-
ಅ. ಕಾರ್ಯ 2:25-28ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
25 ಆತನ ಬಗ್ಗೆ ದಾವೀದ ಹೀಗೆ ಹೇಳಿದ್ದ ‘ಯಾವಾಗ್ಲೂ ನಾನು ಯೆಹೋವನನ್ನ* ನನ್ನ ಮುಂದೆನೇ ಇಟ್ಕೊಂಡಿರ್ತಿನಿ. ಆತನು ನನ್ನ ಬಲಗಡೆನೇ ಇರೋದ್ರಿಂದ ನಾನು ಯಾವತ್ತೂ ಅಲುಗಾಡಲ್ಲ. 26 ಇದ್ರಿಂದಾಗಿ ನನ್ನ ಹೃದಯ ಕುಣಿದಾಡಿದೆ. ನನ್ನ ನಾಲಿಗೆಗೆ ಖುಷಿಯಾಗಿದೆ. ದೇವರ ಮೇಲೆ ಭರವಸೆ ಇಟ್ಟು ಬದುಕ್ತೀನಿ. 27 ಯಾಕಂದ್ರೆ ನೀನು ನನ್ನನ್ನ ಸಮಾಧಿಯಲ್ಲೇ ಬಿಟ್ಟುಬಿಡಲ್ಲ. ನಿನ್ನ ನಿಷ್ಠಾವಂತ ಭಕ್ತನನ್ನ ಕೊಳೆತು ಹೋಗೋಕೆ ಬಿಡಲ್ಲ.+ 28 ನನಗೆ ಜೀವದ ದಾರಿ ತೋರಿಸಿದೆ. ನಿನ್ನ ಸನ್ನಿಧಿಯಲ್ಲಿ+ ನನ್ನನ್ನ ಆನಂದದಿಂದ ತುಂಬಿಸಿದೆ.’
-