ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಶಾಯ 6:11, 12
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 11 ಆಗ ನಾನು “ಯೆಹೋವನೇ, ಎಲ್ಲಿ ತನಕ ಹೀಗಿರುತ್ತೆ?” ಅಂತ ಕೇಳಿದೆ. ಅದಕ್ಕೆ ಆತನು ಹೀಗೆ ಹೇಳಿದನು

      “ಪಟ್ಟಣಗಳು ಧ್ವಂಸವಾಗಿ ಒಬ್ಬ ನಿವಾಸಿನೂ ಇಲ್ಲದಂತಾಗೋ ತನಕ

      ಮನೆಗಳಲ್ಲಿ ಜನ ಇಲ್ಲದಂತಾಗೋ ತನಕ

      ದೇಶ ಹಾಳುಬಿದ್ದು ನಿರ್ಜನವಾಗೋ ತನಕ,+

      12 ಯೆಹೋವ ಜನ್ರನ್ನ ದೂರ ಓಡಿಸಿಬಿಡೋ ತನಕ+

      ದೇಶದ ಹೆಚ್ಚಿನ ಜಾಗಗಳು ನಿರ್ಜನವಾಗೋ ತನಕ ಹೀಗಿರುತ್ತೆ.

  • ಯೆರೆಮೀಯ 26:18
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 18 “ಯೆಹೂದದ ರಾಜ ಹಿಜ್ಕೀಯ+ ಆಳ್ತಿದ್ದಾಗ ಮೋರೆಷೆತಿನವನಾದ ಮೀಕ+ ಭವಿಷ್ಯ ಹೇಳ್ತಿದ್ದ. ಅವನು ಯೆಹೂದದ ಎಲ್ಲ ಜನ್ರಿಗೆ ‘ಸೈನ್ಯಗಳ ದೇವರಾದ ಯೆಹೋವ ಹೇಳೋದು ಏನಂದ್ರೆ

      “ಚೀಯೋನನ್ನ ಹೊಲವನ್ನ ಊಳೋ ತರ ಉಳುಮೆ ಮಾಡ್ತಾರೆ,

      ಯೆರೂಸಲೇಮ್‌ ಹಾಳುಬಿದ್ದ ಪಟ್ಟಣ ಆಗುತ್ತೆ,+

      ದೇವಾಲಯ ಇರೋ ಬೆಟ್ಟ ಕಾಡಲ್ಲಿರೋ ಗುಡ್ಡಗಳ ತರ ಆಗುತ್ತೆ.”’+

  • ಪ್ರಲಾಪ 2:5
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  5 ಯೆಹೋವ ಶತ್ರು ತರ ಆಗಿದ್ದಾನೆ,+

      ಆತನು ಇಸ್ರಾಯೇಲನ್ನ ನುಂಗಿದ್ದಾನೆ.

      ಆತನು ಅವಳ ಎಲ್ಲ ಗೋಪುರಗಳನ್ನ ನುಂಗಿದ್ದಾನೆ,

      ಆತನು ಅದ್ರ ಎಲ್ಲ ಭದ್ರ ಸ್ಥಳಗಳನ್ನ ನಾಶಮಾಡಿದ್ದಾನೆ.

      ಯೆಹೂದ ಅನ್ನುವವಳ ಶೋಕ ರೋದನೆ ಹೆಚ್ಚಿಸಿದ್ದಾನೆ.

  • ಯೆಹೆಜ್ಕೇಲ 36:4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 4 ಹಾಗಾಗಿ ಇಸ್ರಾಯೇಲಿನ ಬೆಟ್ಟಗಳೇ, ವಿಶ್ವದ ರಾಜ ಯೆಹೋವನ ಮಾತನ್ನ ಕೇಳಿ! ವಿಶ್ವದ ರಾಜ ಯೆಹೋವ ಪರ್ವತಗಳಿಗೆ, ಬೆಟ್ಟಗಳಿಗೆ, ತೊರೆಗಳಿಗೆ, ಕಣಿವೆಗಳಿಗೆ, ಹಾಳುಬಿದ್ದಿರೋ ಅವಶೇಷಗಳಿಗೆ+ ಮತ್ತು ಅಕ್ಕಪಕ್ಕ ಇರೋ ಜನಾಂಗಗಳಲ್ಲಿ ಉಳಿದವರು ಲೂಟಿ ಮಾಡಿ ಅಪಹಾಸ್ಯ ಮಾಡಿ ಬಿಟ್ಟು ಹೋಗಿರೋ ಪಟ್ಟಣಗಳಿಗೆ ಹೇಳೋ ಮಾತಿದು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ