ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ನ್ಯಾಯಸ್ಥಾಪಕರು 12
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ನ್ಯಾಯಸ್ಥಾಪಕರು ಮುಖ್ಯಾಂಶಗಳು

      • ಎಫ್ರಾಯೀಮ್ಯರ ಜೊತೆ ಹೋರಾಟ (1-7)

        • ಸಿಬ್ಬೋಲೆತ್‌ ಪರೀಕ್ಷೆ (6)

      • ನ್ಯಾಯಾಧೀಶರಾದ ಇಬ್ಚಾನ, ಏಲೋನ ಮತ್ತು ಅಬ್ದೋನ (8-15)

ನ್ಯಾಯಸ್ಥಾಪಕರು 12:1

ಪಾದಟಿಪ್ಪಣಿ

  • *

    ಬಹುಶಃ, “ಉತ್ತರ ದಿಕ್ಕಿಗೆ.”

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 8:1

ನ್ಯಾಯಸ್ಥಾಪಕರು 12:3

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 11:29

ನ್ಯಾಯಸ್ಥಾಪಕರು 12:4

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 3:12, 13

ನ್ಯಾಯಸ್ಥಾಪಕರು 12:5

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 3:28; 7:24

ನ್ಯಾಯಸ್ಥಾಪಕರು 12:8

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 2:16

ನ್ಯಾಯಸ್ಥಾಪಕರು 12:15

ಮಾರ್ಜಿನಲ್ ರೆಫರೆನ್ಸ್

  • +ಆದಿ 36:12; ವಿಮೋ 17:16; ಅರ 13:29; 1ಸಮು 15:2

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ನ್ಯಾಯ. 12:1ನ್ಯಾಯ 8:1
ನ್ಯಾಯ. 12:3ನ್ಯಾಯ 11:29
ನ್ಯಾಯ. 12:4ಧರ್ಮೋ 3:12, 13
ನ್ಯಾಯ. 12:5ನ್ಯಾಯ 3:28; 7:24
ನ್ಯಾಯ. 12:8ನ್ಯಾಯ 2:16
ನ್ಯಾಯ. 12:15ಆದಿ 36:12; ವಿಮೋ 17:16; ಅರ 13:29; 1ಸಮು 15:2
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ನ್ಯಾಯಸ್ಥಾಪಕರು 12:1-15

ನ್ಯಾಯಸ್ಥಾಪಕರು

12 ಆಮೇಲೆ ಎಫ್ರಾಯೀಮಿನ ಗಂಡಸ್ರೆಲ್ಲ ಸೇರ್ಕೊಂಡು ಚಾಫೋನನ್ನ* ದಾಟಿಬಂದು ಯೆಫ್ತಾಹನಿಗೆ “ನೀನು ಅಮ್ಮೋನಿಯರ ವಿರುದ್ಧ ಯುದ್ಧ ಮಾಡೋಕೆ ಹೋದಾಗ ನಮ್ಮನ್ನ ಯಾಕೆ ಕರೀಲಿಲ್ಲ?+ ಮನೆ ಸಮೇತ ನಿನ್ನನ್ನ ಸುಟ್ಟುಹಾಕ್ತೀವಿ” ಅಂದ್ರು. 2 ಅದಕ್ಕೆ ಯೆಫ್ತಾಹ “ನನಗೂ ನನ್ನ ಜನ್ರಿಗೂ ಅಮ್ಮೋನಿಯರ ಜೊತೆ ದೊಡ್ಡ ಯುದ್ಧನೇ ಆಯ್ತು. ಸಹಾಯಕ್ಕಾಗಿ ನಿಮ್ಮನ್ನ ಕರೆದೆ. ಆದ್ರೆ ನೀವು ನನ್ನನ್ನ ಅವರ ಕೈಯಿಂದ ಕಾಪಾಡಲಿಲ್ಲ. 3 ನನ್ನನ್ನ ರಕ್ಷಿಸೋಕೆ ನೀವು ಬರಲ್ಲ ಅಂತ ಗೊತ್ತಾದಾಗ ನನ್ನ ಜೀವ ಕೈಯಲ್ಲಿ ಹಿಡ್ಕೊಂಡು ಅಮ್ಮೋನಿಯರ ವಿರುದ್ಧ ಹೋರಾಡೋಕೆ ತೀರ್ಮಾನ ಮಾಡ್ದೆ.+ ಯೆಹೋವ ಅವ್ರನ್ನ ನನ್ನ ಕೈಗೆ ಒಪ್ಪಿಸಿದ. ಹೀಗಿರುವಾಗ ಇವತ್ತು ಬಂದು ನೀವ್ಯಾಕೆ ನನ್ನ ಜೊತೆ ಜಗಳ ಮಾಡ್ತಾ ಇದ್ದೀರಾ?” ಅಂದ.

4 ಯೆಫ್ತಾಹ ಗಿಲ್ಯಾದಿನ+ ಗಂಡಸ್ರನ್ನೆಲ್ಲ ಸೇರಿಸಿದ. ಅವರು ಎಫ್ರಾಯೀಮ್ಯರ ವಿರುದ್ಧ ಯುದ್ಧ ಮಾಡಿದ್ರು. “ಎಫ್ರಾಯೀಮ್‌ ಮತ್ತು ಮನಸ್ಸೆಯಲ್ಲಿರೋ ಗಿಲ್ಯಾದ್ಯರೇ, ನೀವು ಎಫ್ರಾಯೀಮಿಂದ ಓಡಿ ಬಂದವ್ರೇ” ಅಂತ ಹೇಳಿದ್ದ ಎಫ್ರಾಯೀಮ್ಯರನ್ನ ಗಿಲ್ಯಾದ್ಯರು ಸೋಲಿಸಿದ್ರು. 5 ಎಫ್ರಾಯೀಮ್ಯರಿಗಿಂತ ಮುಂದೆ ಹೋಗಿ ಗಿಲ್ಯಾದ್ಯರು ಯೋರ್ದನ್‌ ನದಿ ದಾಟೋ ಜಾಗಗಳನ್ನ+ ವಶ ಮಾಡ್ಕೊಂಡ್ರು. ಎಫ್ರಾಯೀಮಿನ ಗಂಡಸ್ರಲ್ಲಿ ಯಾರಾದ್ರೂ ತಪ್ಪಿಸ್ಕೊಂಡು ಹೋಗೋಣ ಅಂತ ಬಂದು “ನನ್ನನ್ನ ದಾಟಿ ಹೋಗೋಕೆ ಬಿಡಿ” ಅಂತ ಕೇಳಿದ್ರೆ ಗಿಲ್ಯಾದಿನ ಗಂಡಸ್ರು ಅವ್ರಿಗೆಲ್ಲ “ನೀನೊಬ್ಬ ಎಫ್ರಾಯೀಮ್ಯನಾ?” ಅಂತ ಕೇಳ್ತಿದ್ರು. ಅವನದಕ್ಕೆ “ಇಲ್ಲ!” ಅಂತ ಹೇಳಿದ್ರೆ 6 ಅವನಿಗೆ “ದಯವಿಟ್ಟು ಷಿಬ್ಬೋಲೆತ್‌ ಅಂತ ಹೇಳು” ಅಂತಿದ್ರು. ಆದ್ರೆ ಅವನಿಗೆ ಸರಿಯಾಗಿ ಉಚ್ಚರಿಸೋಕೆ ಬರದಿದ್ರೆ “ಸಿಬ್ಬೋಲೆತ್‌” ಅಂತಿದ್ದ. ಆಗ ಅವರು ಅವನನ್ನ ನದಿ ದಾಟೋ ಜಾಗಗಳಲ್ಲಿ ಹಿಡಿದು ಕೊಂದು ಹಾಕ್ತಿದ್ರು. ಹೀಗೆ ಆ ಸಮಯದಲ್ಲಿ 42,000 ಎಫ್ರಾಯೀಮ್ಯರು ಸತ್ತುಬಿದ್ರು.

7 ಇಸ್ರಾಯೇಲ್ಯರಿಗೆ ಯೆಫ್ತಾಹ ಆರು ವರ್ಷ ನ್ಯಾಯಾಧೀಶನಾಗಿ ಕೆಲಸಮಾಡಿದ. ಇದಾದ ಮೇಲೆ ಗಿಲ್ಯಾದ್ಯನಾದ ಯೆಫ್ತಾಹ ತೀರಿಹೋದ. ಅವನನ್ನ ಗಿಲ್ಯಾದಲ್ಲಿದ್ದ ಅವನ ಪಟ್ಟಣದಲ್ಲಿ ಸಮಾಧಿ ಮಾಡಿದ್ರು.

8 ಆಮೇಲೆ ಬೆತ್ಲೆಹೇಮಿನ ಇಬ್ಚಾನ ಇಸ್ರಾಯೇಲ್ಯರ ನ್ಯಾಯಾಧೀಶ ಆದ.+ 9 ಅವನಿಗೆ 30 ಗಂಡು ಮಕ್ಕಳು, 30 ಹೆಣ್ಣು ಮಕ್ಕಳು ಇದ್ರು. ಅವನು ತನ್ನ ಹೆಣ್ಣು ಮಕ್ಕಳನ್ನ ತನ್ನ ಕುಲದಿಂದ ಹೊರಗಿರೋ ಗಂಡಸ್ರಿಗೆ ಕೊಟ್ಟು ಮದುವೆ ಮಾಡಿದ. ತನ್ನ ಗಂಡು ಮಕ್ಕಳಿಗೆ ತನ್ನ ಕುಲದ ಹೊರಗಿಂದ 30 ಹುಡುಗಿರನ್ನ ತಂದ. ಅವನು ಇಸ್ರಾಯೇಲ್ಯರಿಗೆ ಏಳು ವರ್ಷ ನ್ಯಾಯಾಧೀಶ ಆಗಿದ್ದ. 10 ಇಬ್ಚಾನ ತೀರಿಹೋದ. ಅವನನ್ನ ಬೆತ್ಲೆಹೇಮಲ್ಲಿ ಸಮಾಧಿ ಮಾಡಿದ್ರು.

11 ಆಮೇಲೆ ಜೆಬುಲೂನ್ಯನಾದ ಏಲೋನ ಇಸ್ರಾಯೇಲ್ಯರ ನ್ಯಾಯಾಧೀಶನಾಗಿ ಕೆಲಸಮಾಡಿದ. ಅವನು 10 ವರ್ಷ ನ್ಯಾಯಾಧೀಶನಾಗಿದ್ದ. 12 ಆಮೇಲೆ ಜೆಬುಲೂನ್ಯನಾದ ಏಲೋನ ತೀರಿಹೋದ. ಅವನನ್ನ ಜೆಬುಲೂನ್‌ ದೇಶದ ಅಯ್ಯಾಲೋನಲ್ಲಿ ಸಮಾಧಿ ಮಾಡಿದ್ರು.

13 ಆಮೇಲೆ ಪಿರಾತೋನಿನವನೂ ಹಿಲ್ಲೇಲನ ಮಗನೂ ಆದ ಅಬ್ದೋನ ಇಸ್ರಾಯೇಲ್ಯರಿಗೆ ನ್ಯಾಯಾಧೀಶ ಆದ. 14 ಅವನಿಗೆ 40 ಗಂಡು ಮಕ್ಕಳು, 30 ಮೊಮ್ಮಕ್ಕಳು ಇದ್ರು. ಸವಾರಿಗಾಗಿ ಅವ್ರ ಹತ್ರ 70 ಕತ್ತೆಗಳಿದ್ವು. ಅವನು ಎಂಟು ವರ್ಷ ಇಸ್ರಾಯೇಲ್ಯರಿಗೆ ನ್ಯಾಯಾಧೀಶನಾಗಿದ್ದ. 15 ಆಮೇಲೆ ಪಿರಾತೋನಿನವನೂ ಹಿಲ್ಲೇಲನ ಮಗನೂ ಆದ ಅಬ್ದೋನ ತೀರಿಹೋದ. ಅವನನ್ನ ಎಫ್ರಾಯೀಮ್‌ ಪ್ರದೇಶದಲ್ಲಿದ್ದ ಅಮಾಲೇಕ್ಯರ+ ಬೆಟ್ಟದಲ್ಲಿರೋ ಪಿರಾತೋನಿನಲ್ಲಿ ಸಮಾಧಿ ಮಾಡಿದ್ರು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ