ಭಾಗ 2
“ನನ್ನ ಆಲಯವನ್ನ ಅಶುದ್ಧ ಮಾಡಿದ್ದೀಯ” ಶುದ್ಧ ಆರಾಧನೆ ಅಶುದ್ಧವಾಯ್ತು
ಮುಖ್ಯ ವಿಷಯ: ಯೂದಾಯ ಮತ್ತು ಯೆರೂಸಲೇಮಿನ ಜನರ ಆರಾಧನೆ ಅಶುದ್ಧವಾಯ್ತು ಮತ್ತು ಅವರು ಅನೈತಿಕತೆಯನ್ನ ಶುರು ಮಾಡಿದ್ರು
ಯೆಹೋವ ದೇವರು ಇಸ್ರಾಯೇಲ್ಯರನ್ನು ತುಂಬ ಪ್ರೀತಿಸುತ್ತಿದ್ದನು ಮತ್ತು “ಅಮೂಲ್ಯ ಆಸ್ತಿ” ತರ ನೋಡ್ಕೊಳ್ತಿದ್ದನು. (ವಿಮೋ. 19:5, ಪಾದಟಿಪ್ಪಣಿ) ಆದ್ರೆ ಅವರು ಯೆಹೋವ ದೇವರ ಆಲಯದಲ್ಲೇ ಸುಳ್ಳು ದೇವರುಗಳನ್ನ ಆರಾಧಿಸಿದ್ರು! ಹೀಗೆ ಅವರು ಉಂಡ ಮನೆಗೆ ಎರಡು ಬಗೆಯೋ ಹಾಗೆ ನಡ್ಕೊಂಡರು. ಅವರು ಯೆಹೋವ ದೇವರ ಮನಸ್ಸಿಗೆ ತುಂಬ ನೋವು ಮಾಡಿದರು ಮತ್ತು ಆತನ ಹೆಸರಿಗೆ ಮಸಿ ಬಳಿದರು. ಅವರು ಇಷ್ಟು ಕೀಳಾಗಿ ನಡ್ಕೊಳ್ಳೋಕ್ಕೆ ಕಾರಣವೇನು? ಯೆರೂಸಲೇಮಿನ ನಾಶನದ ಬಗ್ಗೆ ಯೆಹೆಜ್ಕೇಲನು ಹೇಳಿದ ಭವಿಷ್ಯವಾಣಿಯಿಂದ ನಾವೇನು ಕಲಿಬಹುದು? ಇಸ್ರಾಯೇಲ್ಯರು ತಮ್ಮ ಸುತ್ತ ಮುತ್ತ ಇದ್ದ ದೇಶಗಳ ಜೊತೆ ನಡ್ಕೊಂಡ ರೀತಿಯಿಂದ ನಾವು ಯಾವ ಪಾಠ ಕಲಿಬಹುದು?