15 ನಾವು ಪಡ್ಕೊಂಡ ಪವಿತ್ರಶಕ್ತಿ ನಮ್ಮನ್ನ ದಾಸರನ್ನಾಗಿ ಮಾಡಿ ಮತ್ತೆ ಭಯದಲ್ಲಿ ಬದುಕೋ ತರ ಮಾಡಲ್ಲ. ಬದಲಾಗಿ ಅದು ನಮ್ಮನ್ನ ದೇವರು ದತ್ತು ತಗೊಂಡ ಮಕ್ಕಳಾಗಿ ಮಾಡುತ್ತೆ. ಈ ಪವಿತ್ರಶಕ್ತಿ ನಾವು ದೇವರನ್ನ “ಅಪ್ಪಾ,* ತಂದೆಯೇ!” ಅಂತ ಕರಿಯೋ ಹಾಗೆ ಮಾಡುತ್ತೆ.+
23 ಅಷ್ಟೇ ಅಲ್ಲ, ಮುಂದೆ ಸಿಗೋ ಆಸ್ತಿಯ ಗುರುತಾಗಿ* ಪವಿತ್ರಶಕ್ತಿಯನ್ನ ಪಡಿದಿರೋ ನಾವೂ ನಮ್ಮೊಳಗೆ ನರಳ್ತಾ ಇದ್ದೀವಿ.+ ಅದೇ ಸಮಯದಲ್ಲಿ ಬಿಡುಗಡೆ ಬೆಲೆ ಮೂಲಕ ದೇವರು ನಮ್ಮನ್ನ ನಮ್ಮ ದೇಹಗಳಿಂದ ಬಿಡಿಸಿ ನಮ್ಮನ್ನ ಮಕ್ಕಳಾಗಿ ದತ್ತು ತಗೊಳ್ಳೋ ಸಮಯಕ್ಕಾಗಿ ಕಾಯ್ತಾ ಇದ್ದೀವಿ.+