12 ಸಂತೋಷವಾಗಿ ಜೀವನ ಮಾಡೋಕೆ ಇಷ್ಟಪಡ್ತೀರಾ?
ತುಂಬಾ ದಿನ ಬದುಕಬೇಕು ಅಂತ ಆಸೆಪಡ್ತೀರಾ?+
נ [ನೂನ್]
13 ಹಾಗಾದ್ರೆ ನಿಮ್ಮ ನಾಲಿಗೆಯಿಂದ ಕೆಟ್ಟ ಮಾತುಗಳು ಬರದ ಹಾಗೆ,+
ನಿಮ್ಮ ತುಟಿಯಿಂದ ಕಪಟ ಮಾತುಗಳು ಬರದ ಹಾಗೆ ನೋಡ್ಕೊಳ್ಳಿ.+
ס [ಸಾಮೆಕ್]
14 ಕೆಟ್ಟದ್ರಿಂದ ದೂರ ಇದ್ದು, ಒಳ್ಳೇದನ್ನ ಮಾಡಿ,+
ಶಾಂತಿಯನ್ನ ಹುಡುಕಿ, ಪ್ರಯತ್ನ ಬಿಡಬೇಡಿ.+
ע [ಅಯಿನ್]
15 ಯೆಹೋವನ ಕಣ್ಣು ನೀತಿವಂತರ ಮೇಲಿದೆ,+
ಸಹಾಯಕ್ಕಾಗಿ ಅವರು ಕೇಳಿದಾಗ ಆತನ ಕಿವಿ ಅದನ್ನ ಕೇಳಿಸ್ಕೊಳ್ಳುತ್ತೆ.+
פ [ಪೇ]
16 ಆದ್ರೆ ಕೆಟ್ಟ ಕೆಲಸ ಮಾಡೋರು ಯೆಹೋವನಿಗೆ ಬೇಡ,
ಅವ್ರ ನೆನಪುಗಳನ್ನೂ ಭೂಮಿಯಿಂದ ಅಳಿಸಿಹಾಕ್ತಾನೆ.+