-
ದೇವರ ಸರ್ಕಾರ ಅಂದರೇನು?ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
-
-
ಪಾಠ 31
ದೇವರ ಸರ್ಕಾರ ಅಂದರೇನು?
ದೇವರ ಸರ್ಕಾರದ ಬಗ್ಗೆ ಇರೋ ಸಂದೇಶವೇ ಬೈಬಲಿನಲ್ಲಿರೋ ಮುಖ್ಯ ವಿಷಯ. ಯೆಹೋವ ದೇವರು ಭೂಮಿಯನ್ನ ಸೃಷ್ಟಿ ಮಾಡಿದಾಗ ಆತನಿಗೆ ಒಂದು ಉದ್ದೇಶ ಇತ್ತು. ಆ ಉದ್ದೇಶ ಈ ಸರ್ಕಾರದ ಮೂಲಕ ನಿಜ ಆಗಲಿದೆ. ಹಾಗಾದರೆ ದೇವರ ಸರ್ಕಾರ ಅಂದರೇನು? ಅದು ಈಗ ಆಳ್ವಿಕೆ ನಡೆಸುತ್ತಿದೆ ಅಂತ ನಮಗೆ ಹೇಗೆ ಗೊತ್ತು? ಅದು ಈಗಾಗಲೇ ಏನೆಲ್ಲಾ ಮಾಡಿದೆ? ಮುಂದೆ ಏನೆಲ್ಲಾ ಮಾಡಲಿಕ್ಕಿದೆ? ಈ ಪಾಠದಲ್ಲಿ ಮತ್ತು ಮುಂದಿನ ಎರಡು ಪಾಠಗಳಲ್ಲಿ ಈ ಪ್ರಶ್ನೆಗಳಿಗೆ ಉತ್ತರವನ್ನ ತಿಳಿಯಲಿದ್ದೇವೆ.
1. ದೇವರ ಸರ್ಕಾರ ಅಂದರೇನು ಮತ್ತು ಅದರ ರಾಜ ಯಾರು?
ಯೆಹೋವ ದೇವರು ಏರ್ಪಾಡು ಮಾಡಿರುವ ಸರ್ಕಾರನೇ ದೇವರ ಸರ್ಕಾರ. ಅದರ ರಾಜ ಯೇಸು ಕ್ರಿಸ್ತ. ಆತನು ಸ್ವರ್ಗದಿಂದ ಆಳುತ್ತಾನೆ. (ಮತ್ತಾಯ 4:17; ಯೋಹಾನ 18:36) ಯೇಸು “ರಾಜನಾಗಿ ಸದಾಕಾಲ ಆಳ್ತಾನೆ” ಅಂತ ಬೈಬಲ್ ಹೇಳುತ್ತೆ. (ಲೂಕ 1:32, 33) ಆತನು ಭೂಮಿಯಲ್ಲಿರುವ ಎಲ್ಲರ ಮೇಲೆ ಆಳ್ವಿಕೆ ಮಾಡುತ್ತಾನೆ.
2. ಯೇಸುವಿನ ಜೊತೆ ಯಾರು ಆಳ್ವಿಕೆ ಮಾಡುತ್ತಾರೆ?
ಯೇಸು ಒಬ್ಬನೇ ಆಳ್ವಿಕೆ ಮಾಡಲ್ಲ. ಆತನ ಜೊತೆ ‘ಎಲ್ಲ ಭಾಷೆ, ಜಾತಿ, ದೇಶದಿಂದ ಬಂದವರು ರಾಜರಾಗಿ ಈ ಭೂಮಿಯನ್ನ ಆಳ್ತಾರೆ.’ (ಪ್ರಕಟನೆ 5:9, 10) ಯೇಸುವಿಗೆ ಲಕ್ಷಾಂತರ ಜನ ಶಿಷ್ಯರಿದ್ದಾರೆ. ಅವರೆಲ್ಲರೂ ಸೇರಿ ಭೂಮಿಯನ್ನ ಆಳುತ್ತಾರಾ? ಇಲ್ಲ. 1,44,000 ಜನರು ಮಾತ್ರ ಯೇಸುವಿನ ಜೊತೆ ಸ್ವರ್ಗದಲ್ಲಿ ಆಳುತ್ತಾರೆ. (ಪ್ರಕಟನೆ 14:1-4 ಓದಿ.) ಉಳಿದವರು ಇದೇ ಭೂಮಿಯಲ್ಲಿ ದೇವರ ಸರ್ಕಾರದ ಪ್ರಜೆಗಳಾಗಿರುತ್ತಾರೆ.—ಕೀರ್ತನೆ 37:29.
3. ದೇವರ ಸರ್ಕಾರ ಹೇಗೆ ಮಾನವ ಸರ್ಕಾರಗಳಿಗಿಂತ ಶ್ರೇಷ್ಠವಾಗಿದೆ?
ಮಾನವ ಅಧಿಕಾರಿಗಳು ಒಳ್ಳೇದನ್ನ ಮಾಡೋಕೆ ಪ್ರಯತ್ನಿಸುತ್ತಾರೆ. ಆದರೆ ಅವರು ಅಂದುಕೊಂಡ ಹಾಗೆ ಪ್ರತಿಯೊಂದನ್ನ ಮಾಡೋ ಸಾಮರ್ಥ್ಯ ಅಥವಾ ಶಕ್ತಿ ಅವರಿಗೆ ಇಲ್ಲ. ಅವರ ಆಳ್ವಿಕೆ ಮುಗಿದ ಮೇಲೆ ಇನ್ನೊಂದು ಸರ್ಕಾರ ಆಳ್ವಿಕೆ ಮಾಡುತ್ತೆ. ಅವರು ಸ್ವಾರ್ಥಿಗಳಾಗಿ ಇರಬಹುದು, ಜನರಿಗೆ ಒಳ್ಳೇದನ್ನ ಮಾಡೋಕೆ ಬಯಸದೇ ಇರಬಹುದು. ಆದರೆ ದೇವರ ಸರ್ಕಾರದ ರಾಜ ಯೇಸು ಹಾಗಲ್ಲ. ಆತನ ಅಧಿಕಾರವನ್ನ ಯಾರಿಂದಾನೂ ಕಸಿದುಕೊಳ್ಳೋಕೆ ಆಗಲ್ಲ. ಆತನೇ ಶಾಶ್ವತವಾಗಿ ರಾಜನಾಗಿ ಇರುತ್ತಾನೆ. “ಸ್ವರ್ಗದ ದೇವರು ಒಂದು ಆಡಳಿತ ತರ್ತಾನೆ. ಅದಕ್ಕೆ ನಾಶನೇ ಇಲ್ಲ” ಅಂತ ಬೈಬಲ್ ತಿಳಿಸುತ್ತೆ. (ದಾನಿಯೇಲ 2:44) ಯೇಸು ಇಡೀ ಭೂಮಿಯ ಮೇಲೆ ಆಳ್ವಿಕೆಯನ್ನ ಮಾಡುತ್ತಾನೆ. ಆತನು ಯಾರಿಗೂ ಭೇದಭಾವ ಮಾಡಲ್ಲ. ಪ್ರೀತಿ, ಕರುಣೆ, ನ್ಯಾಯದಿಂದ ನಡೆದುಕೊಳ್ಳುತ್ತಾನೆ ಮತ್ತು ತನ್ನಂತೆಯೇ ನಡೆದುಕೊಳ್ಳಲು ಜನರಿಗೆ ಕಲಿಸುತ್ತಾನೆ.—ಯೆಶಾಯ 11:9 ಓದಿ.
ಹೆಚ್ಚನ್ನ ತಿಳಿಯೋಣ
ದೇವರ ಸರ್ಕಾರ ಎಲ್ಲಾ ಮಾನವ ಸರ್ಕಾರಗಳಿಗಿಂತ ಯಾಕೆ ಶ್ರೇಷ್ಠವಾಗಿದೆ ಅಂತ ತಿಳಿಯಿರಿ.
4. ದೇವರ ಸರ್ಕಾರ ಇಡೀ ಭೂಮಿಯ ಮೇಲೆ ಆಳ್ವಿಕೆ ಮಾಡುತ್ತೆ
ಬೇರೆಲ್ಲಾ ಅಧಿಕಾರಿಗಳಿಗಿಂತ ಯೇಸುವಿಗೆ ಹೆಚ್ಚು ಅಧಿಕಾರ ಇದೆ. ಮತ್ತಾಯ 28:18 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ಮಾನವರ ಅಧಿಕಾರಕ್ಕಿಂತ ಯೇಸುವಿನ ಅಧಿಕಾರ ಹೇಗೆ ಶ್ರೇಷ್ಠವಾಗಿದೆ?
ಮಾನವ ಸರ್ಕಾರಗಳು ಆಗಾಗ ಬದಲಾಗುತ್ತಾ ಇರುತ್ತೆ. ಅಷ್ಟೇ ಅಲ್ಲ, ಅವು ಭೂಮಿಯ ಒಂದೊಂದು ಕಡೆಗಳಲ್ಲಿ ಮಾತ್ರ ಆಳ್ವಿಕೆ ಮಾಡುತ್ತವೆ. ಆದರೆ ದೇವರ ಸರ್ಕಾರದ ಬಗ್ಗೆ ಏನು? ದಾನಿಯೇಲ 7:14 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
ದೇವರ ಸರ್ಕಾರ “ಯಾವತ್ತೂ ನಾಶ ಆಗಲ್ಲ” ಇದರಿಂದ ನಮಗೇನು ಪ್ರಯೋಜನ ಇದೆ?
ದೇವರ ಸರ್ಕಾರ ಇಡೀ ಭೂಮಿ ಮೇಲೆ ಆಳ್ವಿಕೆ ಮಾಡುವುದು ಯಾಕೆ ಒಳ್ಳೇದು?
5. ಮಾನವ ಆಳ್ವಿಕೆಗೆ ನಮ್ಮ ಸಮಸ್ಯೆಗಳನ್ನ ತೆಗೆದುಹಾಕೋಕೆ ಆಗಲ್ಲ
ದೇವರ ಸರ್ಕಾರ ಯಾಕೆ ಮಾನವ ಸರ್ಕಾರಗಳನ್ನ ತೆಗೆದುಹಾಕಬೇಕು? ವಿಡಿಯೋ ನೋಡಿ, ನಂತರ ಪ್ರಶ್ನೆಯನ್ನ ಚರ್ಚಿಸಿ.
ಮಾನವ ಆಳ್ವಿಕೆಯಿಂದಾಗಿ ಯಾವೆಲ್ಲಾ ಕೆಟ್ಟ ಪರಿಣಾಮಗಳಾಗಿವೆ?
ಪ್ರಸಂಗಿ 8:9 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
ಮಾನವ ಸರ್ಕಾರಗಳ ಬದಲು ದೇವರ ಸರ್ಕಾರ ಬರಲೇಬೇಕು ಅಂತ ನಿಮಗೆ ಅನಿಸುತ್ತಾ? ಯಾಕೆ?
6. ದೇವರ ಸರ್ಕಾರದಲ್ಲಿ ಆಳ್ವಿಕೆ ಮಾಡುವವರು ನಮ್ಮನ್ನ ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ
ನಮ್ಮ ರಾಜನಾಗಿರುವ ಯೇಸು ಭೂಮಿಗೆ ಬಂದು ಜೀವನ ಮಾಡಿದ್ರಿಂದ ‘ನಮ್ಮ ಬಲಹೀನತೆಗಳನ್ನ ಅರ್ಥ ಮಾಡಿಕೊಳ್ಳುತ್ತಾನೆ.’ (ಇಬ್ರಿಯ 4:15) ಯೇಸುವಿನ ಜೊತೆ ಆಳಲಿರುವ 1,44,000 ನಂಬಿಗಸ್ತ ಸ್ತ್ರೀ ಪುರುಷರನ್ನ ಯೆಹೋವ ದೇವರು ‘ಎಲ್ಲ ಭಾಷೆ, ಜಾತಿ, ದೇಶದಿಂದ’ ಆರಿಸಿಕೊಂಡಿದ್ದಾನೆ.—ಪ್ರಕಟನೆ 5:9.
ಯೇಸು ಮತ್ತು ಆತನ ಜೊತೆ ಆಳ್ವಿಕೆ ಮಾಡುವವರು ನಮ್ಮ ಭಾವನೆಗಳನ್ನ, ಸಮಸ್ಯೆಗಳನ್ನ ಅರ್ಥ ಮಾಡಿಕೊಳ್ಳುತ್ತಾರೆ ಅಂತ ಗೊತ್ತಾದಾಗ ನಿಮಗೆ ಹೇಗನಿಸುತ್ತೆ? ಯಾಕೆ?
ಯೇಸುವಿನ ಜೊತೆ ಆಳಲು ಎಲ್ಲಾ ಹಿನ್ನೆಲೆಯಿಂದ ಸ್ತ್ರೀ ಪುರುಷರನ್ನ ಯೆಹೋವನು ಆರಿಸಿದ್ದಾನೆ
7. ದೇವರ ಸರ್ಕಾರದ ನಿಯಮಗಳು ಶ್ರೇಷ್ಠವಾಗಿವೆ
ತಮ್ಮ ಪ್ರಜೆಗಳ ಪ್ರಯೋಜನಕ್ಕಾಗಿ, ಸಂರಕ್ಷಣೆಗಾಗಿ ಸರ್ಕಾರಗಳು ನಿಯಮಗಳನ್ನ ಮಾಡ್ತವೆ. ಅದೇ ರೀತಿ ದೇವರ ಸರ್ಕಾರಕ್ಕೂ ನಿಯಮಗಳಿವೆ. ಅದನ್ನ ನಾವೆಲ್ಲರೂ ಪಾಲಿಸಲೇಬೇಕು. 1 ಕೊರಿಂಥ 6:9-11 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
ಎಲ್ಲರೂ ದೇವರ ನೀತಿನಿಯಮಗಳನ್ನ ಪಾಲಿಸುವಾಗ ಈ ಭೂಮಿ ಹೇಗಿರುತ್ತೆ ಅಂತ ನಿಮಗನಿಸುತ್ತೆ?a
ತನ್ನ ಪ್ರಜೆಗಳೆಲ್ಲರೂ ತನ್ನ ನಿಯಮಗಳನ್ನ ಪಾಲಿಸಬೇಕು ಅಂತ ಯೆಹೋವ ದೇವರು ಬಯಸೋದು ಸರಿನಾ? ನಿಮಗೇನು ಅನಿಸುತ್ತೆ?
ಯೆಹೋವನ ನಿಯಮಗಳನ್ನ ಪಾಲಿಸದೇ ತಪ್ಪು ಮಾಡುತ್ತಿದ್ದ ವ್ಯಕ್ತಿಗಳು ಸಹ ಬದಲಾಗಬಹುದು ಅಂತ ನಿಮಗನಿಸುತ್ತಾ?—ವಚನ 11 ನೋಡಿ.
ಜನರಿಗೆ ಪ್ರಯೋಜನ ಮತ್ತು ಸಂರಕ್ಷಣೆ ಆಗಲಿ ಅಂತ ಸರ್ಕಾರಗಳು ನಿಯಮಗಳನ್ನ ಮಾಡ್ತವೆ. ಅದೇ ತರ ನಮ್ಮ ಪ್ರಯೋಜನಕ್ಕಾಗಿನೇ ದೇವರ ಸರ್ಕಾರ ಕೂಡ ಮಾನವ ಸರ್ಕಾರಕ್ಕಿಂತ ಶ್ರೇಷ್ಠವಾದ ನಿಯಮಗಳನ್ನ ಮಾಡಿದೆ
ಕೆಲವರು ಹೀಗೆ ಕೇಳಬಹುದು: “ದೇವರ ಸರ್ಕಾರ ಅಂದರೇನು?”
ನೀವೇನು ಹೇಳುತ್ತೀರಾ?
ನಾವೇನು ಕಲಿತ್ವಿ
ದೇವರ ಸರ್ಕಾರ ಸ್ವರ್ಗದಲ್ಲಿದೆ, ಅಲ್ಲಿಂದ ಇಡೀ ಭೂಮಿಯನ್ನ ಆಳ್ವಿಕೆ ಮಾಡುತ್ತೆ.
ನೆನಪಿದೆಯಾ
ದೇವರ ಸರ್ಕಾರದಲ್ಲಿ ಯಾರೆಲ್ಲಾ ಆಳ್ವಿಕೆ ಮಾಡ್ತಾರೆ?
ದೇವರ ಸರ್ಕಾರ ಮಾನವ ಸರ್ಕಾರಗಳಿಗಿಂತ ಶ್ರೇಷ್ಠವಾಗಿದೆ ಅಂತ ಹೇಗೆ ಹೇಳಬಹುದು?
ಯೆಹೋವ ದೇವರು ತನ್ನ ಪ್ರಜೆಗಳಿಂದ ಏನು ಬಯಸುತ್ತಾನೆ?
ಇದನ್ನೂ ನೋಡಿ
ದೇವರ ಸರ್ಕಾರ ಎಲ್ಲಿದೆ ಅಂತ ಯೇಸು ಕಲಿಸಿದನು?
“ದೇವರ ರಾಜ್ಯ ಇರೋದು ನಿಮ್ಮ ಹೃದಯದಲ್ಲಾ?” (jw.org ಲೇಖನ)
ಯೆಹೋವನ ಸಾಕ್ಷಿಗಳು ಮಾನವ ಸರ್ಕಾರಗಳಿಗಿಂತ ದೇವರ ಸರ್ಕಾರಕ್ಕೆ ಯಾಕೆ ನಿಷ್ಠೆ ತೋರಿಸುತ್ತಾರೆ?
ಯೇಸುವಿನ ಜೊತೆ ಆಳ್ವಿಕೆ ಮಾಡೋಕೆ ಯೆಹೋವ ದೇವರು ಆರಿಸಿರುವ 1,44,000 ಜನರ ಬಗ್ಗೆ ಬೈಬಲ್ ಏನು ಹೇಳುತ್ತೆ ಅಂತ ತಿಳಿದುಕೊಳ್ಳಿ.
ಅನ್ಯಾಯ ಇಲ್ಲದಿರೋ ಲೋಕವನ್ನ ದೇವರು ಮಾತ್ರ ತರಲು ಸಾಧ್ಯ ಅಂತ ಜೈಲಿನಲ್ಲಿದ್ದ ಒಬ್ಬ ಸ್ತ್ರೀಗೆ ಹೇಗೆ ಗೊತ್ತಾಯ್ತು?
a ಇಂಥ ಕೆಲವು ನೀತಿನಿಯಮಗಳ ಬಗ್ಗೆ ಭಾಗ 3ರಲ್ಲಿ ಕಲಿಯಲಿದ್ದೇವೆ.
-
-
ದೇವರ ಸರ್ಕಾರ ಈಗ ಆಳ್ವಿಕೆ ಮಾಡ್ತಿದೆ!ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
-
-
ಪಾಠ 32
ದೇವರ ಸರ್ಕಾರ ಈಗ ಆಳ್ವಿಕೆ ಮಾಡ್ತಿದೆ!
1914ರಿಂದ ದೇವರ ಸರ್ಕಾರ ಸ್ವರ್ಗದಿಂದ ಆಳ್ವಿಕೆ ಶುರುಮಾಡಿದೆ. ಆಗಿನಿಂದ ಮಾನವ ಆಳ್ವಿಕೆಯ ಕೊನೇ ದಿನಗಳು ಶುರುವಾಗಿದೆ. ಅದು ನಮಗೆ ಹೇಗೆ ಗೊತ್ತು? 1914ರ ನಂತರ ಜನರ ಸ್ವಭಾವ ಮತ್ತು ಪರಿಸ್ಥಿತಿ ಹೇಗಿರುತ್ತೆ ಅಂತ ಬೈಬಲ್ ಮುಂಚೆನೇ ತಿಳಿಸಿದೆ. ಅದರ ಬಗ್ಗೆ ನಾವೀಗ ನೋಡೋಣ.
1. ಬೈಬಲ್ ಯಾವ ವಿಷಯದ ಬಗ್ಗೆ ಮುಂಚೆನೇ ತಿಳಿಸಿದೆ?
ದೇವರ ಸರ್ಕಾರ ‘ಏಳು ಕಾಲಗಳ’ ಕೊನೆಯಲ್ಲಿ ಆಳ್ವಿಕೆ ಶುರುಮಾಡುತ್ತೆ ಅಂತ ದಾನಿಯೇಲ ಪುಸ್ತಕದಲ್ಲಿ ಇದೆ. (ದಾನಿಯೇಲ 4:16, 17) ನೂರಾರು ವರ್ಷಗಳು ಆದ ಮೇಲೆ ಯೇಸು ಅದೇ ಸಮಯದ ಬಗ್ಗೆ ತಿಳಿಸುತ್ತಾ, “ದೇಶಗಳಿಗೆ ಕೊಟ್ಟಿರೋ ಸಮಯ” ಇನ್ನೂ ಮುಗಿದಿಲ್ಲ ಅಂತ ಹೇಳಿದನು. (ಲೂಕ 21:24) ಈ 7 ಕಾಲಗಳು 1914ರಲ್ಲಿ ಕೊನೆಯಾಯಿತು. ನಾವು ಅದನ್ನ ಹೇಗೆ ಹೇಳಬಹುದು ಅಂತ ನೋಡೋಣ.
2. ಇಸವಿ 1914ರಿಂದ ಭೂಮಿಯಲ್ಲಿ ಮತ್ತು ಜನರ ಸ್ವಭಾವದಲ್ಲಿ ಯಾವೆಲ್ಲಾ ಬದಲಾವಣೆ ಆಗಿದೆ?
ಯೇಸುವಿನ ಶಿಷ್ಯರು ಆತನಿಗೆ, “ನೀನು ಮತ್ತೆ ಬರೋ ಕಾಲಕ್ಕೆ ಮತ್ತು ಈ ಲೋಕದ ಅಂತ್ಯಕ್ಕೆ ಸೂಚನೆ ಏನು?” ಅಂತ ಕೇಳಿದ್ರು. (ಮತ್ತಾಯ 24:3) ಅದಕ್ಕೆ ಯೇಸು, ದೇವರ ಸರ್ಕಾರ ಸ್ವರ್ಗದಲ್ಲಿ ಆಳೋಕೆ ಶುರುವಾದಾಗ ಭೂಮಿಯಲ್ಲಿ ಒಂದರ ನಂತರ ಇನ್ನೊಂದು ಸಮಸ್ಯೆ ಬರುತ್ತೆ ಅಂತ ತಿಳಿಸಿದ್ದನು. ಅದರಲ್ಲಿ ಯುದ್ಧ, ಭೂಕಂಪ, ಆಹಾರದ ಕೊರತೆ ಸೇರಿದೆ. (ಮತ್ತಾಯ 24:7 ಓದಿ.) “ಕೊನೇ ದಿನಗಳಲ್ಲಿ” ಜನರು ನಡೆದುಕೊಳ್ಳುವ ರೀತಿಯಿಂದ ಜೀವನದಲ್ಲಿ “ತುಂಬ ಕಷ್ಟ ಪಡಬೇಕಾಗುತ್ತೆ” ಅಂತಾನೂ ಬೈಬಲ್ ಮುಂಚೆನೇ ತಿಳಿಸಿದೆ. (2 ತಿಮೊತಿ 3:1-5) 1914ರಿಂದ ಈ ಎಲ್ಲಾ ವಿಷಯಗಳು ನಮ್ಮ ಕಣ್ಣಮುಂದೆ ನಡೆಯುತ್ತಾ ಇರೋದನ್ನ ನಾವು ನೋಡುತ್ತಿದ್ದೇವೆ.
3. ದೇವರ ಸರ್ಕಾರದ ಆಳ್ವಿಕೆ ಶುರು ಆದಾಗಿಂದ ಲೋಕದ ಪರಿಸ್ಥಿತಿ ಯಾಕೆ ಇಷ್ಟು ಕೆಟ್ಟುಹೋಗಿದೆ?
ದೇವರ ಸರ್ಕಾರದ ರಾಜನಾದ ಕೂಡಲೇ ಯೇಸು, ಸ್ವರ್ಗದಲ್ಲಿದ್ದ ಸೈತಾನ ಮತ್ತು ಅವನ ಕೆಟ್ಟದೂತರ ಜೊತೆ ಯುದ್ಧ ಮಾಡಿ ಅವರನ್ನ ಸೋಲಿಸಿದನು. ಯೇಸು, ‘ಸೈತಾನ ಮತ್ತು ಅವನ ದೂತರನ್ನ ಭೂಮಿಗೆ ಎಸೆದನು’ ಅಂತ ಬೈಬಲ್ ಹೇಳುತ್ತೆ. (ಪ್ರಕಟನೆ 12:9, 10, 12) ತನಗೆ ಇರೋದು ಸ್ವಲ್ಪ ಸಮಯ ಅಂತ ಗೊತ್ತಿರೋದ್ರಿಂದ ಸೈತಾನ ತುಂಬ ಕೋಪದಿಂದ ಇದ್ದಾನೆ. ಅದಕ್ಕೆ ಅವನು ಭೂಮಿಯಲ್ಲಿರುವ ಎಲ್ಲರಿಗೂ ತುಂಬ ಕಷ್ಟ, ನೋವನ್ನ ಕೊಡ್ತಿದ್ದಾನೆ. ಲೋಕದಲ್ಲಿರುವ ಪರಿಸ್ಥಿತಿ ಇಷ್ಟು ಕೆಟ್ಟು ಹೋಗಲು ಇದೇ ಕಾರಣ. ಆದರೆ ದೇವರ ಸರ್ಕಾರ ಈ ಸಮಸ್ಯೆಗಳನ್ನೆಲ್ಲಾ ಬೇಗ ತೆಗೆದುಹಾಕುತ್ತೆ.
ಹೆಚ್ಚನ್ನ ತಿಳಿಯೋಣ
ದೇವರ ಸರ್ಕಾರದ ಆಳ್ವಿಕೆ 1914ರಿಂದ ಶುರುವಾಗಿದೆ ಅಂತ ಹೇಗೆ ಹೇಳಬಹುದು? ಅದನ್ನ ನೀವು ನಂಬುತ್ತೀರ ಅನ್ನೋದನ್ನ ಹೇಗೆ ತೋರಿಸಿಕೊಡಬಹುದು ಅಂತ ತಿಳಿಯಿರಿ.
4. ಇಸವಿ 1914ರ ಬಗ್ಗೆ ಬೈಬಲ್ ಮುಂಚೆನೇ ಹೇಳಿದೆ
ಯೆಹೋವ ದೇವರು ಮುಂದೆ ಏನಾಗುತ್ತೆ ಅಂತ ಬಾಬೆಲಿನ ರಾಜ ನೆಬೂಕದ್ನೆಚ್ಚರನಿಗೆ ಕನಸಿನ ಮೂಲಕ ತೋರಿಸಿದನು. ಈ ಕನಸಿನ ಬಗ್ಗೆ ಮತ್ತು ದಾನಿಯೇಲನು ಕೊಟ್ಟ ವಿವರಣೆಯ ಬಗ್ಗೆ ಬೈಬಲಿನಲ್ಲಿದೆ. ಇದು ನೆಬೂಕದ್ನೆಚ್ಚರನ ಸಾಮ್ರಾಜ್ಯದ ಬಗ್ಗೆ ಮಾತ್ರ ಅಲ್ಲ, ದೇವರ ರಾಜ್ಯದ ಬಗ್ಗೆನೂ ತಿಳಿಸುತ್ತೆ.—ದಾನಿಯೇಲ 4:17 ಓದಿ.a
ದಾನಿಯೇಲ 4:20-26 ಓದಿ, ನಂತರ ಚಾರ್ಟ್ ನೋಡಿ ಈ ಪ್ರಶ್ನೆಗಳನ್ನ ಉತ್ತರಿಸಿ:
(A) ನೆಬೂಕದ್ನೆಚ್ಚರನು ಕನಸಿನಲ್ಲಿ ಏನು ನೋಡಿದನು?—ವಚನ 20 ಮತ್ತು 21 ನೋಡಿ.
(B) ಆ ಮರಕ್ಕೆ ಏನಾಗುತ್ತೆ?—ವಚನ 23 ನೋಡಿ.
(C) ‘ಏಳು ಕಾಲಗಳ’ ಕೊನೆಯಲ್ಲಿ ಏನಾಗುತ್ತೆ?—ವಚನ 26 ನೋಡಿ.
ಕನಸಿನಲ್ಲಿದ್ದ ಮರಕ್ಕೂ ದೇವರ ಸರ್ಕಾರಕ್ಕೂ ಇರೋ ಸಂಬಂಧ
ಭವಿಷ್ಯವಾಣಿ (ದಾನಿಯೇಲ 4:20-36)
ಆಳ್ವಿಕೆ
(A) ಎತ್ತರವಾದ ಒಂದು ಮರ
ಆಳ್ವಿಕೆ ನಿಂತು ಹೋಯ್ತು
(B) “ಮರ ಕಡಿದು ಹಾಕಿ” ಮತ್ತು “ಏಳು ಕಾಲಗಳು ಕಳೀಲಿ”
ಆಳ್ವಿಕೆ ಪುನಃ ಶುರುವಾಯಿತು
(C) “ನಿನ್ನ ಸಾಮ್ರಾಜ್ಯ ಮತ್ತೆ ನಿನಗೆ ಸಿಗುತ್ತೆ”
ಮೊದಲ ನೆರವೇರಿಕೆಯಲ್ಲಿ . . .
(D) ಮರ ಯಾವುದನ್ನ ಸೂಚಿಸುತ್ತೆ? —ವಚನ 22 ನೋಡಿ.
(E) ಅವನ ಆಳ್ವಿಕೆಗೆ ಯಾವಾಗ ತಡೆ ಬಂತು? —ದಾನಿಯೇಲ 4:29-33 ಓದಿ.
(F) ‘ಏಳು ಕಾಲಗಳ’ ಕೊನೆಯಲ್ಲಿ ನೆಬೂಕದ್ನೆಚ್ಚರನಿಗೆ ಏನಾಯ್ತು? —ದಾನಿಯೇಲ 4:34-36 ಓದಿ.
ಮೊದಲನೇ ನೆರವೇರಿಕೆ
ಆಳ್ವಿಕೆ
(D) ನೆಬೂಕದ್ನೆಚ್ಚರ ಬಾಬೆಲಿನ ರಾಜನಾದ
ಆಳ್ವಿಕೆ ನಿಂತು ಹೋಯ್ತು
(E) ಕ್ರಿ.ಪೂ. 606ರ ನಂತರ ನೆಬೂಕದ್ನೆಚ್ಚರ ಹುಚ್ಚನಾದ ಮತ್ತು 7 ವರ್ಷ ಆಳ್ವಿಕೆ ಮಾಡಕ್ಕೆ ಆಗಲಿಲ್ಲ
ಆಳ್ವಿಕೆ ಪುನಃ ಶುರುವಾಯಿತು
(F) ನೆಬೂಕದ್ನೆಚ್ಚರನಿಗೆ ವಾಸಿಯಾಯಿತು ಮತ್ತು ತನ್ನ ಆಳ್ವಿಕೆಯನ್ನ ಪುನಃ ಶುರುಮಾಡಿದ
ಎರಡನೇ ನೆರವೇರಿಕೆಯಲ್ಲಿ . . .
(G) ಮರ ಯಾವುದನ್ನ ಸೂಚಿಸುತ್ತೆ? —1 ಪೂರ್ವಕಾಲವೃತ್ತಾಂತ 29:23 ಓದಿ.
(H) ಇಸ್ರಾಯೇಲ್ ರಾಜರ ಆಳ್ವಿಕೆ ಯಾವಾಗ ನಿಂತುಹೋಯಿತು? ಯೇಸು ಭೂಮಿಯಲ್ಲಿದ್ದಾಗ ಅವರು ಆಳ್ವಿಕೆ ಮಾಡುತ್ತಿರಲಿಲ್ಲ ಅಂತ ನಮಗೆ ಹೇಗೆ ಗೊತ್ತು? —ಲೂಕ 21:24 ಓದಿ.
(I) ಯಾವಾಗ ಮತ್ತು ಎಲ್ಲಿ ಆಳ್ವಿಕೆ ಶುರುವಾಯಿತು?
ಎರಡನೇ ನೆರವೇರಿಕೆ
ಆಳ್ವಿಕೆ
(G) ದೇವರ ಆಳ್ವಿಕೆಯನ್ನ ಸೂಚಿಸುತ್ತಿದ್ದ ಇಸ್ರಾಯೇಲಿನ ರಾಜರು
ಆಳ್ವಿಕೆ ನಿಂತು ಹೋಯ್ತು
(H) ಯೆರೂಸಲೇಮ್ ನಾಶವಾಯಿತು ಮತ್ತು 2,520 ವರ್ಷಗಳ ವರೆಗೆ ಇಸ್ರಾಯೇಲಿನ ರಾಜರ ಆಳ್ವಿಕೆ ನಿಂತು ಹೋಯ್ತು
ಆಳ್ವಿಕೆ ಪುನಃ ಶುರುವಾಯಿತು
(I) ದೇವರ ಸರ್ಕಾರದ ರಾಜನಾಗಿ ಯೇಸು ಸ್ವರ್ಗದಲ್ಲಿ ಆಳ್ವಿಕೆಯನ್ನ ಶುರು ಮಾಡಿದ್ದಾನೆ
ಏಳು ಕಾಲಗಳು ಎಷ್ಟು ವರ್ಷಗಳನ್ನ ಸೂಚಿಸುತ್ತೆ?
ಬೈಬಲಿನ ಒಂದು ಪುಸ್ತಕದಲ್ಲಿರುವ ಮಾಹಿತಿ ಅದರ ಇನ್ನೊಂದು ಪುಸ್ತಕದಲ್ಲಿರುವ ಮಾಹಿತಿಯನ್ನ ಅರ್ಥಮಾಡಿಕೊಳ್ಳೋಕೆ ಸಹಾಯ ಮಾಡುತ್ತೆ. ಉದಾಹರಣೆಗೆ, ಪ್ರಕಟನೆ ಪುಸ್ತಕದಲ್ಲಿರುವ ಮೂರುವರೆ ಕಾಲಗಳು 1,260 ದಿನಗಳಾಗಿವೆ. (ಪ್ರಕಟನೆ 12:6, 14) ಹಾಗಾಗಿ ಅದರ ಎರಡು ಪಟ್ಟು ಅಂದರೆ 7 ಕಾಲಗಳು 2,520 ದಿನಗಳಾಗಿವೆ. ಬೈಬಲಿನಲ್ಲಿ ಒಂದು ದಿನವನ್ನ ಒಂದು ವರ್ಷ ಅಂತನೂ ತಿಳಿಸುತ್ತೆ. (ಯೆಹೆಜ್ಕೇಲ 4:6) ಹಾಗಾಗಿ ದಾನಿಯೇಲ ಪುಸ್ತಕದಲ್ಲಿ ತಿಳಿಸಲಾಗಿರುವ ಏಳು ಕಾಲಗಳು 2,520 ವರ್ಷಗಳನ್ನ ಸೂಚಿಸುತ್ತೆ.
5. ಲೋಕದಲ್ಲಿ 1914ರಿಂದ ತುಂಬ ಬದಲಾವಣೆಯಾಗಿದೆ
ಯೇಸು ರಾಜನಾದಾಗ ಭೂಮಿಯ ಪರಿಸ್ಥಿತಿ ಹೇಗಿರುತ್ತೆ ಅಂತ ಆತನು ಮೊದಲೇ ತಿಳಿಸಿದ್ದನು. ಲೂಕ 21:9-11 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ಇಲ್ಲಿ ತಿಳಿಸಲಾಗಿರುವ ಯಾವೆಲ್ಲಾ ವಿಷಯಗಳನ್ನ ನೀವು ಕೇಳಿದ್ದೀರಾ ಅಥವಾ ನೋಡಿದ್ದೀರಾ?
ಮಾನವ ಆಳ್ವಿಕೆಯ ಕೊನೇ ದಿನಗಳಲ್ಲಿ ಜನರು ಹೇಗಿರುತ್ತಾರೆ ಅಂತ ಅಪೊಸ್ತಲ ಪೌಲ ತಿಳಿಸಿದ್ದಾನೆ. 2 ತಿಮೊತಿ 3:1-5 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ಇದರಲ್ಲಿ ತಿಳಿಸಲಾಗಿರುವ ಯಾವ ರೀತಿಯ ಗುಣಗಳಿರೋ ಜನರನ್ನ ನೀವು ನೋಡಿದ್ದೀರಾ?
6. ದೇವರ ಸರ್ಕಾರ ಈಗ ಆಳ್ವಿಕೆ ಮಾಡ್ತಿದೆ ಅಂತ ನೀವು ನಂಬುತ್ತೀರ ಅನ್ನೋದನ್ನ ತೋರಿಸಿಕೊಡಿ
ಮತ್ತಾಯ 24:3, 14 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
ದೇವರ ಸರ್ಕಾರ ಈಗ ಆಳ್ವಿಕೆ ನಡೆಸ್ತಿದೆ ಅಂತ ಯಾವ ಕೆಲಸ ತೋರಿಸ್ತಿದೆ?
ನೀವು ಆ ಕೆಲಸದಲ್ಲಿ ಹೇಗೆ ಕೈಜೋಡಿಸಬಹುದು?
ದೇವರ ಸರ್ಕಾರ ಈಗ ಆಳ್ವಿಕೆ ನಡೆಸ್ತಿದೆ. ಅದು ಬೇಗನೇ ಇಡೀ ಭೂಮಿಯ ಮೇಲೆ ಆಳ್ವಿಕೆ ನಡೆಸಲಿದೆ. ಇಬ್ರಿಯ 10:24, 25 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
‘ದೇವರ ದಿನ ಹತ್ತಿರ ಬರುತ್ತಾ ಇರೋದನ್ನ’ ನೋಡುವಾಗ ನಾವೆಲ್ಲರೂ ಏನು ಮಾಡಬೇಕು?
ಬೇರೆಯವರಿಗೆ ಪ್ರಯೋಜನ ಆಗುವ, ಅವರ ಜೀವ ಉಳಿಸುವ ಒಂದು ವಿಷಯ ನಿಮಗೆ ಗೊತ್ತಿದ್ರೆ ನೀವೇನು ಮಾಡ್ತೀರಾ?
ಕೆಲವರು ಹೀಗೆ ಕೇಳಬಹುದು: “ಯೆಹೋವನ ಸಾಕ್ಷಿಗಳು ಯಾಕೆ 1914ಕ್ಕೆ ತುಂಬ ಪ್ರಾಮುಖ್ಯತೆ ಕೊಡ್ತಾರೆ?”
ನೀವೇನು ಹೇಳ್ತೀರಾ?
ನಾವೇನು ಕಲಿತ್ವಿ
ದೇವರ ಸರ್ಕಾರ ಈಗ ಆಳ್ವಿಕೆ ಮಾಡ್ತಿದೆ ಅಂತ ಬೈಬಲ್ ಭವಿಷ್ಯವಾಣಿಗಳು ಮತ್ತು ಲೋಕದಲ್ಲಿ ನಡೆಯುತ್ತಿರುವ ಘಟನೆಗಳು ತೋರಿಸುತ್ತವೆ. ನಾವದನ್ನ ನಂಬುತ್ತೇವೆ ಅಂತ ಸಿಹಿಸುದ್ದಿಯನ್ನ ಸಾರುವ ಮೂಲಕ ಮತ್ತು ಕೂಟಗಳಿಗೆ ಹೋಗುವ ಮೂಲಕ ತೋರಿಸಿಕೊಡುತ್ತೇವೆ.
ನೆನಪಿದೆಯಾ
ದಾನಿಯೇಲ ಪುಸ್ತಕದಲ್ಲಿ ಮುಂಚೆನೇ ತಿಳಿಸಿದ ಹಾಗೆ 7 ಕಾಲಗಳ ಕೊನೆಯಲ್ಲಿ ಏನಾಯ್ತು?
ದೇವರ ಸರ್ಕಾರದ ಆಳ್ವಿಕೆ 1914ರಿಂದ ಶುರುವಾಯಿತು ಅಂತ ನೀವು ಹೇಗೆ ಹೇಳುತ್ತೀರಾ?
ದೇವರ ಸರ್ಕಾರ ಈಗ ಆಳುತ್ತಿದೆ ಅಂತ ನೀವು ನಂಬುತ್ತೀರ ಅಂತ ಹೇಗೆ ತೋರಿಸ್ತೀರಾ?
ಇದನ್ನೂ ನೋಡಿ
1914ರಿಂದ ಲೋಕದ ಪರಿಸ್ಥಿತಿ ಬದಲಾಗುತ್ತಾ ಇರೋದ್ರ ಬಗ್ಗೆ ಇತಿಹಾಸಗಾರರು ಮತ್ತು ಇತರರು ಏನು ಹೇಳಿದ್ದಾರೆ ಅಂತ ನೋಡಿ.
ಒಮ್ಮಿಂದೊಮ್ಮೆಲೇ ನೈತಿಕ ಮೌಲ್ಯಗಳು ಅಧೋಗತಿಗಿಳಿದಾಗ (ಎಚ್ಚರ!, ಜುಲೈ 2007)
ಮತ್ತಾಯ 24:14ರಲ್ಲಿರೋ ಭವಿಷ್ಯವಾಣಿ ಹೇಗೆ ಒಬ್ಬ ವ್ಯಕ್ತಿಯ ಜೀವನವನ್ನೇ ಬದಲಾಯಿಸಿತು ಅನ್ನೋದನ್ನ ಓದಿ.
ದಾನಿಯೇಲ 4ನೇ ಅಧ್ಯಾಯದಲ್ಲಿರುವ ಭವಿಷ್ಯವಾಣಿ ದೇವರ ಸರ್ಕಾರದ ಬಗ್ಗೆ ಹೇಳುತ್ತಿದೆ ಅಂತ ನಮಗೆ ಹೇಗೆ ಗೊತ್ತು?
“ದೇವರ ರಾಜ್ಯದ ಆಳ್ವಿಕೆ ಯಾವಾಗ ಆರಂಭವಾಯಿತು?—ಭಾಗ 1” (ಕಾವಲಿನಬುರುಜು, ಜನವರಿ 1, 2015)
ದಾನಿಯೇಲ 4ನೇ ಅಧ್ಯಾಯದಲ್ಲಿರುವ “ಏಳು ಕಾಲಗಳು” 1914ರಲ್ಲಿ ಕೊನೆಯಾಯಿತು ಅಂತ ನಮಗೆ ಹೇಗೆ ಗೊತ್ತು?
“ದೇವರ ರಾಜ್ಯದ ಆಳ್ವಿಕೆ ಯಾವಾಗ ಆರಂಭವಾಯಿತು?—ಭಾಗ 2” (ಕಾವಲಿನಬುರುಜು, ಏಪ್ರಿಲ್ 1, 2015)
a ಈ ಪಾಠದಲ್ಲಿರುವ ಇದನ್ನೂ ನೋಡಿ ಭಾಗದ ಕೊನೆಯ ಎರಡು ಲೇಖನಗಳನ್ನ ನೋಡಿ.
-
-
ದೇವರ ಸರ್ಕಾರ ಏನೆಲ್ಲಾ ಮಾಡುತ್ತೆ?ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
-
-
ಪಾಠ 33
ದೇವರ ಸರ್ಕಾರ ಏನೆಲ್ಲಾ ಮಾಡುತ್ತೆ?
ದೇವರ ಸರ್ಕಾರ ಈಗಾಗಲೇ ಆಳ್ವಿಕೆ ನಡೆಸುತ್ತಿದೆ. ಆದಷ್ಟು ಬೇಗ ಅದು ಇಡೀ ಭೂಮಿ ಮೇಲೆ ಒಳ್ಳೇ ಬದಲಾವಣೆಗಳನ್ನ ಮಾಡುತ್ತೆ. ನಾವೀಗ ಅಂಥ ಕೆಲವು ಬದಲಾವಣೆಗಳ ಬಗ್ಗೆ ನೋಡೋಣ.
1. ದೇವರ ಸರ್ಕಾರ ಭೂಮಿ ಮೇಲೆ ಶಾಂತಿ ಮತ್ತು ನ್ಯಾಯವನ್ನ ಹೇಗೆ ತರುತ್ತೆ?
ದೇವರ ಸರ್ಕಾರದ ರಾಜನಾದ ಯೇಸು ಹರ್ಮಗೆದೋನ್ ಯುದ್ಧದ ಮೂಲಕ ಕೆಟ್ಟ ಜನರನ್ನ ಮತ್ತು ಈ ಲೋಕದ ಸರ್ಕಾರಗಳನ್ನ ನಾಶ ಮಾಡುತ್ತಾನೆ. (ಪ್ರಕಟನೆ 16:14, 16) ಆಗ “ಇನ್ನು ಸ್ವಲ್ಪ ಸಮಯದಲ್ಲೇ ಕೆಟ್ಟವರು ಇಲ್ಲದೆ ಹೋಗ್ತಾರೆ” ಅನ್ನೋ ಮಾತು ಸಂಪೂರ್ಣವಾಗಿ ನೆರವೇರುತ್ತೆ. (ಕೀರ್ತನೆ 37:10) ಹೀಗೆ ಯೇಸು ತನ್ನ ಸರ್ಕಾರದ ಮೂಲಕ ಇಡೀ ಭೂಮಿಯಲ್ಲಿ ಶಾಂತಿ ಮತ್ತು ನ್ಯಾಯವನ್ನ ತರುತ್ತಾನೆ.—ಯೆಶಾಯ 11:4 ಓದಿ.
2. ದೇವರ ಇಷ್ಟ ಭೂಮಿಯಲ್ಲಿ ನೆರವೇರುವಾಗ ಜೀವನ ಹೇಗಿರುತ್ತೆ?
ದೇವರ ಸರ್ಕಾರದಲ್ಲಿ “ನೀತಿವಂತರು ಭೂಮಿಯನ್ನ ಆಸ್ತಿಯಾಗಿ ಪಡ್ಕೊತಾರೆ, ಅವರು ಅದ್ರಲ್ಲಿ ಶಾಶ್ವತವಾಗಿ ವಾಸಿಸ್ತಾರೆ.” (ಕೀರ್ತನೆ 37:29) ಇಡೀ ಭೂಮಿಯಲ್ಲಿ ಯೆಹೋವನನ್ನು ಮತ್ತು ಜೊತೆಮಾನವರನ್ನು ಪ್ರೀತಿಸುವ ಜನರೇ ಇರುವಾಗ ಜೀವನ ಹೇಗಿರುತ್ತೆ ಅಂತ ಸ್ವಲ್ಪ ಯೋಚನೆ ಮಾಡಿ ನೋಡಿ. ಅಲ್ಲಿ ಯಾರಿಗೂ ಕಾಯಿಲೆ ಇರಲ್ಲ, ಎಲ್ಲರೂ ಖುಷಿಖುಷಿಯಾಗಿ ಇರುತ್ತಾರೆ, ಶಾಶ್ವತವಾಗಿ ಜೀವಿಸುತ್ತಾರೆ.
3. ಕೆಟ್ಟವರನ್ನೆಲ್ಲ ನಾಶ ಮಾಡಿದ ಮೇಲೆ ದೇವರ ಸರ್ಕಾರ ಏನು ಮಾಡುತ್ತೆ?
ಕೆಟ್ಟವರನ್ನ ನಾಶ ಮಾಡಿದ ಮೇಲೆ, ಯೇಸು ರಾಜನಾಗಿ 1,000 ವರ್ಷ ಆಳ್ವಿಕೆ ಮಾಡುತ್ತಾನೆ. ಆ ಸಮಯದಲ್ಲಿ ಮಾನವರೆಲ್ಲ ಪರಿಪೂರ್ಣರಾಗಲು ಯೇಸು ಮತ್ತು 1,44,000 ಜೊತೆ ರಾಜರು ಸಹಾಯ ಮಾಡುತ್ತಾರೆ. 1,000 ವರ್ಷದ ಆಳ್ವಿಕೆಯ ಕೊನೆಯಲ್ಲಿ ಇಡೀ ಭೂಮಿ ಸುಂದರ ಪರದೈಸ್ ಆಗುತ್ತೆ. ಅಲ್ಲಿ ಜನರು ಯೆಹೋವನ ನಿಯಮಗಳನ್ನ ಪಾಲಿಸುತ್ತಾ ಖುಷಿಖುಷಿಯಾಗಿ ಇರುತ್ತಾರೆ. ಯೇಸು ತನ್ನ ಅಧಿಕಾರವನ್ನ ವಾಪಸ್ ಯೆಹೋವ ದೇವರಿಗೆ ಕೊಡುತ್ತಾನೆ. ಆಗ ಮುಂಚೆಗಿಂತಲೂ ಯೆಹೋವನ ‘ಹೆಸ್ರು ಪವಿತ್ರವಾಗುತ್ತೆ.’ (ಮತ್ತಾಯ 6:9, 10) ಯೆಹೋವ ದೇವರ ತರ ಜನರನ್ನ ಪ್ರೀತಿಸುವ ಒಳ್ಳೇ ರಾಜ ಬೇರೆ ಯಾರೂ ಇಲ್ಲ ಅಂತ ಎಲ್ಲರಿಗೂ ಗೊತ್ತಾಗುತ್ತೆ. ನಂತರ ಸೈತಾನನನ್ನು, ಕೆಟ್ಟ ದೂತರನ್ನು ಮತ್ತು ಆತನ ಆಳ್ವಿಕೆಯನ್ನ ವಿರೋಧಿಸುವ ಪ್ರತಿಯೊಬ್ಬರನ್ನು ಯೆಹೋವನು ನಾಶ ಮಾಡುತ್ತಾನೆ. (ಪ್ರಕಟನೆ 20:7-10) ಹೀಗೆ ದೇವರ ಸರ್ಕಾರ ತರಲಿರುವ ಆಶೀರ್ವಾದಗಳು ಎಂದೆಂದೂ ಇರುತ್ತೆ.
ಹೆಚ್ಚನ್ನ ತಿಳಿಯೋಣ
ಬೈಬಲ್‌ನಲ್ಲಿ ತಿಳಿಸಲಾಗಿರುವ ಆಶೀರ್ವಾದಗಳನ್ನ ದೇವರು ತನ್ನ ಸರ್ಕಾರದ ಮೂಲಕ ತರುತ್ತಾನೆ ಅನ್ನೋದಕ್ಕಿರುವ ಆಧಾರಗಳನ್ನ ನೋಡೋಣ.
4. ದೇವರ ಸರ್ಕಾರ ಮಾನವ ಸರ್ಕಾರಗಳನ್ನ ನಾಶ ಮಾಡುತ್ತೆ
“ಮನುಷ್ಯ ಮನುಷ್ಯನ ಮೇಲೆ ಅಧಿಕಾರ ನಡೆಸಿ ಹಾನಿ ಮಾಡಿದ್ದಾನೆ.” (ಪ್ರಸಂಗಿ 8:9) ಈ ಹಾನಿಯ ಕೆಟ್ಟ ಪರಿಣಾಮಗಳನ್ನೆಲ್ಲ ಯೆಹೋವ ದೇವರು ತನ್ನ ಸರ್ಕಾರದ ಮೂಲಕ ಸರಿಪಡಿಸುತ್ತಾನೆ.
ದಾನಿಯೇಲ 2:44 ಮತ್ತು 2 ಥೆಸಲೊನೀಕ 1:6-8 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
ಯೆಹೋವ ದೇವರು ಮತ್ತು ಯೇಸು ಕ್ರಿಸ್ತನು ಮಾನವ ಸರ್ಕಾರಗಳಿಗೆ ಮತ್ತು ಅದನ್ನ ಬೆಂಬಲಿಸುವವರಿಗೆ ಏನು ಮಾಡುತ್ತಾರೆ?
ಯೆಹೋವ ದೇವರು ಮತ್ತು ಯೇಸು ಮಾಡುವ ತೀರ್ಪು ನ್ಯಾಯವಾಗಿರುತ್ತೆ ಅಂತ ನಿಮಗೆ ಅನಿಸುತ್ತಾ? ಯಾಕೆ ಹಾಗೆ ಅನಿಸುತ್ತೆ?
5. ಯೇಸು ಒಬ್ಬ ಒಳ್ಳೇ ರಾಜ
ದೇವರ ಸರ್ಕಾರದ ರಾಜನಾಗಿ ಯೇಸು ಭೂಮಿಯಲ್ಲಿರೋ ಜನರಿಗೆ ಅನೇಕ ವಿಧಗಳಲ್ಲಿ ಸಹಾಯ ಮಾಡುತ್ತಾನೆ. ಜನರಿಗೆ ಸಹಾಯ ಮಾಡೋ ಮನಸ್ಸು ಯೇಸುವಿಗಿದೆ ಮತ್ತು ಅದನ್ನ ಮಾಡುವ ಶಕ್ತಿಯನ್ನೂ ದೇವರು ಆತನಿಗೆ ಕೊಟ್ಟಿದ್ದಾನೆ. ಯೇಸು ಅದನ್ನ ಈಗಾಗಲೇ ಹೇಗೆ ಮಾಡಿದ್ದಾನೆ ಅಂತ ತಿಳಿಯಲು ಈ ವಿಡಿಯೋ ನೋಡಿ.
ಮುಂದೆ ದೇವರ ಸರ್ಕಾರದಲ್ಲಿ ಆತನು ಏನು ಮಾಡ್ತಾನೆ ಅಂತ ಯೇಸು ಭೂಮಿಯಲ್ಲಿದ್ದಾಗ ತೋರಿಸಿಕೊಟ್ಟನು. ಮುಂದೆ ಕೊಡಲಾಗಿರುವ ಯಾವ ಆಶೀರ್ವಾದಗಳನ್ನ ನೀವು ನೋಡಕ್ಕೆ ಇಷ್ಟಪಡುತ್ತೀರಾ? ಆ ಆಶೀರ್ವಾದಗಳ ಬಗ್ಗೆ ತಿಳಿಯಲು ಕೊಡಲಾಗಿರುವ ವಚನಗಳನ್ನ ಸಹ ಓದಿ.
ಯೇಸು ಭೂಮಿಯಲ್ಲಿದ್ದಾಗ . . .
ಯೇಸು ಸ್ವರ್ಗದಿಂದ ಆಳುವಾಗ . . .
ಚಂಡಮಾರುತಗಳನ್ನ ನಿಯಂತ್ರಿಸಿದ್ದಾನೆ.—ಮಾರ್ಕ 4:36-41.
ಭೂಮಿಯನ್ನ ಸುಂದರವಾಗಿ ಮಾಡ್ತಾನೆ.—ಯೆಶಾಯ 35:1, 2.
ಸಾವಿರಾರು ಜನರಿಗೆ ಅದ್ಭುತಕರವಾಗಿ ಊಟ ಕೊಟ್ಟಿದ್ದಾನೆ.—ಮತ್ತಾಯ 14:17-21.
ಬೇಕಾದಷ್ಟು ಆಹಾರವನ್ನ ಕೊಡ್ತಾನೆ.—ಕೀರ್ತನೆ 72:16.
ಅನೇಕ ಜನರ ಕಾಯಿಲೆಗಳನ್ನ ಗುಣಪಡಿಸಿದ್ದಾನೆ.—ಲೂಕ 18:35-43.
ಎಲ್ಲಾ ಜನರಿಗೆ ಒಳ್ಳೇ ಆರೋಗ್ಯವನ್ನ ಕೊಡ್ತಾನೆ.—ಯೆಶಾಯ 33:24.
ಸತ್ತವರನ್ನ ಎಬ್ಬಿಸಿದ್ದಾನೆ.—ಲೂಕ 8:49-55.
ಸತ್ತವರನ್ನ ಎಬ್ಬಿಸುತ್ತಾನೆ, ಸಾವನ್ನ ತೆಗೆದುಹಾಕ್ತಾನೆ.—ಪ್ರಕಟನೆ 21:3, 4.
6. ದೇವರ ಸರ್ಕಾರ ಸುಂದರ ಭವಿಷ್ಯವನ್ನ ತರುತ್ತೆ
ಜನರು ಹೇಗೆ ಜೀವನ ಮಾಡಬೇಕು ಅಂತ ಯೆಹೋವ ದೇವರು ಅಂದುಕೊಂಡಿದ್ದನೋ ಅದನ್ನ ದೇವರ ಸರ್ಕಾರದ ಮೂಲಕ ನಿಜ ಮಾಡುತ್ತಾನೆ. ಆಗ ಜನರು ಇದೇ ಭೂಮಿಯಲ್ಲಿ ಎಂದೆಂದೂ ಖುಷಿಖುಷಿಯಾಗಿ ಇರುತ್ತಾರೆ. ಯೆಹೋವ ದೇವರು ತನ್ನ ಮಗನ ಮೂಲಕ ಏನು ಮಾಡಲಿದ್ದಾನೆ ಅನ್ನೋದನ್ನ ತಿಳಿಯಲು ವಿಡಿಯೋ ನೋಡಿ.
ಕೀರ್ತನೆ 145:16 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ಯೆಹೋವ ದೇವರು ‘ಎಲ್ಲ ಜೀವಿಗಳ ಬಯಕೆಯನ್ನ ಈಡೇರಿಸುತ್ತಾನೆ’ ಅಂತ ಗೊತ್ತಾದಾಗ ನಿಮಗೆ ಹೇಗೆ ಅನಿಸುತ್ತೆ?
ಕೆಲವರು ಹೀಗಂತಾರೆ: “ಎಲ್ಲರೂ ಕೈ ಜೋಡಿಸಿದರೆ, ಲೋಕದ ಸಮಸ್ಯೆಗಳನ್ನ ಸರಿ ಮಾಡಬಹುದು.”
ಮನುಷ್ಯರಿಂದ ಸರಿ ಮಾಡಲು ಆಗದಿರುವ ಯಾವೆಲ್ಲ ಸಮಸ್ಯೆಗಳನ್ನ ದೇವರ ಸರ್ಕಾರ ಸರಿ ಮಾಡುತ್ತೆ?
ನಾವೇನು ಕಲಿತ್ವಿ
ದೇವರ ಸರ್ಕಾರ ಭೂಮಿಯನ್ನ ಪರದೈಸಾಗಿ ಮಾಡುತ್ತೆ. ಅಲ್ಲಿ ಒಳ್ಳೇ ಜನರು ಮಾತ್ರ ಇರುತ್ತಾರೆ, ಅವರು ಯೆಹೋವ ದೇವರನ್ನ ಯಾವಾಗ್ಲೂ ಆರಾಧಿಸುತ್ತಾರೆ.
ನೆನಪಿದೆಯಾ
ದೇವರ ಸರ್ಕಾರ ಯೆಹೋವನ ಹೆಸರನ್ನ ಹೇಗೆ ಪವಿತ್ರ ಮಾಡುತ್ತೆ?
ಬೈಬಲ್‌ನಲ್ಲಿ ಕೊಡಲಾಗಿರುವ ಎಲ್ಲಾ ಆಶೀರ್ವಾದಗಳು ಪರದೈಸಿನಲ್ಲಿ ನಿಜವಾಗುತ್ತೆ ಅಂತ ಹೇಗೆ ನಂಬಬಹುದು?
ದೇವರ ಸರ್ಕಾರ ತರಲಿರುವ ಯಾವ ಆಶೀರ್ವಾದಗಳನ್ನ ನೋಡೋಕೆ ನೀವು ಇಷ್ಟಪಡುತ್ತೀರಾ?
ಇದನ್ನೂ ನೋಡಿ
ಹರ್ಮಗೆದೋನ್ ಅಂದರೇನು ಅನ್ನೋದನ್ನ ತಿಳಿಯಿರಿ.
ಯೇಸು ಹೇಳಿದ “ಮಹಾ ಸಂಕಟ” ಬಂದಾಗ ಯಾವೆಲ್ಲ ಘಟನೆಗಳು ನಡಿಯುತ್ತೆ ಅಂತ ತಿಳ್ಕೊಳ್ಳಿ.—ಮತ್ತಾಯ 24:21.
ನೀವು ನಿಮ್ಮ ಕುಟುಂಬದವರ ಜೊತೆ ಪರದೈಸಲ್ಲಿ ಇದ್ದೀರಾ ಅಂತ ಚಿತ್ರಿಸಿಕೊಳ್ಳಿ.
ರಾಜಕೀಯ ಹೋರಾಟಗಳನ್ನ ಮಾಡ್ತಿದ್ದ ಒಬ್ಬ ವ್ಯಕ್ತಿಗೆ ತುಂಬ ಪ್ರಶ್ನೆಗಳು ಇತ್ತು. ಆ ಪ್ರಶ್ನೆಗಳಿಗೆ ಹೇಗೆ ಉತ್ತರ ಸಿಕ್ಕಿತು ಅಂತ “ಜೀವನದ ಬಗ್ಗೆ ಇರುವ ಅನೇಕ ಪ್ರಶ್ನೆಗಳು ನನ್ನನ್ನ ಯಾವಾಗ್ಲೂ ಕಾಡ್ತಾ ಇತ್ತು” ಅನ್ನೋ ಲೇಖನದಲ್ಲಿ ತಿಳಿಯಿರಿ.
-