್ದ ಯೆರೂಸಲೇಮಿನ ಹತ್ತಿರದಲ್ಲಿತ್ತು. ಯೆರೂಸಲೇಮಿನ ಸಮೀಪದಲ್ಲಿದ್ದ ಬೇತ್ಲೆಹೇಮ್‌ನ ಮುಂಚಿನ ಹೆಸರು ಎಫ್ರಾತ ಎಂದಾಗಿತ್ತು. ಆ ಪ್ರವಾದನೆ ಮುಂತಿಳಿಸಿದಂತೆಯೇ ಯೇಸು ಆ ಪಟ್ಟಣದಲ್ಲೇ ಜನಿಸಿದನು!—ಮತ್ತಾಯ 2:1.

ದೇವಕುಮಾರನು ‘ಐಗುಪ್ತದಿಂದ ಕರೆಯಲ್ಪಡುವನು’ ಎಂದು ಇನ್ನೊಂದು ಪ್ರವಾದನೆ ಮುಂತಿಳಿಸಿತ್ತು. ಯೇಸು ಮಗುವಾಗಿದ್ದಾಗ ಐಗುಪ್ತಕ್ಕೆ ಕರೆದೊಯ್ಯಲ್ಪಟ್ಟಿದ್ದನು. ಹೆರೋದನ ಮರಣಾನಂತರ ಅವನನ್ನು ಹಿಂದೆ ಕರೆತರಲಾಯಿತು ಮತ್ತು ಹೀಗೆ ಆ ಪ್ರವಾದನೆ ನೆರವೇರಿತು.—ಹೋಶೇಯ 11:1; ಮತ್ತಾಯ 2:15.

ಪುಟ 200ರ ತಖ್ತೆಯಲ್ಲಿ, “ಪ್ರವಾದನೆ” ಎಂಬ ಮೇಲ್ಬರಹದ ಕೆಳಗೆ ಪಟ್ಟಿಮಾಡಲಾಗಿರುವ ಶಾಸ್ತ್ರವಚನಗಳು ಮೆಸ್ಸೀಯನ ಕುರಿತಾದ ವಿವರಗಳನ್ನು ಒಳಗೊಂಡಿವೆ. ಇವನ್ನು “ನೆರವೇರಿಕೆ” ಎಂಬ ಮೇಲ್ಬರಹದ ಕೆಳಗೆ ಕೊಡಲಾಗಿರುವ ಶಾಸ್ತ್ರವಚನಗಳೊಂದಿಗೆ ದಯವಿಟ್ಟು ಸರಿಹೋಲಿಸಿರಿ. ಹಾಗೆ ಮಾಡುವುದು ದೇವರ ವಾಕ್ಯದ ಸತ್ಯತೆಯಲ್ಲಿ ನಿಮಗಿರುವ ನಂಬಿಕೆಯನ್ನು ಇನ್ನೂ ಬಲಪಡಿಸುವುದು.

ನೀವು ಈ ಶಾಸ್ತ್ರವಚನಗಳನ್ನು ಪರೀಕ್ಷಿಸುವಾಗ, ಅವುಗಳಲ್ಲಿ ಪ್ರವಾದನಾತ್ಮಕ ರೂಪದವುಗಳು ಯೇಸುವಿನ ಜನನಕ್ಕೆ ನೂರಾರು ವರುಷಗಳಿಗೆ ಮುನ್ನ ಬರೆಯಲ್ಪಟ್ಟವುಗಳು ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಿರಿ. ಯೇಸು ಹೇಳಿದ್ದು: “ನನ್ನ ವಿಷಯವಾಗಿ ಮೋಶೆಯ ಧರ್ಮಶಾಸ್ತ್ರದಲ್ಲಿಯೂ ಪ್ರವಾದಿಗಳ ಗ್ರಂಥಗಳಲ್ಲಿಯೂ ಕೀರ್ತನೆಗಳಲ್ಲಿಯೂ ಬರೆದಿರುವದೆಲ್ಲಾ ನೆರವೇರುವದು ಅಗತ್ಯ.” (ಲೂಕ 24:44) ನಿಮ್ಮ ಸ್ವಂತ ಬೈಬಲಿನಲ್ಲಿ ನೀವು ಪರೀಕ್ಷಿಸಲು ಸಾಧ್ಯವಿರುವಂತೆ, ಅವು ನಿಜವಾಗಿಯೂ ನೆರವೇರಿದವು—ಹೌದು, ಪ್ರತಿಯೊಂದು ವಿವರವೂ ನೆರವೇರಿತು!

ಮೆಸ್ಸೀಯನ ಕುರಿತಾದ ಪ್ರವಾದನೆಗಳು

ಸಂಭವ

ಪ್ರವಾದನೆ

ನೆರವೇರಿಕೆ

ಯೆಹೂದ ಕುಲದಲ್ಲಿ ಜನನ

ಆದಿಕಾಂಡ 49:10

ಲೂಕ 3:23-33

ಕನ್ಯೆಗೆ ಹುಟ್ಟಿದ್ದು

ಯೆಶಾಯ 7:14

ಮತ್ತಾಯ 1:18-25

ಅರಸ ದಾವೀದನ ವಂಶಜನು

ಯೆಶಾಯ 9:7

ಮತ್ತಾಯ 1:1, 6-17

ಯೆಹೋವನು ಅವನನ್ನು ತನ್ನ ಪುತ್ರನೆಂದು ಪ್ರಕಟಿಸಿದ್ದು

ಕೀರ್ತನೆ 2:7

ಮತ್ತಾಯ 3:17

ಜನರು ಅವನನ್ನು ನಂಬಲಿಲ್ಲ

ಯೆಶಾಯ 53:1

ಯೋಹಾನ 12:37, 38

ಕತ್ತೆಯ ಮೇಲೆ ಸವಾರಿ ಮಾಡುತ್ತ ಯೆರೂಸಲೇಮನ್ನು ಪ್ರವೇಶಿಸಿದನು

ಜೆಕರ್ಯ 9:9

ಮತ್ತಾಯ 21:1-9

ಆಪ್ತ ಒಡನಾಡಿಯೊಬ್ಬನು ದ್ರೋಹ ಬಗೆದದ್ದು

ಕೀರ್ತನೆ 41:9

ಯೋಹಾನ 13:18, 21-30

ಬೆಳ್ಳಿಯ 30 ನಾಣ್ಯಗಳಿಗಾಗಿ ದ್ರೋಹಬಗೆಯಲ್ಪಟ್ಟದ್ದು

ಜೆಕರ್ಯ 11:12

ಮತ್ತಾಯ 26:14-16

ಆರೋಪ ಹೊರಿಸುವವರ ಎದುರಿನಲ್ಲಿ ಮೌನವಾಗಿದ್ದನು

ಯೆಶಾಯ 53:7

ಮತ್ತಾಯ 27:11-14

ಅವನ ಬಟ್ಟೆಗಳಿಗಾಗಿ ಚೀಟು ಹಾಕಲ್ಪಟ್ಟದ್ದು

ಕೀರ್ತನೆ 22:18

ಮತ್ತಾಯ 27:35

ಕಂಬದ ಮೇಲಿರುವಾಗ ದೂಷಿಸಲ್ಪಟ್ಟದ್ದು

ಕೀರ್ತನೆ 22:7, 8

ಮತ್ತಾಯ 27:39-43

ಅವನ ಎಲುಬುಗಳಲ್ಲಿ ಯಾವುದೂ ಮುರಿಯಲ್ಪಡದಿದ್ದದ್ದು

ಕೀರ್ತನೆ 34:20

ಯೋಹಾನ 19:33, 36

ಧನಿಕರೊಂದಿಗೆ ಹೂಣಲ್ಪಟ್ಟದ್ದು

ಯೆಶಾಯ 53:9

ಮತ್ತಾಯ 27:57-60

ಶರೀರವು ಕೊಳೆತುಹೋಗುವ ಮೊದಲು ಎಬ್ಬಿಸಲ್ಪಟ್ಟದ್ದು

ಕೀರ್ತನೆ 16:10

ಅ. ಕೃತ್ಯಗಳು 2:24, 27

ದೇವರ ಬಲಗಡೆಗೆ ಏರಿಸಲ್ಪಟ್ಟದ್ದು

ಕೀರ್ತನೆ 110:1

ಅ. ಕೃತ್ಯಗಳು 7:56

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ