12 ಅಷ್ಟೇ ಅಲ್ಲ ಬೇರೆ ಯಾರಿಂದ್ಲೂ ರಕ್ಷಣೆ ಬರಲ್ಲ. ಆತನ ಹೆಸ್ರಿಂದನೇ ನಮಗೆ ರಕ್ಷಣೆ ಸಿಗುತ್ತೆ. ಆಕಾಶದ ಕೆಳಗೆ ಮನುಷ್ಯರಿಗೆ ಕೊಟ್ಟಿರೋ ಬೇರೆ ಯಾವ ಹೆಸ್ರಿಂದನೂ+ ನಮಗೆ ರಕ್ಷಣೆ ಸಿಗಲ್ಲ.”+
31 ದೇವರು ಆತನನ್ನ ಉನ್ನತ ಸ್ಥಾನಕ್ಕೆ ಏರಿಸಿ ತನ್ನ ಪಕ್ಕದಲ್ಲಿ+ ಕೂತ್ಕೊಳ್ಳೋ ಹಾಗೆ ಮಾಡಿದ್ದಾನೆ. ಇಸ್ರಾಯೇಲ್ಯರು ಪಶ್ಚಾತ್ತಾಪಪಡಬೇಕು ಅಂತ, ಅವ್ರ ಪಾಪಗಳಿಗೆ ಕ್ಷಮೆ ಸಿಗಬೇಕು ಅಂತ ದೇವರು ಆತನನ್ನ ಮುಖ್ಯ ಪ್ರತಿನಿಧಿಯಾಗಿ+ ಮತ್ತು ರಕ್ಷಕನಾಗಿ+ ನೇಮಿಸಿದ್ದಾನೆ.+
7 ದೇವರು ತನ್ನ ಮಗನ ರಕ್ತದ ಮೂಲಕ ಬಿಡುಗಡೆ ಬೆಲೆ ಕೊಟ್ಟು ನಮ್ಮನ್ನ ಬಿಡಿಸಿದನು.+ ಹೌದು ನಮ್ಮ ಪಾಪಗಳನ್ನ ಉದಾರವಾಗಿ ಕ್ಷಮಿಸಿದನು.+ ಹೀಗೆ ನಮಗೆ ಅಪಾರ ಕೃಪೆಯನ್ನ ಧಾರಾಳವಾಗಿ ತೋರಿಸಿದನು.*
24 ಆತನನ್ನ ಕಂಬದ+ ಮೇಲೆ ಜಡಿದಾಗ ತನ್ನ ಶರೀರದಲ್ಲಿ ನಮ್ಮೆಲ್ರ ಪಾಪಗಳನ್ನ ಹೊತ್ಕೊಂಡ.+ ನಾವು ಪಾಪದಿಂದ ಬಿಡುಗಡೆ ಪಡ್ಕೊಂಡು, ನೀತಿಯ ಕೆಲಸಗಳನ್ನ ಮಾಡೋಕೆ ಜೀವಿಸಬೇಕು ಅಂತ ಆತನು ಹಾಗೆ ಮಾಡಿದನು. “ಆತನ ಗಾಯಗಳಿಂದ ನಿಮಗೆ ವಾಸಿಯಾಯ್ತು.”+