-
ನಮ್ಮ ಸಭಾ ಕೂಟಗಳ ಪ್ರಯೋಜನವೇನು?ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?
-
-
ಅಧ್ಯಾಯ 5
ನಮ್ಮ ಸಭಾ ಕೂಟಗಳ ಪ್ರಯೋಜನವೇನು?
ಅರ್ಜೆಂಟೀನ
ಸಿಯೆರಾ ಲಿಯೋನ್
ಬೆಲ್ಜಿಯಮ್
ಮಲೇಷಿಯ
ಅನೇಕ ಜನರು ಕ್ರೈಸ್ತ ಕೂಟಗಳಿಗೆ ಹೋಗುವುದಿಲ್ಲ. ಕಾರಣ ಅವರಿಗೆ ಬೇಕಾದ ಆಧ್ಯಾತ್ಮ ಮಾರ್ಗದರ್ಶನ ಹಾಗೂ ಸಾಂತ್ವನ ಅಲ್ಲಿ ದೊರೆಯುತ್ತಿಲ್ಲ. ಹಾಗಾದರೆ ಯೆಹೋವನ ಸಾಕ್ಷಿಗಳ ಸಭೆಗೆ ಹೋಗುವುದರಿಂದ ನಿಮಗೆ ಪ್ರಯೋಜನವಿದೆಯೇ? ಅಲ್ಲಿ ನೀವೇನು ಪಡೆಯುವಿರಿ?
ಪ್ರೀತಿ ಮುತುವರ್ಜಿ ಇರುವ ಜನರ ಸ್ನೇಹ ಹಾಗೂ ಸಂತೋಷ ಪಡೆಯುವಿರಿ. ಒಂದನೇ ಶತಮಾನದಲ್ಲಿ ಕ್ರೈಸ್ತರು ಸಭೆ ಸೇರಿ ದೇವರನ್ನು ಆರಾಧಿಸುತ್ತಿದ್ದರು. ಬೈಬಲನ್ನು ಓದಿ ಅಧ್ಯಯನ ಮಾಡುತ್ತಿದ್ದರು. ಅಣ್ಣತಮ್ಮ ಅಕ್ಕತಂಗಿಯರಂತೆ ಬೆಂಬಲ ಪ್ರೋತ್ಸಾಹ ನೀಡುತ್ತಿದ್ದರು. (ಇಬ್ರಿಯ 10:24, 25) ಅಲ್ಲಿ ಪ್ರೀತಿ ವಾತ್ಸಲ್ಯ ತುಂಬಿತುಳುಕುತ್ತಿತ್ತು. ಅವರ ನಡುವೆ ನಿಜವಾದ ಸ್ನೇಹಬಾಂಧವ್ಯ ಇತ್ತು. (2 ಥೆಸಲೊನೀಕ 1:3; 3 ಯೋಹಾನ 14) ಆ ಕ್ರೈಸ್ತರ ನಮೂನೆಯನ್ನೇ ಯೆಹೋವನ ಸಾಕ್ಷಿಗಳು ಪಾಲಿಸುತ್ತಿದ್ದಾರೆ. ಅವರ ಸಭೆಗಳಲ್ಲಿ ಸ್ನೇಹ ಸಂಭ್ರಮದ ವಾತಾವರಣವಿದೆ.
ಬೈಬಲ್‌ನಲ್ಲಿರುವ ತತ್ವಗಳನ್ನು ಕಾರ್ಯರೂಪಕ್ಕೆ ಹಾಕಲು ಕಲಿತು ಪ್ರಯೋಜನ ಪಡೆಯುವಿರಿ. ಬೈಬಲ್‌ನಲ್ಲಿ ತಿಳಿಸಿರುವಂತೆ ಇಂದು ಸಹ ಸ್ತ್ರೀಪುರುಷರು ಹಾಗೂ ಮಕ್ಕಳು ಸಭೆ ಸೇರುತ್ತಾರೆ. ಅರ್ಹ ಉಪನ್ಯಾಸಕರು ಬೈಬಲ್‌ನಲ್ಲಿರುವ ತತ್ವಗಳನ್ನು ಕಾರ್ಯರೂಪಕ್ಕೆ ಹಾಕುವುದು ಹೇಗೆಂದು ನಮಗೆ ಕಲಿಸುತ್ತಾರೆ. (ಧರ್ಮೋಪದೇಶಕಾಂಡ 31:12; ನೆಹೆಮೀಯ 8:8) ಕಾರ್ಯಕ್ರಮದಲ್ಲಿ ಸಭಿಕರೆಲ್ಲರೂ ಭಾಗವಹಿಸುವ ಹಾಗೂ ಜೊತೆಗೂಡಿ ಸ್ತುತಿಗೀತೆಗಳನ್ನು ಹಾಡುವ ಅವಕಾಶವಿದೆ. ಇದು ದೇವರ ಮೇಲೆ ನಾವಿಟ್ಟಿರುವ ನಂಬಿಕೆ, ನಮಗಿರುವ ಭವ್ಯ ನಿರೀಕ್ಷೆ ಇವನ್ನೆಲ್ಲ ಹಂಚಿಕೊಳ್ಳಲು ಸಂದರ್ಭ ಒದಗಿಸುತ್ತದೆ.—ಇಬ್ರಿಯ 10:23.
ದೇವರ ಮೇಲೆ ನಿಮ್ಮ ನಂಬಿಕೆ ಹೆಚ್ಚಿ ಆಶೀರ್ವಾದ ಪಡೆಯುವಿರಿ. ಯೇಸುವಿನ ಅನುಯಾಯಿಗಳಲ್ಲಿ ಒಬ್ಬನಾಗಿದ್ದ ಪೌಲ ಎಂಬವನೊಮ್ಮೆ ಒಂದು ಸಭೆಗೆ ಪತ್ರ ಬರೆದು “ನಾನು ನಿಮ್ಮನ್ನು ನೋಡಲು ಹಂಬಲಿಸುತ್ತಿದ್ದೇನೆ, . . . ಉತ್ತೇಜನವನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲು ಅಂದರೆ ನಿಮ್ಮ ನಂಬಿಕೆಯಿಂದ ನಾನು ಮತ್ತು ನನ್ನ ನಂಬಿಕೆಯಿಂದ ನೀವು ಉತ್ತೇಜಿಸಲ್ಪಡಲು ಸಾಧ್ಯವಾಗಬಹುದು” ಎಂದು ತಿಳಿಸಿದನು. (ರೋಮನ್ನರಿಗೆ 1:11, 12) ಹೌದು ನಾವು ಪ್ರತಿವಾರವೂ ಸಭೆಗೆ ಹಾಜರಾಗಿ ದೇವಭಕ್ತ ಜನರೊಂದಿಗೆ ಬೆರೆಯುವಾಗ ದೇವರ ಮೇಲೆ ನಮ್ಮ ನಂಬಿಕೆ ಹೆಚ್ಚುತ್ತೆ. ಅಲ್ಲದೆ ಬೈಬಲ್‌ನಲ್ಲಿರುವ ತತ್ವಗಳನ್ನು ಕಾರ್ಯರೂಪಕ್ಕೆ ಹಾಕಲು ಸ್ಫೂರ್ತಿ ಸಿಗುತ್ತೆ.
ನೀವೇಕೆ ನಮ್ಮ ಈ ವಾರದ ಕ್ರೈಸ್ತ ಕೂಟಕ್ಕೆ ಹಾಜರಾಗಿ ಮೇಲೆ ತಿಳಿಸಿದ್ದನ್ನೆಲ್ಲ ಖುದ್ದಾಗಿ ಆಸ್ವಾದಿಸಬಾರದು? ನಿಮ್ಮನ್ನು ಸ್ನೇಹಪೂರ್ವಕವಾಗಿ ಬರಮಾಡಿಕೊಳ್ಳಲಾಗುವುದು. ಕಾರ್ಯಕ್ರಮ ಉಚಿತವಾಗಿದೆ.
ನಮ್ಮ ಸಭೆಯ ಕಾರ್ಯಕಲಾಪ ಯಾವ ನಮೂನೆಯನ್ನು ಆಧರಿಸಿದೆ?
ಯೆಹೋವನ ಸಾಕ್ಷಿಗಳ ಸಭೆಗೆ ಹಾಜರಾಗುವುದರಿಂದ ಯಾವೆಲ್ಲ ಪ್ರಯೋಜನ ಸಿಗುತ್ತದೆ?
-
-
ಯೆಹೋವನ ಸಾಕ್ಷಿಗಳೇಕೆ ಪರಸ್ಪರ ಸಾಹಚರ್ಯಕ್ಕೆ ಮಹತ್ವ ಕೊಡುತ್ತಾರೆ?ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?
-
-
ಅಧ್ಯಾಯ 6
ಯೆಹೋವನ ಸಾಕ್ಷಿಗಳೇಕೆ ಪರಸ್ಪರ ಸಾಹಚರ್ಯಕ್ಕೆ ಮಹತ್ವ ಕೊಡುತ್ತಾರೆ?
ಮಡಗಾಸ್ಕರ್
ನಾರ್ವೆ
ಲೆಬನಾನ್
ಇಟಲಿ
ಮಳೆಯೇ ಇರಲಿ ಬಿಸಿಲೇ ಇರಲಿ. ಬೆಟ್ಟ ಗುಡ್ಡ ದಾಟಬೇಕಾಗಿರಲಿ ನಾವು ಕ್ರೈಸ್ತ ಕೂಟಗಳಿಗೆ ತಪ್ಪದೇ ಹಾಜರಾಗುತ್ತೇವೆ. ಬದುಕಿನಲ್ಲಿ ಎಷ್ಟೇ ಕಷ್ಟಗಳಿರಲಿ ಇಡೀ ದಿನ ಕೆಲಸ ಮಾಡಿ ಬಳಲಿರಲಿ ನಾವು ಮಾತ್ರ ಸಭೆಗೆ ಹಾಜರ್. ಇಷ್ಟೆಲ್ಲ ತೊಡಕುಗಳಿದ್ದರೂ ಯೆಹೋವನ ಸಾಕ್ಷಿಗಳು ಪರಸ್ಪರ ಸಾಹಚರ್ಯವನ್ನು ಇಷ್ಟಪಡುವುದೇಕೆ?
ಒಳಿತಿರುವುದರಿಂದ. ಸಭೆ ಸೇರುವವರು “ಪರಸ್ಪರ ಹಿತಚಿಂತಕರಾಗಿ” ಇರಬೇಕೆಂದು ಪೌಲ ಹೇಳಿದನು. (ಇಬ್ರಿಯ 10:24) ಅವನ ಮಾತಿನ ಅರ್ಥ ಸಭೆಗೆ ಬರುವವರು ಒಬ್ಬರನ್ನೊಬ್ಬರು ಚೆನ್ನಾಗಿ ತಿಳಿದುಕೊಳ್ಳಬೇಕು, ಮುತುವರ್ಜಿ ಕಾಳಜಿ ವಹಿಸಬೇಕು ಎನ್ನುವುದೇ. ನಾವಿಂದು ಎದುರಿಸುತ್ತಿರುವ ಕಷ್ಟಗಳನ್ನು ಸಭೆಯಲ್ಲಿರುವ ಕೆಲವರು ಈಗಾಗಲೇ ಜಯಿಸಿ ಬಂದಿರಬಹುದು. ಅವರೊಂದಿಗೆ ಮಾತಾಡಿ ಅವರ ಅನುಭವವನ್ನು ತಿಳಿದುಕೊಳ್ಳುವುದರಿಂದ ಖಂಡಿತ ನಮಗೆ ಒಳಿತಾಗುತ್ತದೆ. ನಮ್ಮ ಕಷ್ಟಗಳನ್ನು ಜಯಿಸಲು ನೆರವಾಗುತ್ತದೆ.
ನಿಜ ಸ್ನೇಹಿತರು ಸಿಗುವುದರಿಂದ. ಸಭೆಯಾಗಿ ಕೂಡಿಬರುವ ನಾವು ಕೇವಲ ಪರಿಚಯಸ್ಥರಷ್ಟೇ ಅಲ್ಲ. ಅದಕ್ಕಿಂತಲೂ ಹೆಚ್ಚಾದ ಅತ್ಯಾಪ್ತ ಸ್ನೇಹ ಬಾಂಧವ್ಯ ನಮ್ಮಲ್ಲಿದೆ. ವಿನೋದ ವಿಹಾರ ಮುಂತಾದ ಬೇರೆ ಸಂದರ್ಭದಲ್ಲೂ ನಾವು ಒಟ್ಟುಗೂಡುತ್ತೇವೆ. ಇಂಥ ಸಾಹಚರ್ಯ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ನೆರವಾಗಿ ನಮ್ಮ ನಡುವಿನ ಪ್ರೀತಿ ಸಾಮರಸ್ಯವನ್ನು ಬಿಗಿಯಾಗಿಸುತ್ತದೆ. ಈ ನಮ್ಮ ಸ್ನೇಹಿತರಲ್ಲಿ ಯಾರಿಗಾದರೂ ಸಮಸ್ಯೆ ಎದುರಾದಲ್ಲಿ ನಾವು ಹೆಗಲಿಗೆ ಹೆಗಲಾಗಿರುತ್ತೇವೆ. (ಜ್ಞಾನೋಕ್ತಿ 17:17) ಸಭೆಗೆ ಬರುವ ಎಲ್ಲರೊಂದಿಗೆ ನಾವು ಭೇದಭಾವವಿಲ್ಲದೆ ಬೆರೆಯುತ್ತೇವೆ. ಹೀಗೆ ‘ಪರಸ್ಪರ ಹಿತವನ್ನು ಚಿಂತಿಸುವವರು’ ಆಗಿದ್ದೇವೆ.—1 ಕೊರಿಂಥ 12:25, 26.
ದೇವರ ಇಷ್ಟವನ್ನು ಮಾಡುತ್ತಿರುವವರ ಜೊತೆ ನೀವು ಗೆಳೆತನ ಬೆಳೆಸಿಕೊಳ್ಳಬೇಕು ಎನ್ನುವುದೇ ನಮ್ಮಾಶೆ. ಆ ರೀತಿಯ ಜನರನ್ನು ಯೆಹೋವನ ಸಾಕ್ಷಿಗಳ ಸಭೆಯಲ್ಲಿ ಕಾಣಬಹುದು. ನಮ್ಮೊಂದಿಗಿನ ಒಡನಾಟವನ್ನು ತುಂಡರಿಸುವಂಥ ಅನೇಕ ವಿಷಯಗಳು ನಿಮಗೆ ಎದುರಾಗಬಹುದಾದರೂ ನಮ್ಮೊಂದಿಗಿನ ಸ್ನೇಹ ಸಂಪರ್ಕ ಕಡಿದುಹೋಗದಿರಲಿ.
ನಾವೇಕೆ ನಮ್ಮ ಸಾಹಚರ್ಯಕ್ಕೆ ಮಹತ್ವ ಕೊಡುತ್ತೇವೆ?
ನಮ್ಮ ಸಭೆಗೆ ಯಾವಾಗ ಬರ್ತೀರಾ?
-
-
ನಮ್ಮ ಸಭಾ ಕೂಟಗಳಲ್ಲಿ ಯಾವ್ಯಾವ ಕಾರ್ಯಕ್ರಮ ನಡೆಯುತ್ತೆ?ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?
-
-
ಅಧ್ಯಾಯ 7
ನಮ್ಮ ಸಭಾ ಕೂಟಗಳಲ್ಲಿ ಯಾವ್ಯಾವ ಕಾರ್ಯಕ್ರಮ ನಡೆಯುತ್ತೆ?
ನ್ಯೂಜಿಲೆಂಡ್
ಜಪಾನ್
ಉಗಾಂಡ
ಲಿಥುವೇನಿಯ
ಪ್ರಾಚೀನ ಕಾಲದ ಸಭಾ ಕೂಟಗಳಲ್ಲಿ ಸ್ತುತಿಗೀತೆ ಹಾಡುವುದು, ಪ್ರಾರ್ಥನೆ ಮಾಡುವುದು, ಬೈಬಲ್ ಓದಿ ಚರ್ಚಿಸುವುದು ಪ್ರಮುಖವಾಗಿತ್ತು. (1 ಕೊರಿಂಥ 14:26) ನಮ್ಮ ಸಭಾ ಕೂಟಗಳಲ್ಲಿ ಸಹ ಅದೇ ವಿಧಾನ ಅನುಸರಿಸಲಾಗುತ್ತದೆ.
ನಮ್ಮ ಬದುಕಿಗೆ ನೆರವಾಗುವ ಬೈಬಲ್ ಆಧರಿತ ಉಪದೇಶ ಕಾರ್ಯಕ್ರಮ. ವಾರಾಂತ್ಯದಲ್ಲಿ 30 ನಿಮಿಷಗಳ ಬೈಬಲ್ ಉಪನ್ಯಾಸ ಇರುತ್ತದೆ. ನಮ್ಮ ಬದುಕಿನಲ್ಲಿ ಬೈಬಲ್ ಸಲಹೆಗಳನ್ನು ಅಳವಡಿಸುವುದು ಹೇಗೆಂದು ಆ ಉಪನ್ಯಾಸದಲ್ಲಿ ವಿವರಿಸಲಾಗುತ್ತದೆ. ಎಲ್ಲರೂ ತಮ್ಮ ತಮ್ಮ ಬೈಬಲ್‌ಗಳನ್ನು ತರುತ್ತಾರೆ ಮತ್ತು ಅಮೂಲ್ಯ ಸಲಹೆಗಳನ್ನು ಗುರುತಿಸಿಕೊಳ್ಳುತ್ತಾರೆ. ಉಪನ್ಯಾಸದ ನಂತರ “ಕಾವಲಿನಬುರುಜು” ಅಧ್ಯಯನ ಎಂಬ ಇನ್ನೊಂದು ಕಾರ್ಯಕ್ರಮ ಇರುತ್ತದೆ. ಒಂದು ತಾಸಿನ ಈ ಕಾರ್ಯಕ್ರಮದಲ್ಲಿ ಕಾವಲಿನಬುರುಜು ಎಂಬ ಮಾಸಿಕದಿಂದ (ಅಧ್ಯಯನ ಆವೃತ್ತಿ) ಲೇಖನವೊಂದನ್ನು ಚರ್ಚಿಸಲಾಗುತ್ತದೆ. ಹಾಜರಿರುವ ಎಲ್ಲರೂ ಈ ಚರ್ಚೆಯಲ್ಲಿ ಪಾಲ್ಗೊಳ್ಳಬಹುದು. ಬೈಬಲ್ ಮಾರ್ಗದರ್ಶನೆಗಳನ್ನು ಜೀವನದಲ್ಲಿ ಪಾಲಿಸುವುದು ಹೇಗೆಂದು ಈ ಚರ್ಚೆಯಿಂದ ಕಲಿಯಬಹುದು. ಈ ಕಾರ್ಯಕ್ರಮದ ವಿಶೇಷತೆ ಏನೆಂದರೆ, ಭೂವ್ಯಾಪಕವಾಗಿರುವ 1,10,000ಕ್ಕೂ ಅಧಿಕ ಸಭೆಗಳಲ್ಲಿ ಚರ್ಚಿಸಲಾಗುವ ಲೇಖನ ಒಂದೇ ಆಗಿರುತ್ತದೆ.
ನಮ್ಮ ಬೋಧನಾ ಸಾಮರ್ಥ್ಯವನ್ನು ಹೆಚ್ಚಿಸುವ ಕಾರ್ಯಕ್ರಮ. ವಾರಮಧ್ಯದ ಒಂದು ಸಂಜೆ ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಎಂಬ ಮೂರು ಭಾಗಗಳಿರುವ ಕಾರ್ಯಕ್ರಮವಿರುತ್ತದೆ. ಇದು ಪ್ರತಿ ತಿಂಗಳ ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ಮೇಲೆ ಆಧರಿತವಾಗಿರುತ್ತದೆ. ಈ ಕೂಟದ ಮೊದಲನೇ ಭಾಗ ಬೈಬಲಿನಲ್ಲಿರುವ ರತ್ನಗಳು. ಇದು ಮೊದಲೇ ಓದಿಕೊಂಡು ಬಂದಿರುವ ಬೈಬಲಿನ ಕೆಲವು ಅಧ್ಯಾಯಗಳನ್ನು ಚೆನ್ನಾಗಿ ಪರಿಚಯ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ನಂತರ ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ ಎಂಬ ಭಾಗದಲ್ಲಿ ಬೈಬಲಿನ ಬಗ್ಗೆ ಇತರರೊಂದಿಗೆ ಚರ್ಚಿಸುವುದು ಹೇಗೆಂದು ತೋರಿಸುವ ಅಭಿನಯಗಳಿರುತ್ತವೆ. ಓದುವ ಮತ್ತು ಮಾತಾಡುವ ಸಾಮರ್ಥ್ಯವನ್ನು ಹೇಗೆ ಉತ್ತಮಗೊಳಿಸುವುದು ಎಂದು ಸಲಹೆ ನೀಡಲಾಗುತ್ತದೆ. (1 ತಿಮೊಥೆಯ 4:13) ಕೊನೆಯಲ್ಲಿ ನಮ್ಮ ಕ್ರೈಸ್ತ ಜೀವನ ಎಂಬ ಭಾಗದಲ್ಲಿ ಬೈಬಲ್ ತತ್ವಗಳನ್ನು ದಿನನಿತ್ಯದ ಜೀವನದಲ್ಲಿ ಹೇಗೆ ಅನ್ವಯಿಸುವುದು ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಬೈಬಲನ್ನು ಇನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳಲಿಕ್ಕಾಗಿ ಪ್ರಶ್ನೋತ್ತರ ಚರ್ಚೆ ಇರುತ್ತದೆ.
ನಮ್ಮ ಸಭಾ ಕೂಟಗಳಿಗೆ ನೀವು ಹಾಜರಾಗುವುದಾದರೆ ಅಲ್ಲಿ ನೀಡಲಾಗುವ ಬೈಬಲ್ ಶಿಕ್ಷಣ ಅದ್ಭುತವಾದದ್ದು ಎಂದು ಪ್ರತ್ಯಕ್ಷ ಕಾಣುವಿರಿ.—ಯೆಶಾಯ 54:13.
ಯೆಹೋವನ ಸಾಕ್ಷಿಗಳ ಸಭಾ ಕೂಟಗಳಲ್ಲಿ ಯಾವ ಕಾರ್ಯಕ್ರಮಗಳಿವೆ?
ಯಾವ ಕಾರ್ಯಕ್ರಮಕ್ಕೆ ಹಾಜರಾಗಲು ಯೋಜಿಸಿದ್ದೀರಿ?
-
-
ಸಭೆಗೆ ಹೋಗುವಾಗ ಸಭ್ಯ ಉಡುಗೆ ಧರಿಸಬೇಕು ಏಕೆ?ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?
-
-
ಅಧ್ಯಾಯ 8
ಸಭೆಗೆ ಹೋಗುವಾಗ ಸಭ್ಯ ಉಡುಗೆ ಧರಿಸಬೇಕು ಏಕೆ?
ಐಸ್‌ಲೆಂಡ್
ಮೆಕ್ಸಿಕೊ
ಗಿನಿ-ಬಿಸೌ
ಫಿಲಿಪೀನ್ಸ್
ಯೆಹೋವನ ಸಾಕ್ಷಿಗಳು ಸಭೆಗೆ ಹೋಗುವಾಗ ನೀಟಾಗಿ ಉಡುಗೆ ತೊಟ್ಟುಕೊಳ್ಳುತ್ತಾರೆ ಎನ್ನುವುದನ್ನು ಈ ಕಿರುಹೊತ್ತಗೆಯಲ್ಲಿರುವ ಚಿತ್ರಗಳಲ್ಲಿ ನೀವು ಗಮನಿಸಿರಬಹುದು. ವಸ್ತ್ರಾಲಂಕಾರಕ್ಕೆ ನಾವೇಕೆ ಅಷ್ಟು ಮಹತ್ವ ಕೊಡುತ್ತೇವೆ?
ದೇವರನ್ನು ಮಹಿಮೆಪಡಿಸಲು. ದೇವರು ನಮ್ಮ ಹೊರಗಿನ ಶೃಂಗಾರವನ್ನಲ್ಲ ಒಳಗಿನ ವ್ಯಕ್ತಿತ್ವವನ್ನು ನೋಡುತ್ತಾನೆ. (1 ಸಮುವೇಲ 16:7) ಹಾಗಿದ್ದರೂ ಆರಾಧನೆಗೆಂದು ಸಭೆ ಸೇರುವಾಗ ನಾವು ವಸ್ತ್ರಾಲಂಕಾರಕ್ಕೆ ಹೆಚ್ಚು ಗಮನ ಕೊಡುತ್ತೇವೆ. ದೇವರಿಗೆ ಘನಮಾನ ಮತ್ತು ಸಹಆರಾಧಕರಿಗೆ ಗೌರವ ಕೊಡಬೇಕೆನ್ನುವುದೇ ನಮ್ಮ ಇಚ್ಛೆ. ಉದಾಹರಣೆಗೆ, ನ್ಯಾಯಾಧೀಶರನ್ನು ಭೇಟಿಯಾಗಬೇಕಿದೆ ಎಂದಿಟ್ಟುಕೊಳ್ಳಿ. ಅವರ ಮುಂದೆ ಹೋಗುವ ಮುನ್ನ ನಮ್ಮ ಬಟ್ಟೆ ಮತ್ತು ಹೊರತೋರಿಕೆ ಸಭ್ಯವಾಗಿದೆ ಎಂದು ಖಚಿತ ಮಾಡಿಕೊಳ್ಳುತ್ತೇವಲ್ಲವೇ? ಅದೇ ರೀತಿ ನಾವು ಸಭೆಗೆ ಹೋಗುವಾಗ “ಸರ್ವಲೋಕಕ್ಕೆ ನ್ಯಾಯತೀರಿಸುವ” ಯೆಹೋವ ದೇವರ ಮುಂದೆ ನಿಲ್ಲುತ್ತೇವೆ. ಹಾಗಾದರೆ ನಮ್ಮ ಉಡುಪು ಹೊರತೋರಿಕೆ ಸರ್ವಶಕ್ತ ದೇವರಿಗೆ ಘನಮಾನ ತರುವಂಥ ರೀತಿಯಲ್ಲಿ ಇರಬೇಕಲ್ಲವೇ?—ಆದಿಕಾಂಡ 18:25.
ದೇವರ ಉನ್ನತ ಮಟ್ಟಗಳನ್ನು ಬದುಕಿನಲ್ಲಿ ಪಾಲಿಸುತ್ತೇವೆಂದು ತೋರಿಸಲು. ಕ್ರೈಸ್ತರು “ಸಭ್ಯತೆ ಮತ್ತು ಸ್ವಸ್ಥಬುದ್ಧಿಯುಳ್ಳವರಾಗಿದ್ದು ಮರ್ಯಾದೆಗೆ ತಕ್ಕ” ಉಡುಪನ್ನು ಧರಿಸಬೇಕೆಂದು ಬೈಬಲ್ ಪ್ರೋತ್ಸಾಹಿಸುತ್ತದೆ. (1 ತಿಮೊಥೆಯ 2:9, 10) “ಸಭ್ಯ” ಉಡುಪು ಆಡಂಬರವಾಗಿರುವುದಿಲ್ಲ, ನೋಡುಗರಲ್ಲಿ ಲೈಂಗಿಕ ಭಾವವನ್ನು ಕೆರಳಿಸುವ ಪಾರದರ್ಶಕ ಅಥವಾ ಮೈತೋರಿಸುವ ರೀತಿಯಲ್ಲಿ ಇರುವುದಿಲ್ಲ. “ಸ್ವಸ್ಥಬುದ್ಧಿ” ಉಳ್ಳವರು ಟೈಟಾಗಿರುವ ಅಥವಾ ವಿಪರೀತ ಲೂಸಾಗಿರುವ ಉಡುಪನ್ನು ಆರಿಸಿಕೊಳ್ಳುವುದಿಲ್ಲ. ಯಾವ ರೀತಿಯ ಬಟ್ಟೆ ಧರಿಸಬೇಕು ಎನ್ನುವುದು ವ್ಯಕ್ತಿಪರ ಆಯ್ಕೆಯಾದರೂ ‘ಸಭ್ಯತೆ’ ಹಾಗೂ ‘ಸ್ವಸ್ಥಬುದ್ಧಿ ಉಳ್ಳವರಾಗಿ’ ಎನ್ನುವ ಎರಡು ತತ್ವಗಳನ್ನು ಯೆಹೋವನ ಸಾಕ್ಷಿಗಳು ಮರೆಯುವುದಿಲ್ಲ. ನಾವು ಧರಿಸುವ ಅಚ್ಚುಕಟ್ಟಾದ ಉಡುಪು “ನಮ್ಮ ರಕ್ಷಕನಾದ ದೇವರ ಬೋಧನೆ”ಗೆ ಅಲಂಕಾರದಂತಿದ್ದು ಆತನಿಗೆ ಮಹಿಮೆ ತರುತ್ತದೆ. (ತೀತ 2:10; 1 ಪೇತ್ರ 2:12) ಹೀಗೆ ನಮ್ಮ ಒಪ್ಪಓರಣದ ಉಡುಪು ಯೆಹೋವ ದೇವರ ಆರಾಧನೆಯ ಉನ್ನತ ಮಟ್ಟವನ್ನು ಇತರರಿಗೆ ಸಾರಿ ಹೇಳುತ್ತದೆ.
‘ನನ್ನತ್ರ ಒಳ್ಳೇ ಬಟ್ಟೆ ಇಲ್ಲ ನಾನು ಹೇಗೆ ಯೆಹೋವನ ಸಾಕ್ಷಿಗಳ ಸಭೆಗೆ ಹೋಗೋದು’ ಎಂದು ನೆನಸಬೇಡಿ. ಸಭೆಗೆ ಹೋಗುವಾಗ ದುಬಾರಿ ಹಾಗೂ ಫ್ಯಾಷನ್‌ಯುಕ್ತ ವಸ್ತ್ರ ಧರಿಸಬೇಕೆಂದಿಲ್ಲ; ಶುಭ್ರವಾಗಿ ನೀಟಾಗಿದ್ದರೆ ಸಾಕು.
ಸಭೆಗೆ ಹೋಗುವಾಗ ನಾವೇಕೆ ಸಭ್ಯ ಉಡುಗೆ ಧರಿಸಬೇಕು?
ಉಡುಗೆ ತೊಡುಗೆ ವಿಷಯದಲ್ಲಿ ಯಾವೆರಡು ತತ್ವವನ್ನು ನಾವು ಮನಸ್ಸಿನಲ್ಲಿಡಬೇಕು?
-
-
ಸಭಾ ಕೂಟಗಳ ಕಾರ್ಯಕ್ರಮಕ್ಕೆ ತಯಾರಿ ಮಾಡುವುದು ಹೇಗೆ?ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?
-
-
ಅಧ್ಯಾಯ 9
ಸಭಾ ಕೂಟಗಳ ಕಾರ್ಯಕ್ರಮಕ್ಕೆ ತಯಾರಿ ಮಾಡುವುದು ಹೇಗೆ?
ಕಾಂಬೋಡಿಯ
ಯುಕ್ರೇನ್
ಯೆಹೋವನ ಸಾಕ್ಷಿಗಳಿಂದ ಬೈಬಲ್ ವಿಷಯ ಕಲಿಯುತ್ತಿದ್ದೀರಾ? ಹಾಗಾದರೆ ಪ್ರತಿಬಾರಿ ಮುಂಚಿತವಾಗಿ ಓದಿ ತಯಾರಿ ಮಾಡುವ ಮಹತ್ವ ನಿಮಗೆ ಗೊತ್ತಿರಬಹುದು. ಸಭಾ ಕೂಟಗಳಲ್ಲಿ ತಿಳಿಸಲಾಗುವ ವಿಷಯಗಳನ್ನು ಸಹ ಚೆನ್ನಾಗಿ ಅರ್ಥಮಾಡಿಕೊಳ್ಳಬೇಕಾದರೆ ಪೂರ್ವತಯಾರಿ ಮಾಡಬೇಕು. ರೂಢಿ ಮಾಡಿಕೊಂಡರಂತೂ ಫಲಿತಾಂಶ ಅದ್ಭುತವಾಗಿರುತ್ತದೆ.
ಸೂಕ್ತ ಸಮಯ ಹಾಗೂ ಪರಿಸರ ಆಯ್ಕೆ ಮಾಡಿ. ಏಕಾಗ್ರತೆ ಕೊಟ್ಟು ಓದಲು ನಿಮ್ಮಿಂದ ಯಾವಾಗ ಸಾಧ್ಯ? ಬೆಳಿಗ್ಗೆ ಕೆಲಸ ಆರಂಭಿಸುವ ಮುಂಚೆ . . . ರಾತ್ರಿ ಮಕ್ಕಳು ನಿದ್ರಿಸಿದ ಮೇಲೆ . . . ? ತುಂಬಾ ಹೊತ್ತು ಓದಲು ನಿಮ್ಮಿಂದ ಆಗದಿದ್ದಲ್ಲಿ ಎಷ್ಟು ಹೊತ್ತು ವ್ಯಯಿಸಲು ಸಾಧ್ಯ ಎಂದು ನಿರ್ಧರಿಸಿ. ಆ ನಿಗದಿತ ಸಮಯವನ್ನು ಇತರ ಸಂಗತಿ ಕಸಿದುಕೊಳ್ಳದಂತೆ ನೋಡಿಕೊಳ್ಳಿ. ಓದಿಗೆ ಪ್ರಶಾಂತ ಜಾಗ ಆಯ್ಕೆ ಮಾಡಿ. ಟೀವಿ, ಮೊಬೈಲ್ ಇತ್ಯಾದಿಗಳನ್ನು ಬಂದ್ ಮಾಡಿ ಅಡಚಣೆ ತಪ್ಪಿಸಿ. ತಯಾರಿ ಆರಂಭಿಸುವ ಮುನ್ನ ದೇವರ ಬಳಿ ಪ್ರಾರ್ಥಿಸಿ. ಆಗ ಚಿಂತೆಗಳನ್ನೆಲ್ಲ ಬದಿಗಿಟ್ಟು ಬೈಬಲ್ ಕಲಿಕೆಯ ಮೇಲೆ ಮನಸ್ಸನ್ನು ಕೇಂದ್ರೀಕರಿಸಲು ಆಗುವುದು.—ಫಿಲಿಪ್ಪಿ 4:6, 7.
ಓದಿ ಅಡಿಗೆರೆ ಹಾಕಿ, ಚರ್ಚೆಯಲ್ಲಿ ಭಾಗವಹಿಸಲು ಸಿದ್ಧತೆ ಮಾಡಿ. ಮೊದಲು, ಓದುವ ವಿಷಯದ ಮೇಲ್ನೋಟ ಪಡೆದುಕೊಳ್ಳಿ. ಅದಕ್ಕಾಗಿ ಹೀಗೆ ಮಾಡಿ, ಲೇಖನದ ಅಥವಾ ಅಧ್ಯಾಯದ ಶೀರ್ಷಿಕೆಯನ್ನು ಮೊದಲು ಓದಿ. ಅದು ಲೇಖನದ ಮುಖ್ಯ ವಿಷಯ ಯಾವುದೆಂದು ಸೂಚಿಸುತ್ತದೆ. ನಂತರ ಪ್ರತಿಯೊಂದು ಉಪಶೀರ್ಷಿಕೆಯನ್ನು ಗಮನಿಸಿ. ಅವು ಮುಖ್ಯ ವಿಷಯಕ್ಕೆ ಹೇಗೆ ಸಂಬಂಧಿಸಿವೆ ಎಂದು ಆಲೋಚಿಸಿ. ಆಮೇಲೆ ಚಿತ್ರಗಳು ಹಾಗೂ ಪುನರವಲೋಕನ ಪ್ರಶ್ನೆಗಳನ್ನು ನೋಡಿ. ಅವು ಮುಖ್ಯ ವಿಷಯದ ಬಗ್ಗೆ ಹೇಗೆ ಇನ್ನಷ್ಟು ಸ್ಪಷ್ಟ ವಿವರ ನೀಡುತ್ತವೆ ಎಂದು ಚಿಂತಿಸಿ. ಅನಂತರ ಪ್ರತಿಯೊಂದು ಪ್ಯಾರಗ್ರಾಫ್ ಓದಿ ಅದರ ಕೆಳಗಿರುವ ಪ್ರಶ್ನೆಗೆ ಉತ್ತರ ಕಂಡು ಹಿಡಿಯಿರಿ. ಪ್ಯಾರಗ್ರಾಫ್‌ನಲ್ಲಿರುವ ಬೈಬಲ್ ವಚನಗಳನ್ನು ತೆರೆದು ಓದಿ. ಅವು ಪ್ಯಾರಗ್ರಾಫ್‌ನಲ್ಲಿರುವ ವಿಷಯದ ಬಗ್ಗೆ ಏನು ತಿಳಿಸುತ್ತವೆ ಎಂದು ಅವಲೋಕಿಸಿ. (ಅಪೊಸ್ತಲರ ಕಾರ್ಯಗಳು 17:11) ಉತ್ತರ ಕಂಡು ಹಿಡಿದ ಮೇಲೆ ಮುಖ್ಯ ಪದಗಳಿಗೆ ಅಥವಾ ವಾಕ್ಯಗಳಿಗೆ ಅಡಿಗೆರೆ ಹಾಕಿ. ಸಭಾ ಕೂಟದಲ್ಲಿ ಆ ಪದಗಳನ್ನು ನೋಡಿದ ಕೂಡಲೇ ಉತ್ತರವನ್ನು ನೆನಪಿಸಿಕೊಳ್ಳಲು ಸುಲಭವಾಗುತ್ತದೆ. ಚರ್ಚೆಯ ಸಮಯದಲ್ಲಿ ನೀವು ಸಹ ಕೈ ಎತ್ತಿ ಸ್ವಂತ ಮಾತಿನಲ್ಲಿ ಉತ್ತರ ಹೇಳಬಹುದು.
ಪ್ರತಿವಾರ ಸಭಾ ಕೂಟಗಳಲ್ಲಿ ಚರ್ಚಿಸಲಾಗುವ ವಿಭಿನ್ನ ವಿಷಯಗಳನ್ನು ಈ ರೀತಿ ಓದಿ ತಯಾರಿ ಮಾಡಿ. ಬೈಬಲಿನ ನಿಮ್ಮ ಜ್ಞಾನ ಭಂಡಾರ ಅಥವಾ “ಬೊಕ್ಕಸ” ಹೊಸ ವಿಷಯಗಳಿಂದ ಸಮೃದ್ಧಿಯಾಗಿ ಹಿಗ್ಗುವುದು.—ಮತ್ತಾಯ 13:51, 52.
ಸಭಾ ಕೂಟಗಳಿಗೆ ತಯಾರಿ ಮಾಡುವ ರೂಢಿಯನ್ನು ಬೆಳೆಸಿಕೊಳ್ಳಲು ನೀವೇನು ಮಾಡಬೇಕು?
ಸಭಾ ಕೂಟದಲ್ಲಿ ಉತ್ತರ ಹೇಳಲು ಹೇಗೆ ತಯಾರಿ ಮಾಡುವಿರಿ?
-
-
ಕುಟುಂಬ ಆರಾಧನೆ ಅಂದರೇನು?ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?
-
-
ಅಧ್ಯಾಯ 10
ಕುಟುಂಬ ಆರಾಧನೆ ಅಂದರೇನು?
ದಕ್ಷಿಣ ಕೊರಿಯ
ಬ್ರೆಜಿಲ್
ಆಸ್ಟ್ರೇಲಿಯ
ಗಿನಿ
ಕುಟುಂಬ ಸದಸ್ಯರಲ್ಲಿ ಪ್ರೀತಿ ಐಕ್ಯತೆಯ ಬಾಂಧವ್ಯ ಇರಬೇಕು ಹಾಗೂ ಆಧ್ಯಾತ್ಮ ಸ್ಥಿತಿ ಚೆನ್ನಾಗಿರಬೇಕು ಎನ್ನುವುದು ಯೆಹೋವ ದೇವರ ಇಚ್ಛೆ. ಹಾಗಾಗಿ ಕುಟುಂಬ ಸದಸ್ಯರು ಒಟ್ಟಿಗೆ ಸಮಯ ಕಳೆಯಬೇಕೆಂದು ಆತನು ಅಗತ್ಯಪಡಿಸಿದನು. (ಧರ್ಮೋಪದೇಶಕಾಂಡ 6:6, 7) ಆ ಕಾರಣದಿಂದಲೇ ಯೆಹೋವನ ಸಾಕ್ಷಿಗಳು ವಾರದ ಒಂದು ದಿನ ನಿರ್ದಿಷ್ಟ ಸಮಯವನ್ನು ಕುಟುಂಬ ಆರಾಧನೆಗೆಂದು ಮೀಸಲಿಡುತ್ತಾರೆ. ಎಲ್ಲರೂ ಒಟ್ಟುಗೂಡಿ ಉಲ್ಲಾಸಮಯವಾಗಿ ಆಧ್ಯಾತ್ಮಿಕ ವಿಷಯಗಳನ್ನು ಚರ್ಚಿಸುತ್ತಾರೆ. ನೀವು ಒಬ್ಬಂಟಿಯಾಗಿದ್ದರೂ ಇದೇ ರೀತಿ ನಿರ್ದಿಷ್ಟ ಸಮಯ ಮೀಸಲಿಟ್ಟು ಬೈಬಲನ್ನು ಆಳವಾಗಿ ತಿಳಿದುಕೊಳ್ಳಲು ಕಾರ್ಯಯೋಜನೆ ಹಾಕಿಕೊಳ್ಳಬಹುದು.
ಯೆಹೋವ ದೇವರೊಂದಿಗೆ ಆಪ್ತರಾಗುವ ಸಮಯ. “ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು.” (ಯಾಕೋಬ 4:8) ನಾವು ಯೆಹೋವ ದೇವರಿಗೆ ಸಮೀಪವಾಗಬೇಕಾದರೆ ಆತನ ಬಗ್ಗೆ ತಿಳಿದುಕೊಳ್ಳಬೇಕು. ಅದಕ್ಕೆ ಆತನ ವಾಕ್ಯವಾದ ಬೈಬಲನ್ನು ಓದುವುದು ಅಗತ್ಯ. ಅದರಲ್ಲಿ ಆತನ ವ್ಯಕ್ತಿತ್ವ ಹಾಗೂ ಕಾರ್ಯವೈಖರಿಯ ಬಗ್ಗೆ ಬೇಕಾದಷ್ಟು ವಿವರಗಳಿವೆ. ಬೈಬಲನ್ನು ಒಟ್ಟಿಗೆ ಓದುವುದು ಕುಟುಂಬ ಆರಾಧನೆಯನ್ನು ಆರಂಭಿಸುವ ಒಂದು ಸುಲಭ ವಿಧಾನ. ಜೀವನ ಮತ್ತು ಸೇವೆ ಕೂಟದ ಕಾರ್ಯತಖ್ತೆಯಲ್ಲಿ ಆಯಾ ವಾರಕ್ಕೆ ಬೈಬಲಿನ ಇಂತಿಷ್ಟು ಅಧ್ಯಾಯಗಳನ್ನು ನಿಗದಿಸಲಾಗಿರುತ್ತದೆ. ಆ ಅಧ್ಯಾಯಗಳನ್ನೇ ನೀವು ಕುಟುಂಬವಾಗಿ ಓದಬಹುದು. ಓದುವಿಕೆಯಲ್ಲಿ ಎಲ್ಲರೂ ಭಾಗ ತೆಗೆದುಕೊಳ್ಳಬಹುದು. ನಂತರ ಅವುಗಳಲ್ಲಿರುವ ಪಾಠಗಳನ್ನು ಪ್ರತಿಯೊಬ್ಬರು ಹಂಚಿಕೊಳ್ಳಬಹುದು.
ಕುಟುಂಬ ಸದಸ್ಯರು ಪರಸ್ಪರ ಆಪ್ತರಾಗುವ ಸಮಯ. ಕುಟುಂಬವಾಗಿ ಬೈಬಲನ್ನು ಓದುವಾಗ ಪತಿ-ಪತ್ನಿ, ಪೋಷಕರು-ಮಕ್ಕಳ ನಡುವೆ ಪ್ರೀತಿ ಹೆಚ್ಚಿ ಸಂಬಂಧ ಬಿಗಿಯಾಗುತ್ತದೆ. ಕುಟುಂಬ ಆರಾಧನೆಯ ಸಮಯ ಉಲ್ಲಾಸವಾಗಿ ಇರಬೇಕು, ಕುಟುಂಬದ ಪ್ರತಿ ಸದಸ್ಯರು ಆ ಸಮಯಕ್ಕಾಗಿ ಮುನ್ನೋಡುವಂತೆ ಇರಬೇಕು. ಹಾಗಿರಬೇಕೆಂದರೆ ಹೆತ್ತವರು ತಮ್ಮ ಮಕ್ಕಳ ವಯೋಮಿತಿಗೆ ತಕ್ಕ ಹಾಗೂ ಅವರಿಗೆ ನೆರವಾಗುವ ವಿಚಾರಗಳನ್ನು ಚರ್ಚಿಸಬೇಕು. ಅಂಥ ವಿಚಾರಗಳು ನಿಮಗೆ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಯಲ್ಲಿ ಅಥವಾ ನಮ್ಮ jw.org ವೆಬ್‌ಸೈಟಿನಲ್ಲಿ ಸಿಗುತ್ತವೆ. ಮಕ್ಕಳಿಗೆ ಶಾಲೆಯಲ್ಲಿ ಸಮಸ್ಯೆಗಳಿವೆಯೋ ಎಂದು ಕೇಳಿ ತಿಳಿದು ಅವನ್ನು ನಿವಾರಿಸುವುದು ಹೇಗೆಂದು ತಿಳಿಸಿ. ಅದಕ್ಕಾಗಿ JW ಪ್ರಸಾರದಲ್ಲಿ (tv.jw.org) ಬರುವ ಕಾರ್ಯಕ್ರಮವನ್ನು ನೋಡಿ, ಕುಟುಂಬವಾಗಿ ಚರ್ಚಿಸಿ. ಸಭಾ ಕೂಟಗಳಲ್ಲಿ ಹಾಡಲಾಗುವ ಸ್ತುತಿಗೀತೆಗಳನ್ನು ಪ್ರ್ಯಾಕ್ಟಿಸ್ ಮಾಡುವುದು ಮತ್ತು ಕೊನೆಗೆ ತಿಂಡಿತಿನಿಸುಗಳನ್ನು ಸವಿಯುವುದು ಎಲ್ಲರಲ್ಲೂ ಹರ್ಷಾನಂದ ಹೆಚ್ಚಿಸುತ್ತದೆ.
ಹೀಗೆ ಪ್ರತಿವಾರ ಕುಟುಂಬ ಆರಾಧನೆ ಮಾಡಿ ಯೆಹೋವ ದೇವರನ್ನು ಸ್ತುತಿಸಿ. ಬೈಬಲ್ ವಿಷಯಗಳನ್ನು ಕಲಿತು ಹರ್ಷಾನಂದ ಕಂಡುಕೊಳ್ಳಲು ಇದು ಕುಟುಂಬಕ್ಕೆ ಸುಸಮಯ ಒದಗಿಸುತ್ತದೆ. ಕುಟುಂಬ ಆರಾಧನೆಯನ್ನು ತಪ್ಪದೆ ಮಾಡಲು ನೀವು ಹಾಕುವ ಶ್ರಮವನ್ನು ದೇವರು ನಿಸ್ಸಂದೇಹವಾಗಿ ಆಶೀರ್ವದಿಸುತ್ತಾನೆ.—ಕೀರ್ತನೆ 1:1-3.
ನಾವೇಕೆ ಕುಟುಂಬ ಆರಾಧನೆಗೆ ಸಮಯ ಮೀಸಲಿಡುತ್ತೇವೆ?
ಕುಟುಂಬ ಆರಾಧನೆ ಆನಂದಮಯ ಆಗಿರಲು ಹೆತ್ತವರು ಏನು ಮಾಡಬೇಕು?
-
-
ನಾವು ಸಮ್ಮೇಳನಗಳನ್ನು ಆಯೋಜಿಸುವ ಉದ್ದೇಶವೇನು?ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?
-
-
ಅಧ್ಯಾಯ 11
ನಾವು ಸಮ್ಮೇಳನಗಳನ್ನು ಆಯೋಜಿಸುವ ಉದ್ದೇಶವೇನು?
ಮೆಕ್ಸಿಕೊ
ಜರ್ಮನಿ
ಬೋಟ್ಸವಾನ
ನಿಕರಾಗ್ವ
ಇಟಲಿ
ಈ ಚಿತ್ರಗಳಲ್ಲಿರುವ ಜನರ ಮುಖ ಸಂತೋಷದಿಂದ ಅರಳಿರುವುದನ್ನು ಗಮನಿಸಿದಿರಾ? ಅವರೆಲ್ಲರೂ ಸಮ್ಮೇಳನಕ್ಕೆ ಹಾಜರಾಗಿ ಆನಂದಿಸುತ್ತಿದ್ದಾರೆ. ಪ್ರಾಚೀನ ಕಾಲದ ದೇವಭಕ್ತರು ವರ್ಷಕ್ಕೆ ಮೂರು ಸಲ ಸಮೂಹವಾಗಿ ಕೂಡಿಬರುತ್ತಿದ್ದರು. ಅದು ದೇವರ ಆಜ್ಞೆಯಾಗಿತ್ತು. (ಧರ್ಮೋಪದೇಶಕಾಂಡ 16:16) ಅದೇ ನಮೂನೆಯನ್ನು ನಾವು ಅನುಕರಿಸುತ್ತೇವೆ. ಪ್ರತಿ ವರ್ಷ ನಮಗೆ ಮೂರು ದಿನದ ಪ್ರಾದೇಶಿಕ ಅಧಿವೇಶನ ಮತ್ತು ಒಂದೊಂದು ದಿನದ ಎರಡು ಸಮ್ಮೇಳನಗಳು ಇವೆ. ಅವುಗಳ ಪ್ರಯೋಜನವೇನು?
ನಮ್ಮಲ್ಲಿ ಭಾವೈಕ್ಯ ಹೆಚ್ಚಿ ಸಹೋದರತ್ವ ಬಲಗೊಳ್ಳುತ್ತದೆ. ಪ್ರಾಚೀನ ಕಾಲದ ಇಸ್ರೇಲ್ ಜನರು, “ಕೂಡಿದ ಸಭೆಗಳಲ್ಲಿ” ಯೆಹೋವ ದೇವರನ್ನು ಮಹಿಮೆಪಡಿಸುತ್ತಾ ಆನಂದಿಸಿದರು. ನಾವು ಸಮ್ಮೇಳನಗಳಲ್ಲಿ ಒಟ್ಟಾಗಿ ಕೂಡಿ ಯೆಹೋವ ದೇವರನ್ನು ಆರಾಧಿಸಿ ಹರ್ಷಿಸುತ್ತೇವೆ. (ಕೀರ್ತನೆ 26:12; 111:1) ಇಂಥ ಸಮ್ಮೇಳನಗಳಿಗೆ ಬೇರೆ ಬೇರೆ ಊರುಗಳಿಂದ ಕೆಲವೊಮ್ಮೆ ದೂರದ ದೇಶಗಳಿಂದ ಯೆಹೋವನ ಸಾಕ್ಷಿಗಳು ಜೊತೆಸೇರುತ್ತಾರೆ. ಪರಸ್ಪರ ಒಡನಾಟ ಸಾಹಚರ್ಯದಲ್ಲಿ ಆನಂದಿಸಲು ಇದೊಂದು ಸುಸಂದರ್ಭ. ಮಧ್ಯಾಹ್ನ ಊಟದ ವೇಳೆಯಲ್ಲಂತೂ ಸಮ್ಮೇಳನದಲ್ಲಿ ಸ್ನೇಹಮಯ ವಾತಾವರಣವೇ ತುಂಬಿರುತ್ತದೆ. (ಅಪೊಸ್ತಲರ ಕಾರ್ಯಗಳು 2:42) ನಮ್ಮ “ಸಹೋದರರ ಇಡೀ ಬಳಗ” ಪ್ರೀತಿ ಭಾವೈಕ್ಯದಲ್ಲಿ ಒಟ್ಟುಗೂಡಿ ಆನಂದಿಸುತ್ತಿರುವುದನ್ನು ಸಮ್ಮೇಳನಗಳಲ್ಲಿ ಪ್ರತ್ಯಕ್ಷ ಕಾಣುವಿರಿ.—1 ಪೇತ್ರ 2:17.
ಆಧ್ಯಾತ್ಮಿಕ ಜ್ಞಾನ ಹೆಚ್ಚಿಸಿಕೊಳ್ಳಲು ನೆರವಾಗುತ್ತವೆ. ಪ್ರಾಚೀನ ಕಾಲದಲ್ಲಿ, ಸಮೂಹವಾಗಿ ಕೂಡಿಬಂದ ಇಸ್ರೇಲ್ ಜನರು ಶಾಸ್ತ್ರವಚನಗಳ ಅರ್ಥವನ್ನು ಗ್ರಹಿಸಿ ಬಹಳ ಪ್ರಯೋಜನ ಪಡೆದರು. (ನೆಹೆಮೀಯ 8:8, 12) ನಮ್ಮ ಸಮ್ಮೇಳನಗಳಲ್ಲಿ ಸಹ ಬೈಬಲ್ ಉಪದೇಶ ನೀಡಲಾಗುತ್ತದೆ. ಸಮ್ಮೇಳನದ ಇಡೀ ಕಾರ್ಯಕ್ರಮ ಬೈಬಲಿನ ಒಂದು ವಿಷಯದ ಮೇಲೆ ಹೆಣೆದುಕೊಂಡಿರುತ್ತದೆ. ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಲಾಗುವ ಕುತೂಹಲಕಾರಿ ಭಾಷಣಗಳು, ಪ್ರಾತ್ಯಕ್ಷಿಕೆಗಳು ದೇವರ ಇಷ್ಟದಂತೆ ನಡೆಯುವುದು ಹೇಗೆಂದು ಕಲಿಸುತ್ತವೆ. ದೇವಭಕ್ತ ಜೀವನವನ್ನು ನಡೆಸುವಾಗ ಎದುರಾಗುವ ಸವಾಲು ಕಷ್ಟಗಳನ್ನು ಜಯಿಸಿ ಬಂದವರ ಸಂದರ್ಶನಗಳಿರುತ್ತೆ. ಅವು ನಮಗೆ ಸ್ಫೂರ್ತಿ ಪ್ರೋತ್ಸಾಹ ನೀಡುತ್ತವೆ. ಪ್ರಾದೇಶಿಕ ಅಧಿವೇಶನದಲ್ಲಿ ಬೈಬಲ್ ಕಥೆಯನ್ನು ಆಧರಿಸಿದ ನಾಟಕ ಪ್ರದರ್ಶನ ಇರುತ್ತದೆ. ಅದು ನಮ್ಮ ಬದುಕಿಗೆ ನೆರವಾಗುವ ಪಾಠವನ್ನು ಚೆನ್ನಾಗಿ ಬಿಂಬಿಸುತ್ತದೆ. ಬದುಕನ್ನು ದೇವರ ಸೇವೆಗೆಂದು ಸಮರ್ಪಿಸುವವರ ದೀಕ್ಷಾಸ್ನಾನ ಪ್ರತಿ ಸಮ್ಮೇಳನದ ಒಂದು ವೈಶಿಷ್ಟ್ಯ.
ಸಮ್ಮೇಳನಗಳು ಸಂಭ್ರಮ ಸಡಗರದ ಸಮಾರಂಭವಾಗಿವೆ ಏಕೆ?
ಸಮ್ಮೇಳನಕ್ಕೆ ಬರುವುದರಿಂದ ನಿಮಗೇನು ಪ್ರಯೋಜನ?
-
-
ಸುವಾರ್ತೆ ಸಾರುವ ಕೆಲಸವನ್ನು ಹೇಗೆ ಮಾಡುತ್ತೇವೆ?ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?
-
-
ಅಧ್ಯಾಯ 12
ಸುವಾರ್ತೆ ಸಾರುವ ಕೆಲಸವನ್ನು ಹೇಗೆ ಮಾಡುತ್ತೇವೆ?
ಸ್ಪೇನ್
ಬೆಲರೂಸ್
ಹಾಂಗ್‌ಕಾಂಗ್
ಪೆರು
ಯೇಸು ಸಾವನ್ನಪ್ಪುವ ಕೆಲವು ದಿನಗಳ ಮುಂಚೆ ಒಂದು ಭವಿಷ್ಯ ನುಡಿದನು. “[ದೇವರ ರಾಜ್ಯದ] ಸುವಾರ್ತೆಯು ನಿವಾಸಿತ ಭೂಮಿಯಾದ್ಯಂತ ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲ್ಪಡುವುದು; ಮತ್ತು ಆಗ ಅಂತ್ಯವು ಬರುವುದು” ಎಂದು ತಿಳಿಸಿದನು. (ಮತ್ತಾಯ 24:14) ಯೇಸು ಭವಿಷ್ಯನುಡಿದಂತೆ ಇಂದು ಭೂಮಿಯಾದ್ಯಂತ ಇರುವ ಜನರಿಗೆ ಸುವಾರ್ತೆ ಸಾರಲಾಗುತ್ತಿದೆ. ಅಷ್ಟು ವ್ಯಾಪಕವಾಗಿ ಸುವಾರ್ತೆ ಸಾರಲು ಸಾಧ್ಯವಾಗಿರುವುದು ಹೇಗೆ? ಯೇಸು ಇಟ್ಟಿರುವ ನಮೂನೆಯನ್ನು ಅನುಕರಿಸುವುದರಿಂದ.—ಲೂಕ 8:1.
ಮನೆಮನೆಗೆ ಹೋಗಿ ಸುವಾರ್ತೆ ಸಾರುತ್ತೇವೆ. ಮನೆಮನೆಗೆ ಹೋಗಿ ಸುವಾರ್ತೆ ಸಾರುವಂತೆ ಯೇಸು ಶಿಷ್ಯರಿಗೆ ತರಬೇತಿ ನೀಡಿದನು. (ಮತ್ತಾಯ 10:11-13; ಅಪೊಸ್ತಲರ ಕಾರ್ಯಗಳು 5:42; 20:20) ಸುವಾರ್ತೆ ಸಾರಲು ಆ ಶಿಷ್ಯರಿಗೆ ನಿರ್ದಿಷ್ಟ ಪ್ರದೇಶಗಳನ್ನು ನಿಯೋಜಿಸಲಾಗಿತ್ತು. (ಮತ್ತಾಯ 10:5, 6; 2 ಕೊರಿಂಥ 10:13) ತದ್ರೀತಿಯಲ್ಲಿ ಇಂದು ಸಹ ಸುವಾರ್ತೆ ಸಾರುವ ಕೆಲಸವನ್ನು ಕ್ರಮಬದ್ಧವಾಗಿ ಏರ್ಪಡಿಸಲಾಗಿದೆ. ಸುವಾರ್ತೆ ಸಾರುವುದಕ್ಕಾಗಿ ಒಂದೊಂದು ಸಭೆಗೂ ಇಂತಿಷ್ಟು ಪ್ರದೇಶಗಳೆಂದು ನಿಯೋಜಿಸಲಾಗಿದೆ. ಯೇಸು ನೀಡಿದ ಆಜ್ಞೆಯಂತೆ ಜನರಿಗೆ ಕೂಲಂಕಷ ಸಾಕ್ಷಿ ನೀಡಲು ಇದರಿಂದ ಸಾಧ್ಯವಾಗುತ್ತಿದೆ.—ಅಪೊಸ್ತಲರ ಕಾರ್ಯಗಳು 10:42.
ಸುವಾರ್ತೆ ಸಾರಲು ಬೇರೆ ಸಂದರ್ಭಗಳನ್ನೂ ಹುಡುಕುತ್ತೇವೆ. ಯೇಸು ಸಮುದ್ರ ತೀರದಲ್ಲಿ, ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಸುವಾರ್ತೆ ಸಾರಿದನು. (ಮಾರ್ಕ 4:1; ಯೋಹಾನ 4:5-15) ನಾವು ಸಹ ಆತನ ಮಾದರಿಯನ್ನು ಅನುಸರಿಸುತ್ತಿದ್ದೇವೆ. ಮಾರ್ಕೆಟ್ ಮುಂತಾದ ವಾಣಿಜ್ಯ ಪ್ರದೇಶಗಳಲ್ಲಿ, ಜನನಿಬಿಡ ರಸ್ತೆಗಳಲ್ಲಿ, ಪಾರ್ಕ್‌ಗಳಲ್ಲಿ, ಟೆಲಿಫೋನ್ ಮುಖಾಂತರ ಹೀಗೆ ಎಲ್ಲಾ ಜನರಿಗೆ ಸುವಾರ್ತೆ ತಿಳಿಸಲು ಪ್ರಯತ್ನಿಸುತ್ತೇವೆ. ನೆರೆಹೊರೆಯವರಿಗೆ, ಸಹಪಾಠಿಗಳಿಗೆ, ಸಹಕಾರ್ಮಿಕರಿಗೆ, ಬಂಧುಮಿತ್ರರಿಗೆ ದೇವರ ರಾಜ್ಯದ ಕುರಿತು ಸುವಾರ್ತೆ ತಿಳಿಸುತ್ತೇವೆ. ನಮ್ಮ ಈ ಎಲ್ಲಾ ಪ್ರಯತ್ನಗಳಿಂದ ಭೂವ್ಯಾಪಕವಾಗಿ ಲಕ್ಷಗಟ್ಟಲೆ ಜನರಿಗೆ “ರಕ್ಷಣೆಯ” ಸಂದೇಶ ತಲುಪುತ್ತಿದೆ.—ಕೀರ್ತನೆ 96:2.
ಮಾನವರಿಗೆ ಭವ್ಯ ಭವಿಷ್ಯ ಕಲ್ಪಿಸಿಕೊಡುವ ದೇವರ ರಾಜ್ಯದ ಕುರಿತ ಶುಭ ವಾರ್ತೆ ಇಂದು ಎಲ್ಲರಿಗೂ ತಲುಪುವುದು ಜರೂರಿ. ಜೀವರಕ್ಷಕ ಸಂದೇಶವನ್ನು ಬೇರೆಯವರಿಗೆ ತಿಳಿಸುವುದು ನಮ್ಮ ಹೊಣೆ. ನೀವು ಯಾರಿಗೆ ತಿಳಿಸಲು ಕಾತುರರಾಗಿದ್ದೀರಿ?
ಇಂದು ಮಾನವರಿಗೆ ಯಾವುದರ ಕುರಿತ “ಸುವಾರ್ತೆ” ಜರೂರಿಯಾಗಿದೆ?
ಯೇಸುವಿನ ಮಾದರಿಯನ್ನು ಇಂದು ಯೆಹೋವನ ಸಾಕ್ಷಿಗಳು ಹೇಗೆ ಅನುಕರಿಸುತ್ತಿದ್ದಾರೆ?
-
-
ಪಯನೀಯರ್ ಸೇವೆ ಅಂದರೇನು?ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?
-
-
ಅಧ್ಯಾಯ 13
ಪಯನೀಯರ್ ಸೇವೆ ಅಂದರೇನು?
ಕೆನಡ
ಮನೆಮನೆ ಸೇವೆ
ಬೈಬಲ್ ಕಲಿಕೆ
ವ್ಯಕ್ತಿಗತ ಕಲಿಕೆ
ಹಿಂದೆ ಬರುವವರಿಗೆ ದಾರಿ ರಚಿಸಿ ಕೊಡಲು ಮುಂದೆ ಹೋಗುವ ವ್ಯಕ್ತಿಯನ್ನು “ಪಯನೀಯರ್” ಎಂದು ಕರೆಯುತ್ತಾರೆ. ಒಂದರ್ಥದಲ್ಲಿ ಯೇಸುವನ್ನು ಸಹ ಪಯನೀಯರ್ ಎಂದು ಹೇಳಬಹುದು. ರಕ್ಷಣೆಯ ಮಾರ್ಗ ಯಾವುದೆಂದು ಮಾನವರಿಗೆ ಸ್ಪಷ್ಟವಾಗಿ ತೋರಿಸಲು ಅವನು ಭೂಮಿಗೆ ಬಂದು ದೇವರ ಸೇವೆ ಆರಂಭಿಸಿದನು. (ಮತ್ತಾಯ 20:28) ಆತನ ಮಾದರಿಯನ್ನು ಅನುಸರಿಸುತ್ತಾ ಇಂದು ಅನೇಕರು ‘ಶಿಷ್ಯರನ್ನಾಗಿ ಮಾಡುವ’ ಕೆಲಸದಲ್ಲಿ ಬಹಳ ಸಮಯ ವ್ಯಯಿಸುತ್ತಿದ್ದಾರೆ. (ಮತ್ತಾಯ 28:19, 20) ಇನ್ನು ಕೆಲವರು ದೇವರ ಸೇವೆಗೆ ತಮ್ಮ ಹೆಚ್ಚಿನ ಸಮಯ ಶಕ್ತಿಯನ್ನು ಮುಡಿಪಾಗಿಟ್ಟಿದ್ದಾರೆ. ಅವರನ್ನು ಪಯನೀಯರ್ ಎಂದು ಕರೆಯುತ್ತೇವೆ.
ಪಯನೀಯರ್ ಸೇವೆ ಮಾಡುವವರು ಸುವಾರ್ತೆ ಸಾರಲು ಹೆಚ್ಚು ಸಮಯ ವ್ಯಯಿಸುತ್ತಾರೆ. ಯೆಹೋವನ ಸಾಕ್ಷಿಗಳೆಲ್ಲರೂ ಸುವಾರ್ತೆಯ ಪ್ರಚಾರಕರಾಗಿದ್ದಾರೆ. ಆದರೆ ಅವರಲ್ಲಿ ಕೆಲವರು ಪಯನೀಯರರಾಗಿ, ವಿಶೇಷ ಪಯನೀಯರರಾಗಿ ಮತ್ತು ಸಹಾಯಕ ಪಯನೀಯರರಾಗಿ ಸೇವೆ ಸಲ್ಲಿಸುತ್ತಾರೆ. ಪ್ರತಿ ತಿಂಗಳು 70 ತಾಸುಗಳನ್ನು ಸುವಾರ್ತೆ ಸಾರುವ ಕಾರ್ಯದಲ್ಲಿ ವ್ಯಯಿಸುವವರನ್ನು ಪಯನೀಯರ್ ಎಂದು ಕರೆಯುತ್ತಾರೆ. ದೇವರ ಸೇವೆಯಲ್ಲಿ ಅಷ್ಟು ತಾಸುಗಳನ್ನು ವ್ಯಯಿಸುವ ಸಲುವಾಗಿ ಅವರಲ್ಲಿ ಅನೇಕರು ಪೂರ್ಣಕಾಲಿಕ ಕೆಲಸದ ಬದಲು ಅರೆಕಾಲಿಕ ಕೆಲಸ ಮಾಡುತ್ತಾರೆ. ಸುವಾರ್ತೆ ಸಾರಲು ಪ್ರಚಾರಕರ ಆವಶ್ಯಕತೆ ಇರುವ ಕಡೆಗಳಲ್ಲಿ ವಿಶೇಷ ಪಯನೀಯರ್ ಅನ್ನು ನೇಮಿಸಲಾಗುತ್ತದೆ. ಅವರು ಪ್ರತಿ ತಿಂಗಳು 130 ಕ್ಕಿಂತ ಹೆಚ್ಚಿನ ತಾಸುಗಳನ್ನು ಸುವಾರ್ತೆ ಸಾರುವ ಕೆಲಸದಲ್ಲಿ ವ್ಯಯಿಸುತ್ತಾರೆ. ಪಯನೀಯರ್ ಸೇವೆ ಮಾಡುವವರು ಯೆಹೋವ ದೇವರ ಮೇಲೆ ಭಾರ ಹಾಕಿ ಸರಳ ಜೀವನ ನಡೆಸುತ್ತಾ ಆತನ ಸೇವೆಗೆ ಆದ್ಯತೆ ನೀಡುತ್ತಾರೆ. (ಮತ್ತಾಯ 6:31-33; 1 ತಿಮೊಥೆಯ 6:6-8) ದೇವರ ಸೇವೆಯಲ್ಲಿ ತಿಂಗಳೊಂದಕ್ಕೆ 70 ತಾಸು ವ್ಯಯಿಸಲು ಆಗದವರು ಸಹಾಯಕ ಪಯನೀಯರ್ ಸೇವೆ ಮಾಡಬಹುದು. ಅವರು ತಿಂಗಳೊಂದಕ್ಕೆ 30 ಅಥವಾ 50 ತಾಸು ವ್ಯಯಿಸಬಹುದು.
ಪಯನೀಯರ್ ಸೇವೆ ಮಾಡುವವರು ದೇವರ ಮೇಲೆ ಹಾಗೂ ಜನರ ಮೇಲೆ ಆಳವಾದ ಪ್ರೀತಿ ಇಟ್ಟಿರುತ್ತಾರೆ. ದೇವರ ಬಗ್ಗೆ ಆತನ ಇಷ್ಟದ ಬಗ್ಗೆ ಏನೂ ಅರಿಯದ ಜನರಿಗೆ ಯೇಸು ಸಹಾಯ ಮಾಡಿದನು. (ಮಾರ್ಕ 6:34) ಅದೇ ರೀತಿ ಆಧ್ಯಾತ್ಮಿಕವಾಗಿ ಅಂಧಕಾರದಲ್ಲಿರುವ ಜನರಿಗೆ ನಾವು ಸಹ ಸಹಾಯ ಮಾಡುತ್ತೇವೆ. ಈಗಲೂ ಭವಿಷ್ಯದಲ್ಲೂ ಅವರಿಗೆ ಪ್ರಯೋಜನ ತರಬಲ್ಲ ಬೈಬಲ್ ಜ್ಞಾನವನ್ನು ಹಂಚಿಕೊಳ್ಳುತ್ತೇವೆ. ಪಯನೀಯರರು ತಮ್ಮ ಸಮಯ ಹಾಗೂ ಶಕ್ತಿಯನ್ನು ಧಾರಾಳವಾಗಿ ಉಪಯೋಗಿಸಿ ದೇವರ ಬಗ್ಗೆ ಜನರಿಗೆ ತಿಳಿಸಲು ಕಾರಣ ಅವರ ಮೇಲಿರುವ ಪ್ರೀತಿ. (ಮತ್ತಾಯ 22:39; 1 ಥೆಸಲೊನೀಕ 2:8) ಪಯನೀಯರ್ ಸೇವೆ ಮಾಡುವವರಿಗೆ ದೇವರ ಮೇಲೆ ಹೆಚ್ಚು ನಂಬಿಕೆ ವಿಶ್ವಾಸ ಇರುತ್ತದೆ. ಅವರು ದೇವರಿಗೆ ಆಪ್ತರಾಗಿರುತ್ತಾರೆ. ಬದುಕಿನಲ್ಲಿ ಸಂತೋಷ ನೆಮ್ಮದಿ ಕಾಣುತ್ತಾರೆ.—ಅಪೊಸ್ತಲರ ಕಾರ್ಯಗಳು 20:35.
ಪಯನೀಯರ್ ಸೇವೆ ಅಂದರೇನು? ವಿವರಿಸಿ.
ಪಯನೀಯರರು ತಮ್ಮನ್ನು ಪೂರ್ತಿಯಾಗಿ ದೇವರ ಸೇವೆಗೆ ಅರ್ಪಿಸಿಕೊಳ್ಳಲು ಕಾರಣವೇನು?
-
-
ಪಯನೀಯರರಿಗಾಗಿ ಯಾವೆಲ್ಲ ಶಾಲೆಗಳಿವೆ?ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?
-
-
ಅಧ್ಯಾಯ 14
ಪಯನೀಯರರಿಗಾಗಿ ಯಾವೆಲ್ಲ ಶಾಲೆಗಳಿವೆ?
ಅಮೆರಿಕ
ಗಿಲ್ಯಡ್ ಶಾಲೆ, ಪ್ಯಾಟರ್ಸನ್, ನ್ಯೂಯಾರ್ಕ್
ಪನಾಮ
ಅನೇಕ ವರ್ಷಗಳಿಂದಲೂ ದೇವಪ್ರಭುತ್ವಾತ್ಮಕ ಶಿಕ್ಷಣ ಯೆಹೋವನ ಸಾಕ್ಷಿಗಳ ಒಂದು ವೈಶಿಷ್ಟ್ಯತೆಯಾಗಿದೆ. ‘ತಮ್ಮ ಶುಶ್ರೂಷೆಯನ್ನು ಪೂರ್ಣವಾಗಿ ನೆರವೇರಿಸಲಿಕ್ಕಾಗಿ’ ಯಾರು ತಮ್ಮನ್ನು ಸುವಾರ್ತೆ ಸಾರುವ ಕೆಲಸದಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳುತ್ತಾರೋ ಅವರಿಗೆ ವಿಶೇಷ ತರಬೇತಿ ಕೊಡಲಾಗುತ್ತದೆ.—2 ತಿಮೊಥೆಯ 4:5.
ಪಯನೀಯರ್ ಸೇವಾ ಶಾಲೆ: ಒಬ್ಬ ಪಯನೀಯರ್ ಒಂದು ವರ್ಷದ ಸೇವೆಯನ್ನು ಪೂರ್ತಿಗೊಳಿಸಿದಾಗ ಪಯನೀಯರ್ ಸೇವಾ ಶಾಲೆಗೆ ಸೇರ್ಪಡೆಯಾಗುವ ಅವಕಾಶ ದೊರೆಯುತ್ತದೆ. ಅದು ಆರು ದಿನಗಳ ತರಬೇತಿ. ಹತ್ತಿರದ ರಾಜ್ಯಸಭಾಗೃಹದಲ್ಲಿ ನಡೆಯುತ್ತದೆ. ಈ ಶಾಲೆ ಪಯನೀಯರರು ಯೆಹೋವನಿಗೆ ಹೆಚ್ಚು ಆಪ್ತರಾಗಲು, ಸುವಾರ್ತೆ ಸಾರುವ ಬೇರೆ ಬೇರೆ ವಿಧಾನಗಳಲ್ಲಿ ನಿಪುಣರಾಗಲು, ನಂಬಿಗಸ್ತಿಕೆಯಿಂದ ಮಾಡುತ್ತಿರುವ ಸೇವೆಯನ್ನು ಮುಂದುವರಿಸಲು ನೆರವಾಗುತ್ತದೆ.
ರಾಜ್ಯ ಸೌವಾರ್ತಿಕರಿಗಾಗಿ ಶಾಲೆ: ಈ ಶಾಲೆಯ ಅವಧಿ ಎರಡು ತಿಂಗಳು. ಈ ಶಾಲೆಯು, ತಮ್ಮ ಊರನ್ನು ಬಿಟ್ಟು ಅಗತ್ಯವಿರುವಲ್ಲಿ ಹೋಗಿ ಸೇವೆಮಾಡಲು ಸಿದ್ಧರಿರುವ ಅನುಭವಸ್ಥ ಪಯನೀಯರರಿಗೆ ತರಬೇತಿ ಕೊಡುತ್ತದೆ. ಇವರು ಈ ಭೂಮಿಯಲ್ಲಿ ಜೀವಿಸಿದ ಮಹಾ ಸೌವಾರ್ತಿಕನಾದ ಯೇಸು ಕ್ರಿಸ್ತನನ್ನು ಅನುಕರಿಸುತ್ತಾರೆ. “ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು” ಎನ್ನುವ ಮನೋಭಾವ ಅವರಲ್ಲಿದೆ. (ಯೆಶಾಯ 6:8; ಯೋಹಾನ 7:29) ಊರು ಬಿಟ್ಟು ಹೋಗುವುದು ಸುಲಭವೇನಲ್ಲ. ಸರಳ ಜೀವನ ನಡೆಸಬೇಕಾಗುತ್ತದೆ. ಅಲ್ಲಿನ ಸಂಸ್ಕೃತಿ, ಹವಾಮಾನ, ಊಟ ಎಲ್ಲವೂ ಬೇರೆಯೇ ಆಗಿರಬಹುದು. ಹೊಸ ಭಾಷೆಯನ್ನು ಕಲಿಯಬೇಕಾಗಬಹುದು. ಇದಕ್ಕೆಲ್ಲ ಹೊಂದಿಕೊಳ್ಳಲು ಅವರು ಸಿದ್ಧರಾಗಿರುತ್ತಾರೆ. ಈ ಶಾಲೆಯಿಂದ ಅವಿವಾಹಿತ ಸಹೋದರರು, ಅವಿವಾಹಿತ ಸಹೋದರಿಯರು ಹಾಗೂ ದಂಪತಿಗಳು ತರಬೇತಿ ಪಡೆಯುತ್ತಾರೆ. ವಿದ್ಯಾರ್ಥಿಗಳ ವಯೋಮಿತಿ 23ರಿಂದ 65. ಈ ಶಾಲೆಯು ಅವರಿಗೆ ತಮ್ಮ ನೇಮಕವನ್ನು ನಿರ್ವಹಿಸಲು ಬೇಕಾಗುವ ಗುಣಗಳನ್ನು ಹಾಗೂ ಯೆಹೋವನಿಗೂ ಸಂಘಟನೆಗೂ ಹೆಚ್ಚು ಉಪಯುಕ್ತರಾಗಲಿಕ್ಕಾಗಿ ಬೇಕಾಗುವ ಕೌಶಲಗಳನ್ನು ಬೆಳೆಸಿಕೊಳ್ಳಲು ಸಹಾಯಮಾಡುತ್ತದೆ.
ವಾಚ್‌ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್: “ಗಿಲ್ಯಡ್” ಹೀಬ್ರು ಭಾಷೆಯ ಪದವಾಗಿದ್ದು “ಸಾಕ್ಷಿಗಾಗಿ ಹಾಕಿರುವ ಕುಪ್ಪೆ” ಎಂಬ ಅರ್ಥ ಅದಕ್ಕಿದೆ. ಇಸವಿ 1943ರಿಂದ ಇಂದಿನವರೆಗೆ ಈ ಶಾಲೆಯ 8,000ಕ್ಕೂ ಹೆಚ್ಚು ಪದವೀಧರರನ್ನು ಮಿಷನರಿಗಳಾಗಿ ಕಳುಹಿಸಲಾಗಿದೆ. “ಭೂಮಿಯ ಕಟ್ಟಕಡೆಯ ವರೆಗೂ” ಸಾಕ್ಷಿ ಕೊಡುವುದರಲ್ಲಿ ಅವರು ಯಶಸ್ಸು ಪಡೆದಿದ್ದಾರೆ. (ಅಪೊಸ್ತಲರ ಕಾರ್ಯಗಳು 13:47) ಉದಾಹರಣೆಗೆ, ಪೆರು ದೇಶಕ್ಕೆ ನಮ್ಮ ಮಿಷನರಿಗಳು ಕಾಲಿಡುವ ಮುನ್ನ ಅಲ್ಲಿ ಒಂದು ಸಭೆ ಕೂಡ ಇರಲಿಲ್ಲ. ಆದರೆ ಈಗ 1,000ಕ್ಕಿಂತ ಹೆಚ್ಚು ಸಭೆಗಳಿವೆ! ನಮ್ಮ ಮಿಷನರಿಗಳು ಜಪಾನಿನಲ್ಲಿ ಸೇವೆ ಆರಂಭಿಸಿದಾಗ ಅಲ್ಲಿದ್ದ ಯೆಹೋವನ ಸಾಕ್ಷಿಗಳು ಹತ್ತಕ್ಕಿಂತಲೂ ಕಡಿಮೆ. ಈಗ ಆ ಸಂಖ್ಯೆ 2 ಲಕ್ಷವನ್ನು ಮೀರಿದೆ. ಗಿಲ್ಯಡ್ ಶಾಲೆಯ ಅವಧಿ ಐದು ತಿಂಗಳು. ಇದರಲ್ಲಿ ವಿದ್ಯಾರ್ಥಿಗಳು ದೇವರ ವಾಕ್ಯವಾದ ಬೈಬಲಿನ ಸಮಗ್ರ ಅಧ್ಯಯನ ಮಾಡುತ್ತಾರೆ. ಈ ಶಾಲೆಗೆ ಯಾರನ್ನು ಆಮಂತ್ರಿಸಲಾಗುತ್ತದೆ? ವಿಶೇಷ ಪಯನೀಯರರು, ಮಿಷನರಿಗಳು, ಬ್ರಾಂಚ್ ಆಫೀಸಿನಲ್ಲಿ ಸೇವೆ ಮಾಡುವವರು ಹಾಗೂ ಸರ್ಕಿಟ್ ಸೇವೆಯಲ್ಲಿರುವವರು. ಲೋಕವ್ಯಾಪಕ ಕೆಲಸವನ್ನು ಹೆಚ್ಚು ಮಾಡಲು ಹಾಗೂ ಸುಗಮವಾಗಿ ನಡೆಸಲು ನೆರವಾಗುವಂತೆ ಈ ಶಾಲೆ ಅವರಿಗೆ ತರಬೇತಿ ನೀಡುತ್ತದೆ.
ಪಯನೀಯರ್ ಸೇವಾ ಶಾಲೆಯ ಉದ್ದೇಶವೇನು?
‘ರಾಜ್ಯ ಸೌವಾರ್ತಿಕರ ಶಾಲೆ’ ಯಾರಿಗಾಗಿ?
-