ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w15 1/1 ಪು. 7
  • ಇದೇ ನಿಜವಾದ ಜೀವನ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಇದೇ ನಿಜವಾದ ಜೀವನ!
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
  • ಅನುರೂಪ ಮಾಹಿತಿ
  • ದೇವರು ನಮ್ಮ ಸ್ನೇಹಿತನಾಗಲು ಸಾಧ್ಯನಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
  • ನೀವೇಕೆ ದೇವರ ಬಗ್ಗೆ ಕಲಿಯುತ್ತಾ ಇರಬೇಕು?
    ದೇವರಿಂದ ನಿಮಗೊಂದು ಸಿಹಿಸುದ್ದಿ!
  • ನೀವು ದೇವರಿಗೆ ಆಪ್ತರಾಗಲು ಸಾಧ್ಯ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2019
  • ಯೆಹೋವನೊಟ್ಟಿಗಿನ ನಿಮ್ಮ ಸಂಬಂಧ ಎಷ್ಟು ನೈಜವಾಗಿದೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
w15 1/1 ಪು. 7
ಬೈಬಲ್‌ ಓದುತ್ತಿರುವ ಒಬ್ಬ ವ್ಯಕ್ತಿ

ಮುಖಪುಟ ಲೇಖನ | ದೇವರು ನಿಮ್ಮ ಸ್ನೇಹಿತನಾ?

ಇದೇ ನಿಜವಾದ ಜೀವನ!

ಈಗಾಗಲೇ ನಾವು ನೋಡಿದಂತೆ, ದೇವರ ಸ್ನೇಹಿತರಾಗಬೇಕೆಂದರೆ ಕೆಲವು ಹೆಜ್ಜೆಗಳನ್ನು ತೆಗೆದುಕೊಳ್ಳಬೇಕು. ಅವು ಯಾವುವೆಂದರೆ,

  1. ದೇವರ ಹೆಸರು ಯೆಹೋವ ಎಂದು ತಿಳಿದುಕೊಳ್ಳಬೇಕು ಮತ್ತು ಅದನ್ನು ಉಪಯೋಗಿಸಬೇಕು

  2. ಪ್ರಾರ್ಥನೆ ಮತ್ತು ಬೈಬಲ್‌ ಅಧ್ಯಯನದ ಮೂಲಕ ಕ್ರಮವಾಗಿ ದೇವರೊಂದಿಗೆ ಮಾತನಾಡಬೇಕು

  3. ಯೆಹೋವನು ಬಯಸುವುದನ್ನು ಯಾವಾಗಲೂ ಮಾಡುತ್ತಾ ಇರಬೇಕು.

ಪ್ರಾರ್ಥಿಸುತ್ತಿರುವ ಒಬ್ಬ ವ್ಯಕ್ತಿ

ದೇವರ ಸ್ನೇಹಿತರಾಗಲು ಆತನ ಹೆಸರನ್ನು ಉಪಯೋಗಿಸಿ, ಆತನಿಗೆ ಪ್ರಾರ್ಥಿಸಿ, ಆತನ ವಾಕ್ಯವನ್ನು ಅಧ್ಯಯನ ಮಾಡಿ, ಆತನು ಬಯಸುವುದನ್ನೇ ಮಾಡಿ

ಈ ಅಂಶಗಳನ್ನು ಗಮನಿಸಿದ ಮೇಲೆ, ದೇವರ ಸ್ನೇಹಿತರಾಗಲು ಏನೆಲ್ಲ ಮಾಡಬೇಕೋ ಅದನ್ನು ಮಾಡುತ್ತಿದ್ದೀರೆಂದು ನಿಮಗನಿಸುತ್ತಾ? ಅಥವಾ ಕೆಲವೊಂದು ಅಂಶಗಳನ್ನು ಮಾಡುತ್ತಿದ್ದೇನೆ ಇನ್ನೂ ಕೆಲವೊಂದನ್ನು ಮಾಡಬೇಕು ಅಂತ ಅನಿಸುತ್ತಾ? ಎಲ್ಲ ಅಂಶಗಳನ್ನು ಮಾಡಲು ಬಹಳ ಪ್ರಯತ್ನ ಬೇಕು ಎನ್ನುವುದು ಒಪ್ಪತಕ್ಕ ವಿಷಯವೇ, ಆದರೆ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ.

ಅಮೆರಿಕಾದಲ್ಲಿರುವ ಜೆನಿಫರ್‌ ಹೀಗೆ ಹೇಳುತ್ತಾಳೆ, “ದೇವರ ಜೊತೆ ಆಪ್ತರಾಗಲು ನಾವು ಮಾಡುವ ಯಾವುದೇ ಪ್ರಯತ್ನವೂ ವ್ಯರ್ಥವಲ್ಲ. ಆ ಸಂಬಂಧದಿಂದ ಅನೇಕ ಪ್ರಯೋಜನಗಳಿವೆ. ದೇವರ ಮೇಲಿನ ನಮ್ಮ ನಂಬಿಕೆ ಬೆಳೆಯುತ್ತದೆ, ಆತನ ವ್ಯಕ್ತಿತ್ವದ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳುತ್ತೇವೆ, ಎಲ್ಲದಕ್ಕಿಂತ ಹೆಚ್ಚಾಗಿ ನಮಗೆ ಆತನ ಮೇಲಿರುವ ಪ್ರೀತಿ ಹೆಚ್ಚಾಗುತ್ತದೆ. ಇದೇ ನಿಜವಾದ ಜೀವನ.”

ನಿಮಗೆ ದೇವರ ಸ್ನೇಹಿತರಾಗಲು ಇಷ್ಟನಾ? ಹಾಗಿದ್ದರೆ, ಈ ವಿಷಯದಲ್ಲಿ ಯೆಹೋವನ ಸಾಕ್ಷಿಗಳು ನಿಮಗೆ ಸಹಾಯ ಮಾಡುತ್ತಾರೆ. ಅವರು ನಿಮ್ಮೊಂದಿಗೆ ಉಚಿತ ಬೈಬಲ್‌ ಅಧ್ಯಯನಕ್ಕೆ ಏರ್ಪಾಡು ಮಾಡುತ್ತಾರೆ. ಈಗಾಗಲೇ ದೇವರೊಂದಿಗೆ ಆಪ್ತ ಸಂಬಂಧ ಹೊಂದಿರುವ ಅನೇಕರು ರಾಜ್ಯ ಸಭಾಗೃಹ ಎಂಬ ಸ್ಥಳಗಳಲ್ಲಿ ಸೇರಿ ದೇವರನ್ನು ಆರಾಧಿಸುತ್ತಿದ್ದಾರೆ. ಈ ಕೂಟಗಳಿಗೆ ನಿಮಗೂ ಸ್ವಾಗತ, ಅಲ್ಲಿ ನೀವು ಅವರೊಂದಿಗೆ ಸ್ನೇಹ ಬೆಳೆಸಿಕೊಳ್ಳಬಹುದು.a ಈ ರೀತಿ ಮಾಡುವುದಾದರೆ ಬೈಬಲಿನ ಒಬ್ಬ ಲೇಖಕನಂತೆ ನೀವು ಸಹ “ನನಗಾದರೋ ದೇವರ ಸಾನ್ನಿಧ್ಯವೇ ಭಾಗ್ಯವು” ಎಂದು ಹೇಳಬಲ್ಲಿರಿ.—ಕೀರ್ತನೆ 73:28. ▪ (w14-E 12/01)

a ಬೈಬಲ್‌ ಅಧ್ಯಯನವನ್ನು ವಿನಂತಿಸಲು ಅಥವಾ ನಿಮಗೆ ಹತ್ತಿರವಿರುವ ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹದ ವಿಳಾಸ ಪಡೆಯಲು ನಿಮಗೆ ಈ ಪತ್ರಿಕೆಯನ್ನು ಕೊಟ್ಟ ವ್ಯಕ್ತಿಯನ್ನು ಕೇಳಿರಿ ಅಥವಾ ಇಂಟರ್‌ನೆಟ್‌ನಲ್ಲಿ www.pr2711.com/kn ಎಂಬ ನಮ್ಮ ವೆಬ್‌ಸೈಟ್‌ಗೆ ಹೋಗಿ, ಪುಟದ ಕೊನೆಯಲ್ಲಿರುವ ನಮ್ಮನ್ನು ಸಂಪರ್ಕಿಸಿ ಎಂಬಲ್ಲಿ ನೋಡಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ