ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ | ಸೇವೆಯಲ್ಲಿ ನಿಮ್ಮ ಸಂತೋಷ ಹೆಚ್ಚಿಸಿ
ಕೂಟಗಳಿಗೆ ಹಾಜರಾಗೋಕೆ ವಿದ್ಯಾರ್ಥಿಯನ್ನ ಪ್ರೋತ್ಸಾಹಿಸಿ
ಸಭಾ ಕೂಟಗಳು ಶುದ್ಧ ಆರಾಧನೆಯ ಅವಿಭಾಜ್ಯ ಅಂಗ. (ಕೀರ್ತ 22:22) ಯೆಹೋವನನ್ನ ಆರಾಧಿಸೋಕೆ ಬರೋ ಎಲ್ಲರಿಗೂ ಸಂತೋಷ ಮತ್ತು ಆಶೀರ್ವಾದಗಳು ಸಿಗುತ್ತೆ. (ಕೀರ್ತ 65:4) ಸ್ಟಡಿಯವರು ಪ್ರತೀ ಕೂಟಗಳಿಗೆ ಬಂದ್ರೆ ತುಂಬ ಬೇಗ ಪ್ರಗತಿ ಮಾಡ್ತಾರೆ.
ಕೂಟಗಳಿಗೆ ಬರೋಕೆ ನಿಮ್ಮ ಸ್ಟಡಿಯವರಿಗೆ ಹೇಗೆ ಸಹಾಯ ಮಾಡಬಹುದು? ಅವರನ್ನ ಕೂಟಕ್ಕೆ ಬನ್ನಿ ಅಂತ ಕರೆಯುತ್ತಾ ಇರಿ. ರಾಜ್ಯ ಸಭಾಗೃಹದಲ್ಲಿ ಏನು ನಡೆಯುತ್ತದೆ? ಅನ್ನೋ ವಿಡಿಯೋ ತೋರಿಸಿ. ಕೂಟಗಳಿಂದ ಸಿಗೋ ಪ್ರಯೋಜನಗಳ ಬಗ್ಗೆ ಹೇಳಿ. (ಖುಷಿಯಾಗಿ ಬಾಳೋಣ ಪಾಠ 10) ಕೂಟಗಳಲ್ಲಿ ನೀವು ಕಲಿತ ಒಂದು ವಿಷಯನ ಅವರಿಗೆ ಹೇಳಿ ಅಥವಾ ಮುಂದಿನ ಕೂಟದಲ್ಲಿ ಕಲಿಯೋ ವಿಷಯಗಳನ್ನ ಚುಟುಕಾಗಿ ಹೇಳಿ. ಕೂಟಕ್ಕೆ ಬೇಕಾಗಿರೋ ಪ್ರಕಾಶನಗಳನ್ನ ಕೊಡಿ. ಅವರಿಗೆ ಇನ್ನೂ ಏನಾದ್ರು ಸಹಾಯ ಬೇಕಾ ಅಂತ ನೋಡಿ. ಉದಾಹರಣೆಗೆ, ನಿಮ್ಮ ಜೊತೆ ಅವರನ್ನ ಸಭಾಗೃಹಕ್ಕೆ ಕರ್ಕೊಂಡು ಬರಬೇಕಾಗಿರಬಹುದು. ಸ್ಟಡಿಯವರು ಮೊದಲನೇ ಸಲ ಕೂಟಕ್ಕೆ ಬಂದಾಗ ನೀವು ಹಾಕಿದ ಪ್ರಯತ್ನ ಎಲ್ಲ ಸಾರ್ಥಕ ಅನ್ಸುತ್ತೆ.—1ಕೊರಿಂ 14:24, 25.
ಬೈಬಲ್ ವಿದ್ಯಾರ್ಥಿಗಳಿಗೆ ಸಹಾಯಮಾಡಿ—ಕೂಟಗಳಿಗೆ ಹಾಜರಾಗಲು ಅನ್ನೋ ವಿಡಿಯೋ ನೋಡಿ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:
ಜಾಸ್ಮಿನ್ಳನ್ನ ಕೂಟಕ್ಕೆ ಕರೆಯೋಕೆ ನೀತಾ ಯಾವ ಅವಕಾಶವನ್ನ ಬಳಸಿದಳು?
ಸ್ಟಡಿಯವರು ಕೂಟಕ್ಕೆ ಬಂದಾಗ ನಮಗೆ ಯಾಕೆ ಖುಷಿಯಾಗುತ್ತೆ?
“ನಿಜವಾಗ್ಲೂ ದೇವರು ನಿಮ್ಮ ಜೊತೆ ಇದ್ದಾನೆ”
ಮೊದಲ ಸಲ ಕೂಟಕ್ಕೆ ಬಂದಾಗ ಜಾಸ್ಮಿನ್ಗೆ ಹೇಗನಿಸಿತು?