69 ಪೇತ್ರ ಹೊರಗೆ ಅಂಗಳದಲ್ಲಿ ಕೂತಿದ್ದ. ಒಬ್ಬ ಸೇವಕಿ ಅವನ ಹತ್ರ ಬಂದು “ಗಲಿಲಾಯದ ಯೇಸು ಜೊತೆ ನೀನೂ ಇದ್ದೆ ಅಲ್ವಾ?”+ ಅಂದಳು. 70 ಆದ್ರೆ ಅವನು ಅಲ್ಲಿದ್ದ ಜನ್ರೆಲ್ಲರ ಮುಂದೆ ಅದನ್ನ ಒಪ್ಕೊಳ್ಳದೆ “ನೀನು ಏನು ಮಾತಾಡ್ತಾ ಇದ್ದೀಯಾ ಅಂತ ನಂಗೆ ಅರ್ಥ ಆಗ್ತಿಲ್ಲ” ಅಂದ.
69 ಇನ್ನೊಂದು ಸಲ ಆ ಸೇವಕಿ ಅವನನ್ನ ನೋಡಿ ಅಲ್ಲಿ ಹತ್ರ ನಿಂತಿದ್ದವ್ರಿಗೆ “ಇವನೂ ಅವ್ರ ಜೊತೆ ಇದ್ದ” ಅಂತ ಹೇಳೋಕೆ ಶುರುಮಾಡಿದಳು. 70 ಆಗ್ಲೂ ಪೇತ್ರ ಒಪ್ಪಲಿಲ್ಲ. ಸ್ವಲ್ಪ ಸಮಯ ಆದ ಮೇಲೆ ಅಲ್ಲಿ ನಿಂತಿದ್ದವರು ಪೇತ್ರನಿಗೆ “ನಿಜ ಹೇಳು, ನೀನೂ ಅವ್ರಲ್ಲಿ ಒಬ್ಬ ತಾನೇ. ಯಾಕಂದ್ರೆ ನೀನೂ ಗಲಿಲಾಯದವನು” ಅಂದ್ರು.