-
ದಾನಿಯೇಲ 3:26, 27ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
26 ಆಮೇಲೆ ನೆಬೂಕದ್ನೆಚ್ಚರ ಹೊತ್ತಿ ಉರಿತಿರೋ ಕುಲುಮೆ ಬಾಗಿಲ ಹತ್ರ ಬಂದು “ಸರ್ವೋನ್ನತ ದೇವರ+ ಸೇವಕರಾಗಿರೋ ಶದ್ರಕ್, ಮೇಶಕ್, ಅಬೇದ್‌ನೆಗೋ ಹೊರಗೆ ಬನ್ನಿ!” ಅಂತ ಕರೆದ. ಆಗ ಶದ್ರಕ್, ಮೇಶಕ್, ಅಬೇದ್‌ನೆಗೋ ಬೆಂಕಿಯಿಂದ ಹೊರಗೆ ಬಂದ್ರು. 27 ಅಲ್ಲಿ ಇದ್ದ ದೇಶಾಧಿಪತಿಗಳು, ಮುಖ್ಯಸ್ಥರು, ರಾಜ್ಯಪಾಲರು, ರಾಜನ ಉನ್ನತ ಅಧಿಕಾರಿಗಳು+ ಈ ಮೂರು ಗಂಡಸ್ರಿಗೆ ಬೆಂಕಿಯಿಂದ ಒಂಚೂರೂ ಹಾನಿ ಆಗದೆ ಇರೋದನ್ನ+ ನೋಡಿದ್ರು. ಅವ್ರ ಒಂದು ಕೂದಲು ಸಹ ಬೆಂಕಿಯಿಂದ ಸುಟ್ಟು ಹೋಗಿರಲಿಲ್ಲ. ಅವ್ರ ಬಟ್ಟೆ ಸುಟ್ಟು ಹೋಗಿರಲಿಲ್ಲ, ಅವ್ರಿಂದ ಸುಟ್ಟ ವಾಸನೆನೂ ಬರ್ತಿರಲಿಲ್ಲ.
-