ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w14 10/1 ಪು. 3
  • ಎಲ್ಲೆಲ್ಲೂ ಕಷ್ಟಗಳೇ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಎಲ್ಲೆಲ್ಲೂ ಕಷ್ಟಗಳೇ!
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
  • ಅನುರೂಪ ಮಾಹಿತಿ
  • ಯಾಕೆ ಒಳ್ಳೆಯವರಿಗೆ ಕಷ್ಟ ಬರುತ್ತದೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
  • ನಾವು ಕಷ್ಟಾನುಭವಿಸುವಂತೆ ದೇವರು ಏಕೆ ಅನುಮತಿಸುತ್ತಾನೆ?
    ಎಚ್ಚರ!—2004
  • ನಮ್ಮ ಕಷ್ಟಗಳಿಗೆ ದೇವರು ಕಾರಣನಾ?
    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
  • ಪೀಠಿಕೆ
    ಎಚ್ಚರ!—2020
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
w14 10/1 ಪು. 3

ಮುಖಪುಟ ಲೇಖನ | ಒಳ್ಳೆಯವರಿಗೆ ಯಾಕೆ ಕಷ್ಟ ಬರುತ್ತದೆ?

ಎಲ್ಲೆಲ್ಲೂ ಕಷ್ಟಗಳೇ!

ದುಃಖತಪ್ತ ಕುಟುಂಬ

ಸ್ನೇಹ,a ಬಾಂಗ್ಲಾದೇಶದ ಢಾಕಾದಲ್ಲಿ ವಾಸಿಸುತ್ತಿದ್ದ 35 ವರ್ಷದ ಗೃಹಿಣಿ. ಸ್ನೇಹಮಯಿ, ಇತರರ ಕಾಳಜಿ ವಹಿಸುವವಳು ಎಂದೇ ಚಿರಪರಿಚಿತಳಾಗಿದ್ದಳು. ಅವಳೊಬ್ಬ ಶ್ರಮಜೀವಿ, ದೇವರ ಬಗ್ಗೆ ಆಕೆ ಕಲಿತಿದ್ದ ವಿಷಯಗಳನ್ನು ಇತರರಿಗೆ ತಿಳಿಸುತ್ತಿದ್ದಳು. ಆದರೆ ಇದ್ದಕ್ಕಿದ್ದಂತೆ ಒಂದಿನ ಅಸ್ವಸ್ಥಳಾಗಿ ಮಲಗಿದವಳು ಪುನಃ ಎದ್ದೇಳಲೇ ಇಲ್ಲ. ಕಾಯಿಲೆ ಬಂದ ಒಂದು ವಾರದಲ್ಲೇ ತೀರಿಕೊಂಡಳು. ಇದರಿಂದ ಅವಳ ಮನೆಯವರಿಗೆ ಮತ್ತು ಸ್ನೇಹಿತರಿಗೆ ಸಿಡಿಲು ಬಡಿದಂತಾಯಿತು.

ಸುಮಾರು 30⁠ರ ಪ್ರಾಯದಲ್ಲಿದ್ದ ಜೇಮ್ಸ್‌ ಮತ್ತವನ ಪತ್ನಿಗೂ ಸ್ನೇಹಳ ಥರಾನೇ ಒಳ್ಳೇ ಹೆಸರಿತ್ತು. ಅವರು ನ್ಯೂಯಾರ್ಕ್‌ನಲ್ಲಿ ವಾಸಿಸುತ್ತಿದ್ದರು. ಹೀಗೆ ಒಮ್ಮೆ ತಮ್ಮ ಸ್ನೇಹಿತರನ್ನು ಭೇಟಿ ಮಾಡಲು ಅಮೆರಿಕದ ಪಶ್ಚಿಮ ಕರಾವಳಿಗೆ ಹೋದವರು ಪುನಃ ಮನೆಗೆ ಹಿಂದಿರುಗಲೇ ಇಲ್ಲ. ಒಂದು ಭೀಕರ ಕಾರ್‌ ಅಪಘಾತದಲ್ಲಿ ಅವರಿಬ್ಬರು ಸಾವಿಗೀಡಾಗಿದ್ದರು. ಆ ದಂಪತಿಯ ಬಂಧುಮಿತ್ರರಿಗೆ ಮತ್ತು ಸಹೋದ್ಯೋಗಿಗಳಿಗೆ ಅವರ ಸಾವು ಭರಿಸಲಾಗದ ನಷ್ಟವಾಗಿತ್ತು.

ಕಷ್ಟ ಸಂಕಟಗಳನ್ನು ನೋಡಲು ತುಂಬ ದೂರ ಹೋಗಬೇಕೆಂದೇನಿಲ್ಲ. ಇವೆಲ್ಲ ನಮ್ಮ ಸುತ್ತಮುತ್ತ ನಡೆಯುತ್ತಿರುವ ವಿಷಯಗಳೇ. ಯುದ್ಧಗಳಿಂದ ಕೇವಲ ಸೈನಿಕರಲ್ಲದೆ ಸಾಮಾನ್ಯ ಜನರೂ ಸಾಯುತ್ತಿದ್ದಾರೆ. ಅಪರಾಧ ಮತ್ತು ಹಿಂಸಾಕೃತ್ಯಗಳು ಅಮಾಯಕರ ಬಲಿತೆಗೆದುಕೊಳ್ಳುತ್ತಿವೆ. ಮಾರಣಾಂತಿಕ ಅಪಘಾತಗಳು, ಕಾಯಿಲೆಗಳು ಎಲ್ಲ ವಯಸ್ಸಿನ ಮತ್ತು ದರ್ಜೆಯ ಜನರ ಸಾವು-ನೋವುಗಳಿಗೆ ಕಾರಣವಾಗುತ್ತಿವೆ. ನೈಸರ್ಗಿಕ ವಿಪತ್ತುಗಳು ಊರಿಗೆ ಊರನ್ನೇ ನುಂಗಿಹಾಕುತ್ತಿವೆ. ಪೂರ್ವಗ್ರಹ ಮತ್ತು ಅನ್ಯಾಯ ಎಲ್ಲ ಕಡೆಯೂ ಹರಡಿದೆ. ಬಹುಶಃ ನೀವೂ ಇವುಗಳಿಂದ ಬಾಧಿತರಾಗಿರಬಹುದು.

ಆದ್ದರಿಂದ ಸಹಜವಾಗಿ ಈ ಪ್ರಶ್ನೆಗಳು ಬರುತ್ತವೆ:

  • ಒಳ್ಳೆಯ ಜನರಿಗೆ ಯಾಕೆ ಕಷ್ಟಗಳು ಬರುತ್ತವೆ?

  • ನಮ್ಮ ಕಷ್ಟಗಳಿಗೆ ದೇವರೇ ಕಾರಣನಾ?

  • ವಿಪತ್ತುಗಳು ಆಕಸ್ಮಿಕವಾಗಿ ಸಂಭವಿಸುತ್ತಿವೆಯಾ ಅಥವಾ ಇವುಗಳಿಗೆ ಮನುಷ್ಯನೇ ಕಾರಣನಾ?

  • ಇವೆಲ್ಲಾ ಹಿಂದಿನ ಜನ್ಮದ ಕರ್ಮದ ಫಲಾನಾ?

  • ನಿಜವಾಗಲೂ ಸರ್ವಶಕ್ತ ದೇವರಿರುವುದಾದರೆ ಒಳ್ಳೆ ಜನರನ್ನು ಯಾಕೆ ಕಾಪಾಡುತ್ತಿಲ್ಲ?

  • ಕೆಟ್ಟ ವಿಷಯಗಳು ಮತ್ತು ಕಷ್ಟಸಂಕಟಗಳು ಯಾವತ್ತಾದರೂ ಇಲ್ಲದೇ ಹೋಗಬಹುದಾ?

ಈ ಪ್ರಶ್ನೆಗಳಿಗೆ ಉತ್ತರ ತಿಳಿಯುವ ಮೊದಲು ನಾವು ಎರಡು ಪ್ರಾಮುಖ್ಯ ವಿಷಯಗಳನ್ನು ತಿಳಿದುಕೊಳ್ಳಬೇಕು: ಕಷ್ಟಗಳಿಗೆ ಕಾರಣವೇನು? ದೇವರು ಇದನ್ನೆಲ್ಲ ಬಗೆಹರಿಸುತ್ತಾನಾ? (w14-E 07/01)

a ಹೆಸರುಗಳನ್ನು ಬದಲಾಯಿಸಲಾಗಿದೆ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ