-
ಭಾಗ 1: ಕ್ರೈಸ್ತ ನಂಬಿಕೆಗಳುಯೆಹೋವನ ಕೆಲಸವನ್ನು ಮಾಡಲು ನಾವು ಸಂಘಟಿತರು
-
-
ದೀಕ್ಷಾಸ್ನಾನ ಪಡೆಯಲು ಬಯಸುವವರಿಗೆ ಕೇಳುವ ಪ್ರಶ್ನೆಗಳು
ಭಾಗ 1: ಕ್ರೈಸ್ತ ನಂಬಿಕೆಗಳು
ಯೆಹೋವನ ಸಾಕ್ಷಿಗಳ ಸಹಾಯದಿಂದ ನೀವು ಬೈಬಲ್ ಕಲಿತು ಸತ್ಯ ತಿಳಿದುಕೊಂಡಿರಿ. ಇದು ಯೆಹೋವನೊಂದಿಗೆ ಆಪ್ತ ಸಂಬಂಧಕ್ಕೆ ಬರಲು ನಿಮಗೆ ಸಹಾಯ ಮಾಡಿದೆ. ನಿಮ್ಮ ಜೀವನಕ್ಕೊಂದು ನಿರೀಕ್ಷೆ ಸಿಕ್ಕಿದೆ. ದೇವರ ರಾಜ್ಯ ಆಳುವಾಗ ಈ ಭೂಮಿ ಸುಂದರ ತೋಟವಾಗುತ್ತೆ. ಅಲ್ಲಿ ನೀವು ಅನೇಕ ಆಶೀರ್ವಾದಗಳನ್ನು ಅನುಭವಿಸಲು ಕಾಯುತ್ತಿದ್ದೀರಿ ಅನ್ನುವುದಕ್ಕೆ ಸಂಶಯವಿಲ್ಲ. ಬೈಬಲಿನಲ್ಲಿ ನಿಮ್ಮ ನಂಬಿಕೆ ಸಹ ಹೆಚ್ಚಾಗಿದೆ. ಸಭೆಯಲ್ಲಿ ಸಹೋದರ ಸಹೋದರಿಯರೊಟ್ಟಿಗೆ ಸಹವಾಸ ಮಾಡುವುದರಿಂದ ಈಗಲೇ ನೀವು ಅನೇಕ ಆಶೀರ್ವಾದಗಳನ್ನು ಪಡೆದಿದ್ದೀರಿ. ಯೆಹೋವನು ತನ್ನ ಜನರನ್ನು ಹೇಗೆ ಮಾರ್ಗದರ್ಶಿಸುತ್ತಾನೆ ಅನ್ನೋದೂ ನಿಮಗೀಗ ಅರ್ಥವಾಗಿದೆ.—ಜೆಕ. 8:23.
ದೀಕ್ಷಾಸ್ನಾನ ಪಡೆಯಲು ನೀವು ತಯಾರಾಗುತ್ತಿರುವ ಈ ಸಮಯದಲ್ಲಿ ಮೂಲಭೂತ ಕ್ರೈಸ್ತ ನಂಬಿಕೆಗಳ ಬಗ್ಗೆ ನೀವು ಪರೀಕ್ಷಿಸಿದರೆ ಹೆಚ್ಚು ಪ್ರಯೋಜನವಾಗುತ್ತದೆ. ಆ ಬೋಧನೆಗಳನ್ನು ಸಭಾ ಹಿರಿಯರು ನಿಮ್ಮೊಂದಿಗೆ ಚರ್ಚಿಸುತ್ತಾರೆ. (ಇಬ್ರಿ. 6:1-3) ಯೆಹೋವನ ಬಗ್ಗೆ ಹೆಚ್ಚು ತಿಳಿಯಲು ನೀವು ಮಾಡುವ ಪ್ರಯತ್ನವನ್ನು ಆತನು ಆಶೀರ್ವದಿಸಲಿ ಮತ್ತು ಭವಿಷ್ಯದಲ್ಲಿ ನೀವು ಶಾಶ್ವತ ಜೀವ ಪಡೆಯುವಂತಾಗಲಿ.—ಯೋಹಾ. 17:3.
1. ನೀವು ಯಾಕೆ ದೀಕ್ಷಾಸ್ನಾನ ತಗೊಳ್ಳುತ್ತೀರಾ?
2. ಯೆಹೋವ ಯಾರು?
• “ಆಕಾಶದಲ್ಲೂ ಭೂಮಿಯಲ್ಲೂ ಯೆಹೋವನೇ ಸತ್ಯ ದೇವರು, ಬೇರೆ ಯಾವ ದೇವರೂ ಇಲ್ಲ.”—ಧರ್ಮೋ. 4:39, NW.
• “ಯೆಹೋವ ಅನ್ನೋ ಹೆಸ್ರಿರೋ ನೀನೊಬ್ಬನೇ ಇಡೀ ಭೂಮಿಯಲ್ಲಿ ಸರ್ವೋನ್ನತ ದೇವರು.”—ಕೀರ್ತ. 83:18, NW.
3. ದೇವರ ಹೆಸರನ್ನು ಉಪಯೋಗಿಸುವುದು ಯಾಕೆ ಮುಖ್ಯ?
• “ನೀವು ಹೇಗೆ ಪ್ರಾರ್ಥನೆ ಮಾಡಬೇಕಂದ್ರೆ: ‘ಸ್ವರ್ಗದಲ್ಲಿರೋ ಅಪ್ಪಾ, ನಿನ್ನ ಹೆಸ್ರು ಪವಿತ್ರವಾಗಲಿ.’”—ಮತ್ತಾ. 6:9, NW.
• “ಯೆಹೋವನ ಹೆಸ್ರು ಹೇಳಿ ಪ್ರಾರ್ಥಿಸೋ ಪ್ರತಿಯೊಬ್ಬನು ರಕ್ಷಣೆ ಪಡಿತಾನೆ.”—ರೋಮ. 10:13, NW.
4. ಯೆಹೋವನನ್ನು ವರ್ಣಿಸಲು ಬೈಬಲಿನಲ್ಲಿ ಯಾವ ಪದಗಳನ್ನು ಬಳಸಲಾಗಿದೆ?
• “ಭೂಮಿ ಮೇಲಿರೋ ಎಲ್ಲವನ್ನ ಸೃಷ್ಟಿಮಾಡಿದ ಯೆಹೋವ ಶಾಶ್ವತವಾಗಿ ದೇವರಾಗಿದ್ದಾನೆ.”—ಯೆಶಾ. 40:28, NW.
• “ಸ್ವರ್ಗದಲ್ಲಿರೋ ಅಪ್ಪಾ.”—ಮತ್ತಾ. 6:9, NW.
• “ದೇವರು ಪ್ರೀತಿಯಾಗಿದ್ದಾನೆ.”—1 ಯೋಹಾ. 4:8, NW.
5. ಯೆಹೋವ ದೇವರಿಗೆ ನೀವೇನು ಕೊಡಬಹುದು?
• “ನಿನ್ನ ದೇವರಾದ ಯೆಹೋವನನ್ನ ನಿನ್ನ ಪೂರ್ಣ ಹೃದಯದಿಂದ, ಪೂರ್ಣ ಪ್ರಾಣದಿಂದ, ಪೂರ್ಣ ಮನಸ್ಸಿಂದ ಮತ್ತು ಪೂರ್ಣ ಶಕ್ತಿಯಿಂದ ಪ್ರೀತಿಸಬೇಕು.”—ಮಾರ್ಕ 12:30, NW.
• “ನಿನ್ನ ದೇವರಾಗಿರೋ ಯೆಹೋವನನ್ನೇ ನೀನು ಆರಾಧಿಸಬೇಕು, ಆತನೊಬ್ಬನಿಗೇ ನೀನು ಪವಿತ್ರ ಸೇವೆ ಸಲ್ಲಿಸಬೇಕು.”—ಲೂಕ 4:8, NW.
6. ಯೆಹೋವ ದೇವರಿಗೆ ನಿಷ್ಠೆ ತೋರಿಸೋಕೆ ನೀವು ಯಾಕೆ ಇಷ್ಟಪಡ್ತೀರಾ?
• “ನನ್ನ ಮಗನೇ, ವಿವೇಕಿಯಾಗಿ ನನ್ನ ಮನಸ್ಸನ್ನ ಖುಷಿಪಡಿಸು, ಆಗ ನನ್ನನ್ನ ಹಂಗಿಸುವವನಿಗೆ ನಾನು ಉತ್ತರ ಕೊಡಕ್ಕಾಗುತ್ತೆ.”—ಜ್ಞಾನೋ. 27:11, NW.
7. ನೀವು ಯಾರಿಗೆ ಪ್ರಾರ್ಥನೆ ಮಾಡ್ತಿರಾ? ಯಾರ ಹೆಸರಲ್ಲಿ ಪ್ರಾರ್ಥನೆ ಮಾಡ್ತಿರಾ?
• ‘ನಿಜ ಹೇಳ್ತೀನಿ, ನೀವು ನನ್ನ [ಯೇಸು] ಅಪ್ಪನ ಹತ್ರ ನನ್ನ ಹೆಸ್ರಲ್ಲಿ ಏನೇ ಬೇಡ್ಕೊಂಡ್ರೂ ಅದನ್ನ ಕೊಡ್ತಾನೆ.’—ಯೋಹಾ. 16:23, NW.
8. ನೀವು ಯಾವೆಲ್ಲ ವಿಷಯಗಳಿಗಾಗಿ ಪ್ರಾರ್ಥಿಸಬಹುದು?
• “ನೀವು ಹೇಗೆ ಪ್ರಾರ್ಥನೆ ಮಾಡಬೇಕಂದ್ರೆ: ‘ಸ್ವರ್ಗದಲ್ಲಿರೋ ಅಪ್ಪಾ, ನಿನ್ನ ಹೆಸ್ರು ಪವಿತ್ರವಾಗಲಿ. ನಿನ್ನ ಆಳ್ವಿಕೆ ಬರಲಿ. ನಿನ್ನ ಇಷ್ಟ ಸ್ವರ್ಗದಲ್ಲಿ ನೆರವೇರೋ ತರ ಭೂಮಿಯಲ್ಲೂ ನೆರವೇರಲಿ. ಇವತ್ತಿಗೆ ಬೇಕಾಗಿರೋ ಊಟನ ದಯವಿಟ್ಟು ಕೊಡು. ಬೇರೆಯವರ ತಪ್ಪುಗಳನ್ನ ನಾವು ಕ್ಷಮಿಸಿರೋ ತರ ನಮ್ಮ ತಪ್ಪುಗಳನ್ನೂ ಕ್ಷಮಿಸು. ಕಷ್ಟ ಬಂದಾಗ ಸೋತು ಹೋಗದ ಹಾಗೆ ಕಾಪಾಡು. ಸೈತಾನನಿಂದ ನಮ್ಮನ್ನ ರಕ್ಷಿಸು.’”—ಮತ್ತಾ. 6:9-13, NW.
• “ದೇವರ ಇಷ್ಟದ ಪ್ರಕಾರ ನಾವು ಏನೇ ಕೇಳಿದ್ರೂ ದೇವರು ಅದನ್ನ ಕೊಡ್ತಾನೆ ಅನ್ನೋ ನಂಬಿಕೆ ನಮಗಿದೆ.”—1 ಯೋಹಾ. 5:14, NW.
9. ಯೆಹೋವ ದೇವರು ಎಂಥವರ ಪ್ರಾರ್ಥನೆ ಕೇಳಲ್ಲ?
• “ಆಗ ಅವರು ಸಹಾಯಕ್ಕಾಗಿ ಯೆಹೋವನಿಗೆ ಪ್ರಾರ್ಥನೆ ಮಾಡ್ತಾರೆ, ಆದ್ರೆ ಆತನು ಅವ್ರಿಗೆ ಉತ್ತರ ಕೊಡಲ್ಲ. ಅವರು ಕೆಟ್ಟ ಕೆಲಸ ಮಾಡೋದ್ರಿಂದ . . . ಆತನು ಅವ್ರ ಕೈಬಿಡ್ತಾನೆ.”—ಮೀಕ 3:4, NW.
• “ಯೆಹೋವನ ಕಣ್ಣುಗಳು ನೀತಿವಂತರ ಮೇಲಿವೆ, ಸಹಾಯಕ್ಕಾಗಿ ಅವರು ಕೂಗಿದಾಗ ಆತನ ಕಿವಿ ಅದನ್ನ ಕೇಳಿಸ್ಕೊಳ್ಳುತ್ತೆ. ಆದ್ರೆ ಕೆಟ್ಟ ಕೆಲಸ ಮಾಡುವವ್ರನ್ನ ಕಂಡ್ರೆ ಯೆಹೋವನಿಗೆ ಇಷ್ಟ ಇಲ್ಲ.”—1 ಪೇತ್ರ 3:12, NW.
10. ಯೇಸು ಕ್ರಿಸ್ತ ಯಾರು?
• “ಆಗ ಸೀಮೋನ ಪೇತ್ರ “ನೀನು ಕ್ರಿಸ್ತ, ಜೀವವುಳ್ಳ ದೇವರ ಮಗ” ಅಂತ ಉತ್ರಕೊಟ್ಟ.”—ಮತ್ತಾ. 16:16, NW.
11. ಯೇಸು ಯಾಕೆ ಭೂಮಿಗೆ ಬಂದ?
• “ಮನುಷ್ಯಕುಮಾರ ಸಹ ಸೇವೆ ಮಾಡಿಸ್ಕೊಳ್ಳೋಕೆ ಬರಲಿಲ್ಲ. ಸೇವೆ ಮಾಡೋಕೆ ಬಂದ. ತುಂಬ ಜನ್ರಿಗಾಗಿ ತನ್ನ ಪ್ರಾಣವನ್ನ ಬಿಡುಗಡೆಯ ಬೆಲೆಯಾಗಿ ಕೊಡೋಕೆ ಬಂದ.”—ಮತ್ತಾ. 20:28, NW.
• “ನಾನು [ಯೇಸು] ದೇವರ ಆಳ್ವಿಕೆಯ ಸಿಹಿಸುದ್ದಿನ ಬೇರೆ ಊರುಗಳಿಗೂ ಸಾರಬೇಕಿದೆ. ನನ್ನನ್ನ ಕಳಿಸಿರೋದು ಇದಕ್ಕೇ.”—ಲೂಕ 4:43, NW.
12. ಯೇಸು ಮಾಡಿದ ತ್ಯಾಗಕ್ಕೆ ನೀವು ಹೇಗೆ ಕೃತಜ್ಞತೆ ತೋರಿಸಬಹುದು?
• “ಜೀವಿಸುವವರು ಇನ್ಮುಂದೆ ತಮಗಾಗಿ ಜೀವಿಸಬಾರದು, ತಮಗೋಸ್ಕರ ಸತ್ತು ಮತ್ತೆ ಜೀವಂತವಾಗಿ ಎದ್ದುಬಂದವನಿಗಾಗಿ ಜೀವಿಸಬೇಕು ಅನ್ನೋ ಕಾರಣಕ್ಕೆ ಆತನು ಎಲ್ರಿಗೋಸ್ಕರ ಸತ್ತನು.”—2 ಕೊರಿಂ. 5:15, NW.
13. ಯೇಸುವಿಗೆ ಯಾವ ಅಧಿಕಾರ ಇದೆ?
• “ಸ್ವರ್ಗದಲ್ಲೂ ಭೂಮಿಯಲ್ಲೂ ದೇವರು ನನಗೆ ಎಲ್ಲ ಅಧಿಕಾರ ಕೊಟ್ಟಿದ್ದಾನೆ.”—ಮತ್ತಾ. 28:18, NW.
• “ದೇವರು ಆತನನ್ನ ಅತೀ ಉನ್ನತ ಸ್ಥಾನಕ್ಕೆ ಏರಿಸಿದನು ಮತ್ತು ಬೇರೆಲ್ಲ ಹೆಸ್ರಿಗಿಂತ ಶ್ರೇಷ್ಠ ಹೆಸ್ರನ್ನ ಆತನಿಗೆ ಕೊಟ್ಟನು.”—ಫಿಲಿ. 2:9, NW.
14. ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿನೇ “ನಂಬಿಗಸ್ತ, ವಿವೇಕಿ ಆದ ಆಳು” ಮತ್ತು ಅವರನ್ನ ಯೇಸುನೇ ನೇಮಿಸಿದ್ದು ಅಂತ ನಂಬ್ತೀರಾ?
• “ತನ್ನ ಮನೆಯವ್ರಿಗೆ ತಕ್ಕ ಸಮಯಕ್ಕೆ ಆಹಾರ ಕೊಡೋಕೆ ಯಜಮಾನ ನೇಮಿಸಿದ ನಂಬಿಗಸ್ತ, ವಿವೇಕಿ ಆದ ಆಳು ನಿಜಕ್ಕೂ ಯಾರು?”—ಮತ್ತಾ. 24:45, NW.
15. ಪವಿತ್ರಶಕ್ತಿ ಒಬ್ಬ ವ್ಯಕ್ತಿನಾ?
• “ಆಗ ದೇವದೂತ ‘ಪವಿತ್ರಶಕ್ತಿ ನಿನ್ನ ಮೇಲೆ ಬರುತ್ತೆ. ಸರ್ವೋನ್ನತನ ಶಕ್ತಿ ನಿನ್ನನ್ನ ಕಾಪಾಡುತ್ತೆ. ಹಾಗಾಗಿ ನಿನಗೆ ಹುಟ್ಟೋ ಮಗ ಪವಿತ್ರನಾಗಿ ಇರ್ತಾನೆ. ಅವನನ್ನ ದೇವರ ಮಗ ಅಂತ ಕರಿತಾರೆ.’”—ಲೂಕ 1:35, NW.
• “ಹಾಗಾದ್ರೆ ಪಾಪಿಗಳಾಗಿರೋ ನೀವೇ ಮಕ್ಕಳಿಗೆ ಒಳ್ಳೇ ಉಡುಗೊರೆ ಕೊಡುವಾಗ ಸ್ವರ್ಗದಲ್ಲಿರೋ ನಿಮ್ಮ ತಂದೆ ತನ್ನ ಹತ್ರ ಕೇಳುವವರಿಗೆ ಹೆಚ್ಚು ಪವಿತ್ರಶಕ್ತಿ ಕೊಡಲ್ವಾ?”—ಲೂಕ 11:13, NW.
16. ಯೆಹೋವ ದೇವರು ತನ್ನ ಪವಿತ್ರಶಕ್ತಿಯನ್ನು ಹೇಗೆ ಉಪಯೋಗಿಸಿದ್ದಾನೆ?
• “ಯೆಹೋವನ ಮಾತಿಂದ ಆಕಾಶ ಸೃಷ್ಟಿ ಆಯ್ತು, ಅದ್ರಲ್ಲಿರೋ ಎಲ್ಲ ಆತನ ಬಾಯಿಯ ಉಸಿರಿಂದ ಬಂತು.”—ಕೀರ್ತ. 33:6, NW.
• “ಪವಿತ್ರಶಕ್ತಿ ನಿಮ್ಮ ಮೇಲೆ ಬಂದಾಗ ನಿಮಗೆ ಬಲ ಸಿಗುತ್ತೆ. ಆಗ ನೀವು . . . ಇಡೀ ಭೂಮಿಯಲ್ಲಿ ನನ್ನ ಬಗ್ಗೆ ಸಾಕ್ಷಿ ಕೊಡ್ತೀರ.”—ಅ. ಕಾ. 1:8, NW.
• “ಪವಿತ್ರ ಗ್ರಂಥದಲ್ಲಿ ಇರೋ ಯಾವ ಭವಿಷ್ಯವಾಣಿನೂ ಮನುಷ್ಯನ ಆಲೋಚನೆಯಿಂದ ಹುಟ್ಕೊಂಡಿಲ್ಲ . . . ಯಾಕಂದ್ರೆ ಯಾವ ಭವಿಷ್ಯವಾಣಿನೂ ಮನುಷ್ಯನ ಇಷ್ಟದ ಪ್ರಕಾರ ಬರಲಿಲ್ಲ, ಬದಲಿಗೆ ದೇವರು ಹೇಳಿದ್ದನ್ನೇ ಮನುಷ್ಯರು ಪವಿತ್ರಶಕ್ತಿಯ ಸಹಾಯದಿಂದ ಮಾತಾಡಿದ್ರು.”—2 ಪೇತ್ರ 1:20, 21, NW.
17. ದೇವರ ಸರ್ಕಾರ ಅಂದರೇನು?
• “ಸ್ವರ್ಗದ ದೇವರು ಒಂದು ಆಡಳಿತ ತರ್ತಾನೆ. ಅದಕ್ಕೆ ನಾಶನೇ ಇಲ್ಲ. ಅದು ಬೇರೆ ಜನ್ರ ಕೈಗೂ ಹೋಗಲ್ಲ. ಅದು ಈ ಎಲ್ಲ ಸಾಮ್ರಾಜ್ಯಗಳನ್ನ ನಜ್ಜುಗುಜ್ಜು ಮಾಡಿ ನಾಶ ಮಾಡುತ್ತೆ. ಆ ಆಡಳಿತ ಸದಾಕಾಲ ಇರುತ್ತೆ.”—ದಾನಿ. 2:44, NW.
18. ದೇವರ ಸರ್ಕಾರದಿಂದ ನಿಮಗೆ ಯಾವೆಲ್ಲ ಪ್ರಯೋಜನ ಸಿಗುತ್ತೆ?
• “ದೇವರು ಅವ್ರ ಕಣ್ಣೀರನ್ನೆಲ್ಲಾ ಒರಸಿಬಿಡ್ತಾನೆ. ಇನ್ಮುಂದೆ ಸಾವೇ ಇರಲ್ಲ. ದುಃಖ, ನೋವು, ಕಷ್ಟ ಇರಲ್ಲ. ಈ ಮುಂಚೆ ಇದ್ದ ಯಾವ ವಿಷ್ಯಗಳೂ ಈಗ ಇಲ್ಲ.”—ಪ್ರಕ. 21:4, NW.
19. ದೇವರ ಆಳ್ವಿಕೆಯಿಂದ ಸಿಗೋ ಆಶೀರ್ವಾದಗಳು ತುಂಬ ಬೇಗ ಸಿಗುತ್ತೆ ಅಂತ ನೀವು ಹೇಗೆ ಹೇಳ್ತೀರಾ?
• “ಆಮೇಲೆ ಆತನು . . . ಒಬ್ಬನೇ ಕೂತಿದ್ದಾಗ ಶಿಷ್ಯರು ಬಂದು ‘ಆ ವಿಷ್ಯಗಳೆಲ್ಲ ಯಾವಾಗ ನಡೆಯುತ್ತೆ? ನೀನು ಮತ್ತೆ ಬರೋ ಕಾಲಕ್ಕೆ ಮತ್ತು ಈ ಲೋಕದ ಅಂತ್ಯಕ್ಕೆ ಸೂಚನೆ ಏನು? ನಮಗೆ ಹೇಳು’ ಅಂದ್ರು. ಅದಕ್ಕೆ ಯೇಸು ಹೀಗೆ ಹೇಳಿದ ‘. . . ಜನ್ರ ಮೇಲೆ ಜನ್ರು ಆಕ್ರಮಣ ಮಾಡ್ತಾರೆ. ಒಂದು ದೇಶ ಇನ್ನೊಂದು ದೇಶದ ಮೇಲೆ ಯುದ್ಧಮಾಡುತ್ತೆ. ಒಂದರ ನಂತರ ಇನ್ನೊಂದು ಸ್ಥಳದಲ್ಲಿ ಆಹಾರದ ಕೊರತೆ ಇರುತ್ತೆ, ಭೂಕಂಪ ಆಗುತ್ತೆ. ದೇವರ ಆಳ್ವಿಕೆಯ ಈ ಸಿಹಿಸುದ್ದಿ ಲೋಕದಲ್ಲಿ ಇರೋ ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುತ್ತೆ. ಆಮೇಲೆ ಅಂತ್ಯ ಬರುತ್ತೆ.’”—ಮತ್ತಾ. 24:3, 4, 7, 14, NW.
• “ಕೊನೇ ದಿನಗಳಲ್ಲಿ ಪರಿಸ್ಥಿತಿ ತುಂಬ ಹದಗೆಡುತ್ತೆ, ತುಂಬ ಕಷ್ಟ ಪಡಬೇಕಾಗುತ್ತೆ. ಯಾಕಂದ್ರೆ ತಮ್ಮ ಬಗ್ಗೆನೇ ಯೋಚಿಸುವವರು, ಹಣದಾಸೆ ಇರುವವರು, ತಮ್ಮ ಬಗ್ಗೆ ಕೊಚ್ಕೊಳ್ಳುವವರು, ಅಹಂಕಾರಿಗಳು, ಬೈಯೋರು, ಅಪ್ಪಅಮ್ಮನ ಮಾತು ಕೇಳದವರು, ಮಾಡಿದ ಉಪಕಾರ ಮರೆತುಬಿಡುವವರು, ನಂಬಿಕೆದ್ರೋಹ ಮಾಡುವವರು, ಕುಟುಂಬದವ್ರನ್ನ ಪ್ರೀತಿಸದವರು, ಯಾವುದಕ್ಕೂ ಒಪ್ಪದವರು, ಬೇರೆಯವ್ರ ಹೆಸ್ರು ಹಾಳು ಮಾಡುವವರು, ತಮ್ಮನ್ನ ಹತೋಟಿಯಲ್ಲಿ ಇಟ್ಕೊಳ್ಳದವರು, ಉಗ್ರರು, ಒಳ್ಳೇದನ್ನ ದ್ವೇಷಿಸುವವರು, ಮಿತ್ರದ್ರೋಹಿಗಳು, ಹಠಮಾರಿಗಳು, ಜಂಬದಿಂದ ಉಬ್ಬಿದವರು, ದೇವರನ್ನ ಪ್ರೀತಿಸದೆ ತಮ್ಮ ಆಸೆಗಳನ್ನ ತೀರಿಸ್ಕೊಳ್ಳೋಕೆ ಇಷ್ಟಪಡುವವರು, ಮೇಲೆ ದೇವಭಕ್ತಿಯ ವೇಷ ಹಾಕೊಂಡು ಅದಕ್ಕೆ ತಕ್ಕ ಹಾಗೆ ಜೀವನ ಮಾಡದವರು ಇರ್ತಾರೆ.”—2 ತಿಮೊ. 3:1-5, NW.
20. ದೇವರ ಆಳ್ವಿಕೆ ನಿಮಗೆ ಮುಖ್ಯ ಅಂತ ಹೇಗೆ ತೋರಿಸ್ತೀರಾ?
• “ನಿಮ್ಮ ಜೀವನದಲ್ಲಿ ದೇವರ ಆಳ್ವಿಕೆಗೆ, ದೇವರ ಮಾತು ಕೇಳೋದಕ್ಕೆ ಯಾವಾಗ್ಲೂ ಮೊದಲ ಸ್ಥಾನ ಕೊಡಿ.”—ಮತ್ತಾ. 6:33, NW.
• “ಯೇಸು ಶಿಷ್ಯರಿಗೆ ‘ಯಾರಿಗಾದ್ರೂ ನನ್ನ ಶಿಷ್ಯನಾಗೋಕೆ ಮನಸ್ಸಿದ್ರೆ, ಅವನು ಇನ್ಮುಂದೆ ತನಗೋಸ್ಕರ ಜೀವಿಸದೆ ತನ್ನ ಹಿಂಸಾ ಕಂಬ ಹೊತ್ತು ನನ್ನ ಹಿಂದೆನೇ ಬರಲಿ.’”—ಮತ್ತಾ. 16:24, NW.
21. ಸೈತಾನ ಮತ್ತು ಕೆಟ್ಟ ದೇವದೂತರು ಯಾರು?
• “ನೀವು ಸೈತಾನನ ಮಕ್ಕಳು . . . ಮೊದಲಿನಿಂದಾನೇ ಅವನೊಬ್ಬ ಕೊಲೆಗಾರ.”—ಯೋಹಾ. 8:44, NW.
• “ಈ ದೊಡ್ಡ ಘಟಸರ್ಪವನ್ನ ಭೂಮಿಗೆ ತಳ್ಳಿಬಿಟ್ರು. ಈ ಘಟಸರ್ಪಕ್ಕೆ ಪಿಶಾಚ, ಸೈತಾನ, ಹಳೇ ಹಾವು ಅಂತ ಹೆಸ್ರಿದೆ. ಇವನು ಇಡೀ ಭೂಮಿಯಲ್ಲಿರೋ ಜನ್ರನ್ನ ತಪ್ಪುದಾರಿಗೆ ನಡಿಸ್ತಾ ಇದ್ದಾನೆ. ಇವನನ್ನ, ಇವನ ದೂತರನ್ನ ಭೂಮಿಗೆ ಎಸೆದ್ರು.”—ಪ್ರಕ. 12:9, NW.
22. ಯೆಹೋವ ದೇವರ ಮೇಲೆ ಮತ್ತು ಆತನ ಆರಾಧಕರ ಮೇಲೆ ಸೈತಾನ ಯಾವ ಆರೋಪ ಹಾಕಿದ?
• “ಸ್ತ್ರೀ ಹಾವಿಗೆ ‘ತೋಟದಲ್ಲಿರೋ ಮರಗಳ ಹಣ್ಣುಗಳನ್ನ ನಾವು ತಿನ್ನಬಹುದು. ಆದ್ರೆ ತೋಟದ ಮಧ್ಯದಲ್ಲಿರೋ ಮರದ ಹಣ್ಣಿನ ಬಗ್ಗೆ ‘ನೀವು ಅದನ್ನ ತಿನ್ನಬಾರದು, ಮುಟ್ಟಬಾರದು, ತಿಂದ್ರೆ ಸಾಯ್ತೀರ’ ಅಂತ ದೇವರು ಹೇಳಿದ್ದಾನೆ” ಅಂದಳು. ಆಗ ಹಾವು “ನೀವು ಖಂಡಿತ ಸಾಯಲ್ಲ. ನೀವು ಆ ಹಣ್ಣನ್ನ ತಿಂದ ದಿನಾನೇ ನಿಮ್ಮ ಕಣ್ಣು ತೆರಿಯುತ್ತೆ. ನೀವು ದೇವರ ತರ ಆಗಿ ಯಾವುದು ಒಳ್ಳೇದು ಯಾವುದು ಕೆಟ್ಟದು ಅಂತ ತಿಳ್ಕೊಳ್ತೀರ. ಈ ವಿಷ್ಯ ದೇವರಿಗೆ ಚೆನ್ನಾಗಿ ಗೊತ್ತು’ ಅಂತ ಹೇಳ್ತು.”—ಆದಿ. 3:2-5, NW.
• “ಸೈತಾನ ಯೆಹೋವನಿಗೆ ‘ಒಬ್ಬ ಮನುಷ್ಯ ತನ್ನ ಜೀವ ಹೋಗುತ್ತೆ ಅನ್ನುವಾಗ ಪ್ರಾಣ ಉಳಿಸ್ಕೊಳ್ಳೋಕೆ ತನ್ನ ಹತ್ರ ಇರೋದನ್ನೆಲ್ಲ ಕೊಟ್ಟುಬಿಡ್ತಾನೆ.’”—ಯೋಬ 2:4, NW.
23. ಸೈತಾನನ ಆರೋಪ ಸುಳ್ಳು ಅಂತ ಹೇಗೆ ತೋರಿಸುತ್ತೀರಾ?
• “ಪೂರ್ಣ ಹೃದಯದಿಂದ . . . [ದೇವರ] ಸೇವೆ ಮಾಡು.”—1 ಪೂರ್ವ. 28:9, NW.
• “ನಾನು ಸಾಯೋ ತನಕ ನಿಷ್ಠೆ ಕಾಪಾಡ್ಕೊಳ್ತೀನಿ!”—ಯೋಬ 27:5, NW.
24. ಜನರು ಯಾಕೆ ಸಾಯುತ್ತಾರೆ?
• “ಒಬ್ಬ ಮನುಷ್ಯನಿಂದ ಪಾಪ ಲೋಕದೊಳಗೆ ಬಂತು, ಪಾಪದಿಂದ ಸಾವು ಬಂತು. ಎಲ್ಲ ಮನುಷ್ಯರು ಪಾಪಮಾಡಿದ್ರಿಂದ ಎಲ್ರೂ ಸಾಯ್ತಾರೆ.”—ರೋಮ. 5:12, NW.
25. ಸತ್ತ ಮೇಲೆ ಏನಾಗುತ್ತೆ?
• “ಬದುಕಿರುವವ್ರಿಗೆ ಒಂದಿನ ತಾವು ಸಾಯ್ತೀವಂತ ಗೊತ್ತಿರುತ್ತೆ. ಆದ್ರೆ ಸತ್ತವ್ರಿಗೆ ಏನೂ ಗೊತ್ತಿರಲ್ಲ.”—ಪ್ರಸಂ. 9:5, NW.
26. ಸತ್ತವರಿಗೆ ಯಾವ ನಿರೀಕ್ಷೆ ಇದೆ?
• “ನೀತಿವಂತರು ಮತ್ತು ಅನೀತಿವಂತರು ಮತ್ತೆ ಬದುಕೋ ತರ ದೇವರು ಮಾಡ್ತಾನೆ.”—ಅ. ಕಾ. 24:15, NW.
27. ಯೇಸು ಜೊತೆ ಆಳಲು ಎಷ್ಟು ಜನ ಸ್ವರ್ಗಕ್ಕೆ ಹೋಗುತ್ತಾರೆ?
• “ಆ ಕುರಿಮರಿ ಚೀಯೋನ್ ಬೆಟ್ಟದ ಮೇಲೆ ನಿಂತಿತ್ತು. ಅದ್ರ ಜೊತೆ 1,44,000 ಜನ ಇದ್ರು. ಅವ್ರ ಹಣೆ ಮೇಲೆ ಆ ಕುರಿಮರಿ ಹೆಸ್ರು, ದೇವರ ಹೆಸ್ರು ಬರೆದಿತ್ತು.”—ಪ್ರಕ. 14:1, NW.
-
-
ಭಾಗ 2 ಕ್ರೈಸ್ತ ಜೀವನಯೆಹೋವನ ಕೆಲಸವನ್ನು ಮಾಡಲು ನಾವು ಸಂಘಟಿತರು
-
-
ದೀಕ್ಷಾಸ್ನಾನ ಪಡೆಯಲು ಬಯಸುವವರಿಗೆ ಕೇಳುವ ಪ್ರಶ್ನೆಗಳು
ಭಾಗ 2 ಕ್ರೈಸ್ತ ಜೀವನ
ನೀವು ಬೈಬಲ್ ಕಲಿತಾಗ ಯೆಹೋವನು ನಿಮ್ಮಿಂದ ಏನು ಬಯಸುತ್ತಾನೆ, ಆತನ ಇಷ್ಟದ ಪ್ರಕಾರ ಜೀವಿಸುವುದು ಹೇಗೆ ಅಂತ ತಿಳಿದುಕೊಂಡಿರಿ. ಹಾಗಾಗಿ ನೀವು ಕಲಿತಿದ್ದನ್ನು ಅನ್ವಯಿಸುತ್ತಾ ನಿಮ್ಮ ನಡತೆ ಮತ್ತು ಮನೋಭಾವದಲ್ಲಿ ತುಂಬ ಬದಲಾವಣೆಗಳನ್ನು ಮಾಡಿಕೊಂಡಿರಬಹುದು. ಯೆಹೋವನ ಇಷ್ಟದ ಪ್ರಕಾರ ಜೀವಿಸಲು ನೀವು ದೃಢನಿರ್ಧಾರ ಮಾಡಿದ್ದರಿಂದ ಆತನ ಸೇವೆ ಮಾಡಲು ಆಗುತ್ತಿದೆ.
ಮುಂದಿನ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಹಿಡಿಯುವಾಗ ಯೆಹೋವನ ನೀತಿನಿಯಮಗಳ ಬಗ್ಗೆ ನಿಮಗೆ ಚೆನ್ನಾಗಿ ಅರ್ಥ ಆಗುತ್ತೆ. ಅಷ್ಟೇ ಅಲ್ಲ, ಯೆಹೋವನನ್ನು ಮೆಚ್ಚಿಸಲು ನೀವು ಇನ್ನೇನೆಲ್ಲಾ ಮಾಡಬೇಕಂತನೂ ಗೊತ್ತಾಗುತ್ತೆ. ಯೆಹೋವನಿಗೆ ಮಹಿಮೆ ತರುವುದು ಮತ್ತು ಒಳ್ಳೇ ಮನಸ್ಸಾಕ್ಷಿ ಪಡೆಯುವುದು ಎಷ್ಟು ಪ್ರಾಮುಖ್ಯ ಅಂತ ಇದರಿಂದ ನಿಮಗೆ ಅರ್ಥ ಆಗುತ್ತೆ.—2 ಕೊರಿಂ. 1:12; 1 ತಿಮೊ. 1:19; 1 ಪೇತ್ರ 3:16, 21.
ನೀವು ಬೈಬಲ್ ಕಲಿತು ಈ ಎಲ್ಲ ವಿಷಯಗಳನ್ನು ಅರ್ಥಮಾಡಿಕೊಂಡ ಮೇಲೆ ಯೆಹೋವ ದೇವರಿಗೆ ಅಧೀನತೆ ತೋರಿಸ್ತಾ ಆತನ ಸಂಘಟನೆಯ ಭಾಗವಾಗಿರೋದು ಒಂದು ಸುಯೋಗ ಅಂತ ತಿಳಿದುಕೊಂಡಿದ್ದೀರಿ. ಸಭೆ, ಕುಟುಂಬ ಅಥವಾ ರಾಜಕೀಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಯೆಹೋವ ದೇವರು ಹೇಳಿರೋ ಮಾತಿಗೆ ವಿಧೇಯತೆ ತೋರಿಸೋದು ಎಷ್ಟು ಪ್ರಾಮುಖ್ಯ ಅಂತ ಅರ್ಥಮಾಡಿಕೊಳ್ಳೋಕೆ ಈ ಪ್ರಶ್ನೆಗಳು ಮತ್ತು ಕೊಟ್ಟಿರೋ ವಚನಗಳು ಸಹಾಯಮಾಡುತ್ತೆ. ಯೆಹೋವನು ತನ್ನ ಜನರಿಗೆ ಕಲಿಸಲು ಮತ್ತು ಅವರ ನಂಬಿಕೆಯನ್ನು ಕಟ್ಟಲು ಮಾಡಿರೋ ಏರ್ಪಾಡನ್ನು ನೀವು ತುಂಬ ಅಮೂಲ್ಯವಾಗಿ ನೋಡುತ್ತೀರಿ. ಹಾಗಾಗಿ ತಪ್ಪದೇ ಕೂಟಗಳಿಗೆ ಹಾಜರಾಗಿ ಅದರಲ್ಲಿ ಭಾಗವಹಿಸಲು ನೀವು ತುಂಬ ಪ್ರಯತ್ನ ಮಾಡುತ್ತೀರಿ.
ಸಿಹಿಸುದ್ದಿ ಸಾರೋ ಕೆಲಸಕ್ಕೆ ಪ್ರಾಮುಖ್ಯತೆ ಕೊಡಲು, ಜನರಿಗೆ ಯೆಹೋವ ದೇವರ ಬಗ್ಗೆ ಮತ್ತು ಆತನು ನಮಗೋಸ್ಕರ ಮಾಡುತ್ತಿರುವ ವಿಷಯಗಳ ಬಗ್ಗೆ ತಿಳಿಸಲು ಈ ಭಾಗ ಸಹಾಯಮಾಡುತ್ತೆ. (ಮತ್ತಾ. 24:14; 28:19, 20) ಅಷ್ಟೇ ಅಲ್ಲ, ಯೆಹೋವ ದೇವರಿಗೆ ಸಮರ್ಪಿಸಿ ದೀಕ್ಷಾಸ್ನಾನ ತಗೊಳ್ಳೋದು ಒಂದು ಗಂಭೀರ ಜವಾಬ್ದಾರಿ ಅಂತ ತಿಳಿಸುತ್ತೆ. ಯೆಹೋವ ತೋರಿಸಿರೋ ಅಪಾರ ಕೃಪೆಗೆ ನೀವು ಕೃತಜ್ಞತೆ ತೋರಿಸುವಾಗ ಆತನು ಅದನ್ನು ಖಂಡಿತ ಮೆಚ್ಚುತ್ತಾನೆ.
1. ಮದುವೆ ವಿಷಯದಲ್ಲಿ ಕ್ರೈಸ್ತರಿಗೆ ಯಾವ ನಿಯಮ ಇದೆ? ವಿಚ್ಛೇದನ ಕೊಡಲು ಬೈಬಲಿನಲ್ಲಿರೋ ಒಂದೇ ಒಂದು ಕಾರಣ ಯಾವುದು?
• “ನೀವು ಇದನ್ನ ಓದಿಲ್ವಾ? ದೇವರು ಆರಂಭದಲ್ಲಿ ಗಂಡು ಮತ್ತು ಹೆಣ್ಣನ್ನ ಸೃಷ್ಟಿ ಮಾಡಿದಾಗ್ಲೇ ಅವ್ರಿಗೆ ಹೀಗಂದನು ‘ಅದಕ್ಕೇ ಒಬ್ಬ ಪುರುಷ ಅಪ್ಪಅಮ್ಮನನ್ನ ಬಿಟ್ಟು ತನ್ನ ಹೆಂಡತಿ ಜೊತೆ ಇರ್ತಾನೆ. ಅವರಿಬ್ರು ಒಂದೇ ದೇಹ ಆಗ್ತಾರೆ.’ ಹಾಗಾಗಿ ಅವರು ಇನ್ನು ಮುಂದೆ ಇಬ್ರಲ್ಲ, ಒಂದೇ ಶರೀರ. ಹಾಗಾಗಿ ದೇವರು ಒಂದು ಮಾಡಿದ್ದನ್ನ ಯಾವ ಮನುಷ್ಯನೂ ದೂರ ಮಾಡಬಾರದು . . . ಲೈಂಗಿಕ ಅನೈತಿಕತೆ ಕಾರಣ ಬಿಟ್ಟು ಬೇರೆ ಯಾವುದೇ ಕಾರಣಕ್ಕೆ ಹೆಂಡತಿಗೆ ವಿಚ್ಛೇದನ ಕೊಟ್ಟು ಇನ್ನೊಬ್ಬಳನ್ನ ಮದುವೆ ಆಗುವವನು ವ್ಯಭಿಚಾರಿ ಆಗಿದ್ದಾನೆ.”—ಮತ್ತಾ. 19:4-6, 9, NW.
2. ಗಂಡು-ಹೆಣ್ಣು ಒಟ್ಟಿಗೆ ಬಾಳಬೇಕಾದರೆ ಅವರು ಯಾಕೆ ಕಾನೂನು ಬದ್ಧವಾಗಿ ಮದುವೆಯಾಗಿರಬೇಕು? ನಿಮಗೆ ಈಗಾಗಲೇ ಮದುವೆಯಾಗಿದ್ದರೆ, ಅದು ಕಾನೂನು ಒಪ್ಪುವಂಥ ರೀತಿಯಲ್ಲಿ ಆಗಿದೆಯಾ?
• “ಸಹೋದರರು ಸರ್ಕಾರಗಳ, ಅಧಿಕಾರಿಗಳ ಮಾತು ಕೇಳಬೇಕು.” —ತೀತ 3:1, NW.
• “ಮದುವೆ ಬಂಧವನ್ನ ಎಲ್ರೂ ಗೌರವಿಸಬೇಕು. ಗಂಡ ಹೆಂಡತಿ ಒಬ್ರಿಗೊಬ್ರು ದ್ರೋಹ ಮಾಡಬಾರದು. ಯಾಕಂದ್ರೆ ಲೈಂಗಿಕ ಅನೈತಿಕತೆ ಮತ್ತು ವ್ಯಭಿಚಾರ ಮಾಡೋ ವ್ಯಕ್ತಿಗಳಿಗೆ ದೇವರು ತೀರ್ಪು ಮಾಡ್ತಾನೆ.” —ಇಬ್ರಿ. 13:4, NW.
3. ಕುಟುಂಬದಲ್ಲಿ ನಿಮ್ಮ ಪಾತ್ರ ಏನು?
• “ನನ್ನ ಮಗನೇ, ಅಪ್ಪ ಕೊಡೋ ತರಬೇತಿಯನ್ನ ತಗೋ, ಅಮ್ಮ ಕಲಿಸುವಾಗ ಕೇಳಿಸ್ಕೊ.”—ಜ್ಞಾನೋ. 1:8, NW.
• ‘ಯಾಕಂದ್ರೆ ಕ್ರಿಸ್ತನು ಸಭೆ ಅನ್ನೋ ದೇಹಕ್ಕೆ ಯಜಮಾನ ಆಗಿರೋ ತರ ಗಂಡ ತನ್ನ ಹೆಂಡತಿಗೆ ಯಜಮಾನ ಆಗಿದ್ದಾನೆ . . . ಗಂಡಂದಿರೇ, ಕ್ರಿಸ್ತನು ಸಭೆಯನ್ನ ಪ್ರೀತಿಸಿದ . . . ಹಾಗೆ ನೀವು ನಿಮ್ಮ ಹೆಂಡತಿಯರನ್ನ ಪ್ರೀತಿಸ್ತಾ ಇರಿ.’—ಎಫೆ. 5:23, 25, NW.
• “ಅಪ್ಪಂದಿರೇ, ನಿಮ್ಮ ಮಕ್ಕಳಿಗೆ ಕಿರಿಕಿರಿ ಮಾಡಬೇಡಿ. ಯೆಹೋವ ಹೇಳೋ ತರಾನೇ ಅವ್ರಿಗೆ ಕಲಿಸ್ತಾ, ತರಬೇತಿ ಕೊಡ್ತಾ ಬೆಳೆಸಿ.”—ಎಫೆ. 6:4, NW.
• “ಮಕ್ಕಳೇ, ಎಲ್ಲ ವಿಷ್ಯದಲ್ಲಿ ನಿಮ್ಮ ಅಪ್ಪಅಮ್ಮನ ಮಾತು ಕೇಳಿ. ನೀವು ಹೀಗೆ ಮಾಡಿದ್ರೆ ಒಡೆಯನಿಗೆ ಖುಷಿ ಆಗುತ್ತೆ.”—ಕೊಲೊ. 3:20, NW.
• “ಹೆಂಡತಿಯರೇ, ನಿಮ್ಮ ಗಂಡನಿಗೆ ಅಧೀನರಾಗಿ.”—1 ಪೇತ್ರ 3:1, NW.
4. ನಾವು ಜೀವವನ್ನು ಯಾಕೆ ಗೌರವಿಸಬೇಕು?
• “[ದೇವರು] ಎಲ್ರಿಗೂ ಜೀವವನ್ನ, ಉಸಿರನ್ನ, ಎಲ್ಲವನ್ನೂ ಕೊಡ್ತಾನೆ . . . ಆತನಿಂದಾನೇ ನಾವು ಬದುಕಿದ್ದೀವಿ, ನಡೆದಾಡ್ತೀವಿ, ಇವತ್ತು ಇಲ್ಲಿದ್ದೀವಿ.”—ಅ. ಕಾ. 17:25, 28, NW.
5. ನಾವು ಯಾಕೆ ಗರ್ಭಪಾತ ಮತ್ತು ಕೊಲೆ ಮಾಡಬಾರದು?
• “ಇಬ್ರು ಜಗಳ ಆಡ್ತಿರುವಾಗ ಗರ್ಭಿಣಿಗೆ ಏಟು ಬಿದ್ದು . . . ತಾಯಿ ಮಗು ಇಬ್ರಲ್ಲಿ ಒಬ್ರು ಸತ್ತರೂ ಅಪರಾಧಿಯನ್ನ ಸಾಯಿಸಬೇಕು. ಪ್ರಾಣಕ್ಕೆ ಪ್ರಾಣ ಕೊಡಬೇಕು.”—ವಿಮೋ. 21:22, 23, NW.
• “ನಾನು ಇನ್ನೂ ಪಿಂಡವಾಗಿ ಇದ್ದಾಗಲೇ ನಿನ್ನ ಕಣ್ಣು ನನ್ನನ್ನ ನೋಡ್ತು, ನನ್ನ ಎಲ್ಲ ಅಂಗಗಳು ಬೆಳೆಯೋದಕ್ಕಿಂತ ಮುಂಚೆನೇ, ಅವಕ್ಕೆ ಯಾವಾಗ ಪೂರ್ತಿ ರೂಪ ಬರುತ್ತೆ ಅಂತ ನಿನ್ನ ಪುಸ್ತಕದಲ್ಲಿ ಬರೆದಿತ್ತು.”—ಕೀರ್ತ. 139:16, NW.
• “ಯೆಹೋವನಿಗೆ ಇಷ್ಟ ಇಲ್ಲದ ವಿಷ್ಯಗಳು . . . ಯಾವುದಂದ್ರೆ . . . ಅಮಾಯಕರ ರಕ್ತ ಸುರಿಸೋ ಕೈ.”—ಜ್ಞಾನೋ. 6:16, 17, NW.
6. ರಕ್ತದ ಬಗ್ಗೆ ದೇವರು ಯಾವ ನಿಯಮ ಕೊಟ್ಟಿದ್ದಾನೆ?
• “ಕತ್ತು ಹಿಸುಕಿ ಕೊಂದ ಮಾಂಸವನ್ನ ತಿನ್ನಬೇಡಿ. ರಕ್ತದಿಂದ ದೂರ ಇರಿ.”—ಅ. ಕಾ. 15:29, NW.
7. ನಮ್ಮ ಸಹೋದರ ಸಹೋದರಿಯರನ್ನು ಯಾಕೆ ಪ್ರೀತಿಸಬೇಕು?
• “ನಾನು ಒಂದು ಹೊಸ ಆಜ್ಞೆ ಕೊಡ್ತಾ ಇದ್ದೀನಿ. ನೀವು ಒಬ್ಬರನ್ನೊಬ್ರು ಪ್ರೀತಿಸಬೇಕು. ನಾನು ನಿಮ್ಮನ್ನ ಪ್ರೀತಿಸಿದ ತರಾನೇ ನೀವೂ ಒಬ್ಬರನ್ನೊಬ್ರು ಪ್ರೀತಿಸಬೇಕು. ಅದೇ ಆ ಆಜ್ಞೆ. ನಿಮ್ಮ ಮಧ್ಯ ಪ್ರೀತಿ ಇದ್ರೆ ಮಾತ್ರ ನೀವು ನನ್ನ ಶಿಷ್ಯರು ಅಂತ ಎಲ್ರಿಗೂ ಗೊತ್ತಾಗುತ್ತೆ.”—ಯೋಹಾ. 13:34, 35, NW.
8. ಒಬ್ಬ ವ್ಯಕ್ತಿಗೆ ಪ್ರಾಣಾಪಾಯ ತರುವ ಕಾಯಿಲೆಯಿದ್ದು ಅದು ಬೇರೆಯವರಿಗೆ ಹರಡುವಂಥದ್ದಾಗಿದ್ದರೆ ಅವನು (ಎ) ಇತರರನ್ನು ಅಪ್ಪಿಕೊಳ್ಳಬಾರದು, ಮುದ್ದಿಡಬಾರದು ಯಾಕೆ? (ಬಿ) ಯಾರಾದರೂ ಅವನನ್ನು ಮನೆಯೊಳಗೆ ಕರೆಯದಿದ್ದರೆ ಯಾಕೆ ಬೇಸರ ಮಾಡಿಕೊಳ್ಳಬಾರದು? (ಸಿ) ಯಾವುದಾದರೂ ಕಾರಣದಿಂದ ಒಬ್ಬ ವ್ಯಕ್ತಿಗೆ ಬೇರೆಯವರಿಗೆ ಹರಡುವ ಕಾಯಿಲೆ ಬಂದಿರುವ ಸಾಧ್ಯತೆ ಇರುವುದಾದರೆ, ಮದುವೆ ನಿಶ್ಚಯ ಮಾಡಿಕೊಳ್ಳುವ ಮೊದಲು ರಕ್ತ ಪರೀಕ್ಷೆ ಮಾಡುವುದು ಯಾಕೆ ಒಳ್ಳೇದು? (ಡಿ) ಸೋಂಕು ತಗಲಿರೋ ವ್ಯಕ್ತಿ ದೀಕ್ಷಾಸ್ನಾನ ಪಡೆಯುವ ಮುಂಚೆ ಹಿರಿಯರ ಮಂಡಲಿಯ ಸಂಯೋಜಕನಿಗೆ ತನಗಿರುವ ಕಾಯಿಲೆಯ ಬಗ್ಗೆ ತಿಳಿಸಬೇಕು ಯಾಕೆ?
• “ಒಬ್ರನ್ನೊಬ್ರು ಪ್ರೀತಿಸೋದೇ ನೀವು ತೀರಿಸಬೇಕಾದ ಸಾಲ. ಅದನ್ನ ಬಿಟ್ಟು ಬೇರೆ ಯಾವ ಸಾಲನೂ ನಿಮಗೆ ಇರಬಾರದು . . . ‘ನೀವು ನಿಮ್ಮನ್ನ ಪ್ರೀತಿಸೋ ಹಾಗೇ ಬೇರೆಯವ್ರನ್ನೂ ಪ್ರೀತಿಸಬೇಕು’ . . . ಒಬ್ಬನಲ್ಲಿ ಪ್ರೀತಿಯಿದ್ರೆ ಅವನು ಬೇರೆಯವ್ರಿಗೆ ಕೆಟ್ಟದು ಮಾಡಲ್ಲ.”—ರೋಮ. 13:8-10, NW.
• “ನಿಮ್ಮ ಬಗ್ಗೆ ಮಾತ್ರ ಯೋಚಿಸದೆ, ಬೇರೆಯವ್ರ ಬಗ್ಗೆನೂ ಯೋಚ್ನೆ ಮಾಡಿ.”—ಫಿಲಿ. 2:4, NW.
9. ನಾವು ಬೇರೆಯವರನ್ನು ಕ್ಷಮಿಸಬೇಕು ಅಂತ ಯೆಹೋವ ದೇವರು ಯಾಕೆ ಬಯಸ್ತಾರೆ?
• “ಬೇರೆಯವರು ತಪ್ಪು ಮಾಡಿದ್ರೂ ಒಬ್ರನ್ನೊಬ್ರು ಸಹಿಸ್ಕೊಳ್ತಾ ಇರಿ. ಮನಸ್ಸಲ್ಲಿ ಏನೂ ಇಟ್ಕೊಳ್ಳದೆ ಒಬ್ರನ್ನೊಬ್ರು ಉದಾರವಾಗಿ ಕ್ಷಮಿಸ್ತಾ ಇರಿ. ಯೆಹೋವ ನಿಮ್ಮನ್ನ ಉದಾರವಾಗಿ ಕ್ಷಮಿಸಿದ ತರಾನೇ ನೀವೂ ಕ್ಷಮಿಸಿ.”—ಕೊಲೊ. 3:13, NW.
10. ಒಬ್ಬ ಸಹೋದರನು ನಿಮಗೆ ಮೋಸ ಮಾಡಿದರೆ ಅಥವಾ ನಿಮ್ಮ ಹೆಸರು ಹಾಳುಮಾಡುವಂಥ ಸುದ್ದಿ ಹಬ್ಬಿಸಿದರೆ ನೀವೇನು ಮಾಡಬೇಕು?
• “ನಿನ್ನ ಸಹೋದರ ಪಾಪಮಾಡಿದ್ರೆ ನೀವಿಬ್ರೇ ಇರುವಾಗ ಆ ತಪ್ಪನ್ನ ಅವನಿಗೆ ಹೋಗಿ ಹೇಳು. ಅವನು ನಿನ್ನ ಮಾತು ಕೇಳಿದ್ರೆ ಸರಿ ದಾರಿಗೆ ಬರೋಕೆ ಸಹಾಯ ಆಗುತ್ತೆ. ಆದ್ರೆ ಅವನು ನಿನ್ನ ಮಾತು ಕೇಳದಿದ್ರೆ ನಿನ್ನ ಜೊತೆ ಒಬ್ರನ್ನ ಇಲ್ಲಾ ಇಬ್ರನ್ನ ಕರ್ಕೊಂಡು ಹೋಗು. ಯಾಕಂದ್ರೆ ಏನೇ ವಿಷ್ಯ ಸಾಬೀತು ಆಗಬೇಕಂದ್ರೆ ಇಬ್ರು ಅಥವಾ ಮೂರು ಸಾಕ್ಷಿಗಳು ಇರಬೇಕು. ಅವನು ಅವ್ರ ಮಾತನ್ನ ಕೇಳದೆ ಹೋದ್ರೆ ಸಭೆಗೆ ಹೇಳು. ಅವನು ಸಭೆಯ ಮಾತನ್ನೂ ಕೇಳದಿದ್ರೆ ನೀನು ಲೋಕದ ಜನ್ರ ಜೊತೆ, ತೆರಿಗೆ ವಸೂಲಿ ಮಾಡುವವರ ಜೊತೆ ಹೇಗೆ ಸಹವಾಸ ಮಾಡಲ್ವೋ ಅದೇ ತರ ಅವನ ಜೊತೆನೂ ಸಹವಾಸ ಮಾಡಬೇಡ.”—ಮತ್ತಾ. 18:15-17, NW.
11. ಈ ಕೆಳಗೆ ಕೊಟ್ಟಿರುವ ಪಾಪಗಳ ಬಗ್ಗೆ ಯೆಹೋವ ದೇವರಿಗೆ ಹೇಗನಿಸುತ್ತೆ?
▪ ಲೈಂಗಿಕ ಅನೈತಿಕತೆ
▪ ಮೂರ್ತಿಪೂಜೆ
▪ ಸಲಿಂಗಕಾಮ
▪ ಕಳ್ಳತನ
▪ ಜೂಜಾಟ
▪ ಕುಡಿಕತನ
• “ಮೋಸ ಹೋಗಬೇಡಿ. ಲೈಂಗಿಕ ಅನೈತಿಕತೆ ಮಾಡುವವರು, ಮೂರ್ತಿಗಳನ್ನ ಆರಾಧಿಸುವವರು, ವ್ಯಭಿಚಾರಿಗಳು, ಸಲಿಂಗಕಾಮಿಗಳು, ಕಳ್ಳರು, ಅತಿಯಾಸೆ ಇರುವವರು, ಕುಡುಕರು, ಕೆಟ್ಟಕೆಟ್ಟದಾಗಿ ಬಯ್ಯುವವರು, ಸುಲಿಗೆ ಮಾಡುವವರು ದೇವರ ಆಳ್ವಿಕೆಯಲ್ಲಿ ಇರಲ್ಲ.”—1 ಕೊರಿಂ. 6:9, 10, NW.
12. ಲೈಂಗಿಕ ಅನೈತಿಕತೆಯಲ್ಲಿ ಅಂದ್ರೆ ವಿವಾಹ ಸಂಬಂಧದ ಹೊರಗೆ ನಡಿಯೋ ಬೇರೆ ಬೇರೆ ರೀತಿಯ ಲೈಂಗಿಕ ಕ್ರಿಯೆಗಳ ಬಗ್ಗೆ ನೀವು ಕಲಿತ್ತಿದ್ದೀರ, ಇದರ ಬಗ್ಗೆ ನಿಮ್ಮ ದೃಢತೀರ್ಮಾನವೇನು?
• “ಲೈಂಗಿಕ ಅನೈತಿಕತೆಯಿಂದ ದೂರ ಓಡಿಹೋಗಿ.”—1 ಕೊರಿಂ. 6:18, NW.
13. ಚಟಹಿಡಿಸುವ ಹಾಗೂ ಮತ್ತೇರಿಸುವ ಯಾವುದೇ ಅಮಲೌಷಧವನ್ನು ನಾವು ಯಾಕೆ ತೆಗೆದುಕೊಳ್ಳಬಾರದು?
• “ನೀವು ನಿಮ್ಮ ದೇಹಗಳನ್ನ ಜೀವಂತವಾದ, ಪವಿತ್ರವಾದ ಮತ್ತು ದೇವರು ಮೆಚ್ಚೋ ಬಲಿಯಾಗಿ ಕೊಡಿ. ನಿಮ್ಮ ಯೋಚನಾ ಸಾಮರ್ಥ್ಯವನ್ನ ಬಳಸಿ ಪವಿತ್ರ ಸೇವೆ ಸಲ್ಲಿಸಿ. ಇನ್ಮುಂದೆ ಈ ಲೋಕ ನಿಮ್ಮನ್ನ ರೂಪಿಸೋಕೆ ಬಿಡಬೇಡಿ. ಬದಲಿಗೆ ದೇವರು ನಿಮ್ಮ ಯೋಚಿಸೋ ವಿಧಾನವನ್ನ ಬದಲಾಯಿಸೋಕೆ ಬಿಟ್ಟುಕೊಡಿ. ಆಗ ದೇವರು ಇಷ್ಟಪಡೋ ವಿಷ್ಯಗಳು ಯಾವಾಗ್ಲೂ ಒಳ್ಳೇದಾಗಿ, ಪರಿಪೂರ್ಣವಾಗಿ, ಸರಿಯಾಗಿ ಇರುತ್ತೆ ಅಂತ ಪರೀಕ್ಷಿಸಿ ಅರ್ಥ ಮಾಡ್ಕೊಳ್ತೀರ.”—ರೋಮ. 12:1, 2, NW.
14. ದೇವರಿಗೆ ಅಸಹ್ಯವಾಗಿರೋ ಕೆಲವು ವಿಷಯಗಳು ಯಾವುವು?
• “ಕಣಿಹೇಳೋರು, ಮಾಟಮಂತ್ರ ಮಾಡೋರು, ಶಾಸ್ತ್ರ ಹೇಳೋರು, ಮಂತ್ರವಾದಿಗಳು, ವಶೀಕರಣ ಮಾಡೋರು, ಭವಿಷ್ಯ ಹೇಳೋರು, ಸತ್ತವ್ರನ್ನ ಮಾತಾಡಿಸ್ತೀವಿ ಅಂತ ಹೇಳ್ಕೊಳ್ಳೋರು ಅಥವಾ ಸತ್ತವ್ರನ್ನ ವಿಚಾರಿಸೋರು, ಇಂಥವರು ಯಾರೂ ನಿಮ್ಮಲ್ಲಿ ಇರಬಾರದು.”—ಧರ್ಮೋ. 18:10, 11, NW.
15. ಗಂಭೀರ ಪಾಪ ಮಾಡಿರುವ ವ್ಯಕ್ತಿ ಪುನಃ ಯೆಹೋವನ ಮೆಚ್ಚಿಗೆ ಪಡಿಯೋಕೆ ಬಯಸುವುದಾದರೆ ಕೂಡಲೇ ಏನು ಮಾಡಬೇಕು?
• “ನಾನು ನನ್ನ ಪಾಪವನ್ನ ನಿನ್ನ ಹತ್ರ ಒಪ್ಕೊಂಡೆ, ನಾನು ನನ್ನ ತಪ್ಪನ್ನ ಮುಚ್ಚಿಡಲಿಲ್ಲ. ‘ನಾನು ನನ್ನ ಅಪರಾಧಗಳನ್ನ ಯೆಹೋವನ ಹತ್ರ ಒಪ್ಪಿಕೊಳ್ತೀನಿ.’”—ಕೀರ್ತ. 32:5, NW.
• “ನಿಮ್ಮಲ್ಲಿ ಯಾರಿಗಾದ್ರೂ ಹುಷಾರಿಲ್ವಾ? ಸಭೆ ಹಿರಿಯರಿಗೆ ನಿಮ್ಮ ಹತ್ರ ಬರಕ್ಕೆ ಹೇಳಿ. ಆ ಹಿರಿಯರು ಬಂದು ಎಣ್ಣೆ ಹಚ್ಚಿ ಯೆಹೋವನ ಹೆಸ್ರಲ್ಲಿ ನಿಮಗೋಸ್ಕರ ಪ್ರಾರ್ಥನೆ ಮಾಡ್ತಾರೆ. ನಂಬಿಕೆಯಿಂದ ಮಾಡೋ ಪ್ರಾರ್ಥನೆ ನಿಮ್ಮ ಕಾಯಿಲೆಯನ್ನ ವಾಸಿಮಾಡುತ್ತೆ. ಯೆಹೋವ ನಿಮಗೆ ಒಳ್ಳೇ ಆರೋಗ್ಯ ಕೊಡ್ತಾನೆ. ನೀವು ಪಾಪ ಮಾಡಿದ್ರೆ ದೇವರಿಂದ ಕ್ಷಮೆ ಸಿಗುತ್ತೆ.”—ಯಾಕೋ. 5:14, 15, NW.
16. ಒಬ್ಬ ಸಹೋದರ ಗಂಭೀರ ತಪ್ಪು ಮಾಡಿದ್ದಾನೆ ಅಂತ ನಿಮಗೆ ಗೊತ್ತಾದರೆ ನೀವೇನು ಮಾಡಬೇಕು?
• “ಯಾರಾದ್ರೂ ಪಾಪ ಮಾಡೋದನ್ನ ಒಬ್ಬ ನೋಡಿದ್ರೆ ಅಥವಾ ಅದ್ರ ಬಗ್ಗೆ ಏನಾದ್ರೂ ಅವನಿಗೆ ಗೊತ್ತಾದ್ರೆ ಅವನು ಅದಕ್ಕೆ ಸಾಕ್ಷಿ ಆಗಿದ್ದಾನೆ. ಪಾಪ ಮಾಡಿದ ವ್ಯಕ್ತಿ ವಿರುದ್ಧ ಸಾಕ್ಷಿ ಹೇಳಬೇಕು ಅನ್ನೋ ಪ್ರಕಟಣೆ ಕೇಳಿಸ್ಕೊಂಡ ಮೇಲೂ ಅವನು ಬಂದು ಸಾಕ್ಷಿ ಹೇಳದಿದ್ರೆ ಅದು ಪಾಪ. ಆ ಪಾಪಕ್ಕಾಗಿ ಅವನಿಗೆ ಶಿಕ್ಷೆ ಆಗಬೇಕು.”—ಯಾಜ. 5:1, NW.
17. ಒಬ್ಬ ವ್ಯಕ್ತಿ ಇನ್ಮುಂದೆ ಯೆಹೋವನ ಸಾಕ್ಷಿ ಆಗಿರಲ್ಲ ಅಂತ ಸಭೆಯಲ್ಲಿ ಪ್ರಕಟನೆ ಮಾಡಿದಾಗ ನಾವು ಆ ವ್ಯಕ್ತಿ ಜೊತೆ ಹೇಗೆ ನಡ್ಕೊಳ್ಳಬೇಕು?
• “ಆದ್ರೆ ಒಬ್ಬ ಸಹೋದರ ಲೈಂಗಿಕ ಅನೈತಿಕತೆ ನಡಿಸಿದ್ರೆ, ಅವನಿಗೆ ಅತಿಯಾಸೆ ಇದ್ರೆ, ಮೂರ್ತಿಪೂಜೆ ಮಾಡಿದ್ರೆ, ಕೆಟ್ಟಕೆಟ್ಟದಾಗಿ ಬಯ್ಯೋನಾಗಿದ್ರೆ, ಕುಡುಕನಾಗಿದ್ರೆ ಅಥವಾ ಸುಲಿಗೆ ಮಾಡುವವನಾಗಿದ್ರೆ ಅವನ ಜೊತೆ ಸೇರೋದನ್ನ ಬಿಟ್ಟುಬಿಡಿ. ಅಷ್ಟೇ ಅಲ್ಲ ಅಂಥವನ ಜೊತೆ ಊಟನೂ ಮಾಡಬೇಡಿ.”—1 ಕೊರಿಂ. 5:11, NW.
• “ಯಾರಾದ್ರೂ ನಿಮ್ಮ ಹತ್ರ ಬಂದು ಕ್ರಿಸ್ತ ಕಲಿಸಿದ ವಿಷ್ಯಗಳನ್ನ ಕಲಿಸದಿದ್ರೆ ಅಂಥವ್ರನ್ನ ಮನೆ ಒಳಗೆ ಕರಿಬೇಡಿ. ಅವ್ರಿಗೆ ನಮಸ್ಕಾರ ಹೇಳಕ್ಕೂ ಹೋಗಬೇಡಿ.”—2 ಯೋಹಾ. 10, NW.
18. ನಾವ್ಯಾಕೆ ಯೆಹೋವನನ್ನು ಪ್ರೀತಿಸುವವರನ್ನೇ ಸ್ನೇಹಿತರಾಗಿ ಮಾಡ್ಕೊಬೇಕು?
• “ವಿವೇಕಿ ಜೊತೆ ಸಹವಾಸ ಮಾಡುವವನು ವಿವೇಕಿ ಆಗ್ತಾನೆ, ಮೂರ್ಖನ ಜೊತೆ ಸೇರುವವನು ಹಾಳಾಗಿ ಹೋಗ್ತಾನೆ.”—ಜ್ಞಾನೋ. 13:20, NW.
• “ಮೋಸ ಹೋಗಬೇಡಿ. ಕೆಟ್ಟ ಸಹವಾಸ ಒಳ್ಳೇ ನಡತೆಯನ್ನ ಹಾಳು ಮಾಡುತ್ತೆ.”—1 ಕೊರಿಂ. 15:33, NW.
19. ಯೆಹೋವನ ಸಾಕ್ಷಿಗಳು ರಾಜಕೀಯ ವಿಷಯದಲ್ಲಿ ಯಾಕೆ ತಲೆಹಾಕಲ್ಲ?
• “ನಾನು [ಯೇಸು] ಹೇಗೆ ಈ ಲೋಕದವರ ತರ ಇಲ್ವೋ ಅದೇ ತರ ಇವ್ರೂ ಈ ಲೋಕದವರ ತರ ಇಲ್ಲ.”—ಯೋಹಾ. 17:16, NW.
20. ನಾವ್ಯಾಕೆ ಅಧಿಕಾರಿಗಳ ಮಾತು ಕೇಳಬೇಕು?
• “ಎಲ್ರೂ ಅಧಿಕಾರಿಗಳ ಮಾತು ಕೇಳಬೇಕು. ಯಾಕಂದ್ರೆ ದೇವರು ಅಧಿಕಾರ ಕೊಡದಿದ್ರೆ ಯಾರಿಗೂ ಅಧಿಕಾರದ ಸ್ಥಾನದಲ್ಲಿ ಇರೋಕೆ ಆಗಲ್ಲ. ಈಗಿರೋ ಅಧಿಕಾರಿಗಳು ಬೇರೆ ಬೇರೆ ಸ್ಥಾನದಲ್ಲಿ ಇರೋದು ದೇವರ ಅನುಮತಿ ಇರೋದ್ರಿಂದಾನೇ.”—ರೋಮ. 13:1, NW.
21. ಮನುಷ್ಯನ ನಿಯಮ ದೇವರ ನಿಯಮಕ್ಕೆ ವಿರುದ್ಧವಾಗಿದ್ದರೆ ಏನು ಮಾಡ್ತೀರಾ?
• “ನಾವು ಮನುಷ್ಯರಿಗಿಂತ ಹೆಚ್ಚಾಗಿ ದೇವ್ರಿಗೇ ವಿಧೇಯರಾಗಬೇಕು.”—ಅ. ಕಾ. 5:29, NW.
22. ಕೆಲಸ ಆರಿಸಿಕೊಳ್ಳುವಾಗ ನಾವು ಈ ಲೋಕದ ಭಾಗವಾಗದೆ ಎಚ್ಚರವಾಗಿರೋಕೆ ಯಾವ ವಚನಗಳು ಸಹಾಯಮಾಡುತ್ತೆ?
• “ಒಂದು ಜನಾಂಗ ಇನ್ನೊಂದು ಜನಾಂಗದ ವಿರುದ್ಧ ಕತ್ತಿ ಎತ್ತಲ್ಲ, ಇನ್ಮುಂದೆ ಅವರು ಯುದ್ಧ ಮಾಡೋಕೆ ಕಲಿಯಲ್ಲ.”—ಮೀಕ 4:3, NW.
• “ನನ್ನ ಜನ್ರೇ, . . . ಅವಳು [ಮಹಾ ಬಾಬೆಲ್] ಮಾಡೋ ಪಾಪದಲ್ಲಿ ನಿಮಗೆ ಒಂದು ಪಾಲೂ ಇರಬಾರದಂದ್ರೆ, ಅವಳಿಗೆ ಆಗೋ ಶಿಕ್ಷೆ ನಿಮಗೂ ಆಗಬಾರದಂದ್ರೆ ಅವಳನ್ನ ಬಿಟ್ಟು ಹೊರಗೆ ಬನ್ನಿ.”—ಪ್ರಕ. 18:4, NW.
23. ನೀವು ಯಾವ ಮನೋರಂಜನೆಯನ್ನು ಆರಿಸಿಕೊಳ್ಳುತ್ತೀರ ಮತ್ತು ಯಾವುದನ್ನು ತಿರಸ್ಕರಿಸುತ್ತೀರಾ?
• “ಯೆಹೋವ . . . ಹಿಂಸೆಯನ್ನ ಪ್ರೀತಿಸೋ ಜನ್ರನ್ನ ದ್ವೇಷಿಸ್ತಾನೆ.”—ಕೀರ್ತ. 11:5, NW.
• “ಕೆಟ್ಟದನ್ನ ಅಸಹ್ಯವಾಗಿ ನೋಡಿ, ಒಳ್ಳೇದನ್ನ ಪ್ರೀತಿಸಿ.”—ರೋಮ. 12:9, NW.
• “ಯಾವುದು ಸತ್ಯಾನೋ, ತುಂಬ ಮುಖ್ಯನೋ, ನೀತಿನೋ, ಶುದ್ಧನೋ, ಯಾವುದು ಒಳ್ಳೇದೋ, ಪ್ರೀತಿನ ಚಿಗುರಿಸುತ್ತೋ, ಹೊಗಳಿಕೆಗೆ ಯೋಗ್ಯವಾಗಿದ್ಯೋ ಅಂಥ ಎಲ್ಲ ವಿಷ್ಯಗಳಿಗೆ ಯಾವಾಗ್ಲೂ ಗಮನಕೊಡಿ.”—ಫಿಲಿ. 4:8, NW.
24. ಯೆಹೋವನ ಸಾಕ್ಷಿಗಳು ಯಾಕೆ ಬೇರೆ ಧರ್ಮಗಳ ಆರಾಧನೆಯಲ್ಲಿ ಭಾಗವಹಿಸಲ್ಲ?
• “ಯೆಹೋವನ ಮೇಜಲ್ಲಿ ತಿಂತಾ ಕೆಟ್ಟ ದೇವದೂತರ ಮೇಜಲ್ಲೂ ತಿನ್ನಕ್ಕಾಗಲ್ಲ.”—1 ಕೊರಿಂ. 10:21, NW.
• “ಯೆಹೋವ ಹೇಳೋದು ಏನಂದ್ರೆ . . . ‘ನೀವು ಅವ್ರಿಂದ ಬೇರೆಯಾಗಿ. ಅಶುದ್ಧವಾಗಿದ್ದನ್ನ ಇನ್ನು ಮುಟ್ಟಬೇಡಿ, ನಾನು ನಿಮ್ಮನ್ನ ಸೇರಿಸ್ಕೊಳ್ತೀನಿ.’”—2 ಕೊರಿಂ. 6:17, NW.
25. ಆಚರಣೆಗಳಲ್ಲಿ ಭಾಗವಹಿಸಬೇಕಾ, ಬೇಡ್ವಾ ಅಂತ ತೀರ್ಮಾನಿಸೋಕೆ ಯಾವ ಬೈಬಲ್ ತತ್ವಗಳು ನಿಮಗೆ ಸಹಾಯ ಮಾಡುತ್ತೆ?
• “ಅವರು ಬೇರೆ ಜನಾಂಗಗಳ ಜೊತೆ ಸೇರಿ ಅವ್ರ ಪದ್ಧತಿಗಳನ್ನ ಒಪ್ಕೊಂಡ್ರು. ಅವ್ರ ಮೂರ್ತಿಗಳನ್ನ ಆರಾಧಿಸ್ತಾ ಇದ್ರು, ಇದು ಅವ್ರ ಪ್ರಾಣಕ್ಕೆ ಕುತ್ತು ತಂತು.”—ಕೀರ್ತ. 106:35, 36, NW.
• “ಸತ್ತವ್ರಿಗೆ ಏನೂ ಗೊತ್ತಿರಲ್ಲ.”—ಪ್ರಸಂ. 9:5, NW.
• “ನಾನು ಹೇಗೆ ಈ ಲೋಕದವರ ತರ ಇಲ್ವೋ ಅದೇ ತರ ಇವ್ರೂ ಈ ಲೋಕದವರ ತರ ಇಲ್ಲ.”—ಯೋಹಾ. 17:16, NW.
• “ಈ ಮುಂಚೆ ನೀವು ಲೋಕದ ಜನ್ರ ತರ ಇದ್ರಿ. ನಾಚಿಕೆಗೆಟ್ಟು ನಡ್ಕೊಳ್ಳೋದು, ಲೈಂಗಿಕ ಅನೈತಿಕತೆ ನಡ್ಸೋಕೆ ಆಸೆಪಡೋದು, ಕಂಠಪೂರ್ತಿ ಕುಡಿಯೋದು, ಕುಡಿದು ಕುಪ್ಪಳಿಸೋದು, ಕುಡಿಯೋದ್ರಲ್ಲಿ ಪೈಪೋಟಿ, ಅಸಹ್ಯ ಮೂರ್ತಿಪೂಜೆ ಇಂಥ ವಿಷ್ಯಗಳಲ್ಲೇ ತುಂಬ ಸಮಯ ಕಳೆದುಬಿಟ್ರಿ.”—1 ಪೇತ್ರ 4:3, NW.
26. ಹುಟ್ಟುಹಬ್ಬ ಆಚರಿಸಬೇಕಾ, ಬೇಡ್ವಾ ಅಂತ ತೀರ್ಮಾನಿಸೋಕೆ ಯಾವ ಬೈಬಲ್ ಉದಾಹರಣೆಗಳು ನಮಗೆ ಸಹಾಯ ಮಾಡುತ್ತೆ?
• “ಮೂರನೇ ದಿನ ಫರೋಹನ ಹುಟ್ಟಿದ ದಿನವಾಗಿತ್ತು. ಹಾಗಾಗಿ ಅವನು ತನ್ನ ಎಲ್ಲ ಸೇವಕರಿಗಾಗಿ ಔತಣ ಮಾಡಿಸಿದ. ಆಗ ಅವನು ತನ್ನ ಸೇವಕರ ಮುಂದೆ ಮುಖ್ಯ ಪಾನದಾಯಕನನ್ನ ಮತ್ತು ಮುಖ್ಯ ಅಡುಗೆಗಾರನನ್ನ ಕರೆಸಿ ನಿಲ್ಲಿಸಿದ. ಮುಖ್ಯ ಪಾನದಾಯಕನನ್ನ ಅವನ ಕೆಲಸಕ್ಕೆ ನೇಮಿಸಿದ . . . ಆದ್ರೆ ಫರೋಹ ಮುಖ್ಯ ಅಡುಗೆಗಾರನನ್ನ ಮರದ ಕಂಬಕ್ಕೆ ತೂಗುಹಾಕಿದ.”—ಆದಿ. 40:20-22, NW.
• “ಹೆರೋದ ತನ್ನ ಹುಟ್ಟುಹಬ್ಬ ಆಚರಿಸ್ತಿದ್ದಾಗ ಹೆರೋದ್ಯಳ ಮಗಳು ನರ್ತಿಸಿ ಹೆರೋದನನ್ನ ಖುಷಿಪಡಿಸಿದಳು. ಆಗ ಅವನು ‘ನೀನು ಏನು ಕೇಳಿದ್ರೂ ಕೊಡ್ತೀನಿ’ ಅಂತ ಮಾತುಕೊಟ್ಟ. ಆಗ ಅವಳ ಅಮ್ಮ ಹೇಳಿಕೊಟ್ಟ ಹಾಗೆ “ದೊಡ್ಡ ತಟ್ಟೆಯಲ್ಲಿ ಯೋಹಾನನ ತಲೆ ತಂದುಕೊಡು” ಅಂದಳು. ಒಬ್ಬ ಸೇವಕನನ್ನ ಕಳಿಸಿ ಜೈಲಲ್ಲಿ ಯೋಹಾನನ ತಲೆ ಕತ್ತರಿಸಿದ.”—ಮತ್ತಾ. 14:6-8, 10, NW.
27. ಹಿರಿಯರು ಕೊಡುವ ನಿರ್ದೇಶನಗಳನ್ನ ನೀವು ಯಾಕೆ ಪಾಲಿಸಬೇಕು?
• “ಮುಂದೆ ನಿಂತು ನಿಮ್ಮನ್ನ ನಡಿಸುವವ್ರ ಮಾತನ್ನ ಕೇಳಿ ಮತ್ತು ಅಧೀನತೆ ತೋರಿಸಿ. ಯಾಕಂದ್ರೆ ಅವರು ಯಾವಾಗ್ಲೂ ನಿಮ್ಮನ್ನ ನೋಡ್ಕೊಳ್ತಿದ್ದಾರೆ. ಅವರು ದೇವರಿಗೆ ಲೆಕ್ಕ ಕೊಡಬೇಕಾಗಿದೆ. ನೀವು ಹಾಗೆ ಮಾಡಿದ್ರೆ ಅವರು ದುಃಖದಿಂದ ಅಲ್ಲ, ಖುಷಿಯಿಂದ ನಿಮ್ಮನ್ನ ನೋಡ್ಕೊಳ್ತಾರೆ. ಅವರು ದುಃಖದಿಂದ ನೋಡ್ಕೊಂಡ್ರೆ ನಿಮಗೇ ನಷ್ಟ.”—ಇಬ್ರಿ. 13:17, NW.
28. ದಿನಾಲೂ ಬೈಬಲ್ ಓದೋಕೆ ನೀವು ಮತ್ತು ನಿಮ್ಮ ಕುಟುಂಬದವರು ಸಮಯ ಮಾಡಿಕೊಳ್ಳೋದು ಯಾಕೆ ಪ್ರಾಮುಖ್ಯ?
• “ಅವನು ಯೆಹೋವನ ನಿಯಮಗಳನ್ನ ಪಾಲಿಸೋದ್ರಲ್ಲಿ ಖುಷಿಪಡ್ತಾನೆ, ಆತನ ನಿಯಮ ಪುಸ್ತಕವನ್ನ ಹಗಲೂರಾತ್ರಿ ಓದಿ ಧ್ಯಾನಿಸ್ತಾನೆ. ಅವನು ನೀರಿನ ಕಾಲುವೆ ಹತ್ರ ಇರೋ ಮರದ ತರ ಇದ್ದಾನೆ, ಅಂಥ ಮರ ಸರಿಯಾದ ಸಮಯಕ್ಕೆ ಹಣ್ಣು ಕೊಡುತ್ತೆ, ಅದರ ಎಲೆ ಯಾವತ್ತೂ ಒಣಗಿ ಹೋಗಲ್ಲ. ಅವನು ಕೈಹಾಕೋ ಎಲ್ಲ ಕೆಲಸ ಚೆನ್ನಾಗಿ ನಡಿಯುತ್ತೆ.”—ಕೀರ್ತ. 1:2, 3, NW.
29. ಕೂಟಗಳಿಗೆ ಹೋಗೋಕೆ, ಅದರಲ್ಲಿ ಭಾಗವಹಿಸೋಕೆ ನೀವು ಯಾಕೆ ಇಷ್ಟಪಡ್ತೀರಾ?
• “ನಾನು ನನ್ನ ಅಣ್ಣತಮ್ಮಂದಿರ ಮಧ್ಯ ನಿನ್ನ ಹೆಸ್ರನ್ನ ಹೇಳ್ತೀನಿ, ಸಭೆಯ ಮಧ್ಯ ನಾನು ನಿನ್ನನ್ನ ಹೊಗಳ್ತೀನಿ.”—ಕೀರ್ತ. 22:22, NW.
• “ನಾವು ಒಬ್ರು ಇನ್ನೊಬ್ರ ಬಗ್ಗೆ ತುಂಬ ಆಸಕ್ತಿ ತೋರಿಸೋಣ. ಆಗ ಪ್ರೀತಿ ತೋರಿಸೋಕೆ, ಒಳ್ಳೇ ಕೆಲಸಗಳನ್ನ ಮಾಡೋಕೆ ಬೇರೆಯವ್ರಿಗೆ ಪ್ರೋತ್ಸಾಹ ಕೊಡಬಹುದು. ಒಟ್ಟಾಗಿ ಸಭೆ ಸೇರೋದನ್ನ ಬಿಡೋದು ಬೇಡ. ಸ್ವಲ್ಪ ಜನ ಸಭೆಗೆ ಬರೋದನ್ನ ಬಿಟ್ಟುಬಿಟ್ಟಿದ್ದಾರೆ. ಅದು ಅವ್ರಿಗೆ ರೂಢಿ ಆಗಿಬಿಟ್ಟಿದೆ. ಆದ್ರೆ ನಾವು ಹಾಗೆ ಮಾಡದೆ ಒಬ್ರು ಇನ್ನೊಬ್ರನ್ನ ಪ್ರೋತ್ಸಾಹಿಸ್ತಾ ಇರೋಣ. ದೇವರ ದಿನ ಹತ್ರ ಬರ್ತಾ ಇರೋದ್ರಿಂದ ನಾವು ಇದನ್ನ ಇನ್ನೂ ಜಾಸ್ತಿ ಮಾಡೋಣ.”—ಇಬ್ರಿ. 10:24, 25, NW.
30. ಯೇಸು ನಮಗೆ ಯಾವ ಪ್ರಾಮುಖ್ಯ ಕೆಲಸ ಕೊಟ್ಟಿದ್ದಾನೆ?
• “ಹಾಗಾಗಿ ನೀವು ಹೋಗಿ ಎಲ್ಲಾ ದೇಶದ ಜನ್ರಿಗೆ ನನ್ನ ಶಿಷ್ಯರಾಗೋದು ಹೇಗೆ ಅಂತ ಕಲಿಸಿ . . . ದೀಕ್ಷಾಸ್ನಾನ ಮಾಡಿಸಿ. ನಾನು ನಿಮಗೆ ಹೇಳಿಕೊಟ್ಟ ಎಲ್ಲ ವಿಷ್ಯಗಳ ಪ್ರಕಾರ ನಡೆಯೋಕೆ ಅವ್ರಿಗೆ ಕಲಿಸಿ.”—ಮತ್ತಾ. 28:19, 20, NW.
31. ಕಾಣಿಕೆ ಕೊಡುವಾಗ ಮತ್ತು ಸಹೋದರ ಸಹೋದರಿಯರಿಗೆ ಸಹಾಯ ಮಾಡುವಾಗ ನಮಗೆ ಯಾವ ಮನೋಭಾವ ಇದ್ರೆ ಯೆಹೋವ ದೇವರಿಗೆ ಇಷ್ಟ ಆಗುತ್ತೆ?
• “ನಿನ್ನ ಬೆಲೆ ಬಾಳೋ ವಸ್ತುಗಳಿಂದ ಯೆಹೋವನನ್ನ ಸನ್ಮಾನಿಸು.”—ಜ್ಞಾನೋ. 3:9, NW.
• “ಪ್ರತಿಯೊಬ್ಬನು ತನ್ನ ಮನಸ್ಸಲ್ಲಿ ಎಷ್ಟು ಕೊಡಬೇಕು ಅಂದ್ಕೊಂಡಿದ್ದಾನೋ ಅಷ್ಟೇ ಕೊಡ್ಲಿ. ಅಯ್ಯೋ ಕೊಡಬೇಕಲ್ಲ ಅಂತಾಗ್ಲಿ ಬೇರೆಯವರು ಒತ್ತಾಯ ಮಾಡ್ತಿದ್ದಾರೆ ಅಂತಾಗ್ಲಿ ಕೊಡಬಾರದು. ಯಾಕಂದ್ರೆ ಖುಷಿಯಿಂದ ಕೊಡುವವನನ್ನ ದೇವರು ಪ್ರೀತಿಸ್ತಾನೆ.”—2 ಕೊರಿಂ. 9:7, NW.
32. ಕ್ರೈಸ್ತರು ಯಾವ ಕಷ್ಟಗಳನ್ನು ಎದುರು ನೋಡ್ತಾರೆ?
• “ನೀತಿಗಾಗಿ ಹಿಂಸೆ ಅನುಭವಿಸುವವರು ಸಂತೋಷವಾಗಿ ಇರ್ತಾರೆ. ಯಾಕಂದ್ರೆ ದೇವರ ಆಳ್ವಿಕೆ ಅವ್ರಿಗಂತಾನೇ ಬರುತ್ತೆ. ನನ್ನ ಶಿಷ್ಯರಾಗಿರೋ ಕಾರಣಕ್ಕೆ ಜನ ನಿಮಗೆ ಅವಮಾನ ಮಾಡಿ, ಹಿಂಸಿಸಿ, ನಿಮ್ಮ ಬಗ್ಗೆ ಇಲ್ಲಸಲ್ಲದ ಸುಳ್ಳುಗಳನ್ನ ಹೇಳಿದ್ರೆ ಖುಷಿಪಡಿ. ಸ್ವರ್ಗದಲ್ಲಿ ನಿಮಗಾಗಿ ದೊಡ್ಡ ಬಹುಮಾನ ಕಾಯ್ತಿದೆ. ಹಾಗಾಗಿ ಹರ್ಷಿಸಿ, ಅತ್ಯಾನಂದಪಡಿ. ಯಾಕಂದ್ರೆ ಜನ ನಿಮಗಿಂತ ಮುಂಚೆ ಇದ್ದ ಪ್ರವಾದಿಗಳಿಗೂ ಹೀಗೇ ಹಿಂಸೆ ಕೊಟ್ರು.”—ಮತ್ತಾ. 5:10-12, NW.
33. ದೀಕ್ಷಾಸ್ನಾನ ಪಡೆದು ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾಗಿರೋದು ಯಾಕೆ ವಿಶೇಷ ಸುಯೋಗವಾಗಿದೆ?
• “ನಿನ್ನ ಮಾತುಗಳು ನನಗೆ ಖುಷಿ ಕೊಡ್ತು, ಹೃದಯಕ್ಕೆ ಉಲ್ಲಾಸ ಬಂತು, ಯಾಕಂದ್ರೆ . . . ದೇವರಾದ ಯೆಹೋವನೇ, ನನ್ನನ್ನ ನಿನ್ನ ಹೆಸ್ರಿಂದ ಕರಿತಾರೆ.”—ಯೆರೆ. 15:16, NW.
-
-
ದೀಕ್ಷಾಸ್ನಾನದ ಅಭ್ಯರ್ಥಿಯೊಂದಿಗೆ ಕೊನೆಯಲ್ಲಿ ಮಾಡಬೇಕಾದ ಚರ್ಚೆಯೆಹೋವನ ಕೆಲಸವನ್ನು ಮಾಡಲು ನಾವು ಸಂಘಟಿತರು
-
-
ದೀಕ್ಷಾಸ್ನಾನ ಪಡೆಯಲು ಬಯಸುವವರಿಗೆ ಕೇಳುವ ಪ್ರಶ್ನೆಗಳು
ದೀಕ್ಷಾಸ್ನಾನದ ಅಭ್ಯರ್ಥಿಯೊಂದಿಗೆ ಕೊನೆಯಲ್ಲಿ ಮಾಡಬೇಕಾದ ಚರ್ಚೆ
ಸಾಮಾನ್ಯವಾಗಿ ಸಮ್ಮೇಳನಗಳಲ್ಲಿ ಹಾಗೂ ಅಧಿವೇಶನಗಳಲ್ಲಿ ದೀಕ್ಷಾಸ್ನಾನ ಪಡೆಯಲು ಏರ್ಪಾಡು ಮಾಡಲಾಗುತ್ತದೆ. ಅಲ್ಲಿ ಕೊಡಲಾಗುವ ದೀಕ್ಷಾಸ್ನಾನದ ಭಾಷಣದ ಕೊನೆಯಲ್ಲಿ ಭಾಷಣಕಾರನು ದೀಕ್ಷಾಸ್ನಾನದ ಅಭ್ಯರ್ಥಿಗಳಿಗೆ ಎದ್ದುನಿಲ್ಲುವಂತೆ ಹೇಳುತ್ತಾನೆ ಹಾಗೂ ಮುಂದಿನ ಎರಡು ಪ್ರಶ್ನೆಗಳಿಗೆ ಉತ್ತರಿಸುವಂತೆ ಕೇಳಿಕೊಳ್ಳುತ್ತಾನೆ:
1. ನಿಮ್ಮ ಪಾಪಗಳಿಗೆ ಪಶ್ಚಾತ್ತಾಪಪಟ್ಟು, ಯೆಹೋವನಿಗೆ ಸಮರ್ಪಿಸಿಕೊಂಡು, ಯೇಸುವಿನ ಮೂಲಕ ನಿಮ್ಮ ರಕ್ಷಣೆಗಾಗಿ ಯೆಹೋವನು ಮಾಡಿರುವ ಏರ್ಪಾಡನ್ನು ಒಪ್ಪಿಕೊಳ್ಳುತ್ತೀರಾ?
2. ದೀಕ್ಷಾಸ್ನಾನ ಆದಮೇಲೆ ನಿಮ್ಮನ್ನು ಒಬ್ಬ ಯೆಹೋವನ ಸಾಕ್ಷಿಯಾಗಿ ಮತ್ತು ಯೆಹೋವನ ಸಂಘಟನೆಯ ಭಾಗವಾಗಿ ಗುರುತಿಸಲಾಗುತ್ತೆ ಅಂತ ಅರ್ಥಮಾಡಿಕೊಂಡಿದ್ದೀರಾ?
ಈ ಎರಡು ಪ್ರಶ್ನೆಗಳಿಗೆ ದೀಕ್ಷಾಸ್ನಾನದ ಅಭ್ಯರ್ಥಿಗಳು “ಹೌದು” ಎಂದು ಉತ್ತರಿಸುವ ಮೂಲಕ ವಿಮೋಚನಾ ಮೌಲ್ಯದಲ್ಲಿ ತಾವು ನಂಬಿಕೆ ಇಟ್ಟಿದ್ದೇವೆಂದು ಮತ್ತು ತಮ್ಮನ್ನು ಸಂಪೂರ್ಣವಾಗಿ ಯೆಹೋವನಿಗೆ ಸಮರ್ಪಿಸಿಕೊಂಡಿದ್ದೇವೆಂದು ‘ಬಹಿರಂಗವಾಗಿ ಪ್ರಕಟಿಸುತ್ತಾರೆ.’ (ರೋಮ. 10:9, 10) ಅಭ್ಯರ್ಥಿಗಳು ತಮ್ಮ ನಂಬಿಕೆಗೆ ಅನುಸಾರವಾಗಿ ಸರಿಯಾದ ಉತ್ತರ ಕೊಡಲು ಆಗುವಂತೆ ಆ ಪ್ರಶ್ನೆಗಳ ಕುರಿತು ಮೊದಲೇ ಯೋಚಿಸಿ ಪ್ರಾರ್ಥಿಸಿರಬೇಕು.
ಯೆಹೋವನನ್ನ ಮಾತ್ರ ಆರಾಧಿಸ್ತೀನಿ, ಜೀವನ ಪೂರ್ತಿ ಆತನ ಚಿತ್ತ ಮಾಡ್ತೀನಿ ಅಂತ ಮಾತುಕೊಡುತ್ತಾ, ಪ್ರಾರ್ಥನೆಯಲ್ಲಿ ನೀವು ಯೆಹೋವನಿಗೆ ಸಮರ್ಪಿಸಿಕೊಂಡಿದ್ದೀರಾ?
ಆದಷ್ಟು ಬೇಗ ದೀಕ್ಷಾಸ್ನಾನ ಪಡೆಯಲು ನೀವು ಸಿದ್ಧರಿದ್ದೀರಾ?
ದೀಕ್ಷಾಸ್ನಾನದ ಸಂದರ್ಭದಲ್ಲಿ ಯಾವ ರೀತಿಯ ಬಟ್ಟೆ ಧರಿಸಬೇಕು? (1 ತಿಮೊ. 2:9, 10; ಯೋಹಾ. 15:19; ಫಿಲಿ. 1:10)
‘ದೇವರ ಮೇಲೆ ಭಕ್ತಿಯಿರೋದ್ರಿಂದ ನಮಗೆ ಬುದ್ಧಿ ಇದೆ, ತೋರಿಸ್ಕೊಳ್ಳೋರಲ್ಲ’ ಅಂತ ಗೊತ್ತಾಗೋ ಹಾಗೆ “ಗೌರವ ತರುವಂಥ ಬಟ್ಟೆ ಹಾಕಬೇಕು.” ದೀಕ್ಷಾಸ್ನಾನದ ಅಭ್ಯರ್ಥಿಗಳು ತೆಳುವಾದ, ಮೈಕಾಣಿಸುವಂಥ, ಬರಹಗಳು ಮತ್ತು ಚಿತ್ರಗಳು ಇರುವಂಥ ಬಟ್ಟೆಗಳನ್ನ ಹಾಕಬಾರದು. ದೀಕ್ಷಾಸ್ನಾನದ ಏರ್ಪಾಡಿಗೆ ಗೌರವ ತರುವ ನೀಟಾದ, ಸಭ್ಯವಾದ, ಒಳ್ಳೇ ಬಟ್ಟೆಯನ್ನ ಧರಿಸಬೇಕು.
ದೀಕಾಸ್ನಾನ ಪಡೆಯುವಾಗ ಅಭ್ಯರ್ಥಿಯು ಹೇಗೆ ನಡೆದುಕೊಳ್ಳಬೇಕು? (ಲೂಕ 3:21, 22)
ಯೇಸು ದೀಕ್ಷಾಸ್ನಾನ ಪಡೆದ ವಿಧ ಇಂದಿನ ಕ್ರೈಸ್ತರಿಗೆ ಒಂದು ಒಳ್ಳೇ ಮಾದರಿಯಾಗಿದೆ. ದೀಕ್ಷಾಸ್ನಾನವು ಒಂದು ಗಂಭೀರ ಹೆಜ್ಜೆಯಾಗಿದೆಯೆಂದು ಆತನು ಅರ್ಥಮಾಡಿಕೊಂಡು ಅದನ್ನು ತನ್ನ ನಡೆ ನುಡಿಯಲ್ಲಿ ತೋರಿಸಿದನು. ಅದೇ ತರ ಅಭ್ಯರ್ಥಿಗಳು ಕೂಡ ದೀಕ್ಷಾಸ್ನಾನದ ಮಹತ್ವವನ್ನು ಕಡಿಮೆಗೊಳಿಸುವ ಯಾವುದನ್ನೂ ಮಾಡಬಾರದು. ಅಲ್ಲಿ ತಮಾಷೆ ಮಾಡೋದು, ಆಟ ಆಡೋದು, ಈಜಾಡೋದು ಮಾಡಬಾರದು. ದೀಕ್ಷಾಸ್ನಾನ ಪಡೆದಾಗ ಏನೋ ವಿಜಯ ಸಾಧಿಸಿದವರ ತರ ವರ್ತಿಸಬಾರದು. ದೀಕ್ಷಾಸ್ನಾನ ಪಡೆಯುವುದು ಖುಷಿ ತರುತ್ತೆ ಆದರೆ ಆ ಖುಷಿಯನ್ನು ವ್ಯಕ್ತಪಡಿಸುವಾಗಲೂ ಗೌರವದಿಂದ ನಡೆದುಕೊಳ್ಳಬೇಕು.
ಕೂಟಗಳಿಗೆ ಕ್ರಮವಾಗಿ ಹಾಜರಾಗೋದು, ಸಭೆಯಲ್ಲಿರೋರ ಜೊತೆ ಸಮಯ ಕಳಿಯೋದು, ಯೆಹೋವನಿಗೆ ನೀವು ಮಾಡಿರೋ ಸಮರ್ಪಣೆಗೆ ತಕ್ಕ ಹಾಗೆ ಜೀವನ ಮಾಡೋಕೆ ಹೇಗೆ ಸಹಾಯ ಮಾಡುತ್ತೆ?
ದೀಕ್ಷಾಸ್ನಾನವಾದ ಮೇಲೂ ನೀವು ವೈಯಕ್ತಿಕ ಅಧ್ಯಯನದ ರೂಢಿಯನ್ನು ಮುಂದುವರಿಸುವುದು ಮತ್ತು ಸೇವೆಯಲ್ಲಿ ಕ್ರಮವಾಗಿ ಭಾಗವಹಿಸುವುದು ಯಾಕೆ ಪ್ರಾಮುಖ್ಯ?
-