ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w25 ಸೆಪ್ಟೆಂಬರ್‌ ಪು. 31
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ಅನುರೂಪ ಮಾಹಿತಿ
  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು—1992
  • ಹದ್ದುಗಳಂತೆ ರೆಕ್ಕೆಗಳೊಂದಿಗೆ ಮೇಲೇರುವುದು
    ಕಾವಲಿನಬುರುಜು—1996
  • ಹದ್ದಿನ ಕಣ್ಣು
    ಎಚ್ಚರ!—2003
  • ಪರಮಗೀತ ಮುಖ್ಯಾಂಶಗಳು
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
w25 ಸೆಪ್ಟೆಂಬರ್‌ ಪು. 31

ವಾಚಕರಿಂದ ಪ್ರಶ್ನೆಗಳು

ಜ್ಞಾನೋಕ್ತಿ 30:18, 19ರಲ್ಲಿ ‘ಯುವತಿ ಜೊತೆ ಗಂಡಸು ನಡ್ಕೊಳ್ಳೋ ರೀತಿ ಅರ್ಥ ಆಗದ ವಿಷ್ಯ’ ಅಂತ ಇದೆ. ಈ ಮಾತಿನ ಅರ್ಥ ಏನು?

ತುಂಬ ಜನ ಈ ಮಾತಿನ ಅರ್ಥ ಏನು ಅಂತ ತಲೆ ಕೆಡಿಸ್ಕೊಂಡಿದ್ದಾರೆ. ಬೈಬಲ್‌ ಜ್ಞಾನ ಇರೋ ವಿದ್ವಾಂಸರು ಕೂಡ ಇದ್ರ ಬಗ್ಗೆ ಯೋಚಿಸಿದ್ದಾರೆ. ಹೊಸ ಲೋಕ ಭಾಷಾಂತರದಲ್ಲಿ ಈ ವಚನ ಹೀಗಿದೆ, “ನನಗೆ ಅರ್ಥ ಆಗದ ಮೂರು ವಿಷ್ಯ ಇದೆ, ನಾಲ್ಕು ವಿಷ್ಯ ನನಗಿನ್ನೂ ಅರ್ಥ ಆಗಿಲ್ಲ. ಅದೇನಂದ್ರೆ: ಆಕಾಶದಲ್ಲಿ ಹಾರೋ ಹದ್ದಿನ ದಾರಿ, ಬಂಡೆ ಮೇಲೆ ಹರಿದಾಡೋ ಹಾವಿನ ದಾರಿ, ವಿಶಾಲ ಸಮುದ್ರದಲ್ಲಿ ಹೋಗೋ ಹಡಗಿನ ದಾರಿ, ಯುವತಿ ಜೊತೆ ಗಂಡಸು ನಡ್ಕೊಳ್ಳೋ ರೀತಿ.”—ಜ್ಞಾನೋ. 30:18, 19.

‘ಯುವತಿ ಜೊತೆ ಗಂಡಸು ನಡಕೊಳ್ಳೋ ರೀತಿ’ ಅನ್ನೋ ಈ ಮಾತು ಒಂದು ಕೆಟ್ಟ ವಿಷ್ಯನ ಸೂಚಿಸುತ್ತೆ ಅಂತ ಈ ಮುಂಚೆ ಅರ್ಥ ಮಾಡ್ಕೊಂಡಿದ್ವಿ. ಯಾಕೆ? ಯಾಕಂದ್ರೆ 15 ಮತ್ತು 16ನೇ ವಚನದಲ್ಲಿ ‘ತೃಪ್ತಿಯಾಗದ ಕೆಲವು ಕೆಟ್ಟ ವಿಷ್ಯಗಳ’ ಬಗ್ಗೆ ಇದೆ. (ಜ್ಞಾನೋ. 30:15, 16) 20ನೇ ವಚನದಲ್ಲಿ ‘ನಾನೇನು ತಪ್ಪು ಮಾಡಿಲ್ಲ’ ಅಂತ ಹೇಳೋ ಒಬ್ಬ ವ್ಯಭಿಚಾರಿ ಹೆಂಗಸಿನ ಬಗ್ಗೆ ಇದೆ. ಹಾಗಾಗಿ ಆಕಾಶದಲ್ಲಿ ಹದ್ದು ಹಾರುವಾಗ, ಬಂಡೆ ಮೇಲೆ ಹಾವು ಹರಿದಾಡುವಾಗ, ವಿಶಾಲ ಸಮುದ್ರದಲ್ಲಿ ಹಡಗು ಹೋಗುವಾಗ ಯಾವ ಸುಳಿವನ್ನೂ ಬಿಡದೆ ಚಲಿಸುತ್ತೆ. ಅದೇ ತರನೇ ಒಬ್ಬ ಗಂಡಸು ತಾನು ಮಾಡೋ ಕೆಲಸದ ಬಗ್ಗೆ ಯಾರಿಗೂ ಯಾವ ಸುಳಿವೂ ಬಿಡದೇ ಇರ್ತಾನೆ ಅಂತ ಅರ್ಥ ಮಾಡ್ಕೊಂಡಿದ್ವಿ. ಅಂದ್ರೆ ಒಬ್ಬ ಕುತಂತ್ರಿ ಯುವಕ ಒಂದು ಮುಗ್ಧ ಹುಡುಗಿನ ತನ್ನ ಜೊತೆ ಅನೈತಿಕತೆಗೆ ಯಾರಿಗೂ ಅನುಮಾನ ಬರದಂತೆ ಪುಸಲಾಯಿಸೋದನ್ನ ಸೂಚಿಸುತ್ತೆ ಅಂತ ಅಂದ್ಕೊಂಡಿದ್ವಿ.

ಆದ್ರೆ 18, 19ನೇ ವಚನದಲ್ಲಿ ಹದ್ದು, ಹಾವು ಮತ್ತು ಹಡಗು ಒಂದು ಒಳ್ಳೆ ವಿಷ್ಯನ ತಿಳಿಸ್ತಿದೆ ಅಂತ ಈಗ ಗೊತ್ತಾಗಿದೆ. ಇವುಗಳ ಬಗ್ಗೆ ಬರೆಯುವಾಗ ಆ ಲೇಖಕ, ಆ ವಿಷ್ಯಗಳನ್ನ ನೋಡಿ ಆಶ್ಚರ್ಯಪಟ್ಟಿದ್ದಾನೆ ಅಷ್ಟೇ.

ಮೂಲ ಹೀಬ್ರೂ ಭಾಷೆಲಿ ಈ ವಚನನ ನೋಡಿದ್ರೆ ಅದಕ್ಕೊಂದು ಒಳ್ಳೆ ಅರ್ಥ ಇದೆ ಅಂತ ಗೊತ್ತಾಗುತ್ತೆ. ಥಿಯೋಲಾಜಿಕಲ್‌ ಲೆಕ್ಸಿಕನ್‌ ಆಫ್‌ ದಿ ಓಲ್ಡ್‌ ಟೆಸ್ಟಮೆಂಟ್‌ ಅನ್ನೋ ಪುಸ್ತಕ ಜ್ಞಾನೋಕ್ತಿ 30:18ರಲ್ಲಿರೋ ‘ನನಗೆ ಅರ್ಥ ಆಗದ ವಿಷ್ಯ’ ಅನ್ನೋ ಹೀಬ್ರೂ ಪದ “ಒಬ್ಬ ವ್ಯಕ್ತಿ ಒಂದು ವಿಷ್ಯನ ನೋಡಿ ಆಶ್ಚರ್ಯ ಪಡೋದನ್ನ, ಅಸಾಧ್ಯ ಅಂದ್ಕೊಳ್ಳೋದನ್ನ, ಅದ್ಭುತ ಅಂತ ನೆನಸೋದನ್ನ” ಸೂಚಿಸುತ್ತೆ ಅಂತ ವಿವರಿಸುತ್ತೆ.

ಅಮೆರಿಕಾದ ಹಾರ್ವರ್ಡ್‌ ಯೂನಿವರ್ಸಿಟಿಯ ಪ್ರೊಫೆಸರ್‌ ಆಗಿರೋ ಕ್ರಫರ್ಡ್‌ ಹೆಚ್‌. ಟಾಯ್‌ ಅನ್ನೋರು ಕೂಡ ಈ ಬೈಬಲ್‌ ವಚನ ಕೆಟ್ಟ ವಿಷ್ಯದ ಬಗ್ಗೆ ಮಾತಾಡ್ತಿಲ್ಲ. “ಈ ವಚನನ ಬರೆದಿರೋ ಲೇಖಕ ಈ ವಿಷ್ಯಗಳು ಎಷ್ಟು ಅದ್ಭುತವಾಗಿದೆ ಅಂತ ವಿವರಿಸ್ತಿದ್ದಾನೆ ಅಷ್ಟೇ” ಅಂತ ಹೇಳಿದ್ದಾರೆ.

ಹಾಗಾಗಿ ಜ್ಞಾನೋಕ್ತಿ 30:18, 19ರಲ್ಲಿರೋ ಮಾತುಗಳು ಅದ್ಭುತವಾಗಿರೋ, ನಮ್ಮ ಸಾಮರ್ಥ್ಯಕ್ಕೂ ಮೀರಿರೋ ವಿಷ್ಯಗಳನ್ನ ಸೂಚಿಸ್ತಿದೆ ಅಂತ ಹೇಳಬಹುದು. ಆ ಬೈಬಲ್‌ ಲೇಖಕನ ತರನೇ ನಮಗೂ ಆಕಾಶದಲ್ಲಿ ಹಾರೋ ಹದ್ದುನ ನೋಡಿದಾಗ, ಕಾಲಿಲ್ಲದ ಹಾವು ಬಂಡೆಯ ಮೇಲೆ ಹರಿದಾಡೋದನ್ನ ನೋಡಿದಾಗ, ಸಮುದ್ರದಲ್ಲಿ ದೊಡ್ಡ ಹಡಗು ಹೋಗೋದನ್ನ ನೋಡಿದಾಗ ಆಶ್ಚರ್ಯ ಆಗುತ್ತೆ. ಹಾಗೆನೇ ಒಬ್ಬ ಯುವಕ ಮತ್ತು ಒಬ್ಬ ಹುಡುಗಿ ಪ್ರೀತಿಲಿ ಬೀಳೋದನ್ನ, ಅವರು ಖುಷಿ ಖುಷಿಯಾಗಿ ಬಾಳೋದನ್ನ ನೋಡಿದಾಗ ಆಶ್ಚರ್ಯ ಆಗುತ್ತೆ ಅನ್ನೋದು ಇದ್ರ ಅರ್ಥ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ