ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಧರ್ಮೋಪದೇಶಕಾಂಡ 6:10-12
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 10 ನಿಮ್ಮ ದೇವರಾದ ಯೆಹೋವ ನಿಮ್ಮ ಪೂರ್ವಜರಾದ ಅಬ್ರಹಾಮ, ಇಸಾಕ, ಯಾಕೋಬನಿಗೆ ಆಣೆ ಮಾಡಿ ಕೊಡ್ತೀನಿ ಅಂತ ಹೇಳಿದ ದೇಶಕ್ಕೆ ನಿಮ್ಮನ್ನ ಕರ್ಕೊಂಡು ಹೋಗ್ತಾನೆ.+ ನೀವು ಕಟ್ಟದಿದ್ದ ಅತ್ಯುತ್ತಮವಾದ ದೊಡ್ಡದೊಡ್ಡ ಪಟ್ಟಣಗಳನ್ನ ನಿಮಗೆ ಕೊಡ್ತಾನೆ.+ 11 ನೀವು ದುಡಿದು ಸಂಪಾದಿಸದೆ ಇದ್ದ ಎಲ್ಲ ತರದ ಒಳ್ಳೇ ವಸ್ತುಗಳು ತುಂಬಿರೋ ಮನೆ, ನೀವು ಅಗೆಯದಿದ್ದ ನೀರು ಗುಂಡಿ, ನೆಟ್ಟು ಬೆಳೆಸದಿದ್ದ ದಾಕ್ಷಿತೋಟ ಆಲಿವ್‌ ಮರಗಳನ್ನ ಕೊಡ್ತಾನೆ. ಇವನ್ನೆಲ್ಲ ನೀವು ಅನುಭವಿಸಿ ತೃಪ್ತಿ ಆದಾಗ+ 12 ನಿಮ್ಮನ್ನ ಈಜಿಪ್ಟಿನ ಗುಲಾಮಗಿರಿಯಿಂದ ಬಿಡಿಸ್ಕೊಂಡು ಬಂದ ಯೆಹೋವನನ್ನ ಮರಿಬೇಡಿ.+ ಈ ವಿಷ್ಯವನ್ನ ನೆನಪಿಟ್ಕೊಳ್ಳಿ.

  • ಯೋಬ 31:24
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 24 ನಾನು ಬಂಗಾರದಲ್ಲಿ ಭರವಸೆ ಇಟ್ನಾ?

      ‘ನಿನ್ನಿಂದಾನೇ ನಾನು ಬದುಕಿರೋದು!’ ಅಂತ ಅಪ್ಪಟ ಚಿನ್ನಕ್ಕೆ ಹೇಳಿದ್ದೀನಾ?+

  • ಯೋಬ 31:28
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 28 ನಾನು ಹಾಗೆ ಮಾಡಿದ್ರೆ ಸ್ವರ್ಗದಲ್ಲಿರೋ ಸತ್ಯ ದೇವರನ್ನ ಬೇಡ ಅಂತ ಹೇಳಿದ ಹಾಗಾಗ್ತಿತ್ತು.

      ಹಾಗೆ ಮಾಡಿದ್ರೆ ಆ ಪಾಪಕ್ಕೆ ನ್ಯಾಯಾಧೀಶರು ಶಿಕ್ಷೆ ಕೊಡಬೇಕಾಗಿತ್ತು.

  • ಜ್ಞಾನೋಕ್ತಿ 11:4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  4 ದೇವರ ಕೋಪದ ದಿನದಲ್ಲಿ ಆಸ್ತಿ-ಐಶ್ವರ್ಯಕ್ಕೆ ಮೂರು ಕಾಸಿನ ಬೆಲೆ ಇರಲ್ಲ,+

      ಆದ್ರೆ ನೀತಿ ಒಬ್ಬ ಮನುಷ್ಯನನ್ನ ಸಾವಿಂದ ಕಾಪಾಡುತ್ತೆ.+

  • ಜ್ಞಾನೋಕ್ತಿ 11:28
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 28 ತನ್ನ ಹಣ-ಆಸ್ತಿ ಮೇಲೆ ನಂಬಿಕೆ ಇಟ್ಕೊಂಡವನು ಬಿದ್ದುಹೋಗ್ತಾನೆ,+

      ನೀತಿವಂತ ಎಲೆಗಳ ತರ ಹಸಿರಾಗಿ ಇರ್ತಾನೆ.+

  • ಜ್ಞಾನೋಕ್ತಿ 23:4, 5
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  4 ಆಸ್ತಿಪಾಸ್ತಿ ಮಾಡ್ತಾ ಸುಸ್ತಾಗಿ ಹೋಗಬೇಡ.+

      ಸ್ವಲ್ಪ ನಿಂತು, ವಿವೇಕವನ್ನ ತೋರಿಸು.*

       5 ನೀನು ಅದನ್ನ ನೋಡಿ ಕಣ್ತುಂಬಿಕೊಳ್ಳುವಷ್ಟರಲ್ಲಿ ಅದು ಮಾಯ ಆಗಿಬಿಡಬಹುದು,+

      ಯಾಕಂದ್ರೆ ಅದು ರೆಕ್ಕೆ ಕಟ್ಕೊಂಡ ಹದ್ದಿನ ತರ ಆಕಾಶಕ್ಕೆ ಹಾರಿಹೋಗುತ್ತೆ.+

  • ಮತ್ತಾಯ 6:19
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 19 ಭೂಮಿಯಲ್ಲಿ ನಿಮಗೋಸ್ಕರ ಆಸ್ತಿಪಾಸ್ತಿ ಕೂಡಿಸೋದನ್ನ ಬಿಟ್ಟುಬಿಡಿ.+ ಹುಳ ತಿಂದು ತುಕ್ಕು ಹಿಡಿದು ಅದು ಹಾಳಾಗಿ ಹೋಗುತ್ತೆ. ಕಳ್ಳರು ಕನ್ನಹಾಕಿ ದೋಚ್ಕೊಂಡು ಹೋಗ್ತಾರೆ.

  • ಮತ್ತಾಯ 6:24
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 24 ಯಾವ ಮನುಷ್ಯನಿಗೂ ಇಬ್ಬರು ಯಜಮಾನರಿಗೆ ಸೇವೆಮಾಡೋಕಾಗಲ್ಲ. ಅವನು ಒಬ್ಬನನ್ನ ದ್ವೇಷಿಸಿ ಇನ್ನೊಬ್ಬನನ್ನ ಪ್ರೀತಿಸ್ತಾನೆ.+ ಇಲ್ಲಾಂದ್ರೆ ಒಬ್ಬನಿಗೆ ನಂಬಿಗಸ್ತನಾಗಿದ್ದು ಇನ್ನೊಬ್ಬನನ್ನ ಕೀಳಾಗಿ ನೋಡ್ತಾನೆ. ನೀವು ಒಂದೇ ಸಮಯದಲ್ಲಿ ದೇವರಿಗೂ ದುಡ್ಡಿಗೂ ದಾಸರಾಗಿ ಇರೋಕಾಗಲ್ಲ.+

  • ಮಾರ್ಕ 8:36
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 36 ಒಬ್ಬ ಮನುಷ್ಯ ಲೋಕವನ್ನೇ ಗೆದ್ದು ತನ್ನ ಪ್ರಾಣ ಕಳ್ಕೊಂಡ್ರೆ ಏನು ಪ್ರಯೋಜನ?+

  • ಲೂಕ 12:15
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 15 “ಹುಷಾರಾಗಿರಿ, ಯಾವುದೇ ರೀತಿಯ ದುರಾಸೆಗೆ* ಅವಕಾಶ ಕೊಡಬೇಡಿ.+ ಯಾಕಂದ್ರೆ ಒಬ್ಬನ ಹತ್ರ ಎಷ್ಟೇ ಆಸ್ತಿಪಾಸ್ತಿ ಇದ್ರೂ ಅದು ಅವನಿಗೆ ಜೀವ ಕೊಡಲ್ಲ” ಅಂದನು.+

  • 1 ತಿಮೊತಿ 6:17
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 17 ಈ ಲೋಕದಲ್ಲಿ* ಶ್ರೀಮಂತರಾಗಿ ಇರುವವ್ರಿಗೆ ಅಹಂಕಾರ ಪಡಬಾರದು ಅಂತ ಬುದ್ಧಿ ಹೇಳು.* ಕಣ್ಮರೆ ಆಗೋ ಐಶ್ವರ್ಯವನ್ನ+ ನಂಬದೆ, ನಮ್ಮ ಖುಷಿಗಾಗಿ ಎಲ್ಲವನ್ನೂ ತುಂಬಿತುಳುಕುವಷ್ಟು ಕೊಡೋ ದೇವರ ಮೇಲೆ ಭರವಸೆ ಇಡೋಕೆ ಹೇಳು.+

  • 1 ಯೋಹಾನ 2:16
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 16 ಯಾಕಂದ್ರೆ ಒಬ್ಬ ವ್ಯಕ್ತಿ ತನಗೆ ಬೇಕಾದ ಕೆಟ್ಟ ವಿಷ್ಯಗಳ ಮೇಲೆ ಆಸೆಪಡೋದು ಸಹಜ.+ ಅವನ ಹತ್ರ ಇರೋ ವಸ್ತುಗಳನ್ನ ಬೇರೆಯವ್ರಿಗೆ ತೋರಿಸಿ ಜಂಬ ಕೊಚ್ಕೊಳ್ಳೋದು ಈ ಲೋಕದ ಜನ್ರ ಬುದ್ಧಿ. ಆದ್ರೆ ಈ ತರ ಯೋಚ್ನೆ ಮಾಡೋದನ್ನ ನಮ್ಮ ತಂದೆ ಕಲಿಸ್ಕೊಟ್ಟಿಲ್ಲ. ಇದೆಲ್ಲ ಲೋಕದ ಜನ್ರ ಚಿಂತೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ