ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • wp22 ನಂ. 1 ಪು. 4-5
  • ಇಷ್ಟೊಂದು ದ್ವೇಷ ಯಾಕಿದೆ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಇಷ್ಟೊಂದು ದ್ವೇಷ ಯಾಕಿದೆ?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2022
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ದ್ವೇಷ ಅಂದ್ರೆ ಏನು?
  • ಜನರಲ್ಲಿ ದ್ವೇಷ ಹೇಗೆ ಶುರುವಾಯ್ತು?
  • ದ್ವೇಷ ಹೇಗೆ ಹಬ್ಬುತ್ತೆ?
  • ದ್ವೇಷ ಹೊತ್ತಿ ಉರಿಯೋಕೆ ಇರುವ ಕಾರಣಗಳನ್ನ ಬೈಬಲ್‌ ತಿಳಿಸುತ್ತೆ
  • ದ್ವೇಷವನ್ನು ಜಯಿಸಲು ನಮ್ಮಿಂದಾಗುತ್ತೆ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2022
  • ದ್ವೇಷ ಶಾಶ್ವತವಾಗಿ ಕಣ್ಮರೆಯಾಗುತ್ತೆ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2022
  • ಏಕೆ ಇಷ್ಟೊಂದು ದ್ವೇಷ?
    ಎಚ್ಚರ!—1997
  • ಯಾಕಿಷ್ಟು ದ್ವೇಷ?—ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?
    ಇತರ ವಿಷಯಗಳು
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2022
wp22 ನಂ. 1 ಪು. 4-5

ಇಷ್ಟೊಂದು ದ್ವೇಷ ಯಾಕಿದೆ?

ಈ ಲೋಕದಲ್ಲಿ ಇಷ್ಟೊಂದು ದ್ವೇಷ ಇರೋಕೆ ಕಾರಣ ಏನು? ಇದನ್ನ ತಿಳಿಯಲು, ದ್ವೇಷ ಅಂದ್ರೆ ಏನು? ಜನರಲ್ಲಿ ಹೇಗೆ ದ್ವೇಷ ಶುರುವಾಯ್ತು? ಮತ್ತು ಅದು ಹೇಗೆ ಹಬ್ಬುತ್ತೆ? ಅಂತ ತಿಳ್ಕೊಬೇಕು.

ದ್ವೇಷ ಅಂದ್ರೆ ಏನು?

ಒಬ್ಬ ವ್ಯಕ್ತಿಯನ್ನ ಅಥವಾ ಒಂದು ಗುಂಪನ್ನ ಒಂಚೂರು ಇಷ್ಟ ಪಡದಿರೋದು ಅಥವಾ ಅವರ ಮೇಲೆ ತೀವ್ರವಾದ ಹಗೆ ಸಾಧಿಸೋದು ಅಂತರ್ಥ. ಇದು, ಅವರಿಗೆ ಕೆಟ್ಟದು ಮಾಡಬೇಕಂತ ಯಾವಾಗಲೂ ಯೋಚಿಸುತ್ತಾ ಇರುವ ಒಂದು ಭಾವನೆಯಾಗಿದೆ.

ಜನರಲ್ಲಿ ದ್ವೇಷ ಹೇಗೆ ಶುರುವಾಯ್ತು?

ಜನರು ದ್ವೇಷಿಸೋಕೆ ತುಂಬ ಕಾರಣಗಳಿವೆ. ಕೆಲವು ಜನರು ಯಾವುದೇ ತಪ್ಪು ಮಾಡದೆ ಇದ್ರೂ ಅವರು ಒಂದು ನಿರ್ದಿಷ್ಟ ಗುಂಪಿಗೆ ಸೇರಿರೋದ್ರಿಂದ ಜನ ಅವರನ್ನ ದ್ವೇಷಿಸುತ್ತಾರೆ. ಅಷ್ಟೆ ಅಲ್ಲ ಅವರು ಕೆಟ್ಟವರು, ಅವರಿಂದ ನಮಗೆ ಹಾನಿ ಆಗುತ್ತೆ, ಅವರು ಯಾವತ್ತು ಬದಲಾಗಲ್ಲ ಅನ್ನೋ ಯೋಚನೆ ಇರೋದ್ರಿಂದ ಅವರನ್ನ ದ್ವೇಷಿಸ್ತಾರೆ. ಇದರಿಂದಾಗಿ ಅವರನ್ನ ಕೀಳಾಗಿ ನೋಡ್ತಾರೆ ಮತ್ತು ಇವರು ಆಕ್ರಮಣಕಾರಿಗಳು, ಸಮಸ್ಯೆ ಆಗೋಕೆ ಇವರೇ ಕಾರಣ ಅಂತ ನೆನಸುತ್ತಾರೆ. ಬೇರೆಯವರ ಮೇಲೆ ದ್ವೇಷ ತೋರಿಸೋ ವ್ಯಕ್ತಿ ತನ್ನ ಜೀವನದಲ್ಲಿ ಹಿಂಸೆ, ಅನ್ಯಾಯ ಅಥವಾ ಕಷ್ಟಗಳನ್ನ ಅನುಭವಿಸಿರೋದ್ರಿಂದ ಬೇರೆಯವರಿಗೂ ಅದನ್ನೇ ಮಾಡಬೇಕು ಅಂತ ಬಯಸ್ತಾನೆ.

ದ್ವೇಷ ಹೇಗೆ ಹಬ್ಬುತ್ತೆ?

ಒಬ್ಬ ವ್ಯಕ್ತಿಯ ಅಥವಾ ಒಂದು ಗುಂಪಿನ ಪರಿಚಯ ಇಲ್ದೇ ಇದ್ರೂ ಜನ ಅವರನ್ನ ದ್ವೇಷಿಸುತ್ತಾರೆ. ಉದಾಹರಣೆಗೆ, ಪಕ್ಷಪಾತ ಮಾಡೋ ಗುಣ ನಮ್ಮ ಸ್ನೇಹಿತರಿಗೆ ಅಥವಾ ನಾವು ತುಂಬ ಪ್ರೀತಿಸೋ ಜನರಿಗೆ ಇರೋದಾದ್ರೆ ನಮಗೆ ಗೊತ್ತಿಲ್ಲದ ಹಾಗೆ ಆ ಗುಣ ನಮ್ಮಲ್ಲೂ ಬರಬಹುದು. ಹೀಗೆ ದ್ವೇಷ ಅನ್ನೋ ಸೋಂಕು ಸುಲಭವಾಗಿ ಹರಡುತ್ತೆ.

ದ್ವೇಷ ಒಬ್ಬರಿಂದ ಒಬ್ಬರಿಗೆ ಹರಡುತ್ತಾ ಒಂದು ಅಂಟುರೋಗದ ತರ ಇಡೀ ಲೋಕವನ್ನೇ ತುಂಬಿಕೊಂಡಿದೆ. ದ್ವೇಷ ಹಬ್ಬಿರೋಕೆ ಇನ್ನೊಂದು ಮುಖ್ಯ ಕಾರಣ ಇದೆ. ಅದನ್ನ ತಿಳಿಯೋಕೆ ದ್ವೇಷ ಅನ್ನೋ ಜ್ವಾಲೆಯನ್ನು ಯಾರು ಹೊತ್ತಿಸಿದ್ರು ಅಂತ ಬೈಬಲಿಂದ ತಿಳಿಯೋಣ.

ದ್ವೇಷ ಹೊತ್ತಿ ಉರಿಯೋಕೆ ಇರುವ ಕಾರಣಗಳನ್ನ ಬೈಬಲ್‌ ತಿಳಿಸುತ್ತೆ

ವೃತ್ತಾಕಾರವಾಗಿ ಸುತ್ತುತ್ತಿರೋ ಬಾಣಗಳ ಚಿತ್ರ ದ್ವೇಷದ ಸರಪಳಿಗೆ ಇರೋ ಕಾರಣಗಳನ್ನು ತಿಳಿಸುತ್ತಿದೆ. 1. ತಪ್ಪು ತಪ್ಪಾದ ಮಾಹಿತಿಯಲ್ಲಿ ಗುಂಪಿನಿಂದ ಬರೋ ಒತ್ತಡ, ಸೋಶಿಯಲ್‌ ಮೀಡಿಯಾ, ವರದಿಗಳು ಇವೆ. 2. ಹೆಚ್ಚು ಮಾಹಿತಿ ಇಲ್ಲದ ವಿಷಯಗಳು ಬೇರೆಯವರ ಸಂಸ್ಕೃತಿ, ಜಾತಿ, ಧರ್ಮ 3. ಜನರು ಭಯ ಪಡೋದು ಬದಲಾವಣೆಗೆ, ನಷ್ಟವಾಗುತ್ತೆ ಅನ್ನೋ ಕಾರಣಕ್ಕೆ, ಮುಂದೆ ಏನಾಗುತ್ತೆ ಅಂತ ಗೊತ್ತಿಲ್ಲದೆ ಇರೋದಕ್ಕೆ. 4. ದ್ವೇಷದಲ್ಲಿ ಪೂರ್ವಾಭಿಪ್ರಾಯ, ಭೇದಭಾವ, ಹಿಂಸೆ ಇದೆ.

ದ್ವೇಷ ಶುರುವಾಗಿದ್ದು ಮನುಷ್ಯರಿಂದಲ್ಲ. ದ್ವೇಷದ ಜ್ವಾಲೆ ಹೊತ್ತಿಸಿದ್ದು ಸ್ವರ್ಗದಲ್ಲಿದ್ದ ಒಬ್ಬ ದೇವದೂತ. ಇವನು ದೇವರ ವಿರುದ್ಧನೇ ದಂಗೆ ಎದ್ದು ಪಿಶಾಚ ಅಥವಾ ಸೈತಾನನಾದ. ಇವನು ದಂಗೆ ಎದ್ದಾಗ ‘ಒಬ್ಬ ಕೊಲೆಗಾರನಾಗಿದ್ದ’. ‘ಸುಳ್ಳು ಬುರುಕ ಮತ್ತು ಸುಳ್ಳನ್ನು ಹುಟ್ಟಿಸಿದ’ ಇವನು, ಜನರು ದ್ವೇಷದಿಂದ ಹೊತ್ತಿ ಉರಿಯೋ ತರ ಮತ್ತು ಆಕ್ರಮಣಕಾರಿ ಮನೋಭಾವ ಬೆಳೆಸಿಕೊಳ್ಳೋ ತರ ಪ್ರೇರಿಸುತ್ತಾ ಇರ್ತಾನೆ. (ಯೋಹಾನ 8:44; 1 ಯೋಹಾನ 3:11, 12) ಇವನೊಬ್ಬ ಕೋಪಿಷ್ಠ , ತಪ್ಪು ತಪ್ಪಾಗಿ ಹೇಳುವವನು ಮತ್ತು ಆಕ್ರಮಣಕಾರಿ ಅಂತ ಬೈಬಲ್‌ ಹೇಳುತ್ತೆ.—ಯೋಬ 2:7; ಪ್ರಕಟನೆ 12:9, 12, 17.

ದ್ವೇಷ ಅನ್ನೋದು ಮನುಷ್ಯನ ರಕ್ತದಲ್ಲೇ ಇದೆ. ಮೊದಲನೇ ಮನುಷ್ಯ ಆದಾಮ, ಸೈತಾನ ಹೋದ ಅದೇ ತಪ್ಪು ದಾರಿ ಹಿಡಿದ. ಇದರಿಂದ ಇಡೀ ಮನುಕುಲಕ್ಕೆ ಪಾಪ ಮತ್ತು ಅಪರಿಪೂರ್ಣತೆ ಬಂತು. (ರೋಮನ್ನರಿಗೆ 5:12) ಆದಾಮನ ಮೊದಲನೇ ಮಗ ಕಾಯಿನ ದ್ವೇಷದಿಂದ ತನ್ನ ತಮ್ಮನಾದ ಹೇಬೆಲನನ್ನ ಕೊಂದ. (1 ಯೋಹಾನ 3:12) ಇವತ್ತು ತುಂಬ ಜನ ಪ್ರೀತಿ, ಕರುಣೆ ತೋರಿಸ್ತಾರೆ ಅನ್ನೋದು ನಿಜನೇ. ಆದ್ರೆ ಅನುವಂಶಿಕವಾಗಿ ಬಂದಿರೋ ಪಾಪದಿಂದ ಜನರಲ್ಲಿ ಸ್ವಾರ್ಥ, ಅಸೂಯೆ ಮತ್ತು ಅಹಂಕಾರ ಇದೆ. ಈ ಗುಣಗಳು ದ್ವೇಷ ಅನ್ನೋ ಬೆಂಕಿಗೆ ಇಂಧನ ಸುರಿದ ಹಾಗೆ.—2 ತಿಮೊತಿ 3:1-5.

ಜನರಲ್ಲಿರೋ ಮನೋಭಾವದಿಂದ ದ್ವೇಷ ಹೆಚ್ಚಾಗುತ್ತಿದೆ. ದ್ವೇಷ ತೋರಿಸೋಕೆ ಪ್ರೇರೆಪಿಸುವ ಲೋಕದಲ್ಲಿ ನಾವಿದ್ದೀವಿ. ಹಾಗಾಗಿ ಬೇರೆಯವರಿಗೆ ಕರುಣೆ ತೋರಿಸದಂತೆ ಅಥವಾ ಹಾನಿಕರ ಮನೋಭಾವ ಬೆಳೆಸಿಕೊಳ್ಳುವಂತೆ ಈ ಲೋಕ ಮಾಡುತ್ತೆ. ಬೇರೆಯವರಿಗೆ ಒಳ್ಳೆದಾಗೋದನ್ನ ಸಹಿಸದೆ ಇರೋದು, ಪೂರ್ವಾಭಿಪ್ರಾಯ, ನಿಂದಿಸುವ ಮಾತುಗಳು, ಪೀಡಿಸೋದು ಅಥವಾ ಬೇರೆಯವರ ವಸ್ತುಗಳನ್ನ ನಾಶ ಮಾಡುವಂತ ಮನೋಭಾವ ಈ ಲೋಕದಲ್ಲಿ ಹೆಚ್ಚಾಗಿದೆ. ಇದಕ್ಕೆ ಕಾರಣ, “ಇಡೀ ಲೋಕ ಸೈತಾನನ ಕೈಯಲ್ಲಿದೆ.”—1 ಯೋಹಾನ 5:19.

ಬೈಬಲ್‌ನಲ್ಲಿ ದ್ವೇಷಕ್ಕೆ ಕಾರಣವಾಗಿರೋ ವಿಷಯಗಳ ಬಗ್ಗೆ ಮಾತ್ರವಲ್ಲ ಅದಕ್ಕಿರೋ ಪರಿಹಾರದ ಬಗ್ಗೆನೂ ಹೇಳುತ್ತೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ