37 ಆಗ ಪಿಲಾತ “ಹಾಗಾದ್ರೆ ನೀನು ರಾಜನಾ?” ಅಂತ ಕೇಳಿದ. ಅದಕ್ಕೆ ಯೇಸು “ನಾನು ರಾಜ ಅಂತ ನೀನೇ ಹೇಳ್ತಾ ಇದ್ದೀಯ.+ ನಾನು ಹುಟ್ಟಿದ್ದು, ಈ ಲೋಕಕ್ಕೆ ಬಂದಿದ್ದು ಎಲ್ರಿಗೆ ಸತ್ಯ ಗೊತ್ತಾಗಲಿ ಅಂತಾನೇ.+ ಸತ್ಯವನ್ನ ನಂಬುವವ್ರೆಲ್ಲ ನಾನು ಹೇಳೋ ಪ್ರಕಾರ ನಡಿತಾರೆ” ಅಂದನು.
5 “ನಂಬಿಗಸ್ತ ಸಾಕ್ಷಿ,”+ “ಸತ್ತವ್ರಲ್ಲೇ ಮೊದ್ಲು ಎದ್ದು ಬಂದವನು”+ ಮತ್ತು “ಭೂಮಿಯಲ್ಲಿ ಇರೋ ರಾಜರಿಗೇ ರಾಜನು”+ ಆಗಿರೋ ಯೇಸು ಕ್ರಿಸ್ತನ ಅಪಾರ ಕೃಪೆ ನಿಮ್ಮ ಮೇಲಿರಲಿ. ನಿಮ್ಮಲ್ಲಿ ಶಾಂತಿ ಇರಲಿ.
ಯೇಸು ನಮ್ಮನ್ನ ಪ್ರೀತಿಸ್ತಾನೆ+ ಮತ್ತು ತನ್ನ ರಕ್ತ ಸುರಿಸಿ ನಮ್ಮನ್ನ ಪಾಪದಿಂದ ಬಿಡಿಸಿದ್ದಾನೆ.+