-
ವಿಮೋಚನಕಾಂಡ 33:1, 2ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
33 ಯೆಹೋವ ಮೋಶೆಗೆ ಇನ್ನೂ ಹೇಳಿದ್ದು ಏನಂದ್ರೆ “ನೀನು ಈಜಿಪ್ಟಿಂದ ಕರ್ಕೊಂಡು ಬಂದ ಜನ್ರ ಜೊತೆ ಪ್ರಯಾಣ ಮುಂದುವರಿಸು. ನಾನು ಅಬ್ರಹಾಮ, ಇಸಾಕ, ಯಾಕೋಬರಿಗೆ ಯಾವ ದೇಶವನ್ನ ಅವರ ಸಂತತಿಗೆ ಕೊಡ್ತೀನಿ ಅಂತ ಹೇಳಿದ್ದೀನೋ ಆ ದೇಶಕ್ಕೆ ಈ ಜನ್ರನ್ನ ಕರ್ಕೊಂಡು ಹೋಗು.+ 2 ನಾನು ಒಬ್ಬ ದೂತನನ್ನ ನಿಮ್ಮ ಮುಂದೆ ಕಳಿಸ್ತೀನಿ.+ ಕಾನಾನ್ಯರನ್ನ, ಅಮೋರಿಯರನ್ನ, ಹಿತ್ತಿಯರನ್ನ, ಪೆರಿಜೀಯರನ್ನ, ಹಿವ್ವಿಯರನ್ನ, ಯೆಬೂಸಿಯರನ್ನ ಆ ದೇಶದಿಂದ ಓಡಿಸಿಬಿಡ್ತೀನಿ.+
-
-
ನೆಹೆಮೀಯ 9:7, 8ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
7 ಅಬ್ರಾಮನನ್ನ+ ಆಯ್ಕೆಮಾಡಿ ಕಸ್ದೀಯರ ಊರ್+ ಪಟ್ಟಣದಿಂದ ಕರ್ಕೊಂಡು ಬಂದು ಅಬ್ರಹಾಮ+ ಅಂತ ಹೆಸ್ರು ಕೊಟ್ಟ ಸತ್ಯ ದೇವರಾಗಿರೋ ಯೆಹೋವ ನೀನೇ. 8 ಅವನು ಹೃದಯದಿಂದ ನಿನಗೆ ನಂಬಿಗಸ್ತನಾಗಿ+ ಇದ್ದ ಅಂತ ತಿಳ್ಕೊಂಡೆ. ಹಾಗಾಗಿ ಕಾನಾನ್ಯರ, ಹಿತ್ತಿಯರ, ಅಮೋರಿಯರ, ಪೆರಿಜೀಯರ, ಯೆಬೂಸಿಯರ, ಗಿರ್ಗಾಷಿಯರ ದೇಶವನ್ನ ಅವನಿಗೂ ಅವನ ಸಂತತಿಗೂ ಕೊಡ್ತೀನಂತ+ ಅವನ ಜೊತೆ ಒಪ್ಪಂದ ಮಾಡ್ಕೊಂಡೆ. ನೀನು ನೀತಿವಂತ ಆಗಿರೋದ್ರಿಂದ ನಿನ್ನ ಮಾತು ಉಳಿಸ್ಕೊಂಡೆ.
-