ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ijwbq ಲೇಖನ 115
  • ಮಹಾ ಸಂಕಟ ಅಂದ್ರೆ ಏನು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಹಾ ಸಂಕಟ ಅಂದ್ರೆ ಏನು?
  • ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಬೈಬಲ್‌ ಕೊಡೋ ಉತ್ತರ
  • ‘ಮಹಾ ಸಂಕಟದಲ್ಲಿ’ ನಂಬಿಗಸ್ತರಾಗಿರಲು ನಾವು ಏನು ಮಾಡಬೇಕು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
  • “ಈ ಸಂಗತಿಗಳು ಯಾವಾಗ ಸಂಭವಿಸುವವು?”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
  • ಲೋಕಕ್ಕೆ ಅಂತ್ಯ ಹೇಗೆ ಬರಲಿದೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
  • ಮಹಾ ಬಾಬೆಲ್‌ ಯಾವುದನ್ನ ಸೂಚಿಸುತ್ತೆ?
    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
ಇನ್ನಷ್ಟು
ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
ijwbq ಲೇಖನ 115
ಮಹಾಸಂಕಟದಿಂದ ಪಾರಾಗಿರೋರು ಒಬ್ಬರಿಗೊಬ್ಬರು ಅಪ್ಪಿಕೊಂಡಿದ್ದಾರೆ

ಮಹಾ ಸಂಕಟ ಅಂದ್ರೆ ಏನು?

ಬೈಬಲ್‌ ಕೊಡೋ ಉತ್ತರ

ಮಹಾ ಸಂಕಟ ಮುಂದೆ ಆಗೋ ಒಂದು ಪ್ರಾಮುಖ್ಯ ಘಟನೆಯಾಗಿದೆ. ಈ ಸಮಯದಲ್ಲಿ ಮನುಷ್ಯರು ಇದುವರೆಗೂ ಅನುಭವಿಸದೇ ಇರುವಷ್ಟು ಕಷ್ಟಗಳನ್ನ ಅನುಭವಿಸ್ತಾರೆ. ಬೈಬಲ್‌ ಭವಿಷ್ಯವಾಣಿ ಹೇಳೋ ತರ ಈ ಮಹಾ ಸಂಕಟ “ಕೊನೇ ದಿನ” ಅಥವಾ “ಅಂತ್ಯದ” ಸಮಯದಲ್ಲಿ ನಡೆಯುತ್ತೆ. (2 ತಿಮೊತಿ 3:1; ದಾನಿಯೇಲ 12:4) ಅದು ಹೇಗಿರುತ್ತೆ? “ದೇವರು ಜನ್ರನ್ನ ಸೃಷ್ಟಿ ಮಾಡಿದಾಗಿಂದ ಇವತ್ತಿನ ತನಕ ಅಂಥ ಕಷ್ಟ ಬಂದೇ ಇಲ್ಲ. ಇನ್ನು ಮುಂದೆನೂ ಬರಲ್ಲ.”—ಮಾರ್ಕ 13:19; ದಾನಿಯೇಲ 12:1; ಮತ್ತಾಯ 24:21, 22.

ಮಹಾಸಂಕಟದ ಸಮಯದಲ್ಲಿ ನಡಿಯೋ ಘಟನೆಗಳು

  • ಸುಳ್ಳು ಧರ್ಮದ ನಾಶನ. ಕಣ್ಮುಚ್ಚಿ ತೆಗೆಯೋಷ್ಟರಲ್ಲಿ ಸುಳ್ಳು ಧರ್ಮ ನಾಶ ಆಗುತ್ತೆ. (ಪ್ರಕಟನೆ 17:1, 5; 18:9, 10, 21) ಈ ನಾಶವನ್ನ ರಾಜಕೀಯ ಶಕ್ತಿಗಳನ್ನ ಪ್ರತಿನಿಧಿಸೋ ವಿಶ್ವ ಸಂಸ್ಥೆ ಮೂಲಕ ದೇವರು ಮಾಡ್ತಾನೆ.—ಪ್ರಕಟನೆ 17:3, 15-18.a

  • ಸತ್ಯ ಧರ್ಮದ ಮೇಲೆ ಆಕ್ರಮಣ. ಯೆಹೆಜ್ಕೇಲ ಪುಸ್ತಕದಲ್ಲಿ ಹೇಳಿರೋ “ಮಾಗೋಗ್‌ ದೇಶದ ಗೋಗ” ಜನಾಂಗಗಳ ಗುಂಪನ್ನ ಸೂಚಿಸುತ್ತೆ. ಇದು ಸತ್ಯ ಧರ್ಮದ ಮೇಲೆ ಆಕ್ರಮಣ ಮಾಡುತ್ತೆ. ಆದ್ರೆ ದೇವರು ತನ್ನ ಆರಾಧಕರನ್ನ ಕಾಪಾಡ್ತಾನೆ.—ಯೆಹೆಜ್ಕೇಲ 38:1, 2, 9-12, 18-23.

  • ಭೂಮಿ ಮೇಲಿರೋ ಜನರಿಗೆ ನ್ಯಾಯತೀರ್ಪು. ಯೇಸು ಭೂಮಿಯಲ್ಲಿರೋ ಎಲ್ಲಾ ಜನರಿಗೆ ನ್ಯಾಯತೀರ್ಪು ಮಾಡ್ತಾನೆ. “ಒಬ್ಬ ಕುರುಬ ಕುರಿಗಳನ್ನ ಆಡುಗಳಿಂದ ಬೇರೆ ಮಾಡೋ ತರ” ಜನರನ್ನ ಬೇರೆ ಮಾಡ್ತಾನೆ. (ಮತ್ತಾಯ 25:31-33) ಯಾವ ಆಧಾರದ ಮೇಲೆ ನ್ಯಾಯತೀರ್ಪು ಮಾಡ್ತಾನೆ? ತನ್ನ ಜೊತೆ ಸ್ವರ್ಗದಲ್ಲಿ ಆಳುವ ‘ಸಹೋದರರಿಗೆ’ ಜನ ಹೇಗೆ ಬೆಂಬಲ ಕೊಟ್ಟರು ಅನ್ನೋದರ ಮೇಲೆ ನ್ಯಾಯತೀರ್ಪು ಮಾಡ್ತಾನೆ.—ಮತ್ತಾಯ 25:34-46.

  • ದೇವರ ಸರ್ಕಾರದ ರಾಜರ ಒಟ್ಟುಗೂಡಿಸುವಿಕೆ. ಯೇಸು ತನ್ನ ಜೊತೆ ಆಳೋದಕ್ಕೆ ಆರಿಸಿಕೊಂಡ ನಂಬಿಗಸ್ತ ರಾಜರು ತಮ್ಮ ಭೂ ಜೀವನವನ್ನ ಮುಗಿಸಿ ಸ್ವರ್ಗಕ್ಕೆ ಹೋಗ್ತಾರೆ.—ಮತ್ತಾಯ 24:31; 1 ಕೊರಿಂಥ 15:50-53; 1 ಥೆಸಲೊನೀಕ 4:15-17.

  • ಹರ್ಮಗೆದೋನ್‌. ಇದು “ಸರ್ವಶಕ್ತ ದೇವರ ಮಹಾ ದಿನದಲ್ಲಿ ಆಗೋ ಯುದ್ಧ” ಆಗಿದೆ, ಇದನ್ನ “ಯೆಹೋವನ ದಿನ” ಅಂತನೂ ಕರೆಯಲಾಗಿದೆ. (ಪ್ರಕಟನೆ 16:14, 16; ಯೆಶಾಯ 13:9; 2 ಪೇತ್ರ 3:12) ಯೇಸು ಯಾರನ್ನ ಕೆಟ್ಟವರು ಅಂತ ತೀರ್ಪು ಮಾಡ್ತಾನೋ ಅವ್ರೆಲ್ಲಾ ಈ ಯುದ್ಧದಲ್ಲಿ ನಾಶ ಆಗ್ತಾರೆ. (ಚೆಫನ್ಯ 1:18; 2 ಥೆಸಲೊನೀಕ 1:6-10) ಅಷ್ಟೇ ಅಲ್ಲ, ಲೋಕದಲ್ಲಿರೋ ಎಲ್ಲಾ ರಾಜಕೀಯ ವ್ಯವಸ್ಥೆನೂ ನಾಶ ಆಗುತ್ತೆ. ಈ ರಾಜಕೀಯ ವ್ಯವಸ್ಥೆಯನ್ನ ಬೈಬಲಿನಲ್ಲಿ ಏಳು ತಲೆಯ ಕಾಡುಪ್ರಾಣಿ ಅಂತ ಕರೆಯಲಾಗಿದೆ.—ಪ್ರಕಟನೆ 19:19-21.

ಮಹಾಸಂಕಟ ಆದ ಮೇಲೆ ನಡೆಯೋ ಘಟನೆಗಳು

  • ಸೈತಾನ ಮತ್ತು ಅವನ ಕೆಟ್ಟ ದೇವದೂತರ ಬಂಧನ. ಒಬ್ಬ ಮಹಾ ದೇವದೂತ, ಸೈತಾನ ಮತ್ತು ಅವನ ಕೆಟ್ಟ ದೇವದೂತರನ್ನ “ಅಗಾಧ ಸ್ಥಳ”ಕ್ಕೆ ತಳ್ಳಿ ಬಿಡ್ತಾನೆ. ಈ ಸ್ಥಳ ಒಬ್ಬ ವ್ಯಕ್ತಿ ಸತ್ತು ಹೋದ್ರೆ ಹೇಗೆ ಏನೂ ಮಾಡೋದಕ್ಕೆ ಆಗಲ್ವೋ ಅಂಥಾ ನಿಷ್ಕ್ರಿಯ ಸ್ಥಿತಿಯನ್ನ ಸೂಚಿಸುತ್ತೆ. (ಪ್ರಕಟನೆ 20:1-3) ಅಗಾಧ ಸ್ಥಳದಲ್ಲಿ ಸೈತಾನ ಜೈಲಿನಲ್ಲಿ ಇರೋ ತರ ಇರ್ತಾನೆ, ಅವನು ಯಾರ ಮೇಲೂ, ಯಾವ ವಿಷ್ಯಗಳ ಮೇಲೂ ಪ್ರಭಾವ ಬೀರೋಕೆ ಆಗಲ್ಲ.—ಪ್ರಕಟನೆ 20:7.

  • ಸಾವಿರ ವರ್ಷದ ಆಳ್ವಿಕೆಯ ಆರಂಭ. ದೇವರ ಸರ್ಕಾರ ತನ್ನ ಸಾವಿರ ವರ್ಷದ ಆಳ್ವಿಕೆಯನ್ನ ಶುರು ಮಾಡಿದಾಗ ಊಹೆ ಮಾಡೋಕೆ ಆಗದಿರುವಷ್ಟು ಆಶೀರ್ವಾದಗಳು ಮನುಷ್ಯರಿಗೆ ಸಿಗುತ್ತೆ. (ಪ್ರಕಟನೆ 5:9, 10; 20:4, 6) ಯಾರಿಂದನೂ ಲೆಕ್ಕ ಮಾಡೋಕೆ ಆಗದಷ್ಟು ಜನ್ರ ಒಂದು “ದೊಡ್ಡ ಗುಂಪು” “ಮಹಾ ಸಂಕಟವನ್ನ ಪಾರಾಗಿ” ಸಾವಿರ ವರ್ಷದ ಆಳ್ವಿಕೆ ಶುರು ಆಗೋದನ್ನ ಕಣ್ತುಂಬಿಕೊಳ್ಳುತ್ತೆ.—ಪ್ರಕಟನೆ 7:9, 14; ಕೀರ್ತನೆ 37:9-11.

a ಪ್ರಕಟನೆ ಪುಸ್ತಕದಲ್ಲಿ ಸುಳ್ಳು ಧರ್ಮವನ್ನ “ಪ್ರಸಿದ್ಧ ವೇಶ್ಯೆಗೆ” ಹೋಲಿಸಲಾಗಿದೆ, ಅದನ್ನ ಮಹಾ ಬಾಬೆಲ್‌ ಅಂತ ಕರೆಯಲಾಗಿದೆ. (ಪ್ರಕಟನೆ 17:1, 5) ಈ ಮಹಾ ಬಾಬೆಲನ್ನ ಕೆಂಪು ಕಾಡುಪ್ರಾಣಿ ನಾಶ ಮಾಡುತ್ತೆ. ಈ ಕಾಡುಪ್ರಾಣಿ ಲೋಕದ ಎಲ್ಲಾ ರಾಷ್ಟ್ರಗಳನ್ನ ಮತ್ತು ಅವು ಒಗ್ಗಟ್ಟಾಗಿರೋದನ್ನ ಸೂಚಿಸೋ ಸಂಘಟನೆ ಆಗಿದೆ. ಮೊದಲು ಇದನ್ನ ರಾಷ್ಟ್ರ ಸಂಘ ಅಂತ ಕರೀತಿದ್ರು, ಈಗ ಇದು ವಿಶ್ವ ಸಂಸ್ಥೆಯನ್ನ ಸೂಚಿಸುತ್ತೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ