ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w20 ಮೇ ಪು. 8-11
  • ಅಂತ್ಯಕಾಲದಲ್ಲಿ ಕಿಡಿಕಾರೋ ರಾಜರು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಅಂತ್ಯಕಾಲದಲ್ಲಿ ಕಿಡಿಕಾರೋ ರಾಜರು
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2020
  • ಅನುರೂಪ ಮಾಹಿತಿ
  • ಅಂತ್ಯಕಾಲದ “ಉತ್ತರ ರಾಜ”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2020
  • “ಬೇಗನೆ ಸಂಭವಿಸ ಬೇಕಾಗಿರುವ ಸಂಗತಿಗಳನ್ನು” ಯೆಹೋವನು ಪ್ರಕಟಿಸಿದ್ದಾನೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
  • ಈಗ “ಉತ್ತರ ರಾಜ” ಯಾರು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2020
  • ಲೋಕ ಶಕ್ತಿಗಳ ದೀರ್ಘ ಪಥಚಲನೆಯ ಅದರ ಅಂತ್ಯಕ್ಕೆ ಸಮೀಪಿಸಿದೆ
    ಕಾವಲಿನಬುರುಜು—1990
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2020
w20 ಮೇ ಪು. 8-11

ಅಂತ್ಯಕಾಲದಲ್ಲಿ ಕಿಡಿಕಾರೋ ರಾಜರು

ಈ ಚಾರ್ಟ್‌ನಲ್ಲಿರುವ ಪ್ರವಾದನೆಗಳು ಒಂದೇ ಸಮ್ಯದಲ್ಲಿ ನಡೆದ ಘಟನೆಗಳನ್ನು ವಿವರಿಸುತ್ತವೆ. ಇದ್ರಿಂದಾಗಿ, ನಾವು ‘ಅಂತ್ಯಕಾಲದಲ್ಲಿ’ ಜೀವಿಸುತ್ತಿದ್ದೇವೆ ಅನ್ನೋದಕ್ಕೆ ಬರೀ ಒಂದು ಆಧಾರವಲ್ಲ ಬೇರೆ-ಬೇರೆ ಆಧಾರಗಳಿವೆ ಅನ್ನೋದು ಗೊತ್ತಾಗುತ್ತೆ.—ದಾನಿ. 12:4.

ಪ್ರವಾದನೆಗಳನ್ನು ಮತ್ತು ಇಸವಿ 1870 ರಿಂದ ಈಗಿನ ವರೆಗೆ ಯಾರೆಲ್ಲ ಉತ್ತರ ರಾಜ ಮತ್ತು ದಕ್ಷಿಣ ರಾಜ ಆಗಿದ್ದಾರೆ ಅನ್ನೋದನ್ನು ವಿವರಿಸುವ ಚಾರ್ಟ್‌.
  • 1 ನೇ ಚಾರ್ಟ್‌ ಅಂತ್ಯಕಾಲದಲ್ಲಿ ನೆರವೇರಿದ ಬೇರೆ ಬೇರೆ ಪ್ರವಾದನೆಗಳನ್ನು ತೋರಿಸುತ್ತೆ. ಅವು 1870 ರಿಂದ 1918 ರ ವರೆಗೆ ನೆರವೇರಿದ ಪ್ರವಾದನೆಗಳಾಗಿವೆ. 1914 ರಿಂದ ಅಂತ್ಯಕಾಲ ಆರಂಭವಾಗಿದೆ ಅನ್ನೋದನ್ನು ಇಲ್ಲಿ ತೋರಿಸಲಾಗಿದೆ. ಪ್ರವಾದನೆ 1: ಏಳು ತಲೆಗಳಿರುವ ಕಾಡುಮೃಗ. ಈ ಚಾರ್ಟ್‌ನಲ್ಲಿ ಕೊಟ್ಟಿರುವ ಸಮಯಕ್ಕಿಂತ ಮುಂಚೆನೇ ಆ ಕಾಡುಮೃಗ ಅಸ್ತಿತ್ವದಲ್ಲಿತ್ತು ಎಂದು ತೋರಿಸಲಾಗಿದೆ. 1 ನೇ ಮಹಾಯುದ್ಧದಲ್ಲಿ ಏಳನೇ ತಲೆಗೆ ಏಟಾಯ್ತು. 1917 ರಿಂದ ಏಳನೇ ತಲೆ ವಾಸಿಯಾಗಿ ಕಾಡುಮೃಗ ಮತ್ತೆ ಶಕ್ತಿ ಪಡಕೊಳ್ತು. ಪ್ರವಾದನೆ 2: 1871 ರಲ್ಲಿ ಉತ್ತರ ರಾಜ ಮತ್ತು1870 ರಲ್ಲಿ ದಕ್ಷಿಣ ರಾಜ ಯಾರಾಗಿದ್ದಾರೆ ಅನ್ನೋದನ್ನು ತೋರಿಸಲಾಗಿದೆ. 1871 ರಲ್ಲಿ ಜರ್ಮನಿ ಹೊಸ ಉತ್ತರ ರಾಜನಾಗಿ ಕಾಣಿಸಿಕೊಂಡಿತು. ದಕ್ಷಿಣ ರಾಜ ಮೊದಲಿಗೆ ಗ್ರೇಟ್‌ ಬ್ರಿಟನ್‌ ಆಗಿತ್ತು, ಆದ್ರೆ 1917 ರಲ್ಲಿ ಅದ್ರ ಬದಲಿಗೆ ಆ್ಯಂಗ್ಲೋ-ಅಮೆರಿಕನ್‌ ಲೋಕಶಕ್ತಿ ದಕ್ಷಿಣ ರಾಜನಾಯ್ತು. ಪ್ರವಾದನೆ 3: 1870 ರಿಂದ ಚಾರ್ಲ್ಸ್‌ ಟಿ. ರಸಲ್‌ ಮತ್ತವರ ಸಂಗಡಿಗರನ್ನು ದಾರಿ ಸರಿಮಾಡುವ ‘ದೂತರೆಂದು’ ಗುರುತಿಸಲಾಯಿತು. 1881 ರಿಂದ ಸುವಾರ್ತೆ ಸಾರಬೇಕೆಂದು ಓದುಗರಿಗೆ ಝಯನ್ಸ್‌ ವಾಚ್‌ ಟವರ್‌ ಪ್ರೋತ್ಸಾಹಿಸಿತು. ಪ್ರವಾದನೆ 4: 1914 ರಿಂದ ಕೊಯ್ಲಿನ ಕಾಲ. ಕಳೆಗಳನ್ನು ಗೋದಿಯಿಂದ ಬೇರೆ ಮಾಡಲಾಯ್ತು. ಪ್ರವಾದನೆ 5: 1917 ರಿಂದ ಕಬ್ಬಿಣ ಜೇಡಿಮಣ್ಣಿನ ಪಾದ ಸ್ಪಷ್ಟವಾಗಿ ಕಾಣಿಸಿಕೊಳ್ತು. 1914 ರಿಂದ 1918 ರ ವರೆಗೆ ಲೋಕದಲ್ಲಿ ನಡೆದ 1 ನೇ ಮಹಾಯುದ್ಧವನ್ನು ಸಹ ಇಲ್ಲಿ ತೋರಿಸಲಾಗಿದೆ. ಯೆಹೋವನ ಜನ್ರಿಗೆ ಸಂಭವಿಸಿದ ಘಟನೆಗಳು: 1914 ರಿಂದ 1918 ರ ವರಗೆ ಬ್ರಿಟನ್‌ ಮತ್ತು ಜರ್ಮನಿಯಲ್ಲಿದ್ದ ಬೈಬಲ್‌ ವಿದ್ಯಾರ್ಥಿಗಳನ್ನು ಬಂಧಿಸಲಾಯ್ತು. 1918 ರಲ್ಲಿ ಅಮೆರಿಕದ ಮುಖ್ಯಕಾರ್ಯಾಲಯ ಸದಸ್ಯರನ್ನು ಬಂಧಿಸಲಾಯ್ತು.
    ಪ್ರವಾದನೆ 1.

    ವಚನ ಪ್ರಕ. 11:7; 12:13, 17; 13:1-8, 12

    ಪ್ರವಾದನೆ “ಕಾಡುಮೃಗ” ವರ್ಷಗಟ್ಟಲೆ ಜನ್ರನ್ನು ಆಳುತ್ತೆ. ಅಂತ್ಯಕಾಲದಲ್ಲಿ ಅದ್ರ ಏಳನೇ ತಲೆಗೆ ಏಟಾಗುತ್ತೆ. ಆದ್ರೆ ವಾಸಿಯಾಗುತ್ತೆ. “ಇಡೀ ಭೂಮಿ” ಕಾಡುಮೃಗನ ಹಿಂಬಾಲಿಸುತ್ತೆ. “[ಸ್ತ್ರೀ] ಸಂತಾನದವರಲ್ಲಿ ಉಳಿದವರ ಮೇಲೆ ಯುದ್ಧ” ಮಾಡಲು ಸೈತಾನ ಈ ಕಾಡುಮೃಗನ ಬಳಸ್ತಾನೆ.

    ನೆರವೇರಿಕೆ ಜಲಪ್ರಳಯದ ನಂತ್ರ ಮಾನವ ಸರ್ಕಾರಗಳು ಯೆಹೋವನನ್ನ ವಿರೋಧಿಸಿ ಜನ್ರನ್ನು ಆಳಲಾರಂಭಿಸಿದ್ವು. ಸುಮಾರು 3,000 ವರ್ಷ ನಂತ್ರ ಬ್ರಿಟನ್‌ ಸಾಮ್ರಾಜ್ಯ 1 ನೇ ಮಹಾಯುದ್ಧದಲ್ಲಿ ಪ್ರಾಬಲ್ಯ ಕಳಕೊಳ್ತು. ಆದ್ರೆ ಅಮೆರಿಕ ಜೊತೆ ಸೇರಿ ಪುನಃ ಪ್ರಬಲವಾಯ್ತು. ಅಂತ್ಯಕಾಲದಲ್ಲಿ ಸೈತಾನ ಮಾನವ ಸರ್ಕಾರಗಳನ್ನು ಬಳಸಿ ದೇವಜನ್ರನ್ನು ಹಿಂಸಿಸುತ್ತಿದ್ದಾನೆ.

  • ಪ್ರವಾದನೆ 2.

    ವಚನ ದಾನಿ. 11:25-45

    ಪ್ರವಾದನೆ ಅಂತ್ಯಕಾಲದಲ್ಲಿ ಉತ್ತರ ರಾಜ ಮತ್ತು ದಕ್ಷಿಣ ರಾಜ ಅಧಿಕಾರಕ್ಕಾಗಿ ಹೋರಾಡ್ತಾರೆ.

    ನೆರವೇರಿಕೆ ಜರ್ಮನಿ ಮತ್ತು ಆ್ಯಂಗ್ಲೋ-ಅಮೆರಿಕ ನಡುವೆ ಯುದ್ಧ ನಡೀತು. 1945 ರಲ್ಲಿ ಸೋವಿಯತ್‌ ಒಕ್ಕೂಟ ಮತ್ತದರ ಮಿತ್ರರಾಷ್ಟ್ರಗಳು ಉತ್ತರ ರಾಜ ಆದವು. 1991 ರಲ್ಲಿ ಸೋವಿಯತ್‌ ಒಕ್ಕೂಟ ಬಿದ್ದುಹೋಯ್ತು. ನಂತ್ರ ರಷ್ಯಾ ಮತ್ತದರ ಮಿತ್ರರಾಷ್ಟ್ರಗಳು ಉತ್ತರ ರಾಜ ಆದವು.

  • ಪ್ರವಾದನೆ 3.

    ವಚನ ಯೆಶಾ. 61:1; ಮಲಾ. 3:1; ಲೂಕ 4:18

    ಪ್ರವಾದನೆ ಮೆಸ್ಸೀಯ ರಾಜ್ಯ ಸ್ಥಾಪನೆ ಆಗೋ ಮುಂಚೆ ‘ದಾರಿ ಸರಿಮಾಡಲು’ ಯೆಹೋವನು ತನ್ನ “ದೂತನನ್ನು” ಕಳುಹಿಸ್ವನು. ಈ ದೂತ ‘ಬಡವರಿಗೆ ಸುವಾರ್ತೆ ಪ್ರಕಟಿಸೋಕೆ’ ಪ್ರಾರಂಭಿಸ್ತಾನೆ.

    ನೆರವೇರಿಕೆ 1870 ರಿಂದ ರಸಲ್‌ ಮತ್ತು ಸಂಗಡಿಗರು ಬೈಬಲ್‌ ಸತ್ಯಗಳನ್ನು ಅರ್ಥಮಾಡ್ಕೊಂಡು ಬೇರೆಯವ್ರಿಗೆ ತಿಳ್ಸೋಕೆ ಅವಿರತ ಪ್ರಯತ್ನ ಮಾಡಿದ್ರು. 1881 ರಲ್ಲಿ ದೇವಸೇವಕರೆಲ್ರೂ ಸುವಾರ್ತೆ ಸಾರಲೇಬೇಕು ಅನ್ನೋದನ್ನ ಅರ್ಥಮಾಡಿಕೊಂಡ್ರು. “ಸಾವಿರ ಸೌವಾರ್ತಿಕರು ಬೇಕಾಗಿದ್ದಾರೆ,” “ಸಾರುವುದಕ್ಕೆ ಸಮರ್ಪಿತರು” (ಇಂಗ್ಲಿಷ್‌) ಎಂಬ ಲೇಖನಗಳನ್ನು ಪ್ರಕಟಿಸಿದ್ರು.

  • ಪ್ರವಾದನೆ 4.

    ವಚನ ಮತ್ತಾ. 13:24-30, 36-43

    ಪ್ರವಾದನೆ ಒಬ್ಬನು ಹೊಲದಲ್ಲಿ ಗೋದಿ ಬಿತ್ತುತ್ತಾನೆ. ಅವನ ವೈರಿ ಗೋದಿ ಮಧ್ಯೆ ಕಳೆ ಬಿತ್ತಿ ಹೋಗ್ತಾನೆ. ಕಳೆ ಬೆಳೆದು ಗೋದಿಯನ್ನು ಮರೆಮಾಡುತ್ತೆ. ಕೊಯ್ಲಿನ ಕಾಲದಲ್ಲಿ ಕಳೆಗಳನ್ನು ಗೋದಿಯಿಂದ ಬೇರೆ ಮಾಡಲಾಗುತ್ತೆ.

    ನೆರವೇರಿಕೆ 1870 ರಿಂದ ಸತ್ಯ ಕ್ರೈಸ್ತರು ಮತ್ತು ಸುಳ್ಳು ಕ್ರೈಸ್ತರ ಮಧ್ಯೆ ವ್ಯತ್ಯಾಸ ಸ್ಪಷ್ಟವಾಗಿ ಕಾಣೋಕೆ ಆರಂಭವಾಯ್ತು. ಅಂತ್ಯಕಾಲದಲ್ಲಿ ಸತ್ಯ ಕ್ರೈಸ್ತರನ್ನು ಒಟ್ಟುಗೂಡಿಸಲಾಯ್ತು ಮತ್ತು ಸುಳ್ಳು ಕ್ರೈಸ್ತರಿಂದ ಬೇರೆ ಮಾಡಲಾಯ್ತು.

  • ಪ್ರವಾದನೆ 5.

    ವಚನ ದಾನಿ. 2:31-33, 41-43

    ಪ್ರವಾದನೆ ಲೋಹಗಳಿಂದ ಮಾಡಿದ ಪ್ರತಿಮೆಯ ಪಾದಗಳು ಕಬ್ಬಿಣ ಮತ್ತು ಜೇಡಿಮಣ್ಣಿನ ಮಿಶ್ರಣವಾಗಿವೆ.

    ನೆರವೇರಿಕೆ ಜೇಡಿಮಣ್ಣು ಬ್ರಿಟನ್‌ ಮತ್ತು ಅಮೆರಿಕ ಸರ್ಕಾರಗಳ ಕೆಳಗಿರುವ ಸಾಮಾನ್ಯ ಜನ್ರನ್ನು ಸೂಚಿಸುತ್ತೆ. ಈ ಜನ್ರು ಆ ಎರಡು ಸರ್ಕಾರಗಳ ವಿರುದ್ಧ ದಂಗೆ ಎದ್ದಿದ್ದಾರೆ ಮತ್ತು ಚಳುವಳಿಗಳನ್ನು ನಡೆಸ್ತಿದ್ದಾರೆ. ಈ ಜನ್ರಿಂದಾಗಿ ಆ ಸರ್ಕಾರಗಳ ಕಬ್ಬಿಣದಂಥ ಸಾಮರ್ಥ್ಯ ದುರ್ಬಲವಾಗ್ತಿದೆ.

  • 2 ನೇ ಚಾರ್ಟ್‌ ಅಂತ್ಯಕಾಲದಲ್ಲಿ ನೆರವೇರಿದ ಬೇರೆ ಬೇರೆ ಪ್ರವಾದನೆಗಳನ್ನು ತೋರಿಸುತ್ತೆ. ಅವು 1919 ರಿಂದ 1945 ರ ವರೆಗೆ ನೆರವೇರಿದ ಪ್ರವಾದನೆಗಳಾಗಿವೆ. 1945 ರವರೆಗೆ ಜರ್ಮನಿಯು ಉತ್ತರ ರಾಜನಾಗಿತ್ತು. ಆ್ಯಂಗ್ಲೋ-ಅಮೆರಿಕನ್‌ ಲೋಕಶಕ್ತಿ ದಕ್ಷಿಣ ರಾಜನಾಗಿತ್ತು. ಪ್ರವಾದನೆ 6: 1919 ರಲ್ಲಿ ಅಭಿಷಿಕ್ತ ಕ್ರೈಸ್ತರನ್ನು ಶುದ್ಧಿ ಮಾಡಿದ ಸಭೆಯೊಳಗೆ ಒಟ್ಟುಗೂಡಿಸಲಾಯ್ತು. 1919 ರಿಂದ ಸಾರುವ ಕೆಲಸದ ವೇಗ ಹೆಚ್ಚಾಗಿ ಮುಂದುವರೀತು. ಪ್ರವಾದನೆ 7: 1920 ರಲ್ಲಿ ರಾಷ್ಟ್ರ ಸಂಘದ ಸ್ಥಾಪನೆಯಾಯ್ತು, 2 ನೇ ಮಹಾಯುದ್ಧದವರೆಗೂ ಅಸ್ತಿತ್ವದಲ್ಲಿತ್ತು. ಈ ಕೆಳಗಿನವುಗಳನ್ನೂ ತೋರಿಸಲಾಗಿದೆ: ಪ್ರವಾದನೆ 1 ರಲ್ಲಿ ತಿಳಿಸಿದ ಏಳು ತಲೆಗಳ ಕಾಡುಮೃಗ ಇನ್ನೂ ಅಸ್ತಿತ್ವದಲ್ಲಿದೆ. ಪ್ರವಾದನೆ 5 ರಲ್ಲಿ, ತಿಳಿಸಿದ ಕಬ್ಬಿಣ ಜೇಡಿಮಣ್ಣಿನ ಪಾದ ಇಲ್ಲಿಯೂ ಇದೆ. 1939 ರಿಂದ 1945 ರ ವರೆಗೆ ನಡೆದ 2 ನೇ ಮಹಾಯುದ್ಧವನ್ನು ತೋರಿಸಲಾಗಿದೆ. ಯೆಹೋವನ ಜನ್ರಿಗೆ ಸಂಭವಿಸಿದ ಘಟನೆಗಳು: ಜರ್ಮನಿಯಲ್ಲಿ 1933 ರಿಂದ 1945 ರ ಸಮ್ಯದಲ್ಲಿ 11,000ಕ್ಕಿಂತ ಹೆಚ್ಚು ಪ್ರಚಾರಕರನ್ನು ಬಂಧಿಸಲಾಯ್ತು. ಬ್ರಿಟನ್‌ನಲ್ಲಿ 1939 ರಿಂದ 1945 ರ ಸಮ್ಯದಲ್ಲಿ ಸುಮಾರು 1,600 ಪ್ರಚಾರಕರನ್ನು ಬಂಧಿಸಲಾಯ್ತು. ಅಮೆರಿಕದಲ್ಲಿ 1940 ರಿಂದ 1944 ರ ಸಮ್ಯದಲ್ಲಿ ಜನ್ರ ಗುಂಪುಗಳು ಯೆಹೋವನ ಸಾಕ್ಷಿಗಳ ಮೇಲೆ 2,500ಕ್ಕಿಂತ ಹೆಚ್ಚು ಸಲ ದಾಳಿ ಮಾಡಿದ್ವು.
    ಪ್ರವಾದನೆ 6.

    ವಚನ ಮತ್ತಾ. 13:30; 24:14, 45; 28:19, 20

    ಪ್ರವಾದನೆ “ಗೋದಿಯನ್ನು” ‘ಕಣಜದಲ್ಲಿ’ ತುಂಬಿಸಿಡಲಾಗುತ್ತೆ ಮತ್ತು ‘ಮನೆಯವರ’ ಮೇಲೆ ‘ನಂಬಿಗಸ್ತ ವಿವೇಚನೆಯುಳ್ಳ ಆಳನ್ನು’ ನೇಮಿಸಲಾಗುತ್ತೆ. “ಭೂಮಿಯಾದ್ಯಂತ” ಸುವಾರ್ತೆ ಸಾರುವ ಕೆಲ್ಸ ಆರಂಭವಾಗುತ್ತೆ.

    ನೆರವೇರಿಕೆ 1919 ರಲ್ಲಿ ದೇವಜನ್ರ ಮೇಲೆ ನಂಬಿಗಸ್ತ ಆಳನ್ನು ನೇಮಿಸಲಾಯಿತು. ಅಂದಿನಿಂದ ಬೈಬಲ್‌ ವಿದ್ಯಾರ್ಥಿಗಳು ಹುರುಪಿನಿಂದ ಸಾರುತ್ತಿದ್ದಾರೆ. ಇಂದು 200ಕ್ಕಿಂತ ಹೆಚ್ಚು ದೇಶ-ದ್ವೀಪಗಳಲ್ಲಿ ಯೆಹೋವನ ಸಾಕ್ಷಿಗಳು ಸುವಾರ್ತೆ ಸಾರುತ್ತಿದ್ದಾರೆ ಮತ್ತು 1,000ಕ್ಕಿಂತ ಹೆಚ್ಚು ಭಾಷೆಗಳಲ್ಲಿ ಪ್ರಕಾಶನ ಹೊರತಂದಿದ್ದಾರೆ.

  • ಪ್ರವಾದನೆ 7.

    ವಚನ ದಾನಿ. 12:11; ಪ್ರಕ. 13:11, 14, 15

    ಪ್ರವಾದನೆ ಎರಡು ಕೊಂಬುಗಳ ಕಾಡುಮೃಗ ಭೂನಿವಾಸಿಗಳಿಗೆ “ಕಾಡುಮೃಗಕ್ಕಾಗಿ ಒಂದು ವಿಗ್ರಹವನ್ನು ಮಾಡುವಂತೆ” ಹೇಳುತ್ತೆ ಮತ್ತು ‘ಆ ವಿಗ್ರಹಕ್ಕೆ ಜೀವಶ್ವಾಸ’ ಕೊಡುತ್ತೆ.

    ನೆರವೇರಿಕೆ ಆ್ಯಂಗ್ಲೋ-ಅಮೆರಿಕನ್‌ ಲೋಕಶಕ್ತಿಯು ರಾಷ್ಟ್ರ ಸಂಘ ಸ್ಥಾಪಿಸೋದ್ರಲ್ಲಿ ಮುಂದಾಳತ್ವ ವಹಿಸ್ತು. ಬೇರೆ ದೇಶಗಳೂ ರಾಷ್ಟ್ರ ಸಂಘದ ಸದಸ್ಯವಾದವು. 1926 ರಿಂದ 1933 ರವರೆಗೆ ಉತ್ತರ ರಾಜ ಸಹ ಇದ್ರ ಸದಸ್ಯನಾಗಿದ್ದ. ರಾಷ್ಟ್ರ ಸಂಘ ಲೋಕಕ್ಕೆ ಶಾಂತಿ ತರುತ್ತೆ ಅಂತ ಜನ ನಂಬಿದ್ರು. ಈಗಿರೋ ವಿಶ್ವಸಂಸ್ಥೆನೂ ಶಾಂತಿ ತರುತ್ತೆ ಅಂತ ನಂಬಿದ್ದಾರೆ. ಆದ್ರೆ ಅದು ದೇವರ ರಾಜ್ಯದಿಂದ ಮಾತ್ರ ಸಾಧ್ಯ.

  • 3 ನೇ ಚಾರ್ಟ್‌ ಅಂತ್ಯಕಾಲದಲ್ಲಿ ನೆರವೇರಿದ ಬೇರೆ ಬೇರೆ ಪ್ರವಾದನೆಗಳನ್ನು ತೋರಿಸುತ್ತೆ. ಅವು 1945 ರಿಂದ 1991 ರ ವರೆಗೆ ನೆರವೇರಿದ ಪ್ರವಾದನೆಗಳಾಗಿವೆ. 1991 ರ ತನಕ ಸೋವಿಯತ್‌ ಒಕ್ಕೂಟ ಮತ್ತದರ ಮಿತ್ರರಾಷ್ಟ್ರಗಳು ಉತ್ತರ ರಾಜನಾಗಿದ್ದವು, ಆದ್ರೆ ನಂತ್ರ ರಷ್ಯಾ ಮತ್ತದರ ಮಿತ್ರರಾಷ್ಟ್ರಗಳು ಉತ್ತರ ರಾಜ ಆದವು. ಆ್ಯಂಗ್ಲೋ-ಅಮೆರಿಕನ್‌ ಲೋಕಶಕ್ತಿ ದಕ್ಷಿಣ ರಾಜನಾಗಿತ್ತು. ಪ್ರವಾದನೆ 8: ಅಣು ಬಾಂಬ್‌ ಸ್ಫೋಟದಿಂದಾಗಿ ಅಣಬೆ ಆಕಾರದಲ್ಲಿ ಕಾಣಿಸಿಕೊಂಡಿರುವ ಹೊಗೆ. ಇದು ಆ್ಯಂಗ್ಲೋ-ಅಮೆರಿಕನ್‌ ಲೋಕಶಕ್ತಿಯಿಂದ ಆದ ಬೃಹತ್‌ ಹಾನಿಯನ್ನು ಸೂಚಿಸುತ್ತೆ. ಪ್ರವಾದನೆ 9: 1945 ರಲ್ಲಿ ರಾಷ್ಟ್ರ ಸಂಘದ ಬದಲಿಯಾಗಿ ವಿಶ್ವ ಸಂಸ್ಥೆ ಸ್ಥಾಪನೆಯಾಯ್ತು. ಈ ಕೆಳಗಿನವುಗಳನ್ನೂ ತೋರಿಸಲಾಗಿದೆ: ಪ್ರವಾದನೆ 1 ರಲ್ಲಿ ತಿಳಿಸಿದ ಏಳು ತಲೆಗಳ ಕಾಡುಮೃಗ ಇನ್ನೂ ಅಸ್ತಿತ್ವದಲ್ಲಿದೆ. ಪ್ರವಾದನೆ 5 ರಲ್ಲಿ, ತಿಳಿಸಿದ ಕಬ್ಬಿಣ ಜೇಡಿಮಣ್ಣಿನ ಪಾದ ಇಲ್ಲಿಯೂ ಇದೆ. ಪ್ರವಾದನೆ 6, 1945 ರಲ್ಲಿ 1,56,000ಕ್ಕಿಂತ ಹೆಚ್ಚು ಪ್ರಚಾರಕರಿದ್ದರು. 1991 ರಲ್ಲಿ, 42,78,000ಕ್ಕಿಂತ ಹೆಚ್ಚು ಪ್ರಚಾರಕರಿದ್ದರು. ಯೆಹೋವನ ಜನ್ರಿಗೆ ಸಂಭವಿಸಿದ ಘಟನೆಗಳು: 1945 ರಿಂದ 1951 ರ ಸಮ್ಯದಲ್ಲಿ ಸೋವಿಯತ್‌ ಒಕ್ಕೂಟವು ಸಾವಿರಾರು ಸಾಕ್ಷಿಗಳನ್ನು ಸೈಬೀರಿಯಕ್ಕೆ ಗಡೀಪಾರು ಮಾಡ್ತು.
    ಪ್ರವಾದನೆ 8.

    ವಚನ ದಾನಿ. 8:23, 24

    ಪ್ರವಾದನೆ “ಕಠಿಣಮುಖ” ರಾಜ ‘ಅತ್ಯಧಿಕವಾಗಿ ಹಾಳುಮಾಡ್ತಾನೆ.’

    ನೆರವೇರಿಕೆ ಆ್ಯಂಗ್ಲೋ-ಅಮೆರಿಕನ್‌ ಲೋಕಶಕ್ತಿ ಭಾರೀ ಹಾನಿ ಮಾಡಿದೆ. ಉದಾಹರಣೆಗೆ, 2 ನೇ ಮಹಾಯುದ್ಧದಲ್ಲಿ ಶತ್ರುರಾಷ್ಟ್ರದ ಮೇಲೆ ಅಮೆರಿಕ ಸರ್ಕಾರ ಎರಡು ಅಣು ಬಾಂಬ್‌ ಹಾಕಿ ಧ್ವಂಸಮಾಡಿತು. ಇದ್ರಿಂದ ಆದ ಅನಾಹುತ ಹಿಂದೆ ಯಾವತ್ತೂ ಆಗಿರಲಿಲ್ಲ.

  • ಪ್ರವಾದನೆ 9.

    ವಚನ ದಾನಿ. 11:31; ಪ್ರಕ. 17:3, 7-11

    ಪ್ರವಾದನೆ ಹತ್ತುಕೊಂಬಿನ “ಕಡುಗೆಂಪು ಬಣ್ಣದ” ಕಾಡುಮೃಗ ಅಗಾಧ ಸ್ಥಳದಿಂದ ಏರಿಬರುತ್ತೆ, ಎಂಟನೇ ರಾಜನಾಗುತ್ತೆ. ದಾನಿಯೇಲ ಪುಸ್ತಕವು ಈ ರಾಜನನ್ನು “ಹಾಳುಮಾಡುವ ಅಸಹ್ಯವಸ್ತು” ಅಂತ ಹೇಳುತ್ತೆ.

    ನೆರವೇರಿಕೆ 2 ನೇ ಮಹಾಯುದ್ಧದ ಸಮ್ಯದಲ್ಲಿ ರಾಷ್ಟ್ರ ಸಂಘ ನಿಷ್ಕ್ರಿಯವಾಯ್ತು. ಯುದ್ಧದ ನಂತ್ರ ವಿಶ್ವಸಂಸ್ಥೆನಾ ‘ಪ್ರತಿಷ್ಠಿಸಲಾಯಿತು.’ ರಾಷ್ಟ್ರ ಸಂಘದಂತೆ ವಿಶ್ವಸಂಸ್ಥೆಯನ್ನೂ ಮಹಿಮೆ ಪಡಿಸಿ ಲೋಕಕ್ಕೆ ಶಾಂತಿ ತರುವ ಹೆಗ್ಗಳಿಕೆಯನ್ನು ಜನ್ರು ದೇವರ ರಾಜ್ಯಕ್ಕೆ ಕೊಡದೆ ವಿಶ್ವಸಂಸ್ಥೆಗೆ ಕೊಟ್ಟಿದ್ದಾರೆ. ವಿಶ್ವಸಂಸ್ಥೆ ಧರ್ಮಗಳ ಮೇಲೆ ದಾಳಿ ಮಾಡಲಿದೆ.

  • 4 ನೇ ಚಾರ್ಟ್‌ ಅಂತ್ಯಕಾಲದಲ್ಲಿ ನೆರವೇರುವ ಬೇರೆ ಬೇರೆ ಪ್ರವಾದನೆಗಳನ್ನು ತೋರಿಸುತ್ತೆ. ಅದರಲ್ಲಿ ಈಗಿನ ಸಮಯದಿಂದ ಅರ್ಮಗೆದೋನ್‌ವರೆಗೂ ಏನೆಲ್ಲಾ ನಡೆಯುತ್ತೆ ಅನ್ನೋದನ್ನು ತಿಳ್ಸೋ ಪ್ರವಾದನೆಗಳೂ ಇವೆ. ರಷ್ಯಾ ಮತ್ತದರ ಮಿತ್ರರಾಷ್ಟ್ರ ಉತ್ತರ ರಾಜ ಆಗಿವೆ. ಆ್ಯಂಗ್ಲೋ-ಅಮೆರಿಕನ್‌ ಲೋಕಶಕ್ತಿ ದಕ್ಷಿಣ ರಾಜನಾಗಿತ್ತು. ಪ್ರವಾದನೆ 10: ಲೋಕದ ಮುಖಂಡರು ಶಾಂತಿ ಮತ್ತು ಭದ್ರತೆ ತಂದಿದ್ದೇವೆ ಎಂದು ಘೋಷಿಸುತ್ತಾರೆ. ಅದ್ರ ನಂತ್ರ ಮಹಾ ಸಂಕಟ ಶುರುವಾಗತ್ತೆ . ಪ್ರವಾದನೆ 11: ರಾಷ್ಟ್ರಗಳು ಸುಳ್ಳು ಧರ್ಮಗಳ ಸಂಘಟನೆಗಳ ಮೇಲೆ ದಾಳಿ ಮಾಡುತ್ತವೆ. ಪ್ರವಾದನೆ 12: ಲೋಕದ ಸರ್ಕಾರಗಳು ದೇವ ಜನ್ರ ಮೇಲೆ ದಾಳಿ ಮಾಡುತ್ತವೆ. ಅಭಿಷಿಕ್ತರಲ್ಲಿ ಉಳಿದವರನ್ನು ಸ್ವರ್ಗಕ್ಕೆ ಒಯ್ಯಲಾಗುತ್ತೆ. ಪ್ರವಾದನೆ 13: ಅರ್ಮಗೆದೋನ್‌. ಬಿಳೀ ಕುದುರೆಯ ಮೇಲೆ ಕುಳಿತವನು ತನ್ನ ಜಯವನ್ನು ಪೂರ್ಣಗೊಳಿಸ್ತಾನೆ. ಏಳು ತಲೆಗಳ ಕಾಡುಮೃಗವು ಸರ್ವನಾಶವಾಗುತ್ತೆ; ಕಬ್ಬಿಣ ಜೇಡಿಮಣ್ಣಿನ ಪಾದವಿರುವ ಬೃಹತ್‌ ಪ್ರತಿಮೆ ನುಚ್ಚುನೂರಾಗುತ್ತೆ. ಈ ಕೆಳಗಿನವುಗಳನ್ನೂ ತೋರಿಸಲಾಗಿದೆ: ಪ್ರವಾದನೆ 1 ರಲ್ಲಿ ತಿಳಿಸಿದ ಏಳು ತಲೆಗಳ ಕಾಡುಮೃಗ ಅರ್ಮಗೆದೋನ್‌ ತನಕ ಅಸ್ತಿತ್ವದಲ್ಲಿರುತ್ತೆ. ಪ್ರವಾದನೆ 5 ರಲ್ಲಿ ತಿಳಿಸಿದ, ಕಬ್ಬಿಣ ಜೇಡಿಮಣ್ಣಿನ ಪಾದ ಅರ್ಮಗೆದೋನ್‌ ತನಕ ಅಸ್ತಿತ್ವದಲ್ಲಿರುತ್ತೆ. ಪ್ರವಾದನೆ 6 ರಲ್ಲಿ ತಿಳಿಸಿದಂತೆ, ಇಂದು ಸುಮಾರು 86,80,000ಕ್ಕಿಂತ ಹೆಚ್ಚು ಪ್ರಚಾರಕರಿದ್ದಾರೆ. ಯೆಹೋವನ ಜನ್ರಿಗೆ ಸಂಭವಿಸಿದ ಘಟನೆಗಳು: 2017 ರಲ್ಲಿ, ರಷ್ಯಾ ಸರ್ಕಾರ ಸಾಕ್ಷಿಗಳನ್ನು ಬಂಧಿಸಿತು ಮತ್ತು ಬ್ರಾಂಚ್‌ ಕಟ್ಟಡಗಳ ಮೇಲೆ ಮುಟ್ಟುಗೋಲು ಹಾಕಿತು.
    ಪ್ರವಾದನೆ 10 ಮತ್ತು 11.

    ವಚನ 1 ಥೆಸ. 5:3; ಪ್ರಕ. 17:16

    ಪ್ರವಾದನೆ ಲೋಕದ ಮುಖಂಡರು “ಶಾಂತಿ ಮತ್ತು ಭದ್ರತೆ” ಎಂದು ಹೇಳುವರು. “ಹತ್ತು ಕೊಂಬು” ಮತ್ತು “ಕಾಡುಮೃಗ” “ವೇಶ್ಯೆ” ಮೇಲೆ ದಾಳಿ ಮಾಡಿ ನಾಶಮಾಡುತ್ತವೆ. ನಂತ್ರ ಲೋಕದ ಎಲ್ಲಾ ಸರ್ಕಾರಗಳು ನಾಶವಾಗುತ್ತವೆ.

    ನೆರವೇರಿಕೆ ಲೋಕದ ಮುಖಂಡರು ಇಡೀ ಲೋಕದಲ್ಲಿ ಶಾಂತಿ ಭದ್ರತೆ ತಂದಿದ್ದೇವೆಂದು ಹೇಳಿಕೊಳ್ತಾರೆ. ನಂತ್ರ ವಿಶ್ವಸಂಸ್ಥೆಯನ್ನು ಬೆಂಬಲಿಸೋ ದೇಶಗಳು ಸುಳ್ಳು ಧರ್ಮದ ಸಂಘಟನೆಗಳನ್ನು ನಾಶ ಮಾಡುತ್ತವೆ. ಆಗ ಮಹಾ ಸಂಕಟ ಶುರುವಾಗುತ್ತೆ. ಈ ಸಂಕಟವು ಅರ್ಮಗೆದೋನ್‌ ಯುದ್ಧದಲ್ಲಿ ಸೈತಾನನ ಲೋಕವನ್ನು ಯೇಸು ನಾಶ ಮಾಡಿದಾಗ ಕೊನೆಗೊಳ್ಳುತ್ತೆ.

  • ಪ್ರವಾದನೆ 12.

    ವಚನ ಯೆಹೆ. 38:11, 14-17; ಮತ್ತಾ. 24:31

    ಪ್ರವಾದನೆ ಗೋಗನು ದೇವಜನ್ರ ದೇಶದೊಳಗೆ ನುಗ್ಗುವನು. ಆಗ ಅಭಿಷಿಕ್ತರಲ್ಲಿ ಉಳಿದವರನ್ನು ದೇವದೂತರು ಒಟ್ಟುಗೂಡಿಸುವರು.

    ನೆರವೇರಿಕೆ ಉತ್ತರ ರಾಜ ಮತ್ತು ಲೋಕದ ಇತರ ಸರ್ಕಾರಗಳು ದೇವಜನ್ರ ಮೇಲೆ ದಾಳಿ ಮಾಡುತ್ತವೆ. ದಾಳಿ ಪ್ರಾರಂಭವಾದ ಸ್ವಲ್ಪದರಲ್ಲೇ ಅಭಿಷಿಕ್ತರಲ್ಲಿ ಉಳಿದವರು ಒಟ್ಟುಗೂಡಿಸಲ್ಪಟ್ಟು ಸ್ವರ್ಗಕ್ಕೆ ಹೋಗ್ತಾರೆ.

  • ಪ್ರವಾದನೆ 13.

    ವಚನ ಯೆಹೆ. 38:18-23; ದಾನಿ. 2:34, 35, 44, 45; ಪ್ರಕ. 6:2; 16:14, 16; 17:14; 19:20

    ಪ್ರವಾದನೆ “ಬಿಳೀ ಕುದುರೆ” ಮೇಲೆ ಕುಳಿತವನು ಗೋಗ ಮತ್ತವನ ಸೈನ್ಯವನ್ನು ನಾಶ ಮಾಡಿ “ತನ್ನ ವಿಜಯ” ಪೂರ್ಣಗೊಳಿಸ್ತಾನೆ. ‘ಕಾಡುಮೃಗವನ್ನು’ ‘ಬೆಂಕಿಯ ಕೆರೆಗೆ ದೊಬ್ಬಲಾಗುತ್ತೆ’ ಮತ್ತು ಒಂದು ಗುಂಡು ಬಂಡೆ ದೊಡ್ಡ ಪ್ರತಿಮೆಯನ್ನು ನುಚ್ಚುನೂರು ಮಾಡುತ್ತೆ.

    ನೆರವೇರಿಕೆ ದೇವರ ರಾಜ್ಯದ ರಾಜನಾಗಿರುವ ಯೇಸು ದೇವಜನ್ರನ್ನು ಕಾಪಾಡ್ತಾನೆ. ಯೇಸು, ಆತನ ಸಹರಾಜರಾದ 1,44,000 ಮಂದಿ ಮತ್ತು ದೇವದೂತ ಪಡೆ ಜನಾಂಗಗಳ ಗುಂಪನ್ನು ನಾಶ ಮಾಡ್ತಾರೆ. ಹೀಗೆ ಸೈತಾನನ ಲೋಕ ಸರ್ವನಾಶವಾಗುತ್ತೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ