ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಹೋಶುವ 10
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಯೆಹೋಶುವ ಮುಖ್ಯಾಂಶಗಳು

      • ಇಸ್ರಾಯೇಲ್ಯರು ಗಿಬ್ಯೋನ್ಯರನ್ನ ಕಾಪಾಡಿದ್ರು (1-7)

      • ಯೆಹೋವ ಇಸ್ರಾಯೇಲ್ಯರಿಗಾಗಿ ಹೋರಾಡಿದನು (8-15)

        • ಓಡಿಹೋಗ್ತಿದ್ದ ಶತ್ರುಗಳ ಮೇಲೆ ಆಲಿಕಲ್ಲಿನ ಮಳೆ (11)

        • ಸೂರ್ಯ ಕದಲದೆ ನಿಂತ (12-14)

      • ದಾಳಿ ಮಾಡಿದ ಐದು ರಾಜರನ್ನ ಕೊಲ್ಲಲಾಯ್ತು (16-28)

      • ದಕ್ಷಿಣಕ್ಕಿದ್ದ ಪಟ್ಟಣಗಳ ವಶ (29-43)

ಯೆಹೋಶುವ 10:1

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 6:2, 21
  • +ಯೆಹೋ 8:24, 29
  • +ಯೆಹೋ 9:9, 15; 11:19

ಯೆಹೋಶುವ 10:2

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 2:25; 11:25; ಯೆಹೋ 2:10, 11; 5:1
  • +ಯೆಹೋ 8:25

ಯೆಹೋಶುವ 10:3

ಮಾರ್ಜಿನಲ್ ರೆಫರೆನ್ಸ್

  • +ಆದಿ 23:2; ಅರ 13:22
  • +ಯೆಹೋ 12:7, 10-12

ಯೆಹೋಶುವ 10:4

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 9:9, 15; 11:19

ಯೆಹೋಶುವ 10:5

ಮಾರ್ಜಿನಲ್ ರೆಫರೆನ್ಸ್

  • +ಆದಿ 15:16

ಯೆಹೋಶುವ 10:6

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 5:10
  • +ಯೆಹೋ 9:25, 27

ಯೆಹೋಶುವ 10:7

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 8:3

ಯೆಹೋಶುವ 10:8

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 3:2; 20:1
  • +ಧರ್ಮೋ 7:24; ಯೆಹೋ 11:6
  • +ಯೆಹೋ 1:3-5

ಯೆಹೋಶುವ 10:10

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 44:3

ಯೆಹೋಶುವ 10:12

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 28:21
  • +2ಅರ 20:10; ಕೀರ್ತ 135:6; ಯೆಶಾ 38:8

ಯೆಹೋಶುವ 10:13

ಮಾರ್ಜಿನಲ್ ರೆಫರೆನ್ಸ್

  • +2ಸಮು 1:17, 18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2009, ಪು. 32

    12/1/2004, ಪು. 11

ಯೆಹೋಶುವ 10:14

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 9:18, 19; 1ಅರ 17:22; ಯಾಕೋ 5:16
  • +ಧರ್ಮೋ 1:30; ಯೆಹೋ 23:3

ಯೆಹೋಶುವ 10:15

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 5:10; 9:6

ಯೆಹೋಶುವ 10:16

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 10:10

ಯೆಹೋಶುವ 10:17

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 10:28

ಯೆಹೋಶುವ 10:19

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 28:7

ಯೆಹೋಶುವ 10:23

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 10:3-5; 12:7, 10-12

ಯೆಹೋಶುವ 10:24

ಮಾರ್ಜಿನಲ್ ರೆಫರೆನ್ಸ್

  • +ವಿಮೋ 23:27

ಯೆಹೋಶುವ 10:25

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 31:6; ಯೆಹೋ 1:9
  • +ಧರ್ಮೋ 3:21; 7:18, 19

ಯೆಹೋಶುವ 10:26

ಪಾದಟಿಪ್ಪಣಿ

  • *

    ಅಥವಾ “ಮರಗಳಿಗೆ.”

ಯೆಹೋಶುವ 10:27

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 21:22, 23; ಯೆಹೋ 8:29

ಯೆಹೋಶುವ 10:28

ಪಾದಟಿಪ್ಪಣಿ

  • *

    ಪದವಿವರಣೆಯಲ್ಲಿ “ಪ್ರಾಣ” ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 10:10; 15:20, 41
  • +ಧರ್ಮೋ 20:16
  • +ಯೆಹೋ 12:7, 16

ಯೆಹೋಶುವ 10:29

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 15:20, 42; 21:13

ಯೆಹೋಶುವ 10:30

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 12:7, 15
  • +ಯೆಹೋ 6:2, 21

ಯೆಹೋಶುವ 10:31

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 10:3, 4; 12:7, 11; 15:20, 39

ಯೆಹೋಶುವ 10:32

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 20:16

ಯೆಹೋಶುವ 10:33

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 12:7, 12; 16:10; 21:20, 21; 1ಅರ 9:16

ಯೆಹೋಶುವ 10:34

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 10:3, 4; 12:7, 12; 15:20, 39

ಯೆಹೋಶುವ 10:35

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 20:16; ಯೆಹೋ 10:32

ಯೆಹೋಶುವ 10:36

ಮಾರ್ಜಿನಲ್ ರೆಫರೆನ್ಸ್

  • +ಆದಿ 13:18; 23:19; ಅರ 13:22; ಯೆಹೋ 10:3, 4; 15:13; 21:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 9/2021, ಪು. 7-8

ಯೆಹೋಶುವ 10:37

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 9/2021, ಪು. 7-8

ಯೆಹೋಶುವ 10:38

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 12:7, 13; 15:15

ಯೆಹೋಶುವ 10:39

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 7:2
  • +ಯೆಹೋ 11:14

ಯೆಹೋಶುವ 10:40

ಪಾದಟಿಪ್ಪಣಿ

  • *

    ಅಕ್ಷ. “ಉಸಿರಾಡೋ ಪ್ರತಿಯೊಂದನ್ನ.”

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 9:1, 2; ನ್ಯಾಯ 1:9
  • +ಧರ್ಮೋ 7:2; 9:5
  • +ಯಾಜ 27:29; ಧರ್ಮೋ 20:16; ಯೆಹೋ 11:14

ಯೆಹೋಶುವ 10:41

ಮಾರ್ಜಿನಲ್ ರೆಫರೆನ್ಸ್

  • +ಅರ 34:2, 4; ಧರ್ಮೋ 9:23
  • +ಧರ್ಮೋ 2:23
  • +ಯೆಹೋ 15:20, 51
  • +ಯೆಹೋ 11:16, 19

ಯೆಹೋಶುವ 10:42

ಮಾರ್ಜಿನಲ್ ರೆಫರೆನ್ಸ್

  • +ವಿಮೋ 14:14; ಧರ್ಮೋ 1:30

ಯೆಹೋಶುವ 10:43

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 4:19

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಯೆಹೋ. 10:1ಯೆಹೋ 6:2, 21
ಯೆಹೋ. 10:1ಯೆಹೋ 8:24, 29
ಯೆಹೋ. 10:1ಯೆಹೋ 9:9, 15; 11:19
ಯೆಹೋ. 10:2ಧರ್ಮೋ 2:25; 11:25; ಯೆಹೋ 2:10, 11; 5:1
ಯೆಹೋ. 10:2ಯೆಹೋ 8:25
ಯೆಹೋ. 10:3ಆದಿ 23:2; ಅರ 13:22
ಯೆಹೋ. 10:3ಯೆಹೋ 12:7, 10-12
ಯೆಹೋ. 10:4ಯೆಹೋ 9:9, 15; 11:19
ಯೆಹೋ. 10:5ಆದಿ 15:16
ಯೆಹೋ. 10:6ಯೆಹೋ 5:10
ಯೆಹೋ. 10:6ಯೆಹೋ 9:25, 27
ಯೆಹೋ. 10:7ಯೆಹೋ 8:3
ಯೆಹೋ. 10:8ಧರ್ಮೋ 3:2; 20:1
ಯೆಹೋ. 10:8ಧರ್ಮೋ 7:24; ಯೆಹೋ 11:6
ಯೆಹೋ. 10:8ಯೆಹೋ 1:3-5
ಯೆಹೋ. 10:10ಕೀರ್ತ 44:3
ಯೆಹೋ. 10:12ಯೆಶಾ 28:21
ಯೆಹೋ. 10:122ಅರ 20:10; ಕೀರ್ತ 135:6; ಯೆಶಾ 38:8
ಯೆಹೋ. 10:132ಸಮು 1:17, 18
ಯೆಹೋ. 10:14ಧರ್ಮೋ 9:18, 19; 1ಅರ 17:22; ಯಾಕೋ 5:16
ಯೆಹೋ. 10:14ಧರ್ಮೋ 1:30; ಯೆಹೋ 23:3
ಯೆಹೋ. 10:15ಯೆಹೋ 5:10; 9:6
ಯೆಹೋ. 10:16ಯೆಹೋ 10:10
ಯೆಹೋ. 10:17ಯೆಹೋ 10:28
ಯೆಹೋ. 10:19ಧರ್ಮೋ 28:7
ಯೆಹೋ. 10:23ಯೆಹೋ 10:3-5; 12:7, 10-12
ಯೆಹೋ. 10:24ವಿಮೋ 23:27
ಯೆಹೋ. 10:25ಧರ್ಮೋ 31:6; ಯೆಹೋ 1:9
ಯೆಹೋ. 10:25ಧರ್ಮೋ 3:21; 7:18, 19
ಯೆಹೋ. 10:27ಧರ್ಮೋ 21:22, 23; ಯೆಹೋ 8:29
ಯೆಹೋ. 10:28ಯೆಹೋ 10:10; 15:20, 41
ಯೆಹೋ. 10:28ಧರ್ಮೋ 20:16
ಯೆಹೋ. 10:28ಯೆಹೋ 12:7, 16
ಯೆಹೋ. 10:29ಯೆಹೋ 15:20, 42; 21:13
ಯೆಹೋ. 10:30ಯೆಹೋ 12:7, 15
ಯೆಹೋ. 10:30ಯೆಹೋ 6:2, 21
ಯೆಹೋ. 10:31ಯೆಹೋ 10:3, 4; 12:7, 11; 15:20, 39
ಯೆಹೋ. 10:32ಧರ್ಮೋ 20:16
ಯೆಹೋ. 10:33ಯೆಹೋ 12:7, 12; 16:10; 21:20, 21; 1ಅರ 9:16
ಯೆಹೋ. 10:34ಯೆಹೋ 10:3, 4; 12:7, 12; 15:20, 39
ಯೆಹೋ. 10:35ಧರ್ಮೋ 20:16; ಯೆಹೋ 10:32
ಯೆಹೋ. 10:36ಆದಿ 13:18; 23:19; ಅರ 13:22; ಯೆಹೋ 10:3, 4; 15:13; 21:13
ಯೆಹೋ. 10:38ಯೆಹೋ 12:7, 13; 15:15
ಯೆಹೋ. 10:39ಧರ್ಮೋ 7:2
ಯೆಹೋ. 10:39ಯೆಹೋ 11:14
ಯೆಹೋ. 10:40ಯೆಹೋ 9:1, 2; ನ್ಯಾಯ 1:9
ಯೆಹೋ. 10:40ಧರ್ಮೋ 7:2; 9:5
ಯೆಹೋ. 10:40ಯಾಜ 27:29; ಧರ್ಮೋ 20:16; ಯೆಹೋ 11:14
ಯೆಹೋ. 10:41ಅರ 34:2, 4; ಧರ್ಮೋ 9:23
ಯೆಹೋ. 10:41ಧರ್ಮೋ 2:23
ಯೆಹೋ. 10:41ಯೆಹೋ 15:20, 51
ಯೆಹೋ. 10:41ಯೆಹೋ 11:16, 19
ಯೆಹೋ. 10:42ವಿಮೋ 14:14; ಧರ್ಮೋ 1:30
ಯೆಹೋ. 10:43ಯೆಹೋ 4:19
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
  • 35
  • 36
  • 37
  • 38
  • 39
  • 40
  • 41
  • 42
  • 43
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಯೆಹೋಶುವ 10:1-43

ಯೆಹೋಶುವ

10 ಯೆಹೋಶುವ ಆಯಿ ಪಟ್ಟಣ ವಶ ಮಾಡ್ಕೊಂಡು ಅದನ್ನ ಪೂರ್ತಿ ನಾಶ ಮಾಡಿದ್ದಾನೆ, ಯೆರಿಕೋಗೂ ಅದ್ರ ರಾಜನಿಗೂ+ ಮಾಡಿದ ಹಾಗೇ ಆಯಿಗೂ ಅದ್ರ ರಾಜನಿಗೂ+ ಮಾಡಿದ್ದಾನೆ, ಗಿಬ್ಯೋನಿನ ಜನ್ರು ಇಸ್ರಾಯೇಲ್ಯರ ಜೊತೆ ಶಾಂತಿ ಸಂಧಾನ ಮಾಡ್ಕೊಂಡು+ ಅವ್ರ ಜೊತೆ ಸೇರಿದ್ದಾರೆ ಅಂತ ಯೆರೂಸಲೇಮಿನ ರಾಜ ಅದೋನೀಚೆದೆಕ ಕೇಳಿಸ್ಕೊಂಡ ತಕ್ಷಣ 2 ಅವನಿಗೆ ತುಂಬ ಭಯ ಆಯ್ತು.+ ಯಾಕಂದ್ರೆ ರಾಜರು ಆಳ್ತಿದ್ದ ದೊಡ್ಡದೊಡ್ಡ ಪಟ್ಟಣಗಳ ತರ ಗಿಬ್ಯೋನ್‌ ಸಹ ಒಂದು ದೊಡ್ಡ ಪಟ್ಟಣ ಆಗಿತ್ತು. ಅದು ಆಯಿಗಿಂತ ಬಲಿಷ್ಠವಾಗಿತ್ತು,+ ಅದ್ರ ಗಂಡಸ್ರೆಲ್ಲ ವೀರ ಸೈನಿಕರಾಗಿದ್ರು. 3 ಹಾಗಾಗಿ ಹೆಬ್ರೋನಿನ+ ರಾಜ ಹೋಹಾಮನಿಗೆ, ಯರ್ಮೂತಿನ ರಾಜ ಪಿರಾಮನಿಗೆ, ಲಾಕೀಷಿನ ರಾಜ ಯಾಫೀಯನಿಗೆ, ಎಗ್ಲೋನಿನ ರಾಜ+ ದೆಬೀರನಿಗೆ ಯೆರೂಸಲೇಮಿನ ರಾಜ ಅದೋನೀಚೆದೆಕ ಈ ಸಂದೇಶ ಕಳಿಸಿದ: 4 “ನನ್ನ ಸಹಾಯಕ್ಕೆ ಬನ್ನಿ. ಗಿಬ್ಯೋನ್ಯರ ಮೇಲೆ ದಾಳಿ ಮಾಡೋಣ. ಯಾಕಂದ್ರೆ ಅವರು ಯೆಹೋಶುವನ ಜೊತೆ, ಇಸ್ರಾಯೇಲ್ಯರ ಜೊತೆ ಶಾಂತಿ ಸಂಧಾನ ಮಾಡ್ಕೊಂಡಿದ್ದಾರೆ.”+ 5 ಆಗ ಅಮೋರಿಯರ+ ಐದು ರಾಜರು ಅಂದ್ರೆ ಯೆರೂಸಲೇಮಿನ ರಾಜ, ಹೆಬ್ರೋನಿನ ರಾಜ, ಯರ್ಮೂತಿನ ರಾಜ, ಲಾಕೀಷಿನ ರಾಜ, ಎಗ್ಲೋನಿನ ರಾಜ ಇವ್ರೆಲ್ಲ ತಮ್ಮತಮ್ಮ ಸೈನ್ಯದ ಜೊತೆ ಒಟ್ಟಾಗಿ ಬಂದು ಗಿಬ್ಯೋನ್ಯರ ವಿರುದ್ಧ ಹೋರಾಡೋಕೆ ಅವ್ರ ಪಟ್ಟಣಕ್ಕೆ ಮುತ್ತಿಗೆ ಹಾಕಿದ್ರು.

6 ಆಗ ಗಿಬ್ಯೋನಿನ ಗಂಡಸ್ರು ಗಿಲ್ಗಾಲಿನ ಪಾಳೆಯದಲ್ಲಿದ್ದ+ ಯೆಹೋಶುವನಿಗೆ “ನಿನ್ನ ದಾಸರಾಗಿರೋ ನಮ್ಮನ್ನ ಕೈಬಿಡಬೇಡ.+ ಬೇಗ ಬಂದು ನಮ್ಮನ್ನ ರಕ್ಷಿಸು! ನಮಗೆ ಸಹಾಯ ಮಾಡು! ಬೆಟ್ಟ ಪ್ರದೇಶದ ಅಮೋರಿಯರ ರಾಜರೆಲ್ಲ ನಮ್ಮ ಮೇಲೆ ಯುದ್ಧ ಮಾಡೋಕೆ ಬಂದಿದ್ದಾರೆ” ಅನ್ನೋ ಸಂದೇಶ ಕಳಿಸಿದ್ರು. 7 ಹಾಗಾಗಿ ಯೆಹೋಶುವ ತನ್ನೆಲ್ಲ ಸೈನಿಕರನ್ನ ಯುದ್ಧವೀರರನ್ನ ಕರ್ಕೊಂಡು ಗಿಲ್ಗಾಲಿಂದ ಹೊರಟ.+

8 ಆಗ ಯೆಹೋವ ಯೆಹೋಶುವನಿಗೆ “ನೀನು ಅವ್ರಿಗೆ ಭಯಪಡಬೇಡ.+ ಯಾಕಂದ್ರೆ ನಾನು ಅವ್ರನ್ನ ನಿನ್ನ ಕೈಗೆ ಒಪ್ಪಿಸಿದ್ದೀನಿ.+ ಅವ್ರಲ್ಲಿ ಒಬ್ಬ ಸಹ ನಿನ್ನ ಮುಂದೆ ನಿಲ್ಲೋಕಾಗಲ್ಲ”+ ಅಂದನು. 9 ಯೆಹೋಶುವ ಗಿಲ್ಗಾಲಿಂದ ಹೊರಟು ಇಡೀ ರಾತ್ರಿ ನಡ್ಕೊಂಡು ಹೋಗಿ ಅವರು ನೆನಸದ ಸಮಯದಲ್ಲಿ ಅವ್ರ ಮೇಲೆ ದಾಳಿ ಮಾಡಿದ. 10 ಯೆಹೋವ ಅವ್ರನ್ನ ಇಸ್ರಾಯೇಲ್ಯರ ಮುಂದೆ ಗಲಿಬಿಲಿ ಮಾಡಿದನು.+ ಇಸ್ರಾಯೇಲ್ಯರು ಅವ್ರನ್ನೆಲ್ಲ ಗಿಬ್ಯೋನಲ್ಲಿ ಕೊಂದು ಹಾಕಿದ್ರು. ಬೇತ್‌-ಹೋರೋನಿಗೆ ಹತ್ತಿಹೋಗೋ ದಾರೀಲಿ ಅವ್ರನ್ನ ಅಟ್ಟಿಸ್ಕೊಂಡು ಹೋಗಿ ಅಜೇಕ ಮತ್ತು ಮಕ್ಕೇದದ ತನಕ ಕೊಂದು ಹಾಕಿದ್ರು. 11 ಇಸ್ರಾಯೇಲ್ಯರಿಂದ ತಪ್ಪಿಸ್ಕೊಂಡು ಅವರು ಬೇತ್‌-ಹೋರೋನಿನ ಇಳಿಜಾರಲ್ಲಿ ಓಡುವಾಗ ಅಜೇಕಿನ ತನಕ ಯೆಹೋವ ಅವ್ರ ಮೇಲೆ ಆಕಾಶದಿಂದ ಆಲಿಕಲ್ಲು ಮಳೆ ಸುರಿಸಿದನು. ಆಗ ಅವ್ರೆಲ್ಲ ನಾಶವಾದ್ರು. ಇಸ್ರಾಯೇಲ್ಯರ ಕತ್ತಿಯಿಂದ ಸತ್ತವರ ಸಂಖ್ಯೆಗಿಂತ ಆಲಿಕಲ್ಲು ಮಳೆಯಿಂದ ಸತ್ತವರ ಸಂಖ್ಯೆ ಜಾಸ್ತಿ ಆಯ್ತು.

12 ಯೆಹೋವ ಅಮೋರಿಯರನ್ನ ಇಸ್ರಾಯೇಲ್ಯರ ಮುಂದೆ ಪೂರ್ತಿಯಾಗಿ ಸೋಲಿಸಿದ ದಿನ ಯೆಹೋಶುವ ಯೆಹೋವನಿಗೆ ಇಸ್ರಾಯೇಲ್ಯರ ಮುಂದೆ ಹೀಗೆ ಹೇಳಿದನು:

“ಸೂರ್ಯನೇ, ಚಲಿಸದೆ ಗಿಬ್ಯೋನಿನ+ ಮೇಲೆ ಹಾಗೇ ನಿಲ್ಲು,+

ಚಂದ್ರನೇ, ಅಯ್ಯಾಲೋನ್‌ ಕಣಿವೆ ಮೇಲೆ ನಿಲ್ಲು!”

13 ಹಾಗಾಗಿ ಇಸ್ರಾಯೇಲ್‌ ಜನಾಂಗ ತನ್ನ ಶತ್ರುಗಳ ಮೇಲೆ ಸೇಡು ತೀರಿಸೋ ತನಕ ಸೂರ್ಯ ಚಲಿಸದೆ ನಿಂತ, ಚಂದ್ರ ಹಾಗೇ ಇದ್ದ. ಇದ್ರ ಬಗ್ಗೆ ಯಾಷಾರ್‌ ಪುಸ್ತಕದಲ್ಲಿ ಬರೆದಿದ್ಯಲ್ಲಾ!+ ಸೂರ್ಯ ಕದಲದೆ ಆಕಾಶದ ಮಧ್ಯ ಒಂದು ಇಡೀ ದಿನ ಹಾಗೇ ನಿಂತ. ಆತುರಪಟ್ಟು ಮುಳುಗಲಿಲ್ಲ. 14 ಯೆಹೋವ ಒಬ್ಬ ಮನುಷ್ಯನ ಮಾತು ಕೇಳಿ ಯಾವತ್ತೂ ಈ ರೀತಿ ಮಾಡಿಲ್ಲ. ಈ ತರ ಹಿಂದೆನೂ ನಡೆದಿಲ್ಲ, ಮುಂದೆನೂ ನಡಿಯಲ್ಲ.+ ಯಾಕಂದ್ರೆ ಯೆಹೋವ ಇಸ್ರಾಯೇಲ್ಯರ ಪರವಾಗಿ ಯುದ್ಧ ಮಾಡ್ತಿದ್ದನು.+

15 ಇದಾದ ಮೇಲೆ ಯೆಹೋಶುವ ಎಲ್ಲ ಇಸ್ರಾಯೇಲ್ಯರ ಜೊತೆ ಗಿಲ್ಗಾಲಿನ ಪಾಳೆಯಕ್ಕೆ+ ವಾಪಸ್‌ ಹೋದ.

16 ಅಷ್ಟರಲ್ಲಿ ಆ ಐದು ರಾಜರು ಓಡಿಹೋಗಿ ಮಕ್ಕೇದದ+ ಗವಿಯಲ್ಲಿ ಅಡಗಿಕೊಂಡ್ರು. 17 “ಆ ಐದು ರಾಜರು ಮಕ್ಕೇದದ+ ಗವಿಯಲ್ಲಿ ಬಚ್ಚಿಟ್ಕೊಂಡಿದ್ದಾರೆ” ಅನ್ನೋ ಸುದ್ದಿ ಯೆಹೋಶುವನಿಗೆ ಮುಟ್ತು. 18 ಆಗ ಯೆಹೋಶುವ ಹೀಗಂದ: “ದೊಡ್ಡದೊಡ್ಡ ಕಲ್ಲುಗಳನ್ನ ಉರುಳಿಸಿ, ಆ ಗವಿಯ ಬಾಯಿ ಮುಚ್ಚಿ, ಅವ್ರನ್ನ ಕಾಯೋಕೆ ಗಂಡಸ್ರನ್ನ ನಿಲ್ಸಿ. 19 ಆದ್ರೆ ಉಳಿದವರು ಸುಮ್ಮನಿರಬೇಡಿ. ನಿಮ್ಮ ಶತ್ರುಗಳನ್ನ ಬೆನ್ನಟ್ಟಿ ಅವ್ರ ಮೇಲೆ ಹಿಂದಿಂದ ದಾಳಿಮಾಡಿ.+ ನಿಮ್ಮ ದೇವರಾಗಿರೋ ಯೆಹೋವ ಅವ್ರನ್ನ ನಿಮ್ಮ ಕೈಗೆ ಒಪ್ಪಿಸಿರೋದ್ರಿಂದ ಅವ್ರನ್ನ ಅವ್ರ ಪಟ್ಟಣಗಳ ಒಳಗೆ ಹೋಗೋಕೆ ಬಿಡಬೇಡಿ.”

20 ಆಮೇಲೆ ಯೆಹೋಶುವ ಮತ್ತು ಇಸ್ರಾಯೇಲ್ಯರು ಶತ್ರುಗಳನ್ನ ನಾಶಮಾಡ್ತಾ ಬಂದ್ರು. ಶತ್ರು ಸೈನ್ಯ ಸರ್ವನಾಶ ಆಗೋ ತನಕ ಅವ್ರನ್ನ ಕೊಂದ್ರು. ಅವ್ರಲ್ಲಿ ಸ್ವಲ್ಪ ಜನ ಮಾತ್ರ ತಪ್ಪಿಸ್ಕೊಂಡು ಭದ್ರ ಕೋಟೆಗಳಿದ್ದ ಪಟ್ಟಣಗಳಿಗೆ ಓಡಿಹೋದ್ರು. 21 ಎಲ್ಲ ಇಸ್ರಾಯೇಲ್ಯರು ಸುರಕ್ಷಿತವಾಗಿ ಮಕ್ಕೇದದಲ್ಲಿರೋ ಪಾಳೆಯಕ್ಕೆ ಯೆಹೋಶುವನ ಹತ್ರ ವಾಪಸ್‌ ಹೋದ್ರು. ಇಸ್ರಾಯೇಲ್ಯರ ವಿರುದ್ಧ ನಾಲಿಗೆ ಎತ್ತೋಕೂ ಯಾವನಿಗೂ ಧೈರ್ಯ ಇರಲಿಲ್ಲ. 22 ಆಮೇಲೆ ಯೆಹೋಶುವ “ಗವಿಯ ಬಾಯಿ ತೆರೆದು ಆ ಐದು ರಾಜರನ್ನ ನನ್ನ ಹತ್ರ ಕರ್ಕೊಂಡು ಬನ್ನಿ” ಅಂದ. 23 ಆಗ ಅವರು ಗವಿಯಿಂದ ಆ ಐದು ರಾಜರನ್ನ ಅಂದ್ರೆ ಯೆರೂಸಲೇಮಿನ ರಾಜನನ್ನ, ಹೆಬ್ರೋನಿನ ರಾಜನನ್ನ, ಯರ್ಮೂತಿನ ರಾಜನನ್ನ, ಲಾಕೀಷಿನ ರಾಜನನ್ನ ಎಗ್ಲೋನಿನ ರಾಜನನ್ನ+ ಯೆಹೋಶುವನ ಹತ್ರ ಕರ್ಕೊಂಡು ಬಂದ್ರು. 24 ಅವನು ಇಸ್ರಾಯೇಲಿನ ಎಲ್ಲ ಗಂಡಸ್ರನ್ನ ಒಟ್ಟುಸೇರಿಸಿ ತನ್ನ ಜೊತೆ ಯುದ್ಧಕ್ಕೆ ಬಂದಿದ್ದ ಸೇನಾಪತಿಗಳಿಗೆ “ಮುಂದೆ ಬನ್ನಿ. ನಿಮ್ಮ ಕಾಲನ್ನ ಈ ರಾಜರ ಕುತ್ತಿಗೆ ಮೇಲಿಡಿ” ಅಂದ. ಆಗ ಅವರು ಮುಂದೆ ಬಂದು ತಮ್ಮ ಕಾಲನ್ನ ಆ ರಾಜರ ಕುತ್ತಿಗೆ ಮೇಲಿಟ್ರು.+ 25 ಯೆಹೋಶುವ ಅವ್ರಿಗೆ “ಹೆದರಬೇಡಿ, ಕಳವಳಪಡಬೇಡಿ.+ ಧೈರ್ಯವಾಗಿರಿ! ದೃಢವಾಗಿರಿ! ಯಾಕಂದ್ರೆ ನೀವು ಯಾರ ವಿರುದ್ಧ ಯುದ್ಧ ಮಾಡ್ತೀರೋ ಆ ನಿಮ್ಮ ಎಲ್ಲ ಶತ್ರುಗಳಿಗೂ ಯೆಹೋವ ಹೀಗೇ ಮಾಡ್ತಾನೆ”+ ಅಂದ.

26 ಆಮೇಲೆ ಯೆಹೋಶುವ ಅವ್ರನ್ನ ಕೊಂದು, ಶವಗಳನ್ನ ಐದು ಕಂಬಗಳಿಗೆ* ತೂಗುಹಾಕಿದ. ಸಾಯಂಕಾಲದ ತನಕ ಅವು ಕಂಬದಲ್ಲೇ ತೂಗಾಡ್ತಾ ಇತ್ತು. 27 ಸೂರ್ಯ ಮುಳುಗೋ ಹೊತ್ತಿಗೆ ಆ ಶವಗಳನ್ನ ಕಂಬಗಳಿಂದ ಇಳಿಸಿ,+ ಅವರು ಅಡಗಿಕೊಂಡಿದ್ದ ಗವಿಯೊಳಗೇ ಅವ್ರ ಶವಗಳನ್ನ ಹಾಕಬೇಕು ಅಂತ ಯೆಹೋಶುವ ಆಜ್ಞೆ ಕೊಟ್ಟ. ಹೀಗೆ ಮಾಡಿದ ಮೇಲೆ ಆ ಗವಿಯ ಬಾಯಿನ ದೊಡ್ಡದೊಡ್ಡ ಕಲ್ಲುಗಳಿಂದ ಮುಚ್ಚಿದ್ರು. ಇವತ್ತಿಗೂ ಅವು ಹಾಗೇ ಇವೆ.

28 ಯೆಹೋಶುವ ಆ ದಿನ ಮಕ್ಕೇದವನ್ನ+ ವಶ ಮಾಡ್ಕೊಂಡು ಅದ್ರ ಜನ್ರನ್ನ ಕತ್ತಿಯಿಂದ ಸಾಯಿಸಿದ. ಅದ್ರ ರಾಜನನ್ನ ಎಲ್ಲ ಜನ್ರನ್ನ* ಪೂರ್ತಿ ನಾಶಮಾಡಿದ, ಯಾರನ್ನೂ ಉಳಿಸಲಿಲ್ಲ.+ ಯೆರಿಕೋವಿನ ರಾಜನಿಗೆ ಮಾಡಿದ ಹಾಗೇ ಮಕ್ಕೇದದ ರಾಜನಿಗೂ+ ಮಾಡಿದ.

29 ಯೆಹೋಶುವ ಎಲ್ಲ ಇಸ್ರಾಯೇಲ್ಯರ ಜೊತೆ ಮಕ್ಕೇದದಿಂದ ಲಿಬ್ನಕ್ಕೆ+ ಹೋಗಿ ಅದ್ರ ವಿರುದ್ಧ ಯುದ್ಧಮಾಡಿದ. 30 ಯೆಹೋವ ಅದನ್ನ ಅದ್ರ ರಾಜನನ್ನ ಇಸ್ರಾಯೇಲ್ಯರ ಕೈಗೆ ಒಪ್ಪಿಸಿದನು.+ ಅವರು ಅದನ್ನ ನಾಶಮಾಡಿದ್ರು. ಅದ್ರಲ್ಲಿರೋ ಎಲ್ರನ್ನ ಕತ್ತಿಯಿಂದ ಕೊಂದ್ರು, ಒಬ್ಬನನ್ನೂ ಉಳಿಸಲಿಲ್ಲ. ಯೆರಿಕೋವಿನ ರಾಜನಿಗೆ ಮಾಡಿದ ಹಾಗೇ ಅದ್ರ ರಾಜನಿಗೂ ಮಾಡಿದ್ರು.+

31 ಆಮೇಲೆ ಯೆಹೋಶುವ ಎಲ್ಲ ಇಸ್ರಾಯೇಲ್ಯರ ಜೊತೆ ಲಿಬ್ನದಿಂದ ಲಾಕೀಷಿಗೆ+ ಹೋಗಿ ಅಲ್ಲಿ ಪಾಳೆಯ ಹೂಡಿ ಅದ್ರ ವಿರುದ್ಧ ಯುದ್ಧಮಾಡಿದ. 32 ಯೆಹೋವ ಲಾಕೀಷನ್ನ ಇಸ್ರಾಯೇಲ್ಯರ ಕೈಗೆ ಒಪ್ಪಿಸಿದನು. ಅವರು ಅದನ್ನ ಎರಡನೇ ದಿನ ವಶ ಮಾಡ್ಕೊಂಡ್ರು. ಲಿಬ್ನದಲ್ಲಿ ಮಾಡಿದ ಹಾಗೇ ಲಾಕೀಷಲ್ಲಿರೋ ಎಲ್ರನ್ನೂ ಕತ್ತಿಯಿಂದ ಕೊಂದ್ರು.+

33 ಗೆಜೆರಿನ+ ರಾಜ ಹೋರಾಮ ಲಾಕೀಷಿಗೆ ಸಹಾಯ ಮಾಡೋಕೆ ಹೋದ. ಆದ್ರೆ ಯೆಹೋಶುವ ಅವನನ್ನ, ಅವನ ಜನ್ರನ್ನೆಲ್ಲ ಕೊಂದ, ಒಬ್ಬನನ್ನೂ ಉಳಿಸಲಿಲ್ಲ.

34 ಆಮೇಲೆ ಯೆಹೋಶುವ ಎಲ್ಲ ಇಸ್ರಾಯೇಲ್ಯರ ಜೊತೆ ಲಾಕೀಷಿಂದ ಎಗ್ಲೋನಿಗೆ+ ಹೋಗಿ ಅಲ್ಲಿ ಪಾಳೆಯ ಹೂಡಿ ಅದ್ರ ವಿರುದ್ಧ ಯುದ್ಧಮಾಡಿದ. 35 ಅವರು ಅದೇ ದಿನ ಅದನ್ನ ವಶ ಮಾಡ್ಕೊಂಡ್ರು. ಅವತ್ತೇ ಅಲ್ಲಿನ ಜನ್ರನ್ನ ಕತ್ತಿಯಿಂದ ಕೊಂದುಹಾಕಿದ್ರು. ಲಾಕೀಷಲ್ಲಿ+ ಮಾಡಿದ ಹಾಗೇ ಎಗ್ಲೋನಲ್ಲಿರೋ ಎಲ್ರನ್ನೂ ಪೂರ್ತಿ ನಾಶಮಾಡಿದ್ರು.

36 ಯೆಹೋಶುವ ಎಲ್ಲ ಇಸ್ರಾಯೇಲ್ಯರ ಜೊತೆ ಎಗ್ಲೋನಿಂದ ಹೆಬ್ರೋನಿಗೆ+ ಹೋಗಿ ಅದರ ವಿರುದ್ಧ ಯುದ್ಧ ಮಾಡಿದ. 37 ಅವರು ಅದನ್ನ ವಶ ಮಾಡ್ಕೊಂಡ್ರು. ಅದನ್ನ ನಾಶಮಾಡಿ ಅದ್ರ ರಾಜನನ್ನ, ಪಟ್ಟಣಗಳನ್ನ, ಅಲ್ಲಿದ್ದ ಎಲ್ರನ್ನೂ ಕತ್ತಿಯಿಂದ ಕೊಂದ್ರು, ಒಬ್ರನ್ನೂ ಉಳಿಸಲಿಲ್ಲ. ಎಗ್ಲೋನಲ್ಲಿ ಮಾಡಿದ ಹಾಗೇ ಹೆಬ್ರೋನನ್ನ ಅದ್ರಲ್ಲಿರೋ ಎಲ್ರನ್ನೂ ನಾಶಮಾಡಿದ್ರು.

38 ಕೊನೆಗೆ ಯೆಹೋಶುವ ಎಲ್ಲ ಇಸ್ರಾಯೇಲ್ಯರ ಜೊತೆ ದೆಬೀರಿನ+ ಕಡೆ ಹೊರಟು ಅದ್ರ ವಿರುದ್ಧ ಯುದ್ಧಮಾಡಿದ. 39 ಅವನು ಅದನ್ನ ವಶ ಮಾಡ್ಕೊಂಡು, ಅದ್ರ ರಾಜನನ್ನ, ಪಟ್ಟಣಗಳನ್ನ ಅಲ್ಲಿದ್ದ ಎಲ್ರನ್ನ ಕತ್ತಿಯಿಂದ ಸಾಯಿಸಿಬಿಟ್ಟ.+ ಒಬ್ಬನನ್ನೂ ಉಳಿಸಲಿಲ್ಲ.+ ಹೆಬ್ರೋನಿಗೆ, ಲಿಬ್ನಕ್ಕೆ ಅದ್ರ ರಾಜನಿಗೆ ಮಾಡಿದ ಹಾಗೇ ದೆಬೀರಿಗೂ ಮತ್ತು ಅದ್ರ ರಾಜನಿಗೂ ಮಾಡಿದ.

40 ಹೀಗೆ ಯೆಹೋಶುವ ಎಲ್ಲ ಪ್ರದೇಶಗಳನ್ನ ಅಂದ್ರೆ ಬೆಟ್ಟ ಪ್ರದೇಶವನ್ನ, ನೆಗೆಬನ್ನ, ಷೆಫೆಲಾವನ್ನ,+ ಇಳಿಜಾರು ಪ್ರದೇಶಗಳನ್ನ ಮತ್ತು ಅವುಗಳ ರಾಜರನ್ನ ವಶ ಮಾಡ್ಕೊಂಡ. ಒಬ್ಬನನ್ನೂ ಉಳಿಸಲಿಲ್ಲ. ಇಸ್ರಾಯೇಲಿನ ದೇವರಾದ ಯೆಹೋವ ಆಜ್ಞಾಪಿಸಿದ ಹಾಗೇ+ ಪ್ರತಿಯೊಬ್ರನ್ನ* ನಾಶಮಾಡಿದ.+ 41 ಯೆಹೋಶುವ ಕಾದೇಶ್‌-ಬರ್ನೇಯದಿಂದ+ ಗಾಜಾ+ ತನಕ ಮತ್ತು ಗೋಷೆನಿನ+ ಎಲ್ಲ ಪ್ರದೇಶಗಳನ್ನ ಸೇರಿಸಿ ಗಿಬ್ಯೋನಿನ+ ತನಕ ವಶ ಮಾಡ್ಕೊಂಡ. 42 ಇಸ್ರಾಯೇಲ್ಯರ ಪರವಾಗಿ ಅವ್ರ ದೇವರಾದ ಯೆಹೋವ ಯುದ್ಧ ಮಾಡಿದ್ರಿಂದ+ ಯೆಹೋಶುವ ಈ ಎಲ್ಲಾ ರಾಜರನ್ನ ಅವ್ರ ಪ್ರದೇಶಗಳನ್ನ ಒಂದೇ ಸಮಯದಲ್ಲಿ ವಶ ಮಾಡ್ಕೊಂಡ. 43 ಆಮೇಲೆ ಯೆಹೋಶುವ ಎಲ್ಲ ಇಸ್ರಾಯೇಲ್ಯರ ಜೊತೆ ಗಿಲ್ಗಾಲಿನ ಪಾಳೆಯಕ್ಕೆ+ ವಾಪಸ್‌ ಹೋದ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ