ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w21 ಜುಲೈ ಪು. 30-ಪು. 31 ಪ್ಯಾ. 4
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
  • ಅನುರೂಪ ಮಾಹಿತಿ
  • ವಿವಾಹ—ಪ್ರೀತಿಭರಿತ ದೇವರ ಒಂದು ಕೊಡುಗೆ
    “ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ”
  • ಒಳ್ಳೇ ಸಂಗಾತಿಯನ್ನ ಹುಡುಕೋದು ಹೇಗೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
  • ಒಂದು ಯಶಸ್ವೀ ವಿವಾಹಕ್ಕಾಗಿ ತಯಾರಿಸುವುದು
    ಕುಟುಂಬ ಸಂತೋಷದ ರಹಸ್ಯ
  • ಒಬ್ಬ ವಿವಾಹ ಸಂಗಾತಿಯ ಆಯ್ಕೆಮಾಡಲು ದೈವಿಕ ಮಾರ್ಗದರ್ಶನ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
w21 ಜುಲೈ ಪು. 30-ಪು. 31 ಪ್ಯಾ. 4
ಎರಡು ಮೊಬೈಲ್‌ ಫೋನ್‌ಗಳು ಎದುರುಬದುರಾಗಿದೆ. ಹೂಗುಚ್ಛ ಹಿಡ್ಕೊಂಡಿರೋ ಒಬ್ಬ ಹುಡುಗನ ಕೈ ಒಂದು ಮೊಬೈಲ್‌ ಒಳಗಿಂದ ಹೊರಗೆ ಚಾಚಿದೆ. ಆ ಹೂವನ್ನು ತಗೊಳ್ಳೋಕೆ ಇನ್ನೊಂದು ಮೊಬೈಲ್‌ ಒಳಗಿಂದ ಒಂದು ಹುಡುಗಿಯ ಕೈ ಹೊರಗೆ ಚಾಚಿದೆ.

ವಾಚಕರಿಂದ ಪ್ರಶ್ನೆಗಳು

ಯೆಹೋವನ ಸಾಕ್ಷಿಗಳು ಡೇಟಿಂಗ್‌ ಆ್ಯಪ್‌ ಅಥವಾ ಡೇಟಿಂಗ್‌ ವೆಬ್‌ಸೈಟ್‌ಗಳನ್ನ ಬಳಸಬಹುದಾ?

ಮದುವೆಯಾಗೋ ಗಂಡು ಹೆಣ್ಣು ಯಾವಾಗಲೂ ಖುಷಿಖುಷಿಯಾಗಿ ಜೊತೆಯಾಗಿ ಇರಬೇಕು ಅನ್ನೋದೇ ಯೆಹೋವ ದೇವರ ಆಸೆ. (ಮತ್ತಾ. 19:4-6) ನೀವು ಮದುವೆ ಆಗಬೇಕು ಅಂತಿದ್ದೀರಾ? ಹಾಗಾದ್ರೆ ಒಳ್ಳೇ ಹುಡುಗ ಅಥವಾ ಹುಡುಗಿ ಎಲ್ಲಿ ಸಿಕ್ತಾರೆ? ಒಂದು ಗಂಡು-ಹೆಣ್ಣು ಮದುವೆಯಾಗಿ ಜೀವನದಲ್ಲಿ ಖುಷಿಯಾಗಿ ಇರಬೇಕಂದ್ರೆ ಏನು ಮಾಡಬೇಕು ಅಂತ ನಮ್ಮನ್ನ ಸೃಷ್ಟಿ ಮಾಡಿರೋ ಯೆಹೋವ ದೇವರಿಗೆ ಚೆನ್ನಾಗಿ ಗೊತ್ತು. ಹಾಗಾಗಿ ಆತನು ಕೊಟ್ಟಿರೋ ತತ್ವಗಳನ್ನ ಪಾಲಿಸಿದ್ರೆ ಜೀವನದಲ್ಲಿ ಖುಷಿಯಾಗಿ ಇರಬಹುದು. ಅಂಥ ಕೆಲವು ತತ್ವಗಳನ್ನ ಈಗ ನೋಡೋಣ.

ಮೊದಲು ನಮ್ಮ ಬಗ್ಗೆ ಬೈಬಲ್‌ ಹೇಳೋ ಒಂದು ಸತ್ಯನ ಒಪ್ಕೊಬೇಕು. ಅದೇನಂದ್ರೆ ನಮ್ಮ “ಹೃದಯ ಬೇರೆ ಎಲ್ಲದಕ್ಕಿಂತ ಹೆಚ್ಚು ಮೋಸ ಮಾಡುತ್ತೆ, ಅದು ಏನು ಮಾಡೋಕ್ಕೂ ಹಿಂದೆಮುಂದೆ ನೋಡಲ್ಲ.” (ಯೆರೆ. 17:9) ಒಂದು ಹುಡುಗ ಹುಡುಗಿ ಇಷ್ಟಪಟ್ಟಾಗ ಯಾವಾಗಲೂ ಮಾತಾಡ್ತಾ, ಅಲ್ಲಲ್ಲಿ ಸಿಕ್ತಾ ಸಮಯ ಕಳೆಯುವಾಗ ಒಬ್ಬರಿಗೊಬ್ಬರು ತುಂಬ ಹತ್ರ ಆಗಿಬಿಡ್ತಾರೆ. ಅವರಿಗೆ ಬಿಟ್ಟಿರೋಕೆ ಆಗಲ್ಲ. ಹೀಗಾದಾಗ ಸರಿಯಾದ ತೀರ್ಮಾನ ಮಾಡೋಕೆ ಆಗಲ್ಲ. (ಜ್ಞಾನೋ. 28:26) ಅದಕ್ಕೆ ನೀವು ಮದುವೆಯಾಗೋ ವ್ಯಕ್ತಿ ಬಗ್ಗೆ ಚೆನ್ನಾಗಿ ತಿಳ್ಕೊಳ್ಳೋ ಮುಂಚೆನೇ ‘ನಾನು ನಿನ್ನನ್ನೇ ಮದುವೆ ಆಗ್ತೀನಿ’ ಅಂತೆಲ್ಲ ಹೇಳಿಬಿಡಬಾರದು.

“ಜಾಣ ಅಪಾಯ ನೋಡಿ ಅಡಗಿಕೊಳ್ತಾನೆ, ಅನುಭವ ಇಲ್ಲದವನು ಮುಂದೆ ಹೋಗಿ ನಷ್ಟ ಅನುಭವಿಸ್ತಾನೆ” ಅಂತ ಜ್ಞಾನೋಕ್ತಿ 22:3 ಹೇಳುತ್ತೆ. ಈ ಡೇಟಿಂಗ್‌ ಆ್ಯಪ್‌, ವೆಬ್‌ಸೈಟ್‌ಗಳಿಂದ ಆಗೋ ಅಪಾಯ ಏನು? ಎಷ್ಟೋ ಜನ ಡೇಟಿಂಗ್‌ ವೆಬ್‌ಸೈಟ್‌ಗಳಲ್ಲಿ ಬೇರೆಯವರ ಹೆಸರು ಹೇಳ್ಕೊಂಡು ಜನರನ್ನ ನಂಬಿಸಿ ಮೋಸ ಮಾಡ್ತಾರೆ. ಇನ್ನು ಕೆಲವರು ಫೇಕ್‌ ಅಕೌಂಟ್‌ಗಳನ್ನ ಮಾಡ್ಕೊಂಡು ಮುಗ್ಧ ಜನ್ರಿಂದ ದುಡ್ಡು ಹೊಡಿತಾರೆ. ಇವರಲ್ಲಿ ಕೆಲವರು ತಾವು ಯೆಹೋವನ ಸಾಕ್ಷಿಗಳು ಅಂತ ಹೇಳ್ಕೊಂಡು ಬರ್ತಾರೆ. ಆದ್ರೆ ಅವರ ಬಣ್ಣ ಬಯಲಾಗುವಷ್ಟರಲ್ಲಿ ಕಾಲ ಮಿಂಚಿ ಹೋಗಿರುತ್ತೆ.

ಇನ್ನೊಂದು ಅಪಾಯ ನೋಡಿ. ಈ ಡೇಟಿಂಗ್‌ ವೆಬ್‌ಸೈಟ್‌ಗಳು ಯಾರಿಗೆ ಯಾರು ಸರಿಯಾದ ಜೋಡಿ ಅಂತ ಕಂಪ್ಯೂಟರೇ ಲೆಕ್ಕಚಾರ ಹಾಕಿ ತೋರಿಸಿಕೊಡುತ್ತೆ. ಇದ್ರಿಂದ ಸರಿಯಾದ ಜೋಡಿ ಸಿಕ್ತಾರೆ ಅನ್ನೋ ಗ್ಯಾರಂಟಿನೇ ಇಲ್ಲ. ನಿಮ್ಮ ಜೀವನದ ಇಷ್ಟೊಂದು ದೊಡ್ಡ ನಿರ್ಧಾರ ಮಾಡೋಕೆ ಬರೀ ಕಂಪ್ಯೂಟರ್‌ ಲೆಕ್ಕಾಚಾರದ ಮೇಲೆ ಹೊಂದಿಕೊಳ್ಳೋದು ಜಾಣತನನಾ? ಮನುಷ್ಯರು ಮಾಡಿರೋ ಈ ಪ್ರೋಗ್ರಾಮ್‌ಗಳು ಎಲ್ಲಿ, ದೇವರು ಕೊಟ್ಟಿರೋ ಆ ತತ್ವಗಳು ಎಲ್ಲಿ?—ಜ್ಞಾನೋ. 1:7; 3:5-7.

ಜ್ಞಾನೋಕ್ತಿ 14:15ರಲ್ಲಿ ಹೀಗಿದೆ: “ಅನುಭವ ಇಲ್ಲದವನು ಹೇಳಿದ್ದನ್ನೆಲ್ಲ ಕಣ್ಮುಚ್ಚಿ ನಂಬ್ತಾನೆ, ಆದ್ರೆ ಜಾಣ ಪ್ರತಿ ಹೆಜ್ಜೆಯನ್ನ ಚೆನ್ನಾಗಿ ಯೋಚ್ನೆ ಮಾಡಿ ಇಡ್ತಾನೆ.” ಒಬ್ಬ ವ್ಯಕ್ತಿಯನ್ನ ಮದುವೆ ಆಗೋ ಮುಂಚೆ ನಿಮಗೆ ಅವರ ಬಗ್ಗೆ ಚೆನ್ನಾಗಿ ಗೊತ್ತಿರಬೇಕು. ಆದ್ರೆ ಆನ್‌ಲೈನ್‌ ಮೂಲಕ ಒಬ್ಬ ವ್ಯಕ್ತಿ ಬಗ್ಗೆ ಚೆನ್ನಾಗಿ ತಿಳುಕೊಳ್ಳೋಕೆ ಆಗುತ್ತಾ? ಅವರ ಫೋಟೊಗಳನ್ನ, ಪ್ರೊಫೈಲನ್ನ ನೋಡೋದ್ರಿಂದ ಅವರ ಜೊತೆ ಮೆಸೇಜ್‌ ಮಾಡಿ ಸಮಯ ಕಳೆಯೋದ್ರಿಂದ ಅವರ ಬಗ್ಗೆ ಪೂರ್ತಿ ತಿಳುಕೊಳ್ಳೋಕೆ ಆಗುತ್ತಾ? ಈ ತರ ಮಾಡಿ ಕೆಲವರಿಗೆ ನಿಂತ ನೆಲನೇ ಕುಸಿದು ಹೋಗಿದೆ. ಯಾಕಂದ್ರೆ ಆನ್‌ಲೈನಲ್ಲಿ ನೋಡಿದಾಗ ‘ಇವರೇ ನನಗೆ ಸರಿಯಾದ ಜೋಡಿ’ ಅಂತ ಅಂದ್ಕೊಂಡಿದ್ರು. ಆದ್ರೆ ಅವರನ್ನ ನೇರವಾಗಿ ಭೇಟಿಯಾದಾಗ ಕಥೆನೇ ಬೇರೆಯಾಗಿತ್ತು.

“ಮೋಸಗಾರರ ಸಹವಾಸ ಮಾಡಲ್ಲ, ತಮ್ಮ ನಿಜ ಸ್ವರೂಪವನ್ನ ಮುಚ್ಚಿಡೋರಿಂದ ನಾನು ದೂರ ಇರ್ತಿನಿ” ಅಂತ ಕೀರ್ತನೆಗಾರ ಹೇಳಿದ. (ಕೀರ್ತ. 26:4) ಜನ ತಾವು ತುಂಬ ಒಳ್ಳೆಯವರು ಅಂತ ತೋರಿಸಿಕೊಳ್ಳೋಕೆ ಪ್ರೊಫೈಲ್‌ಗಳಲ್ಲಿ ಸುಳ್ಳುಸುಳ್ಳೇ ಹಾಕ್ತಾರೆ. ಕೆಟ್ಟ ಗುಣಗಳನ್ನ ಮುಚ್ಚಿಡ್ತಾರೆ. ಮೆಸೇಜ್‌ ಮಾಡುವಾಗ ತುಂಬ ಒಳ್ಳೆಯವರ ತರ ನಾಟಕ ಆಡ್ತಾರೆ. ಕೆಲವರು ಯೆಹೋವನ ಸಾಕ್ಷಿಗಳು ಅಂತ ಹೇಳಿಕೊಳ್ತಾರೆ. ಆದ್ರೆ ಅವರು ನಿಜವಾಗಲೂ ಎಂಥವರು ಅಂತ ನಮಗೆ ಗೊತ್ತಿರಲ್ಲ. ಅವರಿಗೆ ದೀಕ್ಷಾಸ್ನಾನ ಆಗಿದ್ಯಾ? ಅವರು ಯೆಹೋವನನ್ನ ಪ್ರೀತಿಸೋ ವ್ಯಕ್ತಿನಾ? ಅವರು ನಿಜವಾಗಲೂ ಯೆಹೋವ ದೇವರ ಸ್ನೇಹಿತರಾ? ಸಭೇಲಿ ಅವರಿಗೆ ಒಳ್ಳೇ ಹೆಸರು ಇದ್ಯಾ? ಕೆಟ್ಟ ಹೆಸರು ಇದ್ಯಾ? (1 ಕೊರಿಂ. 15:33; 2 ತಿಮೊ. 2:20, 21) ಅವರಿಗೆ ಬೈಬಲ್‌ ತತ್ವಗಳ ಪ್ರಕಾರ ಮದುವೆ ಆಗೋ ಅವಕಾಶ ಇದ್ಯಾ? ಈ ವಿಷ್ಯಗಳನ್ನ ತಿಳುಕೊಳ್ಳಬೇಕಂದ್ರೆ ಅವರ ಬಗ್ಗೆ ಚೆನ್ನಾಗಿ ಗೊತ್ತಿರೋ ಸಹೋದರ ಸಹೋದರಿಯರ ಹತ್ರನೇ ಕೇಳಬೇಕು. (ಜ್ಞಾನೋ. 15:22) ಯೆಹೋವನಿಗೆ ನಿಯತ್ತಾಗಿರೋ ಒಬ್ಬ ವ್ಯಕ್ತಿ ಯೆಹೋವನ ಆರಾಧಕನಲ್ಲದ ವ್ಯಕ್ತಿ ಜೊತೆ ಮದುವೆ ಆಗೋದ್ರ ಬಗ್ಗೆ ಯೋಚನೆನೇ ಮಾಡಲ್ಲ.—2 ಕೊರಿಂ. 6:14; 1 ಕೊರಿಂ. 7:39.

ಇಂಥ ಡೇಟಿಂಗ್‌ ವೆಬ್‌ಸೈಟ್‌ಗಳಿಂದ ಇಷ್ಟೊಂದು ಅಪಾಯ ಇದೆ ಅಂದಮೇಲೆ ನಿಮಗೆ ಸರಿಯಾದ ಜೋಡಿಯನ್ನ ಹೇಗೆ ಹುಡುಕ್ತೀರಾ? ಕೂಟಗಳಿಗೆ, ಅಧಿವೇಶನಗಳಿಗೆ, ಸಮ್ಮೇಳನಗಳಿಗೆ ಅಥವಾ ಇನ್ನೂ ಬೇರೆಬೇರೆ ಕಾರ್ಯಕ್ರಮಗಳಿಗೆ ಸೇರಿ ಬರೋಕೆ ಅನುಮತಿ ಇದ್ರೆ ನೀವು ಅಲ್ಲಿ ಹುಡುಕಬಹುದು.

ಒಬ್ಬ ಹುಡುಗ ಹುಡುಗಿ ಕೆಫೆಯಲ್ಲಿ ಕೂತು ನಗುನಗ್ತಾ ಮಾತಾಡ್ತಾ ಇದ್ದಾರೆ.

ನೀವಿಬ್ರೂ ಮಾತಾಡುವಾಗ ನಿಮ್ಮ ಗುರಿಗಳು ಒಂದೇನಾ ಅಂತ ಅರ್ಥಮಾಡಿಕೊಳ್ಳೋಕೆ ಆಗುತ್ತೆ

ಕೊರೋನದಂಥ ಕಾಯಿಲೆಯ ಸಮಯದಲ್ಲಿ ಕೂಟಗಳಿಗಾಗಿ ರಾಜ್ಯಸಭಾಗೃಹದಲ್ಲಿ ಸೇರಿಬರೋಕೆ ಆಗಲ್ಲ. ಹಾಗಿದ್ರೂ ಮದುವೆ ಆಗೋಕೆ ಬಯಸುವಂಥ ಬೇರೆ ಸಹೋದರ ಸಹೋದರಿಯರನ್ನ ಪರಿಚಯ ಮಾಡ್ಕೊಬಹುದು. ಆನ್‌ಲೈನ್‌ ಕೂಟಗಳಲ್ಲಿ ಅವರ ಭಾಷಣಗಳನ್ನ, ಅವರು ಕೊಡೋ ಉತ್ತರಗಳನ್ನ ಕೇಳಿಸ್ಕೊಬಹುದು. (1 ತಿಮೊ. 6:11, 12) ಅಷ್ಟೇ ಅಲ್ಲ, ಕೂಟ ಮುಗಿದ ಮೇಲೆ ಬ್ರೇಕ್‌ಔಟ್‌ ರೂಮ್‌ಗಳಲ್ಲೂ ಅವರ ಜೊತೆ ಮಾತಾಡಬಹುದು. ಆನ್‌ಲೈನ್‌ನಲ್ಲಿ ಗೆಟ್‌-ಟುಗೆದರ್‌ ನಡೆಯವಾಗಲೂ ನಿಮಗೆ ಇಷ್ಟ ಆಗಿರೋ ಒಬ್ಬ ಸಹೋದರ ಅಥವಾ ಸಹೋದರಿಯ ಬಗ್ಗೆ ಹೆಚ್ಚು ತಿಳುಕೊಳ್ಳೋಕೆ ಆಗುತ್ತೆ. ಅವರು ಬೇರೆಯವರ ಜೊತೆ ಹೇಗೆ ನಡಕೊಳ್ತಾರೆ, ಅವರ ಸ್ವಭಾವ-ಗುಣಗಳು ಏನು ಅಂತ ಗಮನಿಸೋಕೆ ಆಗುತ್ತೆ. (1 ಪೇತ್ರ 3:4) ಈ ರೀತಿ ನೀವು ಅವರ ಜೊತೆ ಸಮಯ ಕಳೆದಾಗ ಅವರ ಬಗ್ಗೆ ಜಾಸ್ತಿ ತಿಳುಕೊಳ್ಳೋಕೆ ಆಗುತ್ತೆ. ನಿಮ್ಮಿಬ್ಬರ ಗುರಿ ಒಂದೇನಾ, ನಿಮಗೆ ಅವರು ಸರಿಯಾದ ಜೋಡಿನಾ ಅಂತ ಅರ್ಥ ಮಾಡಿಕೊಳ್ಳೋಕೆ ಆಗುತ್ತೆ.

ಮದುವೆಯಾಗೋಕೆ ಇಷ್ಟಪಡುವವರು ಬೈಬಲ್‌ ತತ್ವಗಳನ್ನ ಮನಸ್ಸಲ್ಲಿಟ್ಟು ಸಂಗಾತಿಯನ್ನ ಹುಡುಕಿ ಮದುವೆಯಾದ್ರೆ ಅವರು ಯಾವಾಗಲು ಖುಷಿಖುಷಿಯಾಗಿ ಇರ್ತಾರೆ. ಅವರಿಗೆ ‘ಒಳ್ಳೇ ಹೆಂಡತಿ [ಅಥವಾ ಒಳ್ಳೇ ಗಂಡ] ಸಿಕ್ಕಿದ್ರೆ ಬೆಲೆಕಟ್ಟೋಕೆ ಆಗದ ನಿಧಿ ಸಿಕ್ಕಿದ ಹಾಗೆ. ಅವರು ಯೆಹೋವನ ಆಶೀರ್ವಾದ ಪಡೀತಾರೆ.’—ಜ್ಞಾನೋ. 18:22.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ