ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಆದಿಕಾಂಡ 20
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಆದಿಕಾಂಡ ಮುಖ್ಯಾಂಶಗಳು

      • ಸಾರಳನ್ನ ಅಬೀಮೆಲೆಕನಿಂದ ಕಾಪಾಡಿದನು (1-18)

ಆದಿಕಾಂಡ 20:1

ಪಾದಟಿಪ್ಪಣಿ

  • *

    ಅಥವಾ “ವಿದೇಶಿಯಾಗಿ ವಾಸಿಸ್ತಿದ್ದಾಗ.”

ಮಾರ್ಜಿನಲ್ ರೆಫರೆನ್ಸ್

  • +ಅರ 13:26
  • +ಆದಿ 25:17, 18
  • +ಆದಿ 13:18
  • +ಆದಿ 10:19; 26:6

ಆದಿಕಾಂಡ 20:2

ಮಾರ್ಜಿನಲ್ ರೆಫರೆನ್ಸ್

  • +ಆದಿ 12:11-13; 20:11, 12
  • +ಆದಿ 12:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2015, ಪು. 12

ಆದಿಕಾಂಡ 20:3

ಮಾರ್ಜಿನಲ್ ರೆಫರೆನ್ಸ್

  • +ಆದಿ 12:17; ಕೀರ್ತ 105:14
  • +ಧರ್ಮೋ 22:22

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/1995, ಪು. 12

ಆದಿಕಾಂಡ 20:4

ಪಾದಟಿಪ್ಪಣಿ

  • *

    ಅಂದ್ರೆ, ಅವಳ ಜೊತೆ ಸಂಬಂಧ ಇಟ್ಟಿರಲಿಲ್ಲ.

ಆದಿಕಾಂಡ 20:7

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 105:14, 15
  • +ಯೋಬ 42:8

ಆದಿಕಾಂಡ 20:10

ಮಾರ್ಜಿನಲ್ ರೆಫರೆನ್ಸ್

  • +ಆದಿ 12:18, 19; 26:9, 10

ಆದಿಕಾಂಡ 20:11

ಮಾರ್ಜಿನಲ್ ರೆಫರೆನ್ಸ್

  • +ಆದಿ 12:11, 12; 26:7

ಆದಿಕಾಂಡ 20:12

ಮಾರ್ಜಿನಲ್ ರೆಫರೆನ್ಸ್

  • +ಆದಿ 11:29

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು,

    2/2020, ಪು. 7

ಆದಿಕಾಂಡ 20:13

ಮಾರ್ಜಿನಲ್ ರೆಫರೆನ್ಸ್

  • +ಆದಿ 12:1
  • +ಆದಿ 12:13

ಆದಿಕಾಂಡ 20:16

ಪಾದಟಿಪ್ಪಣಿ

  • *

    ಒಂದು ಶೆಕೆಲ್‌ನ ತೂಕ 11.4 ಗ್ರಾಂ. ಪರಿಶಿಷ್ಟ ಬಿ14 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಆದಿ 20:2, 12

ಆದಿಕಾಂಡ 20:18

ಮಾರ್ಜಿನಲ್ ರೆಫರೆನ್ಸ್

  • +ಆದಿ 12:17

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಆದಿ. 20:1ಅರ 13:26
ಆದಿ. 20:1ಆದಿ 25:17, 18
ಆದಿ. 20:1ಆದಿ 13:18
ಆದಿ. 20:1ಆದಿ 10:19; 26:6
ಆದಿ. 20:2ಆದಿ 12:11-13; 20:11, 12
ಆದಿ. 20:2ಆದಿ 12:15
ಆದಿ. 20:3ಆದಿ 12:17; ಕೀರ್ತ 105:14
ಆದಿ. 20:3ಧರ್ಮೋ 22:22
ಆದಿ. 20:7ಕೀರ್ತ 105:14, 15
ಆದಿ. 20:7ಯೋಬ 42:8
ಆದಿ. 20:10ಆದಿ 12:18, 19; 26:9, 10
ಆದಿ. 20:11ಆದಿ 12:11, 12; 26:7
ಆದಿ. 20:12ಆದಿ 11:29
ಆದಿ. 20:13ಆದಿ 12:1
ಆದಿ. 20:13ಆದಿ 12:13
ಆದಿ. 20:16ಆದಿ 20:2, 12
ಆದಿ. 20:18ಆದಿ 12:17
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಆದಿಕಾಂಡ 20:1-18

ಆದಿಕಾಂಡ

20 ಅಬ್ರಹಾಮ ನೆಗೆಬ್‌ ಪ್ರದೇಶಕ್ಕೆ ಹೋಗಿ ಕಾದೇಶ್‌+ ಮತ್ತು ಶೂರಿನ+ ಮಧ್ಯದಲ್ಲಿ ವಾಸ ಮಾಡೋಕೆ ಶುರುಮಾಡಿದ.+ ಅವನು ಗೆರಾರಿನಲ್ಲಿ+ ವಾಸಿಸ್ತಿದ್ದಾಗ* 2 ಅಲ್ಲಿನೂ ತನ್ನ ಹೆಂಡತಿ ಸಾರಳನ್ನ ತಂಗಿ ಅಂತ ಹೇಳಿದ.+ ಹಾಗಾಗಿ ಗೆರಾರಿನ ರಾಜ ಅಬೀಮೆಲೆಕ ಸಾರಳನ್ನ ತನ್ನ ಹತ್ರ ಕರೆಸಿಕೊಂಡ.+ 3 ಆಮೇಲೆ ದೇವರು ಅಬೀಮೆಲೆಕನಿಗೆ ರಾತ್ರಿ ಕನಸಲ್ಲಿ “ನೀನು ಆ ಸ್ತ್ರೀಯನ್ನ ಕರ್ಕೊಂಡು ಬಂದಿರೋದ್ರಿಂದ ಖಂಡಿತ ಸಾಯ್ತಿಯ.+ ಅವಳಿಗೆ ಮದುವೆಯಾಗಿದೆ, ಅವಳು ಇನ್ನೊಬ್ಬನಿಗೆ ಸೇರಿದವಳು”+ ಅಂದನು. 4 ಅಬೀಮೆಲೆಕ ಅವಳನ್ನ ಮುಟ್ಟಿರಲಿಲ್ಲ.* ಹಾಗಾಗಿ ಅವನು “ಯೆಹೋವನೇ, ತಪ್ಪು ಮಾಡದ ಜನ್ರನ್ನ ನಾಶ ಮಾಡ್ತಿಯಾ? 5 ಅವನು ಅವಳನ್ನ ತಂಗಿ ಅಂತ ಹೇಳಿದ್ನಲ್ಲಾ? ಅವಳು ಕೂಡ ಅವನನ್ನ ಅಣ್ಣ ಅಂತ ಹೇಳಿದಳಲ್ಲಾ? ನಾನಿದನ್ನ ಕೆಟ್ಟ ಉದ್ದೇಶದಿಂದ ಮಾಡಲಿಲ್ಲ. ನಾನು ಮಾಡ್ತಿರೋದು ತಪ್ಪು ಅಂತ ನಂಗೆ ಗೊತ್ತಿರಲಿಲ್ಲ” ಅಂದ. 6 ಅದಕ್ಕೆ ಸತ್ಯ ದೇವರು ಕನಸಲ್ಲಿ “ನೀನು ಕೆಟ್ಟ ಉದ್ದೇಶದಿಂದ ಇದನ್ನ ಮಾಡಲಿಲ್ಲ ಅಂತ ನಂಗೊತ್ತು. ಹಾಗಾಗಿ ನನ್ನ ವಿರುದ್ಧ ಪಾಪ ಮಾಡದ ಹಾಗೆ ನಾನು ನಿನ್ನನ್ನ ತಡಿದೆ. ಅವಳನ್ನ ಮುಟ್ಟಲು ಬಿಡಲಿಲ್ಲ. 7 ಈಗ ಆ ಮನುಷ್ಯನ ಹೆಂಡತಿಯನ್ನ ಅವನಿಗೆ ಒಪ್ಪಿಸು. ಅವನು ಒಬ್ಬ ಪ್ರವಾದಿ.+ ಅವನು ನಿನಗಾಗಿ ನನ್ನ ಹತ್ರ ಬೇಡ್ಕೊಳ್ತಾನೆ.+ ಆಗ ನಿನ್ನ ಜೀವ ಉಳಿಯುತ್ತೆ. ಅವಳನ್ನ ಅವನಿಗೆ ಒಪ್ಪಿಸದಿದ್ರೆ ನೀನೂ ನಿನ್ನವರೆಲ್ಲರೂ ಖಂಡಿತ ಸಾಯ್ತಿರ” ಅಂದನು.

8 ಅಬೀಮೆಲೆಕ ಬೆಳಿಗ್ಗೆ ಬೇಗ ಎದ್ದು ತನ್ನ ಸೇವಕರನ್ನೆಲ್ಲ ಕರೆಸಿ ಈ ಎಲ್ಲ ವಿಷ್ಯ ತಿಳಿಸಿದ. ಅದನ್ನ ಕೇಳಿ ಅವರೆಲ್ಲ ತುಂಬ ಭಯಪಟ್ರು. 9 ಆಮೇಲೆ ಅಬೀಮೆಲೆಕ ಅಬ್ರಹಾಮನನ್ನ ಕರೆಸಿ “ನಾನೇನ್‌ ಪಾಪ ಮಾಡ್ದೆ ಅಂತ ನೀನು ಹೀಗೆ ಮಾಡ್ದೆ? ನಿನ್ನಿಂದಾಗಿ ನಾನೂ ನನ್ನ ಜನ್ರೂ ಮಹಾಪಾಪಕ್ಕೆ ಗುರಿ ಆಗ್ತಿದ್ವಿ. ನೀನು ಮಾಡಿದ್ದು ಸರಿಯಲ್ಲ” ಅಂದ. 10 ಅಲ್ಲದೆ ಅಬೀಮೆಲೆಕ “ಯಾವ ಉದ್ದೇಶದಿಂದ ನೀನು ಹೀಗೆ ಮಾಡ್ದೆ?”+ ಅಂತ ಕೇಳಿದ. 11 ಅದಕ್ಕೆ ಅಬ್ರಹಾಮ ಹೀಗಂದ: “ಈ ಸ್ಥಳದ ಜನ್ರಿಗೆ ದೇವರ ಭಯ ಇಲ್ಲ ಅಂತ ನೆನಸಿದೆ. ನನ್ನ ಹೆಂಡತಿಗೋಸ್ಕರ ನನ್ನನ್ನ ಕೊಲ್ತಾರೆ ಅಂತ ಭಯ ಆಯ್ತು.+ 12 ಅಲ್ಲದೇ ಅವಳು ನಿಜವಾಗ್ಲೂ ನನ್ನ ತಂಗಿ. ನಮ್ಮಿಬ್ಬರ ತಂದೆ ಒಬ್ಬರೇ, ಆದ್ರೆ ತಾಯಿ ಬೇರೆ ಬೇರೆ. ಅದಕ್ಕೇ ಅವಳನ್ನ ಮದುವೆ ಆದೆ.+ 13 ದೇವರು ನನಗೆ ತಂದೆ ಮನೆ ಬಿಟ್ಟು ಹೋಗಬೇಕಂತ ಹೇಳಿದಾಗ+ ನಾನು ಅವಳಿಗೆ ‘ನಾವು ಹೋಗೋ ಜಾಗದ ಜನ್ರಿಗೆಲ್ಲ ನನ್ನನ್ನ ನಿನ್ನ ಅಣ್ಣ ಅಂತೇಳು. ಹೀಗೆ ನನಗೆ ನಿಷ್ಠೆ ತೋರಿಸು’ ಅಂತ ಹೇಳಿದೆ.”+

14 ಆಗ ಅಬೀಮೆಲೆಕ ಅಬ್ರಹಾಮನಿಗೆ ದನಕುರಿಗಳನ್ನ, ಹೆಣ್ಣಾಳು ಗಂಡಾಳುಗಳನ್ನ ಕೊಟ್ಟು ಅವನ ಹೆಂಡತಿ ಸಾರಳನ್ನ ಅವನಿಗೆ ಒಪ್ಪಿಸಿದ. 15 ಅಲ್ಲದೆ ಅಬೀಮೆಲೆಕ “ನೋಡು ನನ್ನ ಇಡೀ ದೇಶ ನಿನ್ನ ಮುಂದಿದೆ. ನಿನಗಿಷ್ಟ ಇದ್ದ ಕಡೆ ಹೋಗಿ ಇರು” ಅಂದ. 16 ಅವನು ಸಾರಳಿಗೆ “ನಾನು 1,000 ಬೆಳ್ಳಿ ಶೆಕೆಲ್‌ಗಳನ್ನ* ನಿನ್ನ ಅಣ್ಣನಿಗೆ ಕೊಡ್ತೀನಿ.+ ಇದು, ನೀನು ಯಾವ ತಪ್ಪನ್ನೂ ಮಾಡಿಲ್ಲ, ನಿನ್ನ ಮೇಲೆ ಯಾವುದೇ ಕಳಂಕವಿಲ್ಲ ಅನ್ನೋದಕ್ಕೆ ನಿನ್ನ ಜೊತೆ ಇರೋರಿಗೂ ಉಳಿದ ಎಲ್ಲರಿಗೂ ಗುರುತು” ಅಂದ. 17 ಆಮೇಲೆ ಅಬ್ರಹಾಮ ಸತ್ಯ ದೇವರಿಗೆ ಅಂಗಲಾಚಿ ಬೇಡ್ಕೊಂಡ. ಆಗ ದೇವರು ಅಬೀಮೆಲೆಕನನ್ನ, ಅವನ ಹೆಂಡತಿ, ದಾಸಿಯರನ್ನ ವಾಸಿಮಾಡಿದ. ಆಮೇಲೆ ಅವರಿಗೆ ಮಕ್ಕಳು ಹುಟ್ಟಿದ್ರು. 18 ಅಬೀಮೆಲೆಕ ಅಬ್ರಹಾಮನ ಹೆಂಡತಿ ಸಾರಳನ್ನ ಕರ್ಕೊಂಡು ಹೋಗಿದ್ದ ಕಾರಣ ಯೆಹೋವ ಅಬೀಮೆಲೆಕನ ಮನೆಯಲ್ಲಿದ್ದ ಎಲ್ಲ ಸ್ತ್ರೀಯರನ್ನ ಬಂಜೆಯರನ್ನಾಗಿ ಮಾಡಿದ್ದನು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ