42 ಅದಕ್ಕೆ ಒಡೆಯ ಹೀಗಂದನು “ಎಲ್ಲಾ ಸೇವಕರಿಗೆ ತಕ್ಕ ಸಮಯಕ್ಕೆ+ ಅವ್ರಿಗೆ ಬೇಕಾಗಿರೋ ಆಹಾರ ಅಳೆದು ಕೊಡ್ತಾ ಇರೋಕೆ ಯಜಮಾನ ಅವ್ರ ಮೇಲೆ ನೇಮಿಸೋ ನಂಬಿಗಸ್ತನೂ ವಿವೇಕಿಯೂ ಆದ ಮೇಲ್ವಿಚಾರಕ ನಿಜಕ್ಕೂ ಯಾರು? 43 ಯಜಮಾನ ಬಂದಾಗ ಕೊಟ್ಟ ಕೆಲಸ ಮಾಡ್ತಾ ಇರೋ ಆಳು ಸಂತೋಷವಾಗಿ ಇರ್ತಾನೆ! 44 ನಿಮಗೆ ನಿಜ ಹೇಳ್ತೀನಿ, ಯಜಮಾನ ಆ ಆಳಿಗೆ ಎಲ್ಲ ಆಸ್ತಿ ನೋಡ್ಕೊಳ್ಳೋಕೆ ಹೇಳ್ತಾನೆ.