ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 1 ಸಮುವೇಲ 10
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

1 ಸಮುವೇಲ ಮುಖ್ಯಾಂಶಗಳು

      • ರಾಜನಾಗಿ ಸೌಲನಿಗೆ ಅಭಿಷೇಕ (1-16)

      • ಜನ್ರ ಮುಂದೆ ಸೌಲನಿಗೆ ರಾಜ್ಯಾಧಿಕಾರ (17-27)

1 ಸಮುವೇಲ 10:1

ಮಾರ್ಜಿನಲ್ ರೆಫರೆನ್ಸ್

  • +1ಸಮು 16:13; 2ಅರ 9:2, 3
  • +ವಿಮೋ 19:5; ಧರ್ಮೋ 32:9
  • +1ಸಮು 9:16; ಅಕಾ 13:21

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಅನುಕರಿಸಿ, ಪು. 83

    ಕಾವಲಿನಬುರುಜು,

    7/1/2011, ಪು. 19

1 ಸಮುವೇಲ 10:2

ಮಾರ್ಜಿನಲ್ ರೆಫರೆನ್ಸ್

  • +ಆದಿ 35:19
  • +1ಸಮು 9:3, 5

1 ಸಮುವೇಲ 10:3

ಮಾರ್ಜಿನಲ್ ರೆಫರೆನ್ಸ್

  • +ಆದಿ 28:19, 22

1 ಸಮುವೇಲ 10:6

ಮಾರ್ಜಿನಲ್ ರೆಫರೆನ್ಸ್

  • +ಅರ 11:25
  • +1ಸಮು 10:10

1 ಸಮುವೇಲ 10:8

ಮಾರ್ಜಿನಲ್ ರೆಫರೆನ್ಸ್

  • +1ಸಮು 7:15, 16; 11:14

1 ಸಮುವೇಲ 10:10

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 14:5, 6; 1ಸಮು 11:6; 16:13
  • +1ಸಮು 10:6; 19:23

1 ಸಮುವೇಲ 10:12

ಪಾದಟಿಪ್ಪಣಿ

  • *

    ಅಥವಾ “ನಾಣ್ಣುಡಿ.”

ಮಾರ್ಜಿನಲ್ ರೆಫರೆನ್ಸ್

  • +1ಸಮು 19:24

1 ಸಮುವೇಲ 10:14

ಮಾರ್ಜಿನಲ್ ರೆಫರೆನ್ಸ್

  • +1ಸಮು 9:3

1 ಸಮುವೇಲ 10:17

ಮಾರ್ಜಿನಲ್ ರೆಫರೆನ್ಸ್

  • +1ಸಮು 7:5

1 ಸಮುವೇಲ 10:18

ಮಾರ್ಜಿನಲ್ ರೆಫರೆನ್ಸ್

  • +ವಿಮೋ 13:14; ಧರ್ಮೋ 4:34

1 ಸಮುವೇಲ 10:19

ಪಾದಟಿಪ್ಪಣಿ

  • *

    ಅಕ್ಷ. “ಸಾವಿರ ಸಾವಿರವಾಗಿ.”

ಮಾರ್ಜಿನಲ್ ರೆಫರೆನ್ಸ್

  • +1ಸಮು 8:7; 12:12

1 ಸಮುವೇಲ 10:20

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 7:16-18; ಅಕಾ 1:24
  • +1ಸಮು 9:21

1 ಸಮುವೇಲ 10:21

ಮಾರ್ಜಿನಲ್ ರೆಫರೆನ್ಸ್

  • +ಅಕಾ 13:21

1 ಸಮುವೇಲ 10:22

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 1:1; 20:18, 28; 1ಸಮು 23:2

1 ಸಮುವೇಲ 10:23

ಪಾದಟಿಪ್ಪಣಿ

  • *

    ಅಕ್ಷ. “ಜನ್ರ ಗುಂಪಲ್ಲಿ ಅವನ ತಲೆ ಮತ್ತು ಭುಜ ಕಾಣುವಷ್ಟು ಎತ್ತರವಾಗಿದ್ದ.”

ಮಾರ್ಜಿನಲ್ ರೆಫರೆನ್ಸ್

  • +1ಸಮು 9:2

1 ಸಮುವೇಲ 10:24

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 17:14, 15; 1ಸಮು 9:17

1 ಸಮುವೇಲ 10:25

ಮಾರ್ಜಿನಲ್ ರೆಫರೆನ್ಸ್

  • +1ಸಮು 8:11-18

1 ಸಮುವೇಲ 10:26

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/15/2015, ಪು. 10

1 ಸಮುವೇಲ 10:27

ಪಾದಟಿಪ್ಪಣಿ

  • *

    ಅಕ್ಷ. “ಮೂಕನಂತಿದ್ದ.”

ಮಾರ್ಜಿನಲ್ ರೆಫರೆನ್ಸ್

  • +1ಸಮು 11:12
  • +1ಅರ 10:1, 10; 2ಪೂರ್ವ 17:5

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

1 ಸಮು. 10:11ಸಮು 16:13; 2ಅರ 9:2, 3
1 ಸಮು. 10:1ವಿಮೋ 19:5; ಧರ್ಮೋ 32:9
1 ಸಮು. 10:11ಸಮು 9:16; ಅಕಾ 13:21
1 ಸಮು. 10:2ಆದಿ 35:19
1 ಸಮು. 10:21ಸಮು 9:3, 5
1 ಸಮು. 10:3ಆದಿ 28:19, 22
1 ಸಮು. 10:6ಅರ 11:25
1 ಸಮು. 10:61ಸಮು 10:10
1 ಸಮು. 10:81ಸಮು 7:15, 16; 11:14
1 ಸಮು. 10:10ನ್ಯಾಯ 14:5, 6; 1ಸಮು 11:6; 16:13
1 ಸಮು. 10:101ಸಮು 10:6; 19:23
1 ಸಮು. 10:121ಸಮು 19:24
1 ಸಮು. 10:141ಸಮು 9:3
1 ಸಮು. 10:171ಸಮು 7:5
1 ಸಮು. 10:18ವಿಮೋ 13:14; ಧರ್ಮೋ 4:34
1 ಸಮು. 10:191ಸಮು 8:7; 12:12
1 ಸಮು. 10:20ಯೆಹೋ 7:16-18; ಅಕಾ 1:24
1 ಸಮು. 10:201ಸಮು 9:21
1 ಸಮು. 10:21ಅಕಾ 13:21
1 ಸಮು. 10:22ನ್ಯಾಯ 1:1; 20:18, 28; 1ಸಮು 23:2
1 ಸಮು. 10:231ಸಮು 9:2
1 ಸಮು. 10:24ಧರ್ಮೋ 17:14, 15; 1ಸಮು 9:17
1 ಸಮು. 10:251ಸಮು 8:11-18
1 ಸಮು. 10:271ಸಮು 11:12
1 ಸಮು. 10:271ಅರ 10:1, 10; 2ಪೂರ್ವ 17:5
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
1 ಸಮುವೇಲ 10:1-27

ಒಂದನೇ ಸಮುವೇಲ

10 ಸಮುವೇಲ ಕುಪ್ಪಿಯಲ್ಲಿ ಎಣ್ಣೆ ತಂದು ಸೌಲನ ತಲೆ ಮೇಲೆ ಸುರಿದ.+ ಆಮೇಲೆ ಅವನಿಗೆ ಮುತ್ತು ಕೊಟ್ಟು ಹೀಗಂದ: “ಯೆಹೋವ ಖಂಡಿತ ಆತನ ಜನ್ರ+ ಮೇಲೆ ನಿನ್ನನ್ನ ನಾಯಕನಾಗಿ ಅಭಿಷೇಕಿಸಿದ್ದಾನೆ.+ 2 ಇವತ್ತು ನೀನು ಇಲ್ಲಿಂದ ಹೋದ್ಮೇಲೆ ಬೆನ್ಯಾಮೀನ್‌ ಪ್ರಾಂತ್ಯದ ಚೆಲ್ಚಹದಲ್ಲಿರೋ ರಾಹೇಲಳ ಸಮಾಧಿ+ ಹತ್ರ ಇಬ್ರು ಗಂಡಸ್ರನ್ನ ನೋಡ್ತೀಯ. ಅವರು ನಿನಗೆ ‘ನೀನು ಹುಡ್ಕೊಂಡು ಹೋಗಿದ್ದ ಆ ಕತ್ತೆಗಳು ಸಿಕ್ಕಿವೆ. ಆದ್ರೆ ಈಗ ನಿನ್ನ ತಂದೆ ಕತ್ತೆಗಳನ್ನ ಮರೆತು+ ನಿನ್ನ ಬಗ್ಗೆ ತಲೆ ಕೆಡಿಸ್ಕೊಂಡಿದ್ದಾನೆ. “ನನ್ನ ಮಗ ಇನ್ನೂ ಬಂದಿಲ್ಲ, ನಾನೇನು ಮಾಡ್ಲಿ?” ಅಂತ ಹೇಳ್ತಿದ್ದಾನೆ’ ಅಂತಾರೆ. 3 ಅಲ್ಲಿಂದ ತಾಬೋರಿನಲ್ಲಿರೋ ದೊಡ್ಡ ಮರ ಸಿಗೋ ತನಕ ಹೋಗು. ಅಲ್ಲಿ ನೀನು ಬೆತೆಲಿನಲ್ಲಿರೋ+ ಸತ್ಯ ದೇವರ ಹತ್ರ ಹೋಗ್ತಿರೋ ಮೂವರು ಗಂಡಸ್ರನ್ನ ನೋಡ್ತೀಯ. ಅವ್ರಲ್ಲಿ ಒಬ್ಬ ಮೂರು ಎಳೇ ಆಡು, ಇನ್ನೊಬ್ಬ ಮೂರು ರೊಟ್ಟಿ, ಮತ್ತೊಬ್ಬ ಒಂದು ದೊಡ್ಡ ಜಾಡಿಯಲ್ಲಿ ದ್ರಾಕ್ಷಾಮದ್ಯ ತಗೊಂಡು ಹೋಗ್ತಾ ಇರ್ತಾರೆ. 4 ಅವರು ನಿನ್ನ ಕ್ಷೇಮ ವಿಚಾರಿಸಿ ನಿನಗೆ ಎರಡು ರೊಟ್ಟಿ ಕೊಡ್ತಾರೆ. ಅದನ್ನ ತಗೋ. 5 ಆಮೇಲೆ ಸತ್ಯ ದೇವರ ಬೆಟ್ಟಕ್ಕೆ ಹೋಗು. ಅಲ್ಲಿ ಫಿಲಿಷ್ಟಿಯರ ಸೈನಿಕರ ಗುಂಪು ಇರುತ್ತೆ. ಅಲ್ಲಿಂದ ನೀನು ಪಟ್ಟಣಕ್ಕೆ ಬರುವಾಗ ಎತ್ರದ ಸ್ಥಳದಿಂದ ಇಳಿದು ಬರ್ತಿರೋ ಪ್ರವಾದಿಗಳ ಗುಂಪನ್ನ ನೋಡ್ತೀಯ. ಅವರು ಭವಿಷ್ಯವಾಣಿ ಹೇಳುವಾಗ ಅವ್ರ ಮುಂದೆ ತಂತಿವಾದ್ಯ, ದಮ್ಮಡಿ, ಕೊಳಲು ಬಾರಿಸ್ತಾ ಇರ್ತಾರೆ. 6 ಯೆಹೋವನ ಪವಿತ್ರಶಕ್ತಿ ನಿನಗೆ ಶಕ್ತಿಕೊಡುತ್ತೆ.+ ಆಗ ಅವ್ರ ಜೊತೆ ನೀನು ಕೂಡ ಭವಿಷ್ಯ ಹೇಳ್ತಿಯ, ನೀನು ಬದಲಾಗ್ತೀಯ.+ 7 ಈ ಗುರುತುಗಳೆಲ್ಲ ನಡೆದ್ಮೇಲೆ ನಿನ್ನ ಮನಸ್ಸಿಗೆ ಬಂದಿದ್ದನ್ನ ಮಾಡು. ಯಾಕಂದ್ರೆ ಸತ್ಯ ದೇವರು ನಿನ್ನ ಜೊತೆ ಇದ್ದಾನೆ. 8 ನೀನು ನನಗಿಂತ ಮುಂದೆ ಗಿಲ್ಗಾಲಿಗೆ+ ಹೋಗು. ನಾನು ಅಲ್ಲಿಗೆ ಹೋಗಿ ನಿನಗಾಗಿ ಸರ್ವಾಂಗಹೋಮ ಬಲಿಗಳನ್ನ ಸಮಾಧಾನ ಬಲಿಗಳನ್ನ ಅರ್ಪಿಸ್ತೀನಿ. ನಾನು ನಿನ್ನ ಹತ್ರ ಬರೋ ತನಕ ಅಂದ್ರೆ ಏಳು ದಿನ ತನಕ ಕಾಯಬೇಕು. ನೀನೇನು ಮಾಡಬೇಕಂತ ಆಮೇಲೆ ಹೇಳ್ತೀನಿ.”

9 ಸೌಲ ಸಮುವೇಲನ ಹತ್ರದಿಂದ ಹೊರಡೋಕೆ ತಿರುಗಿದ ತಕ್ಷಣ ದೇವರು ಅವನ ಹೃದಯವನ್ನ ಬದಲಾಯಿಸೋಕೆ ಶುರು ಮಾಡಿದ. ಈ ಎಲ್ಲ ಗುರುತುಗಳು ಆ ದಿನ ಆಯ್ತು. 10 ಅವರು ಅಲ್ಲಿಂದ ಬೆಟ್ಟಕ್ಕೆ ಹೋದ್ರು. ಅಲ್ಲಿ ಪ್ರವಾದಿಗಳ ಗುಂಪನ್ನ ಸೌಲ ನೋಡಿದ. ತಕ್ಷಣ ದೇವರ ಪವಿತ್ರಶಕ್ತಿ ಅವನಿಗೆ ಶಕ್ತಿ ಕೊಡ್ತು.+ ಆಗ ಅವ್ರ ಜೊತೆ ಅವನೂ ಭವಿಷ್ಯ ಹೇಳೋಕೆ ಶುರು ಮಾಡಿದ.+ 11 ಪ್ರವಾದಿಗಳ ಜೊತೆ ಸೌಲ ಕೂಡ ಭವಿಷ್ಯ ಹೇಳೋದನ್ನ ಅವನ ಪರಿಚಯ ಇರುವವರೆಲ್ಲ ನೋಡಿ ಒಬ್ರಿಗೊಬ್ರು “ಕೀಷನ ಮಗನಿಗೆ ಏನಾಯ್ತು? ಸೌಲನೂ ಒಬ್ಬ ಪ್ರವಾದಿನಾ?” ಅಂತ ಮಾತಾಡ್ಕೊಂಡ್ರು. 12 ಆಮೇಲೆ ಆ ಸ್ಥಳಕ್ಕೆ ಸೇರಿದ ವ್ಯಕ್ತಿಯೊಬ್ಬ “ಹಾಗಾದ್ರೆ ಬೇರೆ ಪ್ರವಾದಿಗಳ ತಂದೆಯಂದಿರು ಯಾರು?” ಅಂದ. ಅವತ್ತಿಂದ “ಸೌಲನೂ ಒಬ್ಬ ಪ್ರವಾದಿನಾ?”+ ಅನ್ನೋ ಗಾದೆ* ಹುಟ್ತು.

13 ಭವಿಷ್ಯವಾಣಿ ಹೇಳೋದನ್ನ ಮುಗಿಸಿದ ಮೇಲೆ ಸೌಲ ಎತ್ರದ ಸ್ಥಳಕ್ಕೆ ಬಂದ. 14 ಸೌಲನ ಚಿಕ್ಕಪ್ಪ ಅವನಿಗೆ ಮತ್ತು ಅವನ ಸೇವಕನಿಗೆ “ಎಲ್ಲಿ ಹೋಗಿದ್ರಿ?” ಅಂತ ಕೇಳಿದ. ಅದಕ್ಕೆ ಸೌಲ “ಕತ್ತೆಗಳನ್ನ ಹುಡುಕೋಕೆ ಹೋಗಿದ್ವಿ,+ ಸಿಗಲಿಲ್ಲ. ಹಾಗಾಗಿ ನಾವು ಸಮುವೇಲನ ಹತ್ರ ಹೋದ್ವಿ” ಅಂದ. 15 ಆಗ ಸೌಲನ ಚಿಕ್ಕಪ್ಪ “ದಯವಿಟ್ಟು, ಸಮುವೇಲ ಏನು ಹೇಳಿದ ಅಂತ ನಂಗೆ ಹೇಳು” ಅಂದ. 16 ಸೌಲ ಅವನಿಗೆ “ಕತ್ತೆಗಳು ಸಿಕ್ಕಿವೆ ಅಂತ ಸಮುವೇಲ ಹೇಳಿದ.” ಆದ್ರೆ ರಾಜ ಆಗೋದ್ರ ಬಗ್ಗೆ ಸಮುವೇಲ ಹೇಳಿದ ವಿಷ್ಯವನ್ನ ಸೌಲ ಹೇಳಲಿಲ್ಲ.

17 ಆಮೇಲೆ ಸಮುವೇಲ ಜನ್ರನ್ನ ಯೆಹೋವನ ಮುಂದೆ ಮಿಚ್ಪಾದಲ್ಲಿ ಸೇರಿಸಿ+ 18 ಇಸ್ರಾಯೇಲ್ಯರಿಗೆ ಹೀಗಂದ “ಇಸ್ರಾಯೇಲ್‌ ದೇವರಾದ ಯೆಹೋವ ಹೀಗೆ ಹೇಳ್ತಾನೆ: ‘ಇಸ್ರಾಯೇಲನ್ನ ಈಜಿಪ್ಟಿಂದ ಕರ್ಕೊಡು ಬಂದವನು,+ ನಿಮ್ಮನ್ನ ಈಜಿಪ್ಟಿನ ಕೈಯಿಂದ, ನಿಮ್ಮ ಮೇಲೆ ದಾಳಿ ಮಾಡ್ತಿದ್ದ ಎಲ್ಲ ರಾಜ್ಯಗಳ ಕೈಯಿಂದ ಕಾಪಾಡಿದವನು ನಾನೇ. 19 ಆದ್ರೆ ನಿಮಗೆ ಏನೇ ಕಷ್ಟ ಬಂದ್ರೂ, ನೋವು ಬಂದ್ರೂ ನಿಮ್ಮನ್ನ ಸಂರಕ್ಷಿಸಿದ ನಿಮ್ಮ ದೇವರನ್ನ ಇವತ್ತು ನೀವು ದೂರ ಮಾಡಿ,+ “ನಮಗೆ ಒಬ್ಬ ರಾಜ ಬೇಕು” ಅಂತ ಹೇಳಿದ್ರಿ. ಈಗ ನಿಮ್ಮ ಕುಲಗಳ ಪ್ರಕಾರ, ನಿಮ್ಮ ಮನೆತನಗಳ ಪ್ರಕಾರ* ಯೆಹೋವನ ಮುಂದೆ ನಿಂತ್ಕೊಳ್ಳಿ.’”

20 ಆಗ ಸಮುವೇಲ ಎಲ್ಲ ಇಸ್ರಾಯೇಲ್‌ ಕುಲಗಳನ್ನ ಹತ್ರ ಕರೆದ.+ ಅವುಗಳಲ್ಲಿ ಬೆನ್ಯಾಮೀನ್‌ ಕುಲ ಆಯ್ಕೆ ಆಯ್ತು.+ 21 ಆಮೇಲೆ ಬೆನ್ಯಾಮೀನ್‌ ಕುಲದವ್ರನ್ನ ಮನೆತನಗಳ ಪ್ರಕಾರ ಹತ್ರ ಕರೆದ. ಅವುಗಳಲ್ಲಿ ಮಟ್ರಿಯ ಮನೆತನದವರು ಆಯ್ಕೆ ಆದ್ರು. ಕೊನೆಗೆ ಅವ್ರಲ್ಲಿ ಕೀಷನ ಮಗ ಸೌಲ ಆಯ್ಕೆ ಆದ.+ ಆದ್ರೆ ಅವರು ಅವನನ್ನ ಹುಡುಕಿದಾಗ ಎಲ್ಲೂ ಸಿಗಲಿಲ್ಲ. 22 ಆಗ ಅವರು ಯೆಹೋವನನ್ನ “ಆ ವ್ಯಕ್ತಿ ಇನ್ನೂ ಇಲ್ಲಿಗೆ ಬಂದಿಲ್ವಾ?” ಅಂತ ವಿಚಾರಿಸಿದ್ರು.+ ಅದಕ್ಕೆ ಯೆಹೋವ “ಅಲ್ಲಿರೋ ಸಾಮಾನುಗಳ ಮಧ್ಯ ಅಡಗಿಕೊಂಡಿದ್ದಾನೆ ನೋಡಿ” ಅಂದನು. 23 ಆಗ ಅವರು ಓಡಿ ಹೋಗಿ ಅವನನ್ನ ಅಲ್ಲಿಂದ ಕರ್ಕೊಂಡು ಬಂದ್ರು. ಅವನು ಜನ್ರ ಮಧ್ಯ ನಿಂತ್ಕೊಂಡ. ಅವನು ಎಲ್ರಿಗಿಂತ ಎತ್ರವಾಗಿದ್ದ.*+ 24 ಸಮುವೇಲ ಜನ್ರಿಗೆಲ್ಲ “ಯೆಹೋವ ಆರಿಸಿದವನನ್ನ+ ನೀವು ನೋಡಿದ್ರಾ? ಇವನ ತರ ಯಾರೂ ಇಲ್ಲ!” ಅಂದ. ಆಗ ಜನ್ರೆಲ್ಲ “ರಾಜ ತುಂಬ ವರ್ಷ ಬದುಕ್ಲಿ!” ಅಂತ ಜೈಕಾರ ಹಾಕಿದ್ರು.

25 ಸಮುವೇಲ ಒಬ್ಬ ರಾಜನಿಗೆ ತನ್ನ ಪ್ರಜೆಗಳಿಂದ ಏನೆಲ್ಲ ಬಯಸೋ ಹಕ್ಕಿದೆ+ ಅಂತ ಜನ್ರಿಗೆ ಹೇಳಿ ಅದನ್ನೆಲ್ಲ ಒಂದು ಪುಸ್ತಕದಲ್ಲಿ ಬರೆದು ಯೆಹೋವನ ಮುಂದೆ ಇಟ್ಟ. ಆಮೇಲೆ ಸಮುವೇಲ ಜನ್ರನ್ನೆಲ್ಲ ಅವ್ರವ್ರ ಮನೆಗೆ ಕಳಿಸಿದ. 26 ಸೌಲ ಕೂಡ ಗಿಬೆಯಾದಲ್ಲಿದ್ದ ತನ್ನ ಮನೆಗೆ ಹೋದ. ಅವನ ಜೊತೆ ಸೈನಿಕರು ಹೋದ್ರು. ಯಾಕಂದ್ರೆ ಯೆಹೋವ ಅವ್ರ ಹೃದಯಗಳನ್ನ ಪ್ರೇರೇಪಿಸಿದನು. 27 ಆದ್ರೆ ಕೆಲವು ಕೆಟ್ಟ ಜನ್ರು “ಇವನು ನಮ್ಮನ್ನ ಹೇಗೆ ಕಾಪಾಡ್ತಾನೆ?”+ ಅಂತ ಹೇಳ್ತಾ ಸೌಲನನ್ನ ಕೀಳಾಗಿ ನೋಡಿದ್ರು. ಅವರು ಅವನಿಗಾಗಿ ಯಾವುದೇ ಉಡುಗೊರೆ ತಗೊಂಡು ಬರಲಿಲ್ಲ.+ ಆದ್ರೆ ಸೌಲ ಅದ್ರ ಬಗ್ಗೆ ಏನೂ ಮಾತಾಡಲಿಲ್ಲ.*

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ