9 ಆದ್ರೆ ದಾವೀದ ಅಬೀಷೈಗೆ “ಯೆಹೋವನ ಅಭಿಷಿಕ್ತನ+ ವಿರುದ್ಧ ಕೈ ಎತ್ತುವವನು ನಿರಪರಾಧಿ ಆಗಲ್ಲ ಅಲ್ವಾ? ಅವನಿಗೆ ಹಾನಿ ಮಾಡಬೇಡ”+ ಅಂದ. 10 ದಾವೀದ ಮುಂದುವರಿಸಿ “ಜೀವ ಇರೋ ದೇವರಾದ ಯೆಹೋವನ ಆಣೆ ಯೆಹೋವನೇ ಅವನನ್ನ ಸಾಯಿಸ್ತಾನೆ+ ಅಥವಾ ಅವನು ಯುದ್ಧಕ್ಕೆ ಹೋಗಿ ನಾಶವಾಗ್ತಾನೆ.+ ಇಲ್ಲಾಂದ್ರೆ ಎಲ್ರೂ ಸಾಯೋ ತರ ಅವನೂ ಒಂದಲ್ಲ ಒಂದಿನ ಸತ್ತುಹೋಗ್ತಾನೆ.+