-
ಅರಣ್ಯಕಾಂಡ 22:5, 6ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
5 ಅವನು ಬೆಯೋರನ ಮಗ ಬಿಳಾಮನನ್ನ ಬರೋಕೆ ಹೇಳ್ತಾ ಸಂದೇಶವಾಹಕರನ್ನ ಕಳಿಸಿದ. ಬಿಳಾಮ ಯೂಫ್ರೆಟಿಸ್ ನದಿ ಹತ್ರ ಇರೋ ತನ್ನ ಹುಟ್ಟೂರಾದ ಪೆತೋರಿನಲ್ಲಿ ಇದ್ದ.+ ಬಾಲಾಕ ಅವನಿಗೆ “ಈಜಿಪ್ಟ್ ದೇಶದಿಂದ ಒಂದು ಜನಾಂಗ ಬಂದಿದೆ. ನೆಲಾನೇ ಕಾಣಿಸದೆ ಇರೋ ತರ ಎಲ್ಲ ಕಡೆ ತುಂಬ್ಕೊಳ್ತಾ ಇದ್ದಾರೆ!+ ಅವರು ನನ್ನ ಪ್ರದೇಶದ ಹತ್ರಾನೇ ವಾಸ ಮಾಡ್ತಾರೆ. 6 ಅವರು ನಮಗಿಂತ ತುಂಬ ಶಕ್ತಿಶಾಲಿ. ಅದಕ್ಕೆ ದಯವಿಟ್ಟು ನೀನು ಬಂದು ಅವರಿಗೆ ಶಾಪ ಹಾಕು.+ ಆಗ ನನಗೆ ಅವರನ್ನ ಸೋಲಿಸಿ ಈ ದೇಶದಿಂದ ಓಡಿಸಿಬಿಡೋಕೆ ಆಗುತ್ತೆ. ನೀನು ಯಾರಿಗೆ ಆಶೀರ್ವಾದ ಮಾಡ್ತೀಯೋ ಅವ್ರಿಗೆ ಒಳ್ಳೇದಾಗುತ್ತೆ. ಯಾರಿಗೆ ಶಾಪ ಕೊಡ್ತೀಯೋ ಅವ್ರಿಗೆ ಕೆಟ್ಟದಾಗುತ್ತೆ ಅಂತ ನನಗೆ ಚೆನ್ನಾಗಿ ಗೊತ್ತು” ಅಂತ ಹೇಳಿ ಕಳಿಸಿದ.
-
-
ಅರಣ್ಯಕಾಂಡ 23:7ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
7 ಆಗ ಅವನು ಕಾವ್ಯರೂಪವಾಗಿ ಹೀಗೆ ಹೇಳಿದ:+
-
-
ಅರಣ್ಯಕಾಂಡ 23:11ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
11 ಆಗ ಬಾಲಾಕ ಬಿಳಾಮನಿಗೆ “ನೀನು ಎಂಥ ಕೆಲಸ ಮಾಡ್ದೆ? ನನ್ನ ಶತ್ರುಗಳಿಗೆ ಶಾಪ ಹಾಕು ಅಂತ ನಿನ್ನನ್ನ ಕರ್ಕೊಂಡು ಬಂದ್ರೆ ನೀನು ಅವರಿಗೇ ಆಶೀರ್ವಾದ ಮಾಡ್ತಾ ಇದ್ದೀಯ” ಅಂದ.+
-
-
ಅರಣ್ಯಕಾಂಡ 24:10ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
10 ಬಿಳಾಮನ ಮಾತುಗಳನ್ನ ಕೇಳಿ ಬಾಲಾಕನಿಗೆ ವಿಪರೀತ ಕೋಪ ಬಂತು. ಅವನು ಚಪ್ಪಾಳೆ ಹೊಡೆದು ಅಣಕಿಸ್ತಾ “ನನ್ನ ಶತ್ರುಗಳಿಗೆ ಶಾಪ ಹಾಕು ಅಂತ ನಿನ್ನ ಕರೆದೆ.+ ಆದ್ರೆ ನೀನು ಮೂರು ಸಲನೂ ಅವ್ರಿಗೆ ಆಶೀರ್ವಾದ ಮಾಡ್ದೆ.
-