-
ಕೀರ್ತನೆ 50:3ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
3 ನಮ್ಮ ದೇವರು ಖಂಡಿತ ಬರ್ತಾನೆ, ಆತನು ಸುಮ್ಮನೆ ಇರಲ್ಲ.+
-
-
ದಾನಿಯೇಲ 7:9, 10ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
9 ನಾನು ಅದನ್ನ ನೋಡ್ತಾ ಇರುವಾಗ ಸಿಂಹಾಸನಗಳನ್ನ ಹಾಕಲಾಯ್ತು. ‘ಮಹಾ ವೃದ್ಧ’+ ಅದ್ರ ಮೇಲೆ ಕೂತನು.+ ಆತನ ಬಟ್ಟೆ ಮಂಜಿನ ಹಾಗೆ ಬಿಳುಪಾಗಿತ್ತು.+ ಆತನ ತಲೆ ಕೂದ್ಲು ಉಣ್ಣೆ ತರ ಬೆಳ್ಳಗಿತ್ತು. ಅಗ್ನಿಯ ಜ್ವಾಲೆ ಆತನ ಸಿಂಹಾಸನ ಆಗಿತ್ತು. ಉರಿತಿರೋ ಬೆಂಕಿ ಅದ್ರ ಚಕ್ರಗಳಾಗಿತ್ತು.+ 10 ಆತನ ಮುಂದಿಂದ ಬೆಂಕಿ ಪ್ರವಾಹ ಹರಿದು ಹೋಗ್ತಿತ್ತು.+ ಲಕ್ಷ ಲಕ್ಷ ದೂತರು ಆತನ ಸೇವೆ ಮಾಡ್ತಿದ್ರು. ಕೋಟಿ ಕೋಟಿ ದೂತರು ಆತನ ಮುಂದೆ ನಿಂತಿದ್ರು.+ ನ್ಯಾಯಸಭೆ+ ಕೂಡಿಬಂತು, ಪುಸ್ತಕಗಳು ತೆರಿತು.
-