ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಮಾರ್ಕ 1:23-25
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 23 ಆ ಸಭಾಮಂದಿರದಲ್ಲಿ ಒಬ್ಬ ಮನುಷ್ಯನಿದ್ದ. ಅವನೊಳಗೆ ಕೆಟ್ಟ ದೇವದೂತ ಸೇರ್ಕೊಂಡಿದ್ದ. 24 ಅವನು “ನಜರೇತಿನ ಯೇಸು,+ ನೀನ್ಯಾಕೆ ಇಲ್ಲಿಗೆ ಬಂದೆ? ನಮ್ಮನ್ನ ನಾಶಮಾಡೋಕಂತ ಬಂದ್ಯಾ? ನೀನು ಯಾರಂತ ನನಗೆ ಚೆನ್ನಾಗಿ ಗೊತ್ತು. ನೀನು ದೇವರ ಪವಿತ್ರ ಮಗ”+ ಅಂತ ಕಿರುಚಿದ. 25 ಆದ್ರೆ ಯೇಸು “ಸುಮ್ಮನೆ ಅವನನ್ನ ಬಿಟ್ಟು ಹೊರಗೆ ಬಾ!” ಅಂತ ಗದರಿಸಿದನು.

  • ಮಾರ್ಕ 3:11, 12
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 11 ಕೆಟ್ಟ ದೇವದೂತರು+ ಸಹ ಯೇಸುನ ನೋಡಿದಾಗೆಲ್ಲ ಅವನ ಮುಂದೆ ಅಡ್ಡಬಿದ್ದು “ನೀನು ದೇವರ ಮಗ”+ ಅಂತ ಕೂಗ್ತಿದ್ರು. 12 ಆದ್ರೆ ಯೇಸು ತನ್ನ ಬಗ್ಗೆ ಯಾರಿಗೂ ಹೇಳಬೇಡಿ ಅಂತ ಅವ್ರಿಗೆ ತುಂಬ ಸಲ ಆಜ್ಞೆ ಕೊಟ್ಟಿದ್ದನು.+

  • ಲೂಕ 4:33-35
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 33 ಆ ಸಭಾಮಂದಿರದಲ್ಲಿ ಕೆಟ್ಟ ದೇವದೂತ ಹಿಡಿದಿದ್ದ ಒಬ್ಬ ಮನುಷ್ಯನಿದ್ದ. ಅವನು ಗಟ್ಟಿಯಾಗಿ ಕಿರಿಚುತ್ತಾ+ 34 “ನಜರೇತಿನ ಯೇಸು,+ ನೀನ್ಯಾಕೆ ಇಲ್ಲಿಗೆ ಬಂದೆ? ನಮ್ಮನ್ನ ನಾಶಮಾಡೋಕಂತ ಬಂದ್ಯಾ? ನೀನು ಯಾರಂತ ಚೆನ್ನಾಗಿ ಗೊತ್ತು. ನೀನು ದೇವರ ಪವಿತ್ರ ಮಗ”+ ಅಂದ. 35 ಆದ್ರೆ ಯೇಸು “ಸುಮ್ಮನೆ ಅವನನ್ನ ಬಿಟ್ಟು ಹೊರಗೆ ಬಾ!” ಅಂತ ಗದರಿಸಿದನು. ಆಗ ಕೆಟ್ಟ ದೇವದೂತ ಆ ವ್ಯಕ್ತಿಯನ್ನ ಅವ್ರ ಮಧ್ಯ ಬೀಳಿಸಿ ಅವನಿಗೆ ಹಾನಿ ಮಾಡದೆ ಹೊರಗೆ ಬಂದ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ