-
ಅರಣ್ಯಕಾಂಡ 27:1-7ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
27 ಚಲ್ಪಹಾದನ+ ಹೆಣ್ಣು ಮಕ್ಕಳು ಮಹ್ಲಾ, ನೋವಾ, ಹೊಗ್ಲಾ, ಮಿಲ್ಕ, ತಿರ್ಚಾ ಇವರೆಲ್ಲ ಮೋಶೆ ಹತ್ರ ಹೋದ್ರು. ಚಲ್ಪಹಾದ ಹೇಫೆರನ ಮಗ. ಹೇಫೆರ ಗಿಲ್ಯಾದನ ಮಗ. ಗಿಲ್ಯಾದ ಮಾಕೀರನ ಮಗ. ಮಾಕೀರ ಮನಸ್ಸೆಯ ಮಗ. ಮನಸ್ಸೆ ಯೋಸೇಫನ ಮಗ. ಹೀಗೆ ಚಲ್ಪಹಾದನ ಕುಟುಂಬ ಮನಸ್ಸೆ ಕುಲದಿಂದ ಬಂದ ಕುಟುಂಬಗಳಿಗೆ ಸೇರಿತ್ತು. 2 ಚಲ್ಪಹಾದನ ಹೆಣ್ಣು ಮಕ್ಕಳು ದೇವದರ್ಶನ ಡೇರೆ ಬಾಗಿಲ ಹತ್ರ ಹೋದ್ರು. ಅಲ್ಲಿ ಮೋಶೆ, ಪುರೋಹಿತ ಎಲ್ಲಾಜಾರ್, ಪ್ರಧಾನರು+ ಮತ್ತೆ ಇಡೀ ಇಸ್ರಾಯೇಲ್ಯರ ಮುಂದೆ ನಿಂತು 3 “ನಮ್ಮ ಅಪ್ಪಾಗೆ ಗಂಡು ಮಕ್ಕಳಿಲ್ಲ. ಅವನು ಕಾಡಲ್ಲಿ ತೀರಿಹೋದ. ಆದ್ರೆ ಅವನು ಯೆಹೋವನ ವಿರುದ್ಧ ಗುಂಪು ಕಟ್ಕೊಂಡ ಕೋರಹನ ಜನ್ರ ಜೊತೆ ಇರಲಿಲ್ಲ.+ ಅವನು ತನ್ನ ಪಾಪದಿಂದ ಸತ್ತ. 4 ನಮ್ಮ ಅಪ್ಪಾಗೆ ಗಂಡು ಮಕ್ಕಳಿಲ್ಲ ಅನ್ನೋ ಕಾರಣಕ್ಕೆ ಅವನ ಹೆಸ್ರನ್ನ ಕುಟುಂಬದಿಂದ ತೆಗೆದುಬಿಡಬೇಕಾ? ಹಾಗೆ ಆಗಬಾರ್ದು ಅಂದ್ರೆ ನಮ್ಮ ಅಪ್ಪನ ಅಣ್ಣತಮ್ಮಂದಿರಿಗೆ ಜಮೀನನ್ನ ಆಸ್ತಿಯಾಗಿ ಕೊಡುವಾಗ ನಮಗೂ ಒಂದು ಪಾಲು ಕೊಡಬೇಕು ಅಂತ ಕೇಳ್ಕೊಳ್ತೀವಿ” ಅಂದ್ರು. 5 ಆಗ ಮೋಶೆ ಆ ವಿಷ್ಯಾನ ಯೆಹೋವನ ಮುಂದೆ ಇಟ್ಟ.+
6 ಯೆಹೋವ ಮೋಶೆಗೆ 7 “ಚಲ್ಪಹಾದನ ಹೆಣ್ಣು ಮಕ್ಕಳು ಹೇಳ್ತಿರೋದು ಸರಿ. ಅವ್ರ ಅಪ್ಪಾಗೆ ಸಿಗಬೇಕಾದ ಆಸ್ತಿ ಅವರಿಗೆ ಸಿಗಬೇಕು. ಹಾಗಾಗಿ ನೀನು ಅವ್ರ ಅಪ್ಪನ ಅಣ್ಣತಮ್ಮಂದಿರಿಗೆ ಜಮೀನನ್ನ ಆಸ್ತಿಯಾಗಿ ಕೊಡುವಾಗ ಈ ಹೆಣ್ಣು ಮಕ್ಕಳಿಗೂ ಒಂದು ಪಾಲು ಕೊಡ್ಲೇಬೇಕು.+
-