ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಕೊರಿಂಥ 9
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

2 ಕೊರಿಂಥ ಮುಖ್ಯಾಂಶಗಳು

      • ಕಾಣಿಕೆ ಕೊಡೋಕೆ ಪ್ರೋತ್ಸಾಹ (1-15)

        • ಸಂತೋಷದಿಂದ ಕೊಡುವವನ ಮೇಲೆ ದೇವರ ಪ್ರೀತಿ (7)

2 ಕೊರಿಂಥ 9:1

ಮಾರ್ಜಿನಲ್ ರೆಫರೆನ್ಸ್

  • +ರೋಮ 15:26; 1ಕೊರಿಂ 16:1; 2ಕೊರಿಂ 9:12

2 ಕೊರಿಂಥ 9:6

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 11:24; 19:17; 22:9; ಪ್ರಸಂ 11:1; ಲೂಕ 6:38

2 ಕೊರಿಂಥ 9:7

ಪಾದಟಿಪ್ಪಣಿ

  • *

    ಅಥವಾ “ಇಷ್ಟವಿಲ್ಲದೆ.”

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 15:7, 10
  • +ವಿಮೋ 22:29; ಜ್ಞಾನೋ 11:25; ಅಕಾ 20:35; ಇಬ್ರಿ 13:16

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 155

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 55

    ಕಾವಲಿನಬುರುಜು,

    11/1/1998, ಪು. 26

    3/1/1993, ಪು. 15

    4/15/1992, ಪು. 14-15, 18-19

    ಎಚ್ಚರ!—2008,

    7/2008, ಪು. 17

2 ಕೊರಿಂಥ 9:8

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 28:27; ಮಲಾ 3:10; ಫಿಲಿ 4:18, 19

2 ಕೊರಿಂಥ 9:9

ಪಾದಟಿಪ್ಪಣಿ

  • *

    ಅಕ್ಷ. “ವಿಸ್ತಾರವಾಗಿ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 112:9

2 ಕೊರಿಂಥ 9:12

ಮಾರ್ಜಿನಲ್ ರೆಫರೆನ್ಸ್

  • +ರೋಮ 15:26, 27; 2ಕೊರಿಂ 8:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/2000, ಪು. 11-12

2 ಕೊರಿಂಥ 9:13

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 5:16; ಇಬ್ರಿ 13:16; ಯಾಕೋ 1:27; 1ಯೋಹಾ 3:17

2 ಕೊರಿಂಥ 9:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    1/2016, ಪು. 12-13

    ಕಾವಲಿನಬುರುಜು,

    11/15/2015, ಪು. 14

    12/1/1993, ಪು. 28

    4/15/1992, ಪು. 19

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

2 ಕೊರಿಂ. 9:1ರೋಮ 15:26; 1ಕೊರಿಂ 16:1; 2ಕೊರಿಂ 9:12
2 ಕೊರಿಂ. 9:6ಜ್ಞಾನೋ 11:24; 19:17; 22:9; ಪ್ರಸಂ 11:1; ಲೂಕ 6:38
2 ಕೊರಿಂ. 9:7ಧರ್ಮೋ 15:7, 10
2 ಕೊರಿಂ. 9:7ವಿಮೋ 22:29; ಜ್ಞಾನೋ 11:25; ಅಕಾ 20:35; ಇಬ್ರಿ 13:16
2 ಕೊರಿಂ. 9:8ಜ್ಞಾನೋ 28:27; ಮಲಾ 3:10; ಫಿಲಿ 4:18, 19
2 ಕೊರಿಂ. 9:9ಕೀರ್ತ 112:9
2 ಕೊರಿಂ. 9:12ರೋಮ 15:26, 27; 2ಕೊರಿಂ 8:14
2 ಕೊರಿಂ. 9:13ಮತ್ತಾ 5:16; ಇಬ್ರಿ 13:16; ಯಾಕೋ 1:27; 1ಯೋಹಾ 3:17
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
2 ಕೊರಿಂಥ 9:1-15

ಕೊರಿಂಥದವರಿಗೆ ಬರೆದ ಎರಡನೇ ಪತ್ರ

9 ಪವಿತ್ರ ಜನ್ರಿಗಾಗಿ ಮಾಡಬೇಕಾದ ಸೇವೆ ಬಗ್ಗೆ+ ನಾನು ನಿಮಗೆ ಬರಿಬೇಕಾಗಿಲ್ಲ. 2 ಯಾಕಂದ್ರೆ ಸಹಾಯ ಮಾಡೋಕೆ ನಿಮಗೆ ತುಂಬ ಮನಸ್ಸಿದೆ ಅಂತ ನನಗೆ ಗೊತ್ತು. ಮಕೆದೋನ್ಯದವ್ರ ಮುಂದೆ ನಾನು ನಿಮ್ಮನ್ನ ಹೊಗಳ್ತೀನಿ. ‘ಅಖಾಯದಲ್ಲಿರೋ ಸಹೋದರರು ಕಳೆದ ಒಂದು ವರ್ಷದಿಂದ ಸಹಾಯ ಮಾಡೋಕೆ ಸಿದ್ಧರಿದ್ದಾರೆ’ ಅಂತ ಅವ್ರಿಗೆ ಹೇಳ್ತಾ ಇದ್ದೀನಿ. ನಿಮ್ಮ ಹುರುಪಿನ ಬಗ್ಗೆ ಕೇಳಿ ಅವ್ರಲ್ಲೂ ತುಂಬ ಜನ ಸಹಾಯ ಮಾಡೋಕೆ ಮುಂದೆ ಬಂದಿದ್ದಾರೆ. 3 ನಿಮ್ಮ ಬಗ್ಗೆ ಹೊಗಳಿದ್ದು ಸುಳ್ಳಾಗಬಾರದು, ನಾನು ಹೇಳಿದ ಹಾಗೆ ನೀವು ಸಹಾಯ ಮಾಡೋಕೆ ಸಿದ್ಧರಿರಬೇಕು ಅಂತ ನಾನು ನಿಮ್ಮ ಹತ್ರ ಸಹೋದರರನ್ನ ಕಳಿಸ್ತಾ ಇದ್ದೀನಿ. 4 ಸಿದ್ಧರಿಲ್ಲದಿದ್ರೆ ಮಕೆದೋನ್ಯದ ಸಹೋದರರು ಒಂದುವೇಳೆ ನನ್ನ ಜೊತೆ ಬಂದು ನೀವು ಸಿದ್ಧರಾಗಿಲ್ಲದೆ ಇರೋದನ್ನ ನೋಡಿದಾಗ ನಿಮ್ಮ ಮೇಲೆ ಭರವಸೆ ಇಟ್ಟಿದ್ದಕ್ಕೆ ನಾವು ತಲೆ ತಗ್ಗಿಸಬೇಕಾಗುತ್ತೆ, ನೀವೂ ತಲೆ ತಗ್ಗಿಸಬೇಕಾಗುತ್ತೆ. 5 ಹಾಗಾಗಿ ಸಹೋದರರಿಗೆ ಮೊದ್ಲೇ ನಿಮ್ಮ ಹತ್ರ ಹೋಗೋಕೆ, ನೀವು ಕೊಡ್ತೀರ ಅಂತ ಹೇಳಿದ ಉದಾರ ಕಾಣಿಕೆಯನ್ನ ಮುಂಚೆನೇ ಸಿದ್ಧ ಮಾಡಿ ಇಡಿ ಅಂತ ಪ್ರೋತ್ಸಾಹಿಸಬೇಕು ಅಂತ ನನಗನಿಸ್ತು. ಆಗ ನಾವು ಬರುವಷ್ಟರಲ್ಲಿ ಕಾಣಿಕೆ ಸಿದ್ಧವಾಗಿರುತ್ತೆ. ಅಷ್ಟೇ ಅಲ್ಲ ನಮ್ಮ ಒತ್ತಾಯದಿಂದ ಅಲ್ಲ, ಧಾರಾಳ ಮನಸ್ಸಿಂದ ಅದನ್ನ ಕೊಡ್ತಿದ್ದೀರ ಅಂತ ಗೊತ್ತಾಗುತ್ತೆ.

6 ಈ ವಿಷ್ಯದಲ್ಲಿ ಹೇಳೋದಾದ್ರೆ, ಜಿಪುಣತನದಿಂದ ಬಿತ್ತುವವರು ಸ್ವಲ್ಪನೇ ಕೊಯ್ತಾರೆ. ಉದಾರವಾಗಿ ಬಿತ್ತುವವರು ತುಂಬ ಕೊಯ್ತಾರೆ.+ 7 ಪ್ರತಿಯೊಬ್ಬನು ತನ್ನ ಮನಸ್ಸಲ್ಲಿ ಎಷ್ಟು ಕೊಡಬೇಕು ಅಂದ್ಕೊಂಡಿದ್ದಾನೋ ಅಷ್ಟೇ ಕೊಡ್ಲಿ. ಅಯ್ಯೋ ಕೊಡಬೇಕಲ್ಲ ಅಂತಾಗ್ಲಿ* ಬೇರೆಯವರು ಒತ್ತಾಯ ಮಾಡ್ತಿದ್ದಾರೆ ಅಂತಾಗ್ಲಿ ಕೊಡಬಾರದು.+ ಯಾಕಂದ್ರೆ ಖುಷಿಯಿಂದ ಕೊಡುವವನನ್ನ ದೇವರು ಪ್ರೀತಿಸ್ತಾನೆ.+

8 ಅಷ್ಟೇ ಅಲ್ಲ, ನಿಮಗೆ ಅಪಾರ ಕೃಪೆಯನ್ನ ತೋರಿಸೋ ಶಕ್ತಿ ದೇವರಿಗಿದೆ. ಅದ್ರಿಂದ ನಿಮಗೆ ಅಗತ್ಯ ಇರೋ ಯಾವುದಕ್ಕೂ ಯಾವತ್ತೂ ಕೊರತೆ ಆಗಲ್ಲ. ಎಲ್ಲ ಒಳ್ಳೇ ಕೆಲಸಗಳನ್ನ ಮಾಡೋಕೆ ಬೇಕಾಗಿದ್ದೆಲ್ಲ ನಿಮ್ಮ ಹತ್ರ ಜಾಸ್ತಿನೇ ಇರುತ್ತೆ.+ 9 (“ಅವನು ಉದಾರವಾಗಿ* ಹಂಚಿದ್ದಾನೆ, ಅವನು ಬಡವ್ರಿಗೆ ಕೊಟ್ಟಿದ್ದಾನೆ. ಅವನ ನೀತಿ ಯಾವಾಗ್ಲೂ ಇರುತ್ತೆ” ಅಂತ ಬರೆದಿದೆ ತಾನೇ.+ 10 ಬಿತ್ತುವವನಿಗೆ ಬೀಜವನ್ನ, ತಿನ್ನುವವನಿಗೆ ಊಟವನ್ನ ಸಾಕಷ್ಟು ಕೊಡೋ ದೇವರು ನಿಮಗೆ ಬಿತ್ತೋಕೆ ಬೀಜವನ್ನ ಕೊಡೋದಷ್ಟೇ ಅಲ್ಲ ಅದನ್ನ ಜಾಸ್ತಿನೇ ಕೊಡ್ತಾನೆ. ನಿಮ್ಮ ಒಳ್ಳೇ ಕೆಲಸಗಳಿಗೆ ಸಮೃದ್ಧ ಪ್ರತಿಫಲ ಕೊಡ್ತಾನೆ.) 11 ದೇವರು ನಿಮ್ಮನ್ನ ಎಲ್ಲ ವಿಷ್ಯಗಳಲ್ಲೂ ಆಶೀರ್ವದಿಸ್ತಾನೆ. ಹಾಗಾಗಿ ಎಲ್ಲ ರೀತಿಯಲ್ಲೂ ಉದಾರತೆ ತೋರಿಸೋಕೆ ನಿಮ್ಮಿಂದ ಆಗುತ್ತೆ. ನೀವು ನಮ್ಮ ಮೂಲಕ ಕಾಣಿಕೆ ಕೊಡೋದ್ರಿಂದ ಜನ ದೇವರಿಗೆ ಧನ್ಯವಾದ ಹೇಳ್ತಾರೆ. 12 ಬೇರೆಯವ್ರಿಗೆ ಸಹಾಯ ಮಾಡೋ ಈ ಸೇವೆಯಿಂದ ಪವಿತ್ರ ಜನ್ರಿಗೆ ಅಗತ್ಯ ಇರೋದು ಸಿಗುತ್ತೆ,+ ಅಷ್ಟೇ ಅಲ್ಲ ಅದ್ರಿಂದ ತುಂಬ ಜನ ದೇವರಿಗೆ ಎಷ್ಟೋ ಧನ್ಯವಾದ ಹೇಳ್ತಾರೆ. 13 ಈ ಪರಿಹಾರ ಸೇವೆಯಿಂದ ನೀವು ಎಂಥ ವ್ಯಕ್ತಿಗಳು ಅಂತ ತೋರಿಸ್ಕೊಟ್ಟಿದ್ದೀರ. ನೀವು ಅವ್ರಿಗೂ ಬೇರೆಲ್ಲರಿಗೂ ಉದಾರವಾಗಿ ಕಾಣಿಕೆ ಕೊಟ್ಟಿದ್ರಿಂದ ಮತ್ತು ಕ್ರಿಸ್ತನ ಬಗ್ಗೆ ನೀವು ಸಾರೋ ಸಿಹಿಸುದ್ದಿಗೆ ತಕ್ಕ ಹಾಗೆ ನಡ್ಕೊಂಡಿದ್ರಿಂದ ಅವರು ದೇವರಿಗೆ ಗೌರವ ಕೊಡ್ತಾರೆ.+ 14 ದೇವರು ನಿಮಗೆ ಅಪಾರ ಕೃಪೆಯನ್ನ ಸುರಿಸಿದ್ರಿಂದ ಅವರು ನಿಮ್ಮನ್ನ ಪ್ರೀತಿಸ್ತಾರೆ ಮತ್ತು ನಿಮಗಾಗಿ ದೇವರ ಹತ್ರ ಅಂಗಲಾಚಿ ಬೇಡ್ತಾರೆ.

15 ದೇವರ ಉಚಿತ ಉಡುಗೊರೆಯನ್ನ ವರ್ಣಿಸೋಕೆ ಪದಗಳೇ ಇಲ್ಲ. ಆ ಉಡುಗೊರೆಗಾಗಿ ಆತನಿಗೆ ಧನ್ಯವಾದ ಹೇಳೋಣ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ