ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ನ್ಯಾಯಸ್ಥಾಪಕರು 9
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ನ್ಯಾಯಸ್ಥಾಪಕರು ಮುಖ್ಯಾಂಶಗಳು

      • ಅಬೀಮೆಲೆಕ ಶೆಕೆಮಲ್ಲಿ ರಾಜನಾದ (1-6)

      • ಯೋತಾಮನ ದೃಷ್ಟಾಂತ (7-21)

      • ಅಬೀಮೆಲೆಕನ ಕ್ರೂರ ಆಡಳಿತ (22-33)

      • ಅಬೀಮೆಲೆಕನಿಂದ ಶೆಕೆಮ್‌ ಮೇಲೆ ದಾಳಿ (34-49)

      • ಅಬೀಮೆಲೆಕನಿಗೆ ಸ್ತ್ರೀಯಿಂದ ಮರಣ (50-57)

ನ್ಯಾಯಸ್ಥಾಪಕರು 9:1

ಪಾದಟಿಪ್ಪಣಿ

  • *

    ಅಕ್ಷ. “ಅವನ ತಾಯಿಯ ತಂದೆಯ ಮನೆಯವ್ರಿಗೂ.”

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 8:30, 31

ನ್ಯಾಯಸ್ಥಾಪಕರು 9:2

ಪಾದಟಿಪ್ಪಣಿ

  • *

    ಬಹುಶಃ, “ಭೂಮಾಲೀಕರ.”

  • *

    ಅಕ್ಷ. “ಮೂಳೆ ಮತ್ತು ಮಾಂಸ.”

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 8:30

ನ್ಯಾಯಸ್ಥಾಪಕರು 9:4

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 8:33; 9:46

ನ್ಯಾಯಸ್ಥಾಪಕರು 9:5

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 6:11; 8:27
  • +2ಅರ 11:1; 2ಪೂರ್ವ 21:4

ನ್ಯಾಯಸ್ಥಾಪಕರು 9:6

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 17:14; 1ಸಮು 8:7

ನ್ಯಾಯಸ್ಥಾಪಕರು 9:7

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 11:29; ಯೆಹೋ 8:33; ಯೋಹಾ 4:20

ನ್ಯಾಯಸ್ಥಾಪಕರು 9:8

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 8:22

ನ್ಯಾಯಸ್ಥಾಪಕರು 9:9

ಪಾದಟಿಪ್ಪಣಿ

  • *

    ಅಥವಾ “ಫಲ.”

ನ್ಯಾಯಸ್ಥಾಪಕರು 9:14

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 9:6

ನ್ಯಾಯಸ್ಥಾಪಕರು 9:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/2008, ಪು. 9

ನ್ಯಾಯಸ್ಥಾಪಕರು 9:16

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 9:6

ನ್ಯಾಯಸ್ಥಾಪಕರು 9:17

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 7:9; 8:28

ನ್ಯಾಯಸ್ಥಾಪಕರು 9:18

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 9:5
  • +ನ್ಯಾಯ 8:30, 31

ನ್ಯಾಯಸ್ಥಾಪಕರು 9:20

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 9:6, 49
  • +ನ್ಯಾಯ 9:39, 53

ನ್ಯಾಯಸ್ಥಾಪಕರು 9:21

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 9:5

ನ್ಯಾಯಸ್ಥಾಪಕರು 9:22

ಪಾದಟಿಪ್ಪಣಿ

  • *

    ಅಥವಾ “ನಾಯಕನ ತರ ನಡ್ಕೊಂಡ.”

ನ್ಯಾಯಸ್ಥಾಪಕರು 9:24

ಮಾರ್ಜಿನಲ್ ರೆಫರೆನ್ಸ್

  • +ಆದಿ 9:6; ನ್ಯಾಯ 9:5

ನ್ಯಾಯಸ್ಥಾಪಕರು 9:26

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 21:20, 21; 24:1

ನ್ಯಾಯಸ್ಥಾಪಕರು 9:27

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 8:33

ನ್ಯಾಯಸ್ಥಾಪಕರು 9:28

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 6:32

ನ್ಯಾಯಸ್ಥಾಪಕರು 9:31

ಪಾದಟಿಪ್ಪಣಿ

  • *

    ಅಥವಾ “ಕುಯುಕ್ತಿಯಿಂದ.”

ನ್ಯಾಯಸ್ಥಾಪಕರು 9:38

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 9:28, 29

ನ್ಯಾಯಸ್ಥಾಪಕರು 9:41

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 9:30

ನ್ಯಾಯಸ್ಥಾಪಕರು 9:45

ಪಾದಟಿಪ್ಪಣಿ

  • *

    ಅಕ್ಷ. “ಉಪ್ಪು ಬಿತ್ತಿದ್ರು.”

ಮಾರ್ಜಿನಲ್ ರೆಫರೆನ್ಸ್

  • +1ಅರ 12:25

ನ್ಯಾಯಸ್ಥಾಪಕರು 9:46

ಪಾದಟಿಪ್ಪಣಿ

  • *

    ಅಥವಾ “ಭದ್ರವಾದ ಆಶ್ರಯದಲ್ಲಿ.”

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 8:33; 9:4, 27

ನ್ಯಾಯಸ್ಥಾಪಕರು 9:53

ಮಾರ್ಜಿನಲ್ ರೆಫರೆನ್ಸ್

  • +2ಸಮು 11:21

ನ್ಯಾಯಸ್ಥಾಪಕರು 9:56

ಮಾರ್ಜಿನಲ್ ರೆಫರೆನ್ಸ್

  • +ಆದಿ 9:6; ನ್ಯಾಯ 9:5, 24

ನ್ಯಾಯಸ್ಥಾಪಕರು 9:57

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 6:32
  • +ನ್ಯಾಯ 9:7, 20

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ನ್ಯಾಯ. 9:1ನ್ಯಾಯ 8:30, 31
ನ್ಯಾಯ. 9:2ನ್ಯಾಯ 8:30
ನ್ಯಾಯ. 9:4ನ್ಯಾಯ 8:33; 9:46
ನ್ಯಾಯ. 9:5ನ್ಯಾಯ 6:11; 8:27
ನ್ಯಾಯ. 9:52ಅರ 11:1; 2ಪೂರ್ವ 21:4
ನ್ಯಾಯ. 9:6ಧರ್ಮೋ 17:14; 1ಸಮು 8:7
ನ್ಯಾಯ. 9:7ಧರ್ಮೋ 11:29; ಯೆಹೋ 8:33; ಯೋಹಾ 4:20
ನ್ಯಾಯ. 9:8ನ್ಯಾಯ 8:22
ನ್ಯಾಯ. 9:14ನ್ಯಾಯ 9:6
ನ್ಯಾಯ. 9:16ನ್ಯಾಯ 9:6
ನ್ಯಾಯ. 9:17ನ್ಯಾಯ 7:9; 8:28
ನ್ಯಾಯ. 9:18ನ್ಯಾಯ 9:5
ನ್ಯಾಯ. 9:18ನ್ಯಾಯ 8:30, 31
ನ್ಯಾಯ. 9:20ನ್ಯಾಯ 9:6, 49
ನ್ಯಾಯ. 9:20ನ್ಯಾಯ 9:39, 53
ನ್ಯಾಯ. 9:21ನ್ಯಾಯ 9:5
ನ್ಯಾಯ. 9:24ಆದಿ 9:6; ನ್ಯಾಯ 9:5
ನ್ಯಾಯ. 9:26ಯೆಹೋ 21:20, 21; 24:1
ನ್ಯಾಯ. 9:27ನ್ಯಾಯ 8:33
ನ್ಯಾಯ. 9:28ನ್ಯಾಯ 6:32
ನ್ಯಾಯ. 9:38ನ್ಯಾಯ 9:28, 29
ನ್ಯಾಯ. 9:41ನ್ಯಾಯ 9:30
ನ್ಯಾಯ. 9:451ಅರ 12:25
ನ್ಯಾಯ. 9:46ನ್ಯಾಯ 8:33; 9:4, 27
ನ್ಯಾಯ. 9:532ಸಮು 11:21
ನ್ಯಾಯ. 9:56ಆದಿ 9:6; ನ್ಯಾಯ 9:5, 24
ನ್ಯಾಯ. 9:57ನ್ಯಾಯ 6:32
ನ್ಯಾಯ. 9:57ನ್ಯಾಯ 9:7, 20
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
  • 35
  • 36
  • 37
  • 38
  • 39
  • 40
  • 41
  • 42
  • 43
  • 44
  • 45
  • 46
  • 47
  • 48
  • 49
  • 50
  • 51
  • 52
  • 53
  • 54
  • 55
  • 56
  • 57
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ನ್ಯಾಯಸ್ಥಾಪಕರು 9:1-57

ನ್ಯಾಯಸ್ಥಾಪಕರು

9 ಸ್ವಲ್ಪ ಸಮಯ ಆದ್ಮೇಲೆ ಯೆರುಬ್ಬಾಳನ ಮಗ ಅಬೀಮೆಲೆಕ+ ಶೆಕೆಮಲ್ಲಿದ್ದ ತನ್ನ ಸೋದರ ಮಾವಂದಿರ ಹತ್ರ ಹೋಗಿ ಅವ್ರಿಗೂ ತಾತನ ಮನೆಯವ್ರಿಗೂ* 2 “ದಯವಿಟ್ಟು ಶೆಕೆಮಿನ ಎಲ್ಲ ನಾಯಕರ* ಹತ್ರ ಹೋಗಿ ‘ನಿಮಗೆ ಯಾವುದು ಒಳ್ಳೇದು? ಯೆರುಬ್ಬಾಳನ ಎಲ್ಲ 70 ಮಕ್ಕಳು+ ನಿಮ್ಮನ್ನ ಆಳೋದಾ ಅಥವಾ ಒಬ್ಬ ಮಾತ್ರ ಆಳೋದಾ?’ ಅಂತ ಕೇಳಿ. ನಾನು ಅವ್ರ ರಕ್ತ ಸಂಬಂಧಿ* ಅನೋದನ್ನ ಅವ್ರಿಗೆ ನೆನಪ್ಸಿ” ಅಂದ.

3 ಆಗ ಅಬೀಮೆಲೆಕನ ಪರವಾಗಿ ಅವನ ಸೋದರ ಮಾವಂದಿರು ಶೆಕೆಮಿನ ಎಲ್ಲ ನಾಯಕರ ಹತ್ರ ಹೋಗಿ ಮಾತಾಡಿದ್ರು. ಆಗ ಅಬೀಮೆಲೆಕನ ಕಡೆ ಅವ್ರ ಹೃದಯ ವಾಲಿ “ಅವನು ನಮ್ಮ ಸ್ವಂತ ಸಹೋದರ ತಾನೇ” ಅಂತ ಮಾತಾಡ್ಕೊಂಡು ಅವನ ಪಕ್ಷ ವಹಿಸಿದ್ರು. 4 ಆಮೇಲೆ ಅವರು ಬಾಳ್‌-ಬೆರೀತನ+ ದೇವಾಲಯದಿಂದ 70 ಬೆಳ್ಳಿಯ ಶೆಕೆಲ್‌ಗಳನ್ನ ತಗೊಂಡು ಅಬೀಮೆಲೆಕನಿಗೆ ಕೊಟ್ರು. ಅದನ್ನ ಉಪಯೋಗಿಸಿ ಸೋಮಾರಿಗಳನ್ನ, ದುರಹಂಕಾರಿಗಳನ್ನ ತನ್ನ ಜೊತೆ ಸೇರಿಸ್ಕೊಂಡ. 5 ಅವನು ತಂದೆಯ ಮನೆಯಾದ ಒಫ್ರಕ್ಕೆ+ ಹೋಗಿ ತನ್ನ ಸಹೋದರರನ್ನ ಅಂದ್ರೆ ಯೆರುಬ್ಬಾಳನ 70 ಗಂಡು ಮಕ್ಕಳನ್ನ ಒಂದೇ ಬಂಡೆ ಮೇಲೆ ಕೊಂದುಹಾಕಿದ.+ ಯೆರುಬ್ಬಾಳನ ಕಿರಿಮಗ ಯೋತಾಮ ಬಚ್ಚಿಟ್ಕೊಂಡಿದ್ದ, ಹಾಗಾಗಿ ಅವನ ಜೀವ ಮಾತ್ರ ಉಳಿತು.

6 ಶೆಕೆಮಿನ ಎಲ್ಲ ನಾಯಕರು ಮತ್ತು ಬೆತ್‌ಮಿಲ್ಲೋವಿನ ಎಲ್ಲ ಜನ ಸೇರಿ ಶೆಕೆಮಿನ ದೊಡ್ಡ ಮರದ ಹತ್ರ ಇದ್ದ ಕಂಬದ ಪಕ್ಕದಲ್ಲಿ ಅಬೀಮೆಲೆಕನನ್ನ ರಾಜನಾಗಿ ಮಾಡಿದ್ರು.+

7 ಈ ವಿಷ್ಯ ಯೋತಾಮನ ಕಿವಿಗೆ ಬಿದ್ದಾಗ ಅವನು ಗೆರಿಜ್ಜೀಮ್‌ ಬೆಟ್ಟದ+ ತುದಿಗೆ ಹೋಗಿ ಗಟ್ಟಿಯಾಗಿ “ಶೆಕೆಮಿನ ನಾಯಕರೇ ನನ್ನ ಮಾತು ಕೇಳಿ, ಆಗ ದೇವರು ನಿಮ್ಮ ಮಾತು ಕೇಳ್ತಾನೆ.

8 ಒಮ್ಮೆ ಮರಗಳೆಲ್ಲ ಸೇರಿ ತಮಗಾಗಿ ಒಬ್ಬ ರಾಜನನ್ನ ಅಭಿಷೇಕಿಸಬೇಕು ಅಂದ್ಕೊಂಡ್ವು. ಆಲಿವ್‌ ಮರದ ಹತ್ರ ಹೋಗಿ ‘ನೀನು ನಮಗೆ ರಾಜ ಆಗು’+ ಅಂತ ಹೇಳಿದ್ವು. 9 ಆದ್ರೆ ಆಲಿವ್‌ ಮರ ‘ದೇವ್ರನ್ನ, ಮನುಷ್ಯರನ್ನ ಗೌರವಿಸೋಕೆ ನನ್ನ ಎಣ್ಣೆ* ಕೊಡೋದನ್ನ ಬಿಟ್ಟು ನಾನು ಬೇರೆ ಮರಗಳ ಮೇಲೆ ಆಳೋಕೆ ಬರಬೇಕಾ?’ ಅಂತು. 10 ಮರಗಳು ಅಂಜೂರ ಮರದ ಹತ್ರ ಹೋಗಿ ‘ನಮ್ಮ ರಾಜನಾಗಿ ಆಳು’ ಅಂದ್ವು. 11 ಆದ್ರೆ ಅಂಜೂರ ಮರ ‘ಸಿಹಿಯಾದ ಒಳ್ಳೇ ಫಲ ಕೊಡೋದು ಬಿಟ್ಟು ಬೇರೆ ಮರಗಳ ಮೇಲೆ ಆಳೋಕೆ ಬರಬೇಕಾ?’ ಅಂತು. 12 ಮರಗಳು ದ್ರಾಕ್ಷಿ ಬಳ್ಳಿ ಹತ್ರ ಹೋಗಿ ‘ನೀನು ಬಂದು ನಮ್ಮ ರಾಜ ಆಗು’ ಅಂದ್ವು. 13 ಆಗ ದ್ರಾಕ್ಷಿ ಬಳ್ಳಿ ‘ನಾನು ದೇವ್ರನ್ನ, ಮನುಷ್ಯರನ್ನ ಖುಷಿಪಡಿಸೋ ಹೊಸ ದ್ರಾಕ್ಷಾಮದ್ಯ ಕೊಡೋದು ಬಿಟ್ಟು ಬೇರೆ ಮರಗಳ ಮೇಲೆ ಆಳೋಕೆ ಬರಬೇಕಾ?’ ಅಂತು. 14 ಕೊನೆಗೆ ಎಲ್ಲ ಮರಗಳು ಸೇರಿ ಮುಳ್ಳುಗಿಡಕ್ಕೆ ‘ನೀನು ನಮ್ಮ ಮೇಲೆ ಆಳು’+ ಅಂದ್ವು. 15 ಅದಕ್ಕೆ ಮುಳ್ಳುಗಿಡ ‘ನೀವು ನಿಜಕ್ಕೂ ನನ್ನನ್ನ ರಾಜನಾಗಿ ಅಭಿಷೇಕಿಸಬೇಕು ಅಂತಿದ್ರೆ ನನ್ನ ನೆರಳಲ್ಲಿ ಆಶ್ರಯ ಪಡ್ಕೊಳ್ಳಿ. ಇಲ್ಲಾಂದ್ರೆ ನನ್ನಿಂದ ಬೆಂಕಿ ಬಂದು ಲೆಬನೋನಿನ ದೇವದಾರು ಮರಗಳನ್ನ ಸುಟ್ಟುಬಿಡುತ್ತೆ’ ಅಂತು.

16 ನೀವು ಅಬೀಮೆಲೆಕನನ್ನ ರಾಜನಾಗಿ ಮಾಡೋ+ ಮೂಲಕ ಪ್ರಾಮಾಣಿಕರಾಗಿ, ಗೌರವದಿಂದ ನಡ್ಕೊಂಡಿದ್ದೀರಾ? ಯೆರುಬ್ಬಾಳನಿಗೆ, ಅವನ ಮನೆಮಂದಿಗೆ ಒಳ್ಳೇತನ ತೋರಿಸಿದ್ದೀರಾ? ಅವನ ಜೊತೆ ಹೇಗೆ ನಡ್ಕೊಬೇಕಿತ್ತೋ ಹಾಗೆ ನಡ್ಕೊಂಡಿದ್ದೀರಾ? 17 ನನ್ನ ತಂದೆ ನಿಮಗಾಗಿ ಯುದ್ಧ ಮಾಡಿದಾಗ ನಿಮ್ಮನ್ನ ಮಿದ್ಯಾನ್ಯರ ಕೈಯಿಂದ ಕಾಪಾಡೋಕೆ ತನ್ನ ಪ್ರಾಣಾನೇ* ಅಪಾಯಕ್ಕೆ ಒಡ್ಡಿದ.+ 18 ಆದ್ರೆ ಇವತ್ತು ನನ್ನ ತಂದೆಯ ಮನೆಮಂದಿ ವಿರುದ್ಧ ಎದ್ದು ಅವನ 70 ಗಂಡು ಮಕ್ಕಳನ್ನ ಒಂದೇ ಬಂಡೆ ಮೇಲೆ ಕೊಂದುಬಿಟ್ರಿ.+ ಅವನ ದಾಸಿಯ ಮಗ ಅಬೀಮೆಲೆಕ+ ನಿಮ್ಮ ಸಹೋದರ ಅಂತ ಹೇಳಿ ಅವನನ್ನ ಶೆಕೆಮಿನ ನಾಯಕರ ಮೇಲೆ ರಾಜನಾಗಿ ಮಾಡಿದ್ದೀರ. 19 ನೀವು ಯೆರುಬ್ಬಾಳನಿಗೆ, ಅವನ ಮನೆಮಂದಿಗೆ ಪ್ರಾಮಾಣಿಕರಾಗಿ, ಗೌರವದಿಂದ ನಡೆದಿದ್ರೆ ಅಬೀಮೆಲೆಕನಿಂದ ನೀವು ಸಂತೋಷಪಡಿ, ನಿಮ್ಮಿಂದ ಅವನು ಸಂತೋಷಪಡ್ಲಿ. 20 ಇಲ್ಲಾಂದ್ರೆ ಅಬೀಮೆಲೆಕನಿಂದ ಬೆಂಕಿ ಹೊರಟು ಶೆಕೆಮಿನ ನಾಯಕರನ್ನ, ಬೆತ್‌ಮಿಲ್ಲೋವನ್ನ+ ಸುಟ್ಟುಬಿಡ್ಲಿ. ಹಾಗೇ ಶೆಕೆಮಿನ ನಾಯಕರಿಂದ, ಬೆತ್‌ಮಿಲ್ಲೋವಿನಿಂದ ಬೆಂಕಿ ಹೊರಟು ಅಬೀಮೆಲೆಕನನ್ನ ಸುಟ್ಟುಬಿಡ್ಲಿ”+ ಅಂದ.

21 ಆಮೇಲೆ ಯೋತಾಮ+ ತನ್ನ ಸಹೋದರ ಅಬೀಮೆಲೆಕನಿಗೆ ಹೆದರಿ ಬೇರಕ್ಕೆ ಓಡಿಹೋಗಿ ಅಲ್ಲೇ ವಾಸಿಸಿದ.

22 ಅಬೀಮೆಲೆಕ ಇಸ್ರಾಯೇಲಿನ ಮೇಲೆ ಮೂರು ವರ್ಷ ರಾಜನ ತರ ಆಳಿದ.* 23 ದೇವರು ಅಬೀಮೆಲೆಕನಿಗೂ ಶೆಕೆಮಿನ ನಾಯಕರಿಗೂ ದ್ಷೇಷ ಹುಟ್ಟೋ ತರ ಮಾಡಿದ. ಅವರು ಅಬೀಮೆಲೆಕನಿಗೆ ಮೋಸ ಮಾಡಿದ್ರು. 24 ಯೆರುಬ್ಬಾಳನ 70 ಗಂಡು ಮಕ್ಕಳನ್ನ ಕ್ರೂರವಾಗಿ ಕೊಂದಿದ್ದಕ್ಕಾಗಿ ಸೇಡು ತೀರಿಸೋಕೆ ದೇವರು ಹೀಗೆ ಮಾಡಿದನು. ಅವ್ರನ್ನ ಕೊಂದಿದ್ದಕ್ಕಾಗಿ ಅವ್ರ ಸಹೋದರ ಅಬೀಮೆಲೆಕನ ಮೇಲೂ+ ಅವ್ರನ್ನ ಕೊಲ್ಲೋಕೆ ಅವನಿಗೆ ಸಹಾಯ ಮಾಡಿದ್ದಕ್ಕಾಗಿ ಶೆಕೆಮಿನ ನಾಯಕರ ಮೇಲೂ ಆ ರಕ್ತಾಪರಾಧ ಬರಬೇಕು ಅಂತ ಹೀಗಾಯ್ತು.25 ಶೆಕೆಮಿನ ನಾಯಕರು ಅಬೀಮೆಲೆಕನಿಗಾಗಿ ಹೊಂಚುಹಾಕಬೇಕು ಅಂತ ಗಂಡಸ್ರನ್ನ ಬೆಟ್ಟದ ಶಿಖರಗಳಲ್ಲಿ ಇರಿಸಿದ್ರು. ಆ ಗಂಡಸ್ರು ದಾರಿಯಲ್ಲಿ ಹಾದು ಹೋಗ್ತಿದ್ದ ಪ್ರತಿಯೊಬ್ಬ ಪ್ರಯಾಣಿಕನನ್ನ ದೋಚ್ತಿದ್ರು. ಸ್ವಲ್ಪ ಸಮಯದಲ್ಲೇ ಈ ವಿಷ್ಯ ಅಬೀಮೆಲೆಕನ ಕಿವಿಗೆ ಬಿತ್ತು.

26 ಎಬೆದನ ಮಗ ಗಾಳ, ಅವನ ಸಹೋದರರು ಶೆಕೆಮಿಗೆ ಬಂದ್ರು.+ ಶೆಕೆಮಿನ ನಾಯಕರು ಗಾಳನ ಮೇಲೆ ಭರವಸೆ ಇಟ್ರು. 27 ಶೆಕೆಮಿನ ಜನ ಹೊಲಗಳಿಗೆ ಹೋಗಿ ತಮ್ಮ ದ್ರಾಕ್ಷಿ ತೋಟದಲ್ಲಿದ್ದ ದ್ರಾಕ್ಷಿಗಳನ್ನೆಲ್ಲ ಕೂಡಿಸಿ ತುಳಿದು ರಸತೆಗೆದು ಹಬ್ಬ ಮಾಡಿದ್ರು. ತಮ್ಮ ದೇವರ ಆಲಯಕ್ಕೆ ಹೋಗಿ+ ತಿಂದು ಕುಡಿದು ಅಬೀಮೆಲೆಕನಿಗೆ ಶಾಪ ಹಾಕಿದ್ರು. 28 ಆಮೇಲೆ ಎಬೆದನ ಮಗ ಗಾಳ “ಅಬೀಮೆಲೆಕ ಯಾರು? ಶೆಕೆಮ್‌ ಯಾರು? ನಾವ್ಯಾಕೆ ಅವ್ರ ಸೇವೆ ಮಾಡಬೇಕು? ಅಬೀಮೆಲೆಕ ಯೆರುಬ್ಬಾಳನ+ ಮಗನಾಗಿದ್ರೆ ಏನಂತೆ? ಅವನ ಅಧಿಕಾರಿ ಜೆಬುಲನಾಗಿದ್ರೆ ಏನಂತೆ? ಅಬೀಮೆಲೆಕನಿಗೆ ಸೇವೆ ಮಾಡೋದಕ್ಕಿಂತ ಶೆಕೆಮನ ತಂದೆ ಹಮೋರನ ಜನ್ರಿಗೆ ಸೇವೆ ಮಾಡೋದು ಒಳ್ಳೇದು. 29 ಈ ಜನ್ರು ನನ್ನ ಅಧಿಕಾರದ ಕೆಳಗೆ ಇದ್ದಿದ್ರೆ ನಾನು ಅಬೀಮೆಲೆಕನನ್ನ ಅಧಿಕಾರದಿಂದ ಕೆಳಗೆ ಇಳಿಸ್ತಿದ್ದೆ” ಅಂದ. ಅವನು ಅಬೀಮೆಲೆಕನಿಗೆ ಸವಾಲು ಹಾಕ್ತಾ “ನಿನ್ನ ಸೈನ್ಯ ಹೆಚ್ಚಿಸ್ಕೊಂಡು ನನ್ನ ವಿರುದ್ಧ ಯುದ್ಧಕ್ಕೆ ಬಾ” ಅಂದ.

30 ಎಬೆದನ ಮಗ ಗಾಳ ಹೇಳಿದ ಈ ಮಾತುಗಳನ್ನ ಆ ಪಟ್ಟಣದ ಅಧಿಕಾರಿ ಜೆಬುಲ ಕೇಳಿಸ್ಕೊಂಡಾಗ ಅವನ ಕೋಪ ನೆತ್ತಿಗೇರ್ತು. 31 ಹಾಗಾಗಿ ಅವನು ಗುಟ್ಟಾಗಿ* ಸಂದೇಶವಾಹಕರ ಮೂಲಕ ಅಬೀಮೆಲೆಕನಿಗೆ ಹೀಗೆ ಹೇಳಿ ಕಳಿಸಿದ: “ನೋಡು! ಎಬೆದನ ಮಗ ಗಾಳ, ಅವನ ಸಹೋದರರು ಈಗ ಶೆಕೆಮಲ್ಲಿದ್ದಾರೆ. ನಿನ್ನ ವಿರುದ್ಧ ದಂಗೆ ಏಳೋ ಹಾಗೇ ಪಟ್ಟಣದ ಜನ್ರನ್ನ ಕೆರಳಿಸ್ತಿದ್ದಾರೆ. 32 ಈ ರಾತ್ರಿನೇ ನೀನು ನಿನ್ನ ಜನ್ರನ್ನ ಕರ್ಕೊಂಡು ಹೊಲದಲ್ಲಿ ಹೊಂಚುಹಾಕು. 33 ನೀನು ಬೆಳಿಗ್ಗೆ ಬೇಗ ಎದ್ದು ಸೂರ್ಯ ಹುಟ್ತಾ ಇರುವಾಗ್ಲೇ ಪಟ್ಟಣದ ಮೇಲೆ ದಾಳಿ ಮಾಡು. ಗಾಳ, ಅವನ ಜನ್ರು ನಿನ್ನ ವಿರುದ್ಧ ಬಂದಾಗ ಅವನನ್ನ ಸೋಲಿಸೋಕೆ ನಿನ್ನ ಕೈಯಲ್ಲಿ ಆಗೋದನ್ನೆಲ್ಲ ಮಾಡು.”

34 ಹಾಗಾಗಿ ಅಬೀಮೆಲೆಕ, ಅವನ ಜನ್ರೆಲ್ಲ ರಾತ್ರಿ ಹೊತ್ತಲ್ಲೇ ಎದ್ದು ನಾಲ್ಕು ಗುಂಪುಗಳಾಗಿ ಶೆಕೆಮಿನ ವಿರುದ್ಧ ಹೊಂಚುಹಾಕಿ ಕೂತ್ರು. 35 ಎಬೆದನ ಮಗ ಗಾಳ ಹೊರಗೆ ಹೋಗಿ ಪಟ್ಟಣದ ಪ್ರವೇಶ ಬಾಗಿಲಲ್ಲಿ ನಿಂತಾಗ ಅಬೀಮೆಲೆಕ, ಅವನ ಜನ ಹೊಂಚುಹಾಕಿ ಕೂತಿದ್ದ ಜಾಗದಿಂದ ಎದ್ರು. 36 ಗಾಳ ಜನ್ರನ್ನ ನೋಡಿದಾಗ ಜೆಬುಲನಿಗೆ “ನೋಡಲ್ಲಿ! ಜನ ಬೆಟ್ಟದ ತುದಿಯಿಂದ ಇಳಿದು ಬರ್ತಿದ್ದಾರೆ” ಅಂದ. ಆದ್ರೆ ಜೆಬುಲ ಅವನಿಗೆ “ಬೆಟ್ಟಗಳ ನೆರಳು ನೋಡಿ ನೀನು ಜನ್ರು ಅಂದ್ಕೊಳ್ತಿದ್ದೀಯ” ಅಂದ.

37 ಸ್ವಲ್ಪ ಸಮಯ ಆದ್ಮೇಲೆ ಗಾಳ “ಸರಿಯಾಗಿ ನೋಡು! ಜನ ಬೆಟ್ಟದ ಪ್ರದೇಶದ ಮಧ್ಯ ಭಾಗದಿಂದ ಇಳಿದು ಬರ್ತಿದ್ದಾರೆ, ಇನ್ನೊಂದು ಗುಂಪು ಮಿಯೋನೀಮಿನಲ್ಲಿರೋ ದೊಡ್ಡ ಮರದ ದಾರಿಯಲ್ಲಿ ಬರ್ತಿದೆ” ಅಂದ. 38 ಅದಕ್ಕೆ ಜೆಬುಲ “‘ಅಬೀಮೆಲೆಕನ ಸೇವೆ ಮಾಡೋಕೆ ಅವನ್ಯಾರು?’+ ಅಂತ ಆವಾಗ್ಲೇ ತಮಾಷೆ ಮಾಡಿದ್ಯಲ್ಲಾ. ಈ ಜನ್ರ ಸೇವೆ ಮಾಡೋದು ನಿನಗಿಷ್ಟ ಇಲ್ಲ ತಾನೇ, ಈಗ ಹೋಗಿ ಯುದ್ಧ ಮಾಡು” ಅಂದ.

39 ಆಗ ಗಾಳ ಶೆಕೆಮಿನ ನಾಯಕರ ಮುಂದೆ ಹೋಗಿ ಅಬೀಮೆಲೆಕನ ವಿರುದ್ಧ ಯುದ್ಧ ಮಾಡಿದ. 40 ಅಬೀಮೆಲೆಕ ಗಾಳನನ್ನ ಅಟ್ಟಿಸ್ಕೊಂಡು ಹೋದಾಗ ಅವನು ಓಡಿಹೋದ. ಪಟ್ಟಣದ ಪ್ರವೇಶ ಬಾಗಿಲ ತನಕ ತುಂಬ ಜನ ಸತ್ತು ಬಿದ್ದಿದ್ರು.

41 ಅಬೀಮೆಲೆಕ ಅರೂಮದಲ್ಲಿ ವಾಸಿಸಿದ. ಜೆಬುಲ+ ಗಾಳನನ್ನ, ಅವನ ಸಹೋದರರನ್ನ ಶೆಕೆಮಿಂದ ಓಡಿಸಿಬಿಟ್ಟ. 42 ಮಾರನೇ ದಿನ ಜನ ಪಟ್ಟಣ ಬಿಟ್ಟು ಹೋದ್ರು. ಈ ವಿಷ್ಯ ಅಬೀಮೆಲೆಕನಿಗೆ ಗೊತ್ತಾಯ್ತು. 43 ಆಗ ಅವನು ತನ್ನ ಜನ್ರನ್ನ ಮೂರು ಗುಂಪುಗಳಾಗಿ ಮಾಡಿ ಪಟ್ಟಣದ ಹೊರಗೆ ಹೊಂಚುಹಾಕಿ ಕೂರೋ ತರ ಮಾಡಿದ. ಜನ ಪಟ್ಟಣದಿಂದ ಹೊರಗೆ ಬರೋದನ್ನ ನೋಡಿದ ಕೂಡ್ಲೇ ಅವ್ರ ಮೇಲೆ ದಾಳಿ ಮಾಡಿ ಅವ್ರನ್ನ ಕೊಂದ. 44 ಅಬೀಮೆಲೆಕ, ಅವನ ಜೊತೆ ಇದ್ದ ಗುಂಪಿನವರು ಮುಂದೆ ಹೋಗಿ ದಾಳಿ ಮಾಡಿ ಪಟ್ಟಣದ ಬಾಗಿಲಲ್ಲಿ ನಿಂತ್ರು. ಅದೇ ಸಮಯದಲ್ಲಿ ಉಳಿದ ಎರಡು ಗುಂಪಿನವರು ಪಟ್ಟಣದ ಹೊರಗಿದ್ದ ಜನ್ರ ಮೇಲೆ ದಾಳಿ ಮಾಡಿ ಅವ್ರನ್ನ ಕೊಂದ್ರು. 45 ಆ ಇಡೀ ದಿನ ಅಬೀಮೆಲೆಕ ಆ ಪಟ್ಟಣದ ವಿರುದ್ಧ ಯುದ್ಧ ಮಾಡಿ ಅದನ್ನ ವಶ ಮಾಡ್ಕೊಂಡ. ಅಲ್ಲಿದ್ದ ಜನ್ರನ್ನ ಕೊಂದ, ಆ ಪಟ್ಟಣವನ್ನ ನಾಶಮಾಡಿ,+ ಆ ಸ್ಥಳದಲ್ಲಿ ಉಪ್ಪು ಎರಚಿದ.*

46 ಶೆಕೆಮಿನ ಕೋಟೆಯ ನಾಯಕರು ಇದ್ರ ಬಗ್ಗೆ ಕೇಳಿಸ್ಕೊಂಡ ತಕ್ಷಣ ಏಲ್‌ಬೆರೀತ್‌ ದೇವಾಲಯದ+ ನೆಲಮನೆಯಲ್ಲಿ* ಬಚ್ಚಿಟ್ಕೊಂಡ್ರು. 47 ಶೆಕೆಮ್‌ ಕೋಟೆಯ ನಾಯಕರೆಲ್ಲ ಒಂದೇ ಕಡೆ ಸೇರಿದ್ದಾರೆ ಅಂತ ಅಬೀಮೆಲೆಕನ ಕಿವಿಗೆ ಬಿದ್ದ ಕೂಡ್ಲೇ 48 ಅವನು, ಅವನ ಜನ್ರು ಚಲ್ಮೋನ್‌ ಬೆಟ್ಟ ಹತ್ತಿದ್ರು. ಅಬೀಮೆಲೆಕ ತನ್ನ ಕೈಯಲ್ಲಿ ಒಂದು ಕೊಡಲಿ ಹಿಡ್ಕೊಂಡ. ಅದ್ರಿಂದ ಮರದ ಒಂದು ಕೊಂಬೆ ಕಡಿದು ಅದನ್ನ ಹೆಗಲ ಮೇಲೆ ಹೊತ್ಕೊಂಡು ಜನ್ರಿಗೆ “ನಾನು ಮಾಡಿದ ಹಾಗೇ ನೀವು ಕೂಡ್ಲೇ ಮಾಡಿ!” ಅಂದ. 49 ಆಗ ಜನ್ರೆಲ್ಲ ಅಬೀಮೆಲೆಕನ ಹಾಗೇ ಕೊಂಬೆಗಳನ್ನ ಕಡಿದು ಅವನ ಹಿಂದೇ ಹೋದ್ರು. ಆ ಕೊಂಬೆಗಳನ್ನ ನೆಲಮನೆಯ ಸುತ್ತ ಇಟ್ಟು ಅದಕ್ಕೆ ಬೆಂಕಿ ಹಚ್ಚಿದ್ರು. ಇದ್ರಿಂದ ಶೆಕೆಮ್‌ ಕೋಟೆ ಜನ್ರೆಲ್ಲ ಅಂದ್ರೆ ಸುಮಾರು 1,000 ಸ್ತ್ರೀಪುರುಷರು ಸತ್ತುಹೋದ್ರು.

50 ಆಮೇಲೆ ಅಬೀಮೆಲೆಕ ತೇಬೇಚಿಗೆ ಹೋಗಿ ಅದ್ರ ವಿರುದ್ಧ ಯುದ್ಧ ಮಾಡಿ ಅದನ್ನ ವಶ ಮಾಡ್ಕೊಂಡ. 51 ಆ ಪಟ್ಟಣದ ಮಧ್ಯದಲ್ಲಿ ಭದ್ರವಾದ ಒಂದು ಕೋಟೆ ಇತ್ತು. ಎಲ್ಲ ಸ್ತ್ರೀಪುರುಷರು, ಪಟ್ಟಣದ ಎಲ್ಲ ನಾಯಕರು ಓಡಿಹೋಗಿ ಅದ್ರೊಳಗೆ ಸೇರ್ಕೊಂಡು ಅದ್ರ ಮಾಳಿಗೆಗೆ ಹತ್ತಿಹೋದ್ರು. 52 ಅಬೀಮೆಲೆಕ ಕೋಟೆ ಕಡೆ ಹೋಗಿ ಅದ್ರ ಮೇಲೆ ದಾಳಿ ಮಾಡಿದ. ಅದನ್ನ ಬೆಂಕಿಯಿಂದ ಸುಟ್ಟುಹಾಕೋಕೆ ಅದ್ರ ಬಾಗಿಲಿಗೆ ಹೋದ. 53 ಆಗ ಸ್ತ್ರೀಯೊಬ್ಬಳು ಬೀಸೋ ಕಲ್ಲನ್ನ ಮೇಲಿಂದ ಎತ್ತಿಹಾಕಿ ಅಬೀಮೆಲೆಕನ ತಲೆಬುರುಡೆ ಒಡೆದಳು.+ 54 ತಕ್ಷಣ ಅವನು ತನ್ನ ಆಯುಧಗಳನ್ನ ಹೊರ್ತಿದ್ದ ಸೇವಕನನ್ನ ಕರೆದು “‘ಒಬ್ಬ ಸ್ತ್ರೀ ಅವನನ್ನ ಕೊಂದಳು’ ಅಂತ ಜನ ನನ್ನ ಬಗ್ಗೆ ಮಾತಾಡ್ಕೊಳ್ಳಬಾರದು. ಹಾಗಾಗಿ ನಿನ್ನ ಕತ್ತಿ ತಗೊಂಡು ನನ್ನನ್ನ ಕೊಂದುಹಾಕು” ಅಂದ. ಆಗ ಸೇವಕ ಅವನನ್ನ ಇರಿದಾಗ ಸತ್ತುಹೋದ.

55 ಅಬೀಮೆಲೆಕ ಸತ್ತಿದ್ದನ್ನ ಇಸ್ರಾಯೇಲ್‌ ಗಂಡಸ್ರು ನೋಡಿದಾಗ ಅವ್ರೆಲ್ಲ ತಮ್ಮತಮ್ಮ ಮನೆಗಳಿಗೆ ವಾಪಸ್‌ ಹೋದ್ರು. 56 ಅಬೀಮೆಲೆಕ ತನ್ನ 70 ಸಹೋದರರನ್ನ ಕೊಂದು ತನ್ನ ತಂದೆಗೆ ಕೇಡು ಮಾಡಿದ್ದಕ್ಕಾಗಿ ದೇವರು ಈ ವಿಧದಲ್ಲಿ ಅವನಿಗೆ ಸೇಡು ತೀರಿಸಿದನು.+ 57 ಅದೇ ತರ ಶೆಕೆಮಿನ ಜನ ಮಾಡಿದ ಕೆಟ್ಟತನ ಅವ್ರ ತಲೆ ಮೇಲೆ ಬರೋ ತರ ದೇವರು ಮಾಡಿದನು. ಹೀಗೆ ಯೆರುಬ್ಬಾಳನ+ ಮಗ ಯೋತಾಮ+ ಅವ್ರಿಗೆ ಶಾಪ ಹಾಕಿದ ಹಾಗೇ ಆಯ್ತು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ