ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಜೆಕರ್ಯ 10
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಜೆಕರ್ಯ ಮುಖ್ಯಾಂಶಗಳು

      • ಮಳೆಗಾಗಿ ಸುಳ್ಳು ದೇವರುಗಳ ಹತ್ರ ಅಲ್ಲ, ಯೆಹೋವನ ಹತ್ರ ಕೇಳಿ (1, 2)

      • ಯೆಹೋವ ತನ್ನ ಜನ್ರನ್ನ ಒಟ್ಟು​ಸೇರಿಸ್ತಾನೆ (3-12)

        • ಯೆಹೂದ ಕುಲದಿಂದ ಒಬ್ಬ ನಾಯಕ ಬರ್ತಾನೆ (3, 4)

ಜೆಕರ್ಯ 10:1

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 11:14; ಯೆರೆ 14:22; 51:16; ಯೆಹೆ 34:26; ಯೋವೇ 2:23

ಜೆಕರ್ಯ 10:2

ಪಾದಟಿಪ್ಪಣಿ

  • *

    ಅಥವಾ “ಮೂರ್ತಿಗಳ.”

  • *

    ಅಥವಾ “ದುಷ್ಟ ಶಕ್ತಿಯಿಂದ ಬಂದಿರೋ ಮಾತುಗಳಾಗಿವೆ; ರಹಸ್ಯ ಮಾತುಗಳಾಗಿವೆ.”

ಜೆಕರ್ಯ 10:3

ಪಾದಟಿಪ್ಪಣಿ

  • *

    ಅಕ್ಷ. “ಗಂಡು ಆಡು.”

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 34:16, 17

ಜೆಕರ್ಯ 10:4

ಪಾದಟಿಪ್ಪಣಿ

  • *

    ಅಕ್ಷ. “ಮೂಲೆಯಲ್ಲಿನ ಗೋಪುರ.” ಇದು ಮುಖ್ಯಸ್ಥನನ್ನ ಚಿತ್ರಿಸೋ ಪದ.

  • *

    ಅಕ್ಷ. “ಗೂಟ.” ಇದು ಬೆಂಬಲ ಕೊಡೋ ವ್ಯಕ್ತಿಯನ್ನ, ಅಧಿಕಾರಿಯನ್ನ ಚಿತ್ರಿಸೋ ಪದ.

ಜೆಕರ್ಯ 10:5

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 20:1
  • +ಹಗ್ಗಾ 2:22

ಜೆಕರ್ಯ 10:6

ಮಾರ್ಜಿನಲ್ ರೆಫರೆನ್ಸ್

  • +ಯೆರೆ 3:18; ಯೆಹೆ 37:16, 19; ಹೋಶೇ 1:10, 11
  • +ಯೆರೆ 31:9, 20
  • +ಯೆರೆ 30:18

ಜೆಕರ್ಯ 10:7

ಮಾರ್ಜಿನಲ್ ರೆಫರೆನ್ಸ್

  • +ಜೆಕ 9:15
  • +ಯೆಶಾ 66:14; ಚೆಫ 3:14

ಜೆಕರ್ಯ 10:8

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 44:22; 51:11

ಜೆಕರ್ಯ 10:10

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 11:11
  • +ಯೆಶಾ 49:19, 20; 54:1, 2
  • +ಯೆರೆ 50:19; ಮೀಕ 7:14

ಜೆಕರ್ಯ 10:11

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 11:15
  • +ಯೆಶಾ 19:1; ಯೆಹೆ 30:13

ಜೆಕರ್ಯ 10:12

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 41:10; 45:24
  • +ಮೀಕ 4:5

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಜೆಕ. 10:1ಧರ್ಮೋ 11:14; ಯೆರೆ 14:22; 51:16; ಯೆಹೆ 34:26; ಯೋವೇ 2:23
ಜೆಕ. 10:3ಯೆಹೆ 34:16, 17
ಜೆಕ. 10:5ಧರ್ಮೋ 20:1
ಜೆಕ. 10:5ಹಗ್ಗಾ 2:22
ಜೆಕ. 10:6ಯೆರೆ 3:18; ಯೆಹೆ 37:16, 19; ಹೋಶೇ 1:10, 11
ಜೆಕ. 10:6ಯೆರೆ 31:9, 20
ಜೆಕ. 10:6ಯೆರೆ 30:18
ಜೆಕ. 10:7ಜೆಕ 9:15
ಜೆಕ. 10:7ಯೆಶಾ 66:14; ಚೆಫ 3:14
ಜೆಕ. 10:8ಯೆಶಾ 44:22; 51:11
ಜೆಕ. 10:10ಯೆಶಾ 11:11
ಜೆಕ. 10:10ಯೆಶಾ 49:19, 20; 54:1, 2
ಜೆಕ. 10:10ಯೆರೆ 50:19; ಮೀಕ 7:14
ಜೆಕ. 10:11ಯೆಶಾ 11:15
ಜೆಕ. 10:11ಯೆಶಾ 19:1; ಯೆಹೆ 30:13
ಜೆಕ. 10:12ಯೆಶಾ 41:10; 45:24
ಜೆಕ. 10:12ಮೀಕ 4:5
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಜೆಕರ್ಯ 10:1-12

ಜೆಕರ್ಯ

10 “ವಸಂತಕಾಲದ ಮಳೆಗಾಗಿ ಯೆಹೋವನನ್ನ ಬೇಡ್ಕೊಳ್ಳಿ.

ಯಾಕಂದ್ರೆ ಕಾರ್ಮೋಡಗಳು ಕವಿಯೋ ತರ ಮಾಡುವವನು ಯೆಹೋವನೇ,

ಜನ್ರಿಗಾಗಿ ಮಳೆ ಸುರಿಸುವವನು,+

ಪ್ರತಿಯೊಬ್ಬರ ಹೊಲಗಳಲ್ಲಿ ಬೆಳೆ ಬೆಳೆಯೋ ತರ ಮಾಡುವವನು ಆತನೇ.

 2 ಆದ್ರೆ ಮನೆದೇವರುಗಳ* ಮಾತು ಮೋಸಕರ,*

ಕಣಿಹೇಳುವವ್ರ ದರ್ಶನಗಳು ಸುಳ್ಳು,

ಅವರು ಕೆಲಸಕ್ಕೆ ಬಾರದ ಕನಸುಗಳನ್ನ ಹೇಳ್ತಾರೆ,

ವ್ಯರ್ಥವಾದ ಸಾಂತ್ವನ ನೀಡ್ತಾರೆ.

ಹಾಗಾಗಿ ಜನ ಕುರಿಗಳ ತರ ಅಲೆದಾಡ್ತಾರೆ,

ಕುರುಬನಿಲ್ಲದೆ ಇರೋದ್ರಿಂದ ಕಷ್ಟಪಡ್ತಾರೆ.

 3 ಕುರುಬರ ಮೇಲೆ ನನಗೆ ಕೋಪ ಬರ್ತಿದೆ,

ಕ್ರೂರವಾಗಿ ನಡ್ಕೊಳ್ಳೋ ನಾಯಕರಿಂದ* ನಾನು ಲೆಕ್ಕ ಕೇಳ್ತೀನಿ,

ಯಾಕಂದ್ರೆ ಸೈನ್ಯಗಳ ದೇವರಾದ ಯೆಹೋವ ತನ್ನ ಮಂದೆ ಕಡೆ, ಯೆಹೂದದ ಕಡೆ ಗಮನಹರಿಸಿದ್ದಾನೆ,+

ಬಲಿಷ್ಠವಾಗಿ, ವೈಭವವಾಗಿ ಇರೋ ತನ್ನ ಯುದ್ಧ ಕುದುರೆ ತರಾನೇ ಅವ್ರನ್ನೂ ಮಾಡಿದ್ದಾನೆ.

 4 ಒಬ್ಬ ನಾಯಕ* ಆತನಿಂದ ಬರ್ತಾನೆ,

ಬೆಂಬಲಿಸೋ ಒಬ್ಬ ಅಧಿಕಾರಿ* ಆತನಿಂದ ಬರ್ತಾನೆ,

ಯುದ್ಧದ ಬಿಲ್ಲು ಆತನಿಂದ ಬರುತ್ತೆ,

ಪ್ರತಿಯೊಬ್ಬ ಮೇಲ್ವಿಚಾರಕ ಆತನಿಂದ ಬರ್ತಾನೆ. ಅವ್ರೆಲ್ಲ ಆತನಿಂದಾನೇ ಬರ್ತಾರೆ.

 5 ಅವರು ವೀರ ಸೈನಿಕರ ತರ ಆಗ್ತಾರೆ,

ಯುದ್ಧದ ಸಮಯದಲ್ಲಿ ಬೀದಿಗಳ ಕೆಸರನ್ನ ತುಳಿತಾ ಹೋಗ್ತಾರೆ,

ಅವರು ಯುದ್ಧ ಮಾಡ್ತಾರೆ. ಯಾಕಂದ್ರೆ ಯೆಹೋವ ಅವ್ರ ಜೊತೆ ಇದ್ದಾನೆ,+

ಶತ್ರುಗಳ ಕುದುರೆಸವಾರರು ನಾಚಿಕೆಗೆ ಈಡಾಗ್ತಾರೆ.+

 6 ನಾನು ಯೆಹೂದದ ಮನೆತನದವ್ರಿಗೆ ಗೌರವ ಸಿಗೋ ಹಾಗೆ ಮಾಡ್ತೀನಿ.

ಯೋಸೇಫನ ಮನೆತನದವ್ರನ್ನ ಕಾಪಾಡ್ತೀನಿ.+

ಅವರು ತಮ್ಮ ಮುಂಚಿನ ಸ್ಥಿತಿಗೆ ಬರೋ ತರ ಮಾಡ್ತೀನಿ.

ಅವ್ರಿಗೆ ಕರುಣೆ ತೋರಿಸ್ತೀನಿ.+

ಯಾವತ್ತಿಗೂ ನಾನು ಅವ್ರನ್ನ ತಿರಸ್ಕರಿಸಿರಲಿಲ್ಲ ಅನ್ನೋ ತರ ಅವರು ಇರ್ತಾರೆ.+

ನಾನು ಅವ್ರ ದೇವರಾದ ಯೆಹೋವನಾಗಿದ್ದೀನಿ ಮತ್ತು ಅವ್ರ ಪ್ರಾರ್ಥನೆಗಳಿಗೆ ಉತ್ತರ ಕೊಡ್ತೀನಿ.

 7 ಎಫ್ರಾಯೀಮಿನವರು ಬಲಿಷ್ಠ ವೀರ ಸೈನಿಕರ ತರ ಆಗ್ತಾರೆ.

ದ್ರಾಕ್ಷಾಮದ್ಯ ಕುಡಿದಾಗ ಸಂತೋಷ ಪಡೋ ತರ ಅವ್ರ ಹೃದಯ ಸಂತೋಷ ಪಡುತ್ತೆ.+

ಅವ್ರ ಮಕ್ಕಳು ಇದನ್ನ ನೋಡಿ ಸಂಭ್ರಮಿಸ್ತಾರೆ

ಯೆಹೋವನಿಂದಾಗಿ ಅವ್ರ ಹೃದಯ ಸಂತೋಷ ಪಡುತ್ತೆ.+

 8 ‘ನಾನು ಸೀಟಿ ಹೊಡೆದು ಅವ್ರನ್ನ ಒಟ್ಟುಸೇರಿಸ್ತೀನಿ.

ನಾನು ಅವ್ರನ್ನ ಬಿಡಿಸ್ತೀನಿ,+ ಅವರು ಸಂಖ್ಯೆಯಲ್ಲಿ ಜಾಸ್ತಿ ಆಗ್ತಾರೆ.

ಮುಂದಕ್ಕೂ ಜಾಸ್ತಿ ಆಗ್ತಾ ಹೋಗ್ತಾರೆ.

 9 ನಾನು ಅವ್ರನ್ನ ಬೇರೆಬೇರೆ ರಾಷ್ಟ್ರಗಳ ಮಧ್ಯ ಬೀಜಗಳ ತರ ಚೆದರಿಸ್ತೀನಿ.

ಆದ್ರೂ ಅವರು ದೂರದೂರದ ಸ್ಥಳಗಳಲ್ಲಿ ಇರುವಾಗ ನನ್ನನ್ನ ನೆನಪಿಸ್ಕೊಳ್ತಾರೆ.

ಅವರು ಮತ್ತು ಅವ್ರ ಮಕ್ಕಳು ಮತ್ತೆ ಚೈತನ್ಯ ಪಡ್ಕೊಂಡು ವಾಪಸ್‌ ಬರ್ತಾರೆ.

10 ನಾನು ಅವ್ರನ್ನ ಈಜಿಪ್ಟ್‌ ದೇಶದಿಂದ ವಾಪಸ್‌ ಕರ್ಕೊಂಡು ಬರ್ತಿನಿ.

ಅಶ್ಶೂರಿಂದ ಅವ್ರನ್ನ ಒಟ್ಟುಸೇರಿಸ್ತೀನಿ.+

ಅವ್ರಿಗೆ ಇರೋಕೆ ಸಾಕಷ್ಟು ಜಾಗ ಇರಲ್ಲ.+

ಹಾಗಾಗಿ ನಾನು ಅವ್ರನ್ನ ಗಿಲ್ಯಾದ್‌+ ಮತ್ತು ಲೆಬನೋನ್‌ ದೇಶಗಳಿಗೆ ಕರ್ಕೊಂಡು ಹೋಗ್ತೀನಿ.

11 ಸಮುದ್ರ ಅವ್ರ ದಾರಿಯನ್ನ ತಡೆಯುವಾಗ,

ನಾನು ಅದ್ರ ಮಧ್ಯ ಹೋಗಿ ಅದ್ರ ಅಲೆಗಳನ್ನ ಚದರಿಸಿಬಿಡ್ತೀನಿ.+

ನೈಲ್‌ ನದಿ ಅವ್ರಿಗೆ ಅಡ್ಡಬಂದ್ರೆ ಅದ್ರ ನೀರನ್ನ ಬತ್ತಿಸಿಬಿಡ್ತೀನಿ.

ಅಶ್ಶೂರರ ಗರ್ವವನ್ನ ಅಡಗಿಸಲಾಗುತ್ತೆ.

ಈಜಿಪ್ಟಿನ ರಾಜದಂಡ ಅವ್ರ ಕೈಯಿಂದ ತಪ್ಪಿಹೋಗುತ್ತೆ.+

12 ಯೆಹೋವನಾದ ನಾನು ಅವ್ರಿಗೆ ಗೌರವ ಸಿಗೋ ಹಾಗೆ ಮಾಡ್ತೀನಿ.+

ಅವರು ನನ್ನ ಹೆಸ್ರಿಗೆ ಗೌರವ ಬರೋ ತರ ಬದುಕ್ತಾರೆ’+ ಅಂತ ಯೆಹೋವ ಹೇಳ್ತಿದ್ದಾನೆ.”

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ