ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lff ಪಾಠ 31
  • ದೇವರ ಸರ್ಕಾರ ಅಂದರೇನು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೇವರ ಸರ್ಕಾರ ಅಂದರೇನು?
  • ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಹೆಚ್ಚನ್ನ ತಿಳಿಯೋಣ
  • ನಾವೇನು ಕಲಿತ್ವಿ
  • ಇದನ್ನೂ ನೋಡಿ
  • ದೇವರ ರಾಜ್ಯ ಎಂದರೇನು?
    ಬೈಬಲ್‌ ನಮಗೆ ಏನು ಕಲಿಸುತ್ತದೆ?
  • ದೇವರ ರಾಜ್ಯ ಎಂದರೇನು?
    ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?
  • ದೇವರ ಸರ್ಕಾರ ಏನೆಲ್ಲಾ ಮಾಡುತ್ತೆ?
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
  • ದೇವರ ರಾಜ್ಯವು ಆಳುತ್ತದೆ
    ನಿತ್ಯಜೀವಕ್ಕೆ ನಡೆಸುವ ಜ್ಞಾನ
ಇನ್ನಷ್ಟು
ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
lff ಪಾಠ 31
ಪಾಠ 31. ಯೆಹೋವನ ಮಹಿಮೆ ಮುಂದೆ ರಾಜನಾಗಿರುವ ಯೇಸು ಕ್ರಿಸ್ತ ಇದ್ದಾನೆ.

ಪಾಠ 31

ದೇವರ ಸರ್ಕಾರ ಅಂದರೇನು?

ಮುದ್ರಿತ ಸಂಚಿಕೆ
ಮುದ್ರಿತ ಸಂಚಿಕೆ
ಮುದ್ರಿತ ಸಂಚಿಕೆ

ದೇವರ ಸರ್ಕಾರದ ಬಗ್ಗೆ ಇರೋ ಸಂದೇಶವೇ ಬೈಬಲಿನಲ್ಲಿರೋ ಮುಖ್ಯ ವಿಷಯ. ಯೆಹೋವ ದೇವರು ಭೂಮಿಯನ್ನ ಸೃಷ್ಟಿ ಮಾಡಿದಾಗ ಆತನಿಗೆ ಒಂದು ಉದ್ದೇಶ ಇತ್ತು. ಆ ಉದ್ದೇಶ ಈ ಸರ್ಕಾರದ ಮೂಲಕ ನಿಜ ಆಗಲಿದೆ. ಹಾಗಾದರೆ ದೇವರ ಸರ್ಕಾರ ಅಂದರೇನು? ಅದು ಈಗ ಆಳ್ವಿಕೆ ನಡೆಸುತ್ತಿದೆ ಅಂತ ನಮಗೆ ಹೇಗೆ ಗೊತ್ತು? ಅದು ಈಗಾಗಲೇ ಏನೆಲ್ಲಾ ಮಾಡಿದೆ? ಮುಂದೆ ಏನೆಲ್ಲಾ ಮಾಡಲಿಕ್ಕಿದೆ? ಈ ಪಾಠದಲ್ಲಿ ಮತ್ತು ಮುಂದಿನ ಎರಡು ಪಾಠಗಳಲ್ಲಿ ಈ ಪ್ರಶ್ನೆಗಳಿಗೆ ಉತ್ತರವನ್ನ ತಿಳಿಯಲಿದ್ದೇವೆ.

1. ದೇವರ ಸರ್ಕಾರ ಅಂದರೇನು ಮತ್ತು ಅದರ ರಾಜ ಯಾರು?

ಯೆಹೋವ ದೇವರು ಏರ್ಪಾಡು ಮಾಡಿರುವ ಸರ್ಕಾರನೇ ದೇವರ ಸರ್ಕಾರ. ಅದರ ರಾಜ ಯೇಸು ಕ್ರಿಸ್ತ. ಆತನು ಸ್ವರ್ಗದಿಂದ ಆಳುತ್ತಾನೆ. (ಮತ್ತಾಯ 4:17; ಯೋಹಾನ 18:36) ಯೇಸು “ರಾಜನಾಗಿ ಸದಾಕಾಲ ಆಳ್ತಾನೆ” ಅಂತ ಬೈಬಲ್‌ ಹೇಳುತ್ತೆ. (ಲೂಕ 1:32, 33) ಆತನು ಭೂಮಿಯಲ್ಲಿರುವ ಎಲ್ಲರ ಮೇಲೆ ಆಳ್ವಿಕೆ ಮಾಡುತ್ತಾನೆ.

2. ಯೇಸುವಿನ ಜೊತೆ ಯಾರು ಆಳ್ವಿಕೆ ಮಾಡುತ್ತಾರೆ?

ಯೇಸು ಒಬ್ಬನೇ ಆಳ್ವಿಕೆ ಮಾಡಲ್ಲ. ಆತನ ಜೊತೆ ‘ಎಲ್ಲ ಭಾಷೆ, ಜಾತಿ, ದೇಶದಿಂದ ಬಂದವರು ರಾಜರಾಗಿ ಈ ಭೂಮಿಯನ್ನ ಆಳ್ತಾರೆ.’ (ಪ್ರಕಟನೆ 5:9, 10) ಯೇಸುವಿಗೆ ಲಕ್ಷಾಂತರ ಜನ ಶಿಷ್ಯರಿದ್ದಾರೆ. ಅವರೆಲ್ಲರೂ ಸೇರಿ ಭೂಮಿಯನ್ನ ಆಳುತ್ತಾರಾ? ಇಲ್ಲ. 1,44,000 ಜನರು ಮಾತ್ರ ಯೇಸುವಿನ ಜೊತೆ ಸ್ವರ್ಗದಲ್ಲಿ ಆಳುತ್ತಾರೆ. (ಪ್ರಕಟನೆ 14:1-4 ಓದಿ.) ಉಳಿದವರು ಇದೇ ಭೂಮಿಯಲ್ಲಿ ದೇವರ ಸರ್ಕಾರದ ಪ್ರಜೆಗಳಾಗಿರುತ್ತಾರೆ.—ಕೀರ್ತನೆ 37:29.

3. ದೇವರ ಸರ್ಕಾರ ಹೇಗೆ ಮಾನವ ಸರ್ಕಾರಗಳಿಗಿಂತ ಶ್ರೇಷ್ಠವಾಗಿದೆ?

ಮಾನವ ಅಧಿಕಾರಿಗಳು ಒಳ್ಳೇದನ್ನ ಮಾಡೋಕೆ ಪ್ರಯತ್ನಿಸುತ್ತಾರೆ. ಆದರೆ ಅವರು ಅಂದುಕೊಂಡ ಹಾಗೆ ಪ್ರತಿಯೊಂದನ್ನ ಮಾಡೋ ಸಾಮರ್ಥ್ಯ ಅಥವಾ ಶಕ್ತಿ ಅವರಿಗೆ ಇಲ್ಲ. ಅವರ ಆಳ್ವಿಕೆ ಮುಗಿದ ಮೇಲೆ ಇನ್ನೊಂದು ಸರ್ಕಾರ ಆಳ್ವಿಕೆ ಮಾಡುತ್ತೆ. ಅವರು ಸ್ವಾರ್ಥಿಗಳಾಗಿ ಇರಬಹುದು, ಜನರಿಗೆ ಒಳ್ಳೇದನ್ನ ಮಾಡೋಕೆ ಬಯಸದೇ ಇರಬಹುದು. ಆದರೆ ದೇವರ ಸರ್ಕಾರದ ರಾಜ ಯೇಸು ಹಾಗಲ್ಲ. ಆತನ ಅಧಿಕಾರವನ್ನ ಯಾರಿಂದಾನೂ ಕಸಿದುಕೊಳ್ಳೋಕೆ ಆಗಲ್ಲ. ಆತನೇ ಶಾಶ್ವತವಾಗಿ ರಾಜನಾಗಿ ಇರುತ್ತಾನೆ. “ಸ್ವರ್ಗದ ದೇವರು ಒಂದು ಆಡಳಿತ ತರ್ತಾನೆ. ಅದಕ್ಕೆ ನಾಶನೇ ಇಲ್ಲ” ಅಂತ ಬೈಬಲ್‌ ತಿಳಿಸುತ್ತೆ. (ದಾನಿಯೇಲ 2:44) ಯೇಸು ಇಡೀ ಭೂಮಿಯ ಮೇಲೆ ಆಳ್ವಿಕೆಯನ್ನ ಮಾಡುತ್ತಾನೆ. ಆತನು ಯಾರಿಗೂ ಭೇದಭಾವ ಮಾಡಲ್ಲ. ಪ್ರೀತಿ, ಕರುಣೆ, ನ್ಯಾಯದಿಂದ ನಡೆದುಕೊಳ್ಳುತ್ತಾನೆ ಮತ್ತು ತನ್ನಂತೆಯೇ ನಡೆದುಕೊಳ್ಳಲು ಜನರಿಗೆ ಕಲಿಸುತ್ತಾನೆ.—ಯೆಶಾಯ 11:9 ಓದಿ.

ಹೆಚ್ಚನ್ನ ತಿಳಿಯೋಣ

ದೇವರ ಸರ್ಕಾರ ಎಲ್ಲಾ ಮಾನವ ಸರ್ಕಾರಗಳಿಗಿಂತ ಯಾಕೆ ಶ್ರೇಷ್ಠವಾಗಿದೆ ಅಂತ ತಿಳಿಯಿರಿ.

ಯೇಸು ಕ್ರಿಸ್ತನು ಸ್ವರ್ಗದಿಂದ ಇಡೀ ಭೂಮಿಯನ್ನ ಆಳುತ್ತಿದ್ದಾನೆ. ಆತನ ಜೊತೆ ಆಳ್ವಿಕೆ ಮಾಡುವವರು ಹಿಂದೆ ಕೂತಿದ್ದಾರೆ. ಯೆಹೋವ ದೇವರ ಮಹಿಮೆ ಅವರ ಮೇಲೆ ಪ್ರಕಾಶಿಸುತ್ತಿದೆ.

4. ದೇವರ ಸರ್ಕಾರ ಇಡೀ ಭೂಮಿಯ ಮೇಲೆ ಆಳ್ವಿಕೆ ಮಾಡುತ್ತೆ

ಬೇರೆಲ್ಲಾ ಅಧಿಕಾರಿಗಳಿಗಿಂತ ಯೇಸುವಿಗೆ ಹೆಚ್ಚು ಅಧಿಕಾರ ಇದೆ. ಮತ್ತಾಯ 28:18 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

  • ಮಾನವರ ಅಧಿಕಾರಕ್ಕಿಂತ ಯೇಸುವಿನ ಅಧಿಕಾರ ಹೇಗೆ ಶ್ರೇಷ್ಠವಾಗಿದೆ?

ಮಾನವ ಸರ್ಕಾರಗಳು ಆಗಾಗ ಬದಲಾಗುತ್ತಾ ಇರುತ್ತೆ. ಅಷ್ಟೇ ಅಲ್ಲ, ಅವು ಭೂಮಿಯ ಒಂದೊಂದು ಕಡೆಗಳಲ್ಲಿ ಮಾತ್ರ ಆಳ್ವಿಕೆ ಮಾಡುತ್ತವೆ. ಆದರೆ ದೇವರ ಸರ್ಕಾರದ ಬಗ್ಗೆ ಏನು? ದಾನಿಯೇಲ 7:14 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:

  • ದೇವರ ಸರ್ಕಾರ “ಯಾವತ್ತೂ ನಾಶ ಆಗಲ್ಲ” ಇದರಿಂದ ನಮಗೇನು ಪ್ರಯೋಜನ ಇದೆ?

  • ದೇವರ ಸರ್ಕಾರ ಇಡೀ ಭೂಮಿ ಮೇಲೆ ಆಳ್ವಿಕೆ ಮಾಡುವುದು ಯಾಕೆ ಒಳ್ಳೇದು?

5. ಮಾನವ ಆಳ್ವಿಕೆಗೆ ನಮ್ಮ ಸಮಸ್ಯೆಗಳನ್ನ ತೆಗೆದುಹಾಕೋಕೆ ಆಗಲ್ಲ

ದೇವರ ಸರ್ಕಾರ ಯಾಕೆ ಮಾನವ ಸರ್ಕಾರಗಳನ್ನ ತೆಗೆದುಹಾಕಬೇಕು? ವಿಡಿಯೋ ನೋಡಿ, ನಂತರ ಪ್ರಶ್ನೆಯನ್ನ ಚರ್ಚಿಸಿ.

ವಿಡಿಯೋ: ದೇವರ ರಾಜ್ಯ ಅಂದರೇನು?—ತುಣುಕು (1:41)

  • ಮಾನವ ಆಳ್ವಿಕೆಯಿಂದಾಗಿ ಯಾವೆಲ್ಲಾ ಕೆಟ್ಟ ಪರಿಣಾಮಗಳಾಗಿವೆ?

ಪ್ರಸಂಗಿ 8:9 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:

  • ಮಾನವ ಸರ್ಕಾರಗಳ ಬದಲು ದೇವರ ಸರ್ಕಾರ ಬರಲೇಬೇಕು ಅಂತ ನಿಮಗೆ ಅನಿಸುತ್ತಾ? ಯಾಕೆ?

6. ದೇವರ ಸರ್ಕಾರದಲ್ಲಿ ಆಳ್ವಿಕೆ ಮಾಡುವವರು ನಮ್ಮನ್ನ ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ

ನಮ್ಮ ರಾಜನಾಗಿರುವ ಯೇಸು ಭೂಮಿಗೆ ಬಂದು ಜೀವನ ಮಾಡಿದ್ರಿಂದ ‘ನಮ್ಮ ಬಲಹೀನತೆಗಳನ್ನ ಅರ್ಥ ಮಾಡಿಕೊಳ್ಳುತ್ತಾನೆ.’ (ಇಬ್ರಿಯ 4:15) ಯೇಸುವಿನ ಜೊತೆ ಆಳಲಿರುವ 1,44,000 ನಂಬಿಗಸ್ತ ಸ್ತ್ರೀ ಪುರುಷರನ್ನ ಯೆಹೋವ ದೇವರು ‘ಎಲ್ಲ ಭಾಷೆ, ಜಾತಿ, ದೇಶದಿಂದ’ ಆರಿಸಿಕೊಂಡಿದ್ದಾನೆ.—ಪ್ರಕಟನೆ 5:9.

  • ಯೇಸು ಮತ್ತು ಆತನ ಜೊತೆ ಆಳ್ವಿಕೆ ಮಾಡುವವರು ನಮ್ಮ ಭಾವನೆಗಳನ್ನ, ಸಮಸ್ಯೆಗಳನ್ನ ಅರ್ಥ ಮಾಡಿಕೊಳ್ಳುತ್ತಾರೆ ಅಂತ ಗೊತ್ತಾದಾಗ ನಿಮಗೆ ಹೇಗನಿಸುತ್ತೆ? ಯಾಕೆ?

ಬೇರೆ ಬೇರೆ ಹಿನ್ನೆಲೆ ಮತ್ತು ಕಾಲಗಳಲ್ಲಿ ಜೀವಿಸಿದ್ದ ಅಭಿಷಿಕ್ತ ಸ್ತ್ರೀ ಪುರುಷರು.

ಯೇಸುವಿನ ಜೊತೆ ಆಳಲು ಎಲ್ಲಾ ಹಿನ್ನೆಲೆಯಿಂದ ಸ್ತ್ರೀ ಪುರುಷರನ್ನ ಯೆಹೋವನು ಆರಿಸಿದ್ದಾನೆ

7. ದೇವರ ಸರ್ಕಾರದ ನಿಯಮಗಳು ಶ್ರೇಷ್ಠವಾಗಿವೆ

ತಮ್ಮ ಪ್ರಜೆಗಳ ಪ್ರಯೋಜನಕ್ಕಾಗಿ, ಸಂರಕ್ಷಣೆಗಾಗಿ ಸರ್ಕಾರಗಳು ನಿಯಮಗಳನ್ನ ಮಾಡ್ತವೆ. ಅದೇ ರೀತಿ ದೇವರ ಸರ್ಕಾರಕ್ಕೂ ನಿಯಮಗಳಿವೆ. ಅದನ್ನ ನಾವೆಲ್ಲರೂ ಪಾಲಿಸಲೇಬೇಕು. 1 ಕೊರಿಂಥ 6:9-11 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:

  • ಎಲ್ಲರೂ ದೇವರ ನೀತಿನಿಯಮಗಳನ್ನ ಪಾಲಿಸುವಾಗ ಈ ಭೂಮಿ ಹೇಗಿರುತ್ತೆ ಅಂತ ನಿಮಗನಿಸುತ್ತೆ?a

  • ತನ್ನ ಪ್ರಜೆಗಳೆಲ್ಲರೂ ತನ್ನ ನಿಯಮಗಳನ್ನ ಪಾಲಿಸಬೇಕು ಅಂತ ಯೆಹೋವ ದೇವರು ಬಯಸೋದು ಸರಿನಾ? ನಿಮಗೇನು ಅನಿಸುತ್ತೆ?

  • ಯೆಹೋವನ ನಿಯಮಗಳನ್ನ ಪಾಲಿಸದೇ ತಪ್ಪು ಮಾಡುತ್ತಿದ್ದ ವ್ಯಕ್ತಿಗಳು ಸಹ ಬದಲಾಗಬಹುದು ಅಂತ ನಿಮಗನಿಸುತ್ತಾ?—ವಚನ 11 ನೋಡಿ.

ಬ್ಯುಸಿಯಾಗಿರುವ ಟ್ರಾಫಿಕ್ಕನ್ನು ನಿಯಂತ್ರಿಸುತ್ತಿರುವ ಪೊಲೀಸ್‌ ಅಧಿಕಾರಿ. ಬೇರೆ-ಬೇರೆ ವಯಸ್ಸಿನ ಜನರು ರಸ್ತೆಯಲ್ಲಿ ಹೋಗುತ್ತಿದ್ದಾರೆ.

ಜನರಿಗೆ ಪ್ರಯೋಜನ ಮತ್ತು ಸಂರಕ್ಷಣೆ ಆಗಲಿ ಅಂತ ಸರ್ಕಾರಗಳು ನಿಯಮಗಳನ್ನ ಮಾಡ್ತವೆ. ಅದೇ ತರ ನಮ್ಮ ಪ್ರಯೋಜನಕ್ಕಾಗಿನೇ ದೇವರ ಸರ್ಕಾರ ಕೂಡ ಮಾನವ ಸರ್ಕಾರಕ್ಕಿಂತ ಶ್ರೇಷ್ಠವಾದ ನಿಯಮಗಳನ್ನ ಮಾಡಿದೆ

ಕೆಲವರು ಹೀಗೆ ಕೇಳಬಹುದು: “ದೇವರ ಸರ್ಕಾರ ಅಂದರೇನು?”

  • ನೀವೇನು ಹೇಳುತ್ತೀರಾ?

ನಾವೇನು ಕಲಿತ್ವಿ

ದೇವರ ಸರ್ಕಾರ ಸ್ವರ್ಗದಲ್ಲಿದೆ, ಅಲ್ಲಿಂದ ಇಡೀ ಭೂಮಿಯನ್ನ ಆಳ್ವಿಕೆ ಮಾಡುತ್ತೆ.

ನೆನಪಿದೆಯಾ

  • ದೇವರ ಸರ್ಕಾರದಲ್ಲಿ ಯಾರೆಲ್ಲಾ ಆಳ್ವಿಕೆ ಮಾಡ್ತಾರೆ?

  • ದೇವರ ಸರ್ಕಾರ ಮಾನವ ಸರ್ಕಾರಗಳಿಗಿಂತ ಶ್ರೇಷ್ಠವಾಗಿದೆ ಅಂತ ಹೇಗೆ ಹೇಳಬಹುದು?

  • ಯೆಹೋವ ದೇವರು ತನ್ನ ಪ್ರಜೆಗಳಿಂದ ಏನು ಬಯಸುತ್ತಾನೆ?

ಇದನ್ನ ಮಾಡಿ ನೋಡಿ

ಇದನ್ನೂ ನೋಡಿ

ದೇವರ ಸರ್ಕಾರ ಎಲ್ಲಿದೆ ಅಂತ ಯೇಸು ಕಲಿಸಿದನು?

“ದೇವರ ರಾಜ್ಯ ಇರೋದು ನಿಮ್ಮ ಹೃದಯದಲ್ಲಾ?” (jw.org ಲೇಖನ)

ಯೆಹೋವನ ಸಾಕ್ಷಿಗಳು ಮಾನವ ಸರ್ಕಾರಗಳಿಗಿಂತ ದೇವರ ಸರ್ಕಾರಕ್ಕೆ ಯಾಕೆ ನಿಷ್ಠೆ ತೋರಿಸುತ್ತಾರೆ?

ದೇವರ ಪಕ್ಷ ನಿಂತವರು (1:43)

ಯೇಸುವಿನ ಜೊತೆ ಆಳ್ವಿಕೆ ಮಾಡೋಕೆ ಯೆಹೋವ ದೇವರು ಆರಿಸಿರುವ 1,44,000 ಜನರ ಬಗ್ಗೆ ಬೈಬಲ್‌ ಏನು ಹೇಳುತ್ತೆ ಅಂತ ತಿಳಿದುಕೊಳ್ಳಿ.

“ಯಾರು ಸ್ವರ್ಗಕ್ಕೆ ಹೋಗುತ್ತಾರೆ?” (jw.org ಲೇಖನ)

ಅನ್ಯಾಯ ಇಲ್ಲದಿರೋ ಲೋಕವನ್ನ ದೇವರು ಮಾತ್ರ ತರಲು ಸಾಧ್ಯ ಅಂತ ಜೈಲಿನಲ್ಲಿದ್ದ ಒಬ್ಬ ಸ್ತ್ರೀಗೆ ಹೇಗೆ ಗೊತ್ತಾಯ್ತು?

“ಅನ್ಯಾಯ ಇಲ್ಲದಿರೋ ಲೋಕದ ಬಗ್ಗೆ ನಾನು ತಿಳಿದುಕೊಂಡೆ” (ಎಚ್ಚರ! ಲೇಖನ)

a ಇಂಥ ಕೆಲವು ನೀತಿನಿಯಮಗಳ ಬಗ್ಗೆ ಭಾಗ 3ರಲ್ಲಿ ಕಲಿಯಲಿದ್ದೇವೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ