-
ಎಸ್ತೇರ್ 7:10ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
10 ಹಾಗಾಗಿ ಹಾಮಾನ ಮೊರ್ದೆಕೈಗಾಗಿ ಮಾಡಿದ್ದ ಕಂಬಕ್ಕೆ ಅವರು ಹಾಮಾನನನ್ನೇ ನೇತುಹಾಕಿದ್ರು. ಆಗ ರಾಜನ ಕೋಪ ತಣ್ಣಗಾಯ್ತು.
-
-
ಕೀರ್ತನೆ 35:7, 8ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
7 ಯಾಕಂದ್ರೆ ಅವರು ಕಾರಣ ಇಲ್ಲದೆ ನನ್ನನ್ನ ಸಿಕ್ಕಿಸೋಕೆ ಬಲೆ ಬೀಸಿದ್ದಾರೆ, ಕಾರಣ ಇಲ್ಲದೆ ನನಗಾಗಿ ಗುಂಡಿ ತೋಡಿದ್ದಾರೆ.
8 ಆದ್ರೆ ಅವ್ರಿಗೇ ಗೊತ್ತಾಗದ ಹಾಗೆ ಅವ್ರ ಮೇಲೆ ವಿಪತ್ತು ಬರಲಿ,
ಅವರು ಬೀಸಿದ ಬಲೆಯಲ್ಲಿ ಅವ್ರೇ ಸಿಕ್ಕಿಹಾಕೊಳ್ಳಲಿ,
ಅವರು ತೋಡಿದ ಗುಂಡಿಗೆ ಅವ್ರೇ ಬಿದ್ದು ನಾಶವಾಗಲಿ.+
-
-
ಕೀರ್ತನೆ 57:6ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
ನನ್ನ ದಾರಿಯಲ್ಲಿ ಅವರು ಗುಂಡಿ ತೋಡಿದ್ರು,
ಆದ್ರೆ ಅದರೊಳಗೆ ಅವ್ರೇ ಬಿದ್ದುಹೋದ್ರು.+ (ಸೆಲಾ)
-
-
ಜ್ಞಾನೋಕ್ತಿ 26:27ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
27 ಗುಂಡಿ ತೋಡುವವನು ತಾನೇ ಅದ್ರಲ್ಲಿ ಬೀಳ್ತಾನೆ,
ಕಲ್ಲನ್ನ ಉರುಳಿಸುವವನ ಮೇಲೆ ಅದೇ ಕಲ್ಲು ಉರುಳಿ ಬರುತ್ತೆ.+
-