7 ಯೆಹೋವ ಮೋಶೆ ಜೊತೆ ಇನ್ನೂ ಮಾತಾಡ್ತಾ “ಈಜಿಪ್ಟಲ್ಲಿ ಇರೋ ನನ್ನ ಜನ್ರ ನೋವು ನರಳಾಟವನ್ನ ನಾನು ಕಣ್ಣಾರೆ ನೋಡಿದ್ದೀನಿ. ಈಜಿಪ್ಟ್ ಜನ ಅವರನ್ನ ಬಲವಂತವಾಗಿ ದುಡಿಸ್ಕೊಳ್ತಿದ್ದಾರೆ. ಅದನ್ನ ತಾಳಕ್ಕಾಗದೆ ನನ್ನ ಜನ ಸಹಾಯಕ್ಕಾಗಿ ಬೇಡ್ಕೊಳ್ತಿದ್ದಾರೆ. ನಾನು ಅವರ ಪ್ರಾರ್ಥನೆ ಕೇಳಿದ್ದೀನಿ. ಅವರು ಎಷ್ಟು ನೋವು ಅನುಭವಿಸ್ತಾ ಇದ್ದಾರಂತ ನನಗೆ ಚೆನ್ನಾಗಿ ಗೊತ್ತು.+