21 ಸಿಂಹದ ಬಾಯಿಂದ, ಕಾಡುಕೋಣಗಳ ಕೊಂಬಿಂದ ಕಾಪಾಡು.+
ನನಗೆ ಉತ್ರ ಕೊಡು, ನನ್ನನ್ನ ಉಳಿಸು.
22 ನಾನು ನನ್ನ ಅಣ್ಣತಮ್ಮಂದಿರ ಮಧ್ಯ ನಿನ್ನ ಹೆಸ್ರನ್ನ ಹೇಳ್ತೀನಿ,+
ಸಭೆಯ ಮಧ್ಯ ನಾನು ನಿನ್ನನ್ನ ಹೊಗಳ್ತೀನಿ.+
23 ಯೆಹೋವನಿಗೆ ಭಯಪಡುವವರೇ, ಆತನನ್ನ ಹೊಗಳಿ!
ಯಾಕೋಬನ ವಂಶದವರೇ, ನೀವೆಲ್ಲ ಆತನಿಗೆ ಗೌರವಕೊಡಿ!+
ಇಸ್ರಾಯೇಲನ ವಂಶದವರೇ, ಆತನಿಗೆ ಭಯಭಕ್ತಿ ತೋರಿಸಿ.