ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w14 4/15 ಪು. 32
  • ನಿಮಗೆ ತಿಳಿದಿತ್ತೋ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಮಗೆ ತಿಳಿದಿತ್ತೋ?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
  • ಅನುರೂಪ ಮಾಹಿತಿ
  • ಯಾಜಕರ ವಿಶೇಷ ಬಟ್ಟೆಯಿಂದ ನಾವು ಕಲಿಯೋ ಪಾಠ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
w14 4/15 ಪು. 32
ರಾಜ ಯೋಷೀಯ ತನ್ನ ಬಟ್ಟೆಯನ್ನು ಹರಿದುಕೊಳ್ಳುತ್ತಿರುವುದು

ನಿಮಗೆ ತಿಳಿದಿತ್ತೋ?

ಬೈಬಲ್‌ ಕಾಲದಲ್ಲಿ ಒಬ್ಬ ವ್ಯಕ್ತಿ ತನ್ನ ಬಟ್ಟೆಗಳನ್ನು ಹರಿದುಕೊಳ್ಳುವುದು ಏನನ್ನು ಸೂಚಿಸುತ್ತಿತ್ತು?

ಅನೇಕ ಸನ್ನಿವೇಶಗಳಲ್ಲಿ ತಮ್ಮ ಬಟ್ಟೆಗಳನ್ನು ಹರಿದುಕೊಂಡ ವ್ಯಕ್ತಿಗಳ ಬಗ್ಗೆ ನಾವು ಬೈಬಲಿನಲ್ಲಿ ಓದುತ್ತೇವೆ. ಈಗಿನ ಕಾಲದವರಿಗೆ ಅದು ವಿಚಿತ್ರವಾಗಿ ಕಾಣಬಹುದು. ಆದರೆ ಯೆಹೂದ್ಯರಲ್ಲಿ ಯಾರಾದರೂ ತಾವು ಹಾಕಿಕೊಂಡಿರುವ ಬಟ್ಟೆಯನ್ನು ಹರಿದುಕೊಂಡರೆ ಅದು ಆ ವ್ಯಕ್ತಿಯು ಹತಾಶೆ, ಶೋಕ, ಅವಮಾನ, ಕ್ರೋಧ ಅಥವಾ ದುಃಖಕ್ಕೆ ಒಳಗಾಗಿ ಭಾವೋದ್ವೇಗವನ್ನು ವ್ಯಕ್ತಪಡಿಸುತ್ತಿದ್ದಾನೆಂದು ಸೂಚಿಸುತ್ತಿತ್ತು.

ಕೆಲವು ಉದಾಹರಣೆಗಳನ್ನು ಗಮನಿಸಿ. ರೂಬೇನನು ತನ್ನ ತಮ್ಮನಾದ ಯೋಸೇಫನನ್ನು ಕಾಪಾಡಲು ಎಷ್ಟೇ ಪ್ರಯತ್ನಿಸಿದರೂ ಅದು ಆಗದಿದ್ದಾಗ ಮತ್ತು ಅವನನ್ನು ಮಾರಲಾಗಿದೆ ಎಂದು ತಿಳಿದಾಗ ‘ತನ್ನ ಬಟ್ಟೆಗಳನ್ನು ಹರಿದುಕೊಂಡನು.’ ಅವರ ತಂದೆ ಯಾಕೋಬನು ತನ್ನ ಮಗನಾದ ಯೋಸೇಫನನ್ನು ಕಾಡುಮೃಗವು ಕೊಂದು ತಿಂದಿರಬೇಕೆಂದು ಭಾವಿಸಿ ‘ತನ್ನ ಬಟ್ಟೆಗಳನ್ನು ಹರಿದುಕೊಂಡನು.’ (ಆದಿ. 37:18-35) ಯೋಬನು ತನ್ನ ಮಕ್ಕಳೆಲ್ಲರೂ ಸತ್ತುಹೋದರೆಂಬ ಆಘಾತಕಾರಿ ಸುದ್ದಿ ಕೇಳಿಸಿಕೊಂಡಾಗ ತನ್ನ ‘ಮೇಲಂಗಿಯನ್ನು ಹರಿದುಕೊಂಡನು.’ (ಯೋಬ 1:18-20) ಒಬ್ಬ ಸಂದೇಶವಾಹಕನು “ತನ್ನ ಬಟ್ಟೆಗಳನ್ನು ಹರಿದುಕೊಂಡು” ಮಹಾಯಾಜಕ ಏಲಿಯ ಬಳಿ ಬಂದು ಇಸ್ರಾಯೇಲ್ಯರು ಯುದ್ಧದಲ್ಲಿ ಸೋತರು ಮತ್ತು ಏಲಿಯ ಪುತ್ರರಿಬ್ಬರು ಸತ್ತರು, ಮಂಜೂಷವು ಶತ್ರುವಶವಾಯಿತೆಂಬ ಸುದ್ದಿಯನ್ನು ಮುಟ್ಟಿಸಿದನು. (1 ಸಮು. 4:12-17) ಯೋಷೀಯನು ಧರ್ಮಶಾಸ್ತ್ರ ಓದಲ್ಪಡುವುದನ್ನು ಕೇಳಿಸಿಕೊಂಡು ತನ್ನ ಜನರು ಮಾಡುತ್ತಿರುವುದು ತಪ್ಪೆಂದು ಮನಗಂಡಾಗ ‘ತನ್ನ ಬಟ್ಟೆಗಳನ್ನು ಹರಿದುಕೊಂಡನು.’—2 ಅರ. 22:8-13.

ಯೇಸುವಿನ ವಿಚಾರಣೆ ಮಾಡುತ್ತಿದ್ದಾಗ ಮಹಾಯಾಜಕ ಕಾಯಫನು ಅವನ ಮಾತನ್ನು ದೇವದೂಷಣೆ ಎಂದು ತಪ್ಪಾಗಿ ತಕ್ಕೊಂಡು ‘ತನ್ನ ಮೇಲಂಗಿಗಳನ್ನು ಹರಿದುಕೊಂಡನು.’ (ಮತ್ತಾ. 26:59-66) ರಬ್ಬಿಗಳು ಸ್ಥಾಪಿಸಿದ ಧಾರ್ಮಿಕ ನಿಯಮಕ್ಕನುಸಾರ ಯಾರಾದರೂ ದೇವರ ನಾಮದೂಷಣೆ ಮಾಡಲ್ಪಡುವುದನ್ನು ಕೇಳಿಸಿಕೊಂಡಾಗ ತಮ್ಮ ಬಟ್ಟೆಗಳನ್ನು ಹರಿದುಕೊಳ್ಳಬೇಕಿತ್ತು. ಆದರೆ ಯೆರೂಸಲೇಮಿನ ದೇವಾಲಯದ ನಾಶನದ ಬಳಿಕ ರಬ್ಬಿಗಳು ಜಾರಿಗೆ ತಂದ ಇನ್ನೊಂದು ನಿಯಮ ಹೀಗೆ ಹೇಳಿತು: “ಇನ್ನು ಮುಂದೆ ದೇವನಾಮದ ದೂಷಣೆಯನ್ನು ಕೇಳಿಸಿಕೊಂಡಾಗ ಯಾರೂ ತಮ್ಮ ಬಟ್ಟೆಗಳನ್ನು ಹರಿದುಕೊಳ್ಳಬೇಕಿಲ್ಲ. ಇಲ್ಲವಾದರೆ ಇರುವ ಬಟ್ಟೆಗಳೆಲ್ಲ ಚಿಂದಿಪಂದಿ ಆಗಿಬಿಡುತ್ತವೆ.”

ದೇವರ ದೃಷ್ಟಿಯಲ್ಲಾದರೋ, ಒಬ್ಬನು ಹೃತ್ಪೂರ್ವಕವಾಗಿ ದುಃಖಪಡದೆ ಬಟ್ಟೆಗಳನ್ನು ಹರಿದುಕೊಳ್ಳುವಲ್ಲಿ ಅದಕ್ಕೆ ಕಿಂಚಿತ್ತೂ ಬೆಲೆಯಿರಲಿಲ್ಲ. ಆದುದರಿಂದಲೇ ಯೆಹೋವನು ತನ್ನ ಜನರಿಗೆ ‘ನಿಮ್ಮ ಬಟ್ಟೆಗಳನ್ನಲ್ಲ, ನಿಮ್ಮ ಹೃದಯಗಳನ್ನು ಹರಿದುಕೊಂಡು ನನ್ನ ಕಡೆಗೆ ತಿರುಗಿಕೊಳ್ಳಿರಿ’ ಎಂದು ಹೇಳಿದನು.—ಯೋವೇ. 2:13.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ