ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 22:15
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 15 ಮಡಿಕೆ ತುಂಡಿನ ತರ ನನ್ನ ಶಕ್ತಿ ಒಣಗಿ ಹೋಗಿದೆ,+

      ನನ್ನ ನಾಲಿಗೆ ನನ್ನ ವಸಡಿಗೆ ಅಂಟ್ಕೊಂಡಿದೆ,+

      ನೀನು ನನ್ನನ್ನ ಸಾವಿನ ಧೂಳಲ್ಲಿ ಬೀಳಿಸ್ತಿದ್ದೀಯ.+

  • ಯೆಶಾಯ 53:8
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  8 ದಬ್ಬಾಳಿಕೆಯಿಂದ, ಅನ್ಯಾಯದಿಂದ ಅವನ ಜೀವ ತೆಗಿಲಾಯ್ತು,*

      ಆದ್ರೆ ಅವನು ಯಾರು? ಎಲ್ಲಿಂದ ಬಂದ? ಅಂತ ತಿಳಿಯೋಕೆ ಯಾರೂ ಪ್ರಯತ್ನಿಸಲಿಲ್ಲ.

      ಅವನನ್ನ ಭೂಮಿ ಮೇಲಿಂದ* ಅಳಿಸಿಹಾಕಲಾಯ್ತು,+

      ನನ್ನ ಜನ್ರ ಅಪರಾಧಗಳಿಗಾಗಿ ಅವನನ್ನ ಕೊಲ್ಲಲಾಯ್ತು.*+

  • ಯೆಶಾಯ 53:12
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 12 ಹಾಗಾಗಿ ನಾನು ಅವನಿಗೆ ತುಂಬ ಜನ್ರ ಜೊತೆ ಪಾಲು ಕೊಡ್ತೀನಿ,

      ಅವನು ಬಲಿಷ್ಠರ ಜೊತೆ ಕೊಳ್ಳೆಯನ್ನ ಹಂಚ್ಕೊಳ್ತಾನೆ,

      ಯಾಕಂದ್ರೆ ಅವನು ತನ್ನ ಪ್ರಾಣವನ್ನೇ ಧಾರೆಯೆರೆದು ಮರಣವನ್ನ ಅನುಭವಿಸಿದನು,+

      ಅಪರಾಧಿಗಳಲ್ಲಿ ಒಬ್ಬನ ಹಾಗೆ ಅವನನ್ನೂ ಎಣಿಸಲಾಯ್ತು,+

      ಅವನು ಅನೇಕರ ಪಾಪ ಹೊತ್ಕೊಂಡನು,+

      ಅಪರಾಧಿಗಳಿಗಾಗಿ ಅವನು ಮಧ್ಯಸ್ತಿಕೆ ವಹಿಸಿದನು.*+

  • ದಾನಿಯೇಲ 9:26
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 26 ಮೆಸ್ಸೀಯನನ್ನ 62 ವಾರಗಳಾದ ಮೇಲೆ ಕೊಂದು ಹಾಕಲಾಗುತ್ತೆ,+ ಅವನ ಹತ್ರ ಏನೂ ಉಳಿಯಲ್ಲ.+

      ಮುಂದಕ್ಕೆ ಬರೋ ನಾಯಕನ ಸೈನ್ಯ ಪಟ್ಟಣವನ್ನ, ಪವಿತ್ರ ಸ್ಥಳವನ್ನ ನಾಶಮಾಡುತ್ತೆ.+ ಪ್ರವಾಹದಿಂದ ಅದ್ರ ಕೊನೆ ಆಗುತ್ತೆ. ಅಂತ್ಯದ ತನಕ ಯುದ್ಧ ಆಗುತ್ತೆ. ನಾಶ ಆಗುತ್ತೆ ಅಂತ ದೇವರು ತೀರ್ಮಾನ ಮಾಡಿದ್ದಾನೆ.+

  • 1 ಪೇತ್ರ 2:24
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 24 ಆತನನ್ನ ಕಂಬದ+ ಮೇಲೆ ಜಡಿದಾಗ ತನ್ನ ಶರೀರದಲ್ಲಿ ನಮ್ಮೆಲ್ರ ಪಾಪಗಳನ್ನ ಹೊತ್ಕೊಂಡ.+ ನಾವು ಪಾಪದಿಂದ ಬಿಡುಗಡೆ ಪಡ್ಕೊಂಡು, ನೀತಿಯ ಕೆಲಸಗಳನ್ನ ಮಾಡೋಕೆ ಜೀವಿಸಬೇಕು ಅಂತ ಆತನು ಹಾಗೆ ಮಾಡಿದನು. “ಆತನ ಗಾಯಗಳಿಂದ ನಿಮಗೆ ವಾಸಿಯಾಯ್ತು.”+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ