ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w13 4/15 ಪು. 32
  • ನಿಮಗೆ ತಿಳಿದಿತ್ತೋ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಮಗೆ ತಿಳಿದಿತ್ತೋ?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
  • ಅನುರೂಪ ಮಾಹಿತಿ
  • ಸಭೆಯಾಗಿ ಕೂಡಿಬರುವುದನ್ನು ಬಿಟ್ಟು ಬಿಡಬೇಡಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
  • ಕ್ರೈಸ್ತಪ್ರಪಂಚವು ಈ ಲೋಕದ ಒಂದು ಭಾಗವಾದ ವಿಧ
    ಕಾವಲಿನಬುರುಜು—1993
  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
w13 4/15 ಪು. 32

ನಿಮಗೆ ತಿಳಿದಿತ್ತೋ?

ಕ್ರಿ.ಶ. 70ರ ನಂತರ ಯೆರೂಸಲೇಮ್‌ ದೇವಾಲಯವನ್ನು ಮತ್ತೆ ಯಾವತ್ತಾದರೂ ಕಟ್ಟಲಾಯಿತೇ?

ಯೆಹೋವ ದೇವರ ಆಲಯ ಕಲ್ಲಿನ ಮೇಲೆ ಕಲ್ಲು ಉಳಿಯದಂತೆ ಸಂಪೂರ್ಣ ಧ್ವಂಸಗೊಳ್ಳುವುದು ಅಂತ ಯೇಸು ಮುಂಚೆನೇ ತಿಳಿಸಿದ್ದರು. ಕ್ರಿ.ಶ. 70ರಲ್ಲಿ ಯೇಸು ಹೇಳಿದಂತೆ ನಡೆಯಿತು. ಆ ವರ್ಷದಲ್ಲಿ ರೋಮನ್‌ ಚಕ್ರವರ್ತಿ ಟೈಟಸ್‌ ಯೆರೂಸಲೇಮನ್ನು ಧ್ವಂಸಗೊಳಿಸಿದ. (ಮತ್ತಾ. 24:2) ನಂತರ ಸಾಮ್ರಾಟ ಜೂಲಿಯನ್‌ ಆಲಯವನ್ನು ಪುನಃ ಕಟ್ಟಲು ಯೋಜನೆ ಮಾಡಿದ.

ಇವನು ರೋಮ್‌ನ ಕೊನೆಯ ಸಾಮ್ರಾಟ. ಮಹಾ ಕಾನ್‌ಸ್ಟೆಂಟೀನ್‌ನ ಸೋದರಳಿಯ ಆಗಿರುವ ಈ ಜೂಲಿಯನ್‌ ಕ್ರೈಸ್ತರೆನ್ನಿಸಿಕೊಳ್ಳುವವರಿಂದ ಕ್ರೈಸ್ತ ಶಿಕ್ಷಣ ಪಡೆದ. ಆದರೆ ಕ್ರಿ.ಶ. 361ರಲ್ಲಿ ಸಾಮ್ರಾಟನಾದಾಗ ಆ ಶಿಕ್ಷಣವನ್ನು ತೊರೆದ. ಹಾಗಾಗಿ ಇತಿಹಾಸದ ಪುಟಗಳಲ್ಲಿ ಇವನನ್ನು “ಧರ್ಮಭ್ರಷ್ಟ” ಎಂದು ಹೇಳಲಾಗಿದೆ.

ಜೂಲಿಯನ್‌ ಕ್ರೈಸ್ತ ಧರ್ಮವನ್ನು ದ್ವೇಷಿಸುತ್ತಿದ್ದ. ಇದಕ್ಕೆ ಒಂದು ಕಾರಣ ಅವನು ಆರು ವರ್ಷದವನಾಗಿದ್ದಾಗ ಚರ್ಚಿನ ಮುಖಂಡರು ಅವನ ತಂದೆ ಹಾಗೂ ಸಂಬಂಧಿಕರನ್ನು ಕೊಲೆಮಾಡಿದ್ದರು. ಒಂದುವೇಳೆ ದೇವಾಲಯವನ್ನು ಪುನಃ ಕಟ್ಟಿದ್ರೆ ಯೇಸು ಸುಳ್ಳು ಪ್ರವಾದಿ ಅಂತ ರುಜುವಾಗುತ್ತೆ ಎಂದು ಜೂಲಿಯನ್‌ ನೆನಸಿರಬೇಕು. ಅದಕ್ಕೆ ದೇವಾಲಯವನ್ನು ಕಟ್ಟಲು ಯೆಹೂದ್ಯರನ್ನು ಪ್ರೋತ್ಸಾಹಿಸಿದನು ಅನ್ನೋದು ಚರ್ಚ್‌ ಇತಿಹಾಸಗಾರರ ಅಂಬೋಣ.a

ದೇವಾಲಯವನ್ನು ಪುನರ್‌ನಿರ್ಮಾಣ ಮಾಡಲು ಜೂಲಿಯನ್‌ ಬಯಸಿದ ಅನ್ನೋದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಅವನು ಕಟ್ಟಲು ಆರಂಭಿಸಿದನಾ, ಕಟ್ಟಲು ಆರಂಭಿಸಿದ್ದರೆ ಯಾಕೆ ನಿಂತುಹೋಯ್ತು ಅನ್ನುವುದರ ಬಗ್ಗೆ ಯಾವ ಮಾಹಿತಿಯೂ ಇಲ್ಲ. ಒಂದು ವಿಷಯ ಮಾತ್ರ ಖಚಿತ ಏನೆಂದರೆ ಜೂಲಿಯನ್‌ ಸಾಮ್ರಾಟನಾಗಿ ಎರಡು ವರ್ಷದೊಳಗೆ ಕೊಲೆಯಾದ. ಹಾಗಾದರೆ ಅವನ ಜೊತೆ ಅವನ ಯೋಜನೆಯೂ ಮಣ್ಣಾಯಿತು.

[ಪಾದಟಿಪ್ಪಣಿ]

a ದೇವಾಲಯ ಪುನರ್‌ನಿರ್ಮಾಣ ಆಗುವುದೇ ಇಲ್ಲ ಅಂತ ಯೇಸು ಯಾವತ್ತೂ ಹೇಳಲಿಲ್ಲ. ಬದಲಿಗೆ ಸಂಪೂರ್ಣ ಧ್ವಂಸವಾಗುತ್ತೆ ಅಂತ ಅಷ್ಟೆ ಹೇಳಿದ್ದು. ಅದೇ ಕ್ರಿ.ಶ. 70ರಲ್ಲಿ ಆಗಿದ್ದು.

[ಪುಟ 32ರಲ್ಲಿರುವ ಚಿತ್ರ]

ದೇವಾಲಯವಿದ್ದ ಜಾಗ. ಯೇಸುವಿನ ಕಾಲದಲ್ಲಿ ದೇವಾಲಯ ಈ ರೀತಿ ಇದ್ದಿರಬಹುದು

[ರೇಖಾಕೃತಿ]

ದೇವಾಲಯವಿದ್ದ ಜಾಗದಲ್ಲಿ ಈಗ ಇರುವ ಮಸೀದಿ

[ಕೃಪೆ]

Photo: Todd Bolen/BiblePlaces.com

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ