ಯೆಶಾಯ
38 ಆ ದಿನಗಳಲ್ಲಿ ಹಿಜ್ಕೀಯ ಹುಷಾರಿಲ್ಲದೆ ಸಾಯೋ ಸ್ಥಿತಿಗೆ ಬಂದ.+ ಆಗ ಆಮೋಚನ ಮಗನಾದ ಪ್ರವಾದಿ ಯೆಶಾಯ+ ಅವನ ಹತ್ರ ಬಂದು ಅವನಿಗೆ “ಯೆಹೋವ ಹೇಳೋದು ಏನಂದ್ರೆ: ‘ನೀನು ನಿನ್ನ ಕುಟುಂಬದವ್ರಿಗೆ ಕೊಡಬೇಕಾದ ನಿರ್ದೇಶನಗಳನ್ನ ಕೊಡು. ಯಾಕಂದ್ರೆ ನಿನಗೆ ವಾಸಿಯಾಗಲ್ಲ, ತೀರಿಹೋಗ್ತೀಯ’”+ ಅಂದ. 2 ಆಗ ಹಿಜ್ಕೀಯ ಗೋಡೆ ಕಡೆ ಮುಖ ಮಾಡ್ಕೊಂಡು ಯೆಹೋವನಿಗೆ ಪ್ರಾರ್ಥಿಸೋಕೆ ಶುರುಮಾಡಿದ. 3 “ಯೆಹೋವನೇ, ನಾನು ನಿನ್ನ ಹತ್ರ ಬೇಡ್ಕೊಳ್ತೀನಿ. ನಾನು ನಿನ್ನ ಮುಂದೆ ನಂಬಿಗಸ್ತನಾಗಿ ಪೂರ್ಣ ಹೃದಯದಿಂದ ನಡೆದದ್ದನ್ನ+ ದಯವಿಟ್ಟು ನೆನಪು ಮಾಡ್ಕೊ.+ ನಾನು ನಿನಗೆ ಇಷ್ಟ ಆಗೋದನ್ನೇ ಮಾಡಿದೆ” ಅಂತ ಹೇಳಿ ಬಿಕ್ಕಿಬಿಕ್ಕಿ ಅತ್ತ.
4 ಆಮೇಲೆ ಯೆಶಾಯನಿಗೆ ಯೆಹೋವನ ಈ ಸಂದೇಶ ಬಂತು 5 “ವಾಪಸ್ ಹೋಗಿ, ಹಿಜ್ಕೀಯನಿಗೆ ಹೀಗೆ ಹೇಳು+ ‘ನಿನ್ನ ಪೂರ್ವಜ ದಾವೀದನ ದೇವರಾಗಿರೋ ಯೆಹೋವ ಹೇಳೋದು ಏನಂದ್ರೆ “ನಾನು ನಿನ್ನ ಪ್ರಾರ್ಥನೆ ಕೇಳಿದ್ದೀನಿ.+ ನಾನು ನಿನ್ನ ಕಣ್ಣೀರನ್ನ ನೋಡಿದ್ದೀನಿ.+ ನಾನು ನಿನ್ನ ಆಯಸ್ಸಿಗೆ ಇನ್ನೂ 15 ವರ್ಷಗಳನ್ನ ಸೇರಿಸ್ತಿದ್ದೀನಿ.+ 6 ನಾನು ನಿನ್ನನ್ನ ಮತ್ತು ಈ ಪಟ್ಟಣವನ್ನ ಅಶ್ಶೂರ್ಯರ ರಾಜನ ಕೈಯಿಂದ ರಕ್ಷಿಸ್ತೀನಿ. ನಾನು ಈ ಪಟ್ಟಣವನ್ನ ಕಾಪಾಡ್ತೀನಿ.”+ 7 ತಾನು ಆಡಿದ ಮಾತುಗಳನ್ನ ಉಳಿಸ್ಕೊಳ್ತಾನೆ ಅನ್ನೋದಕ್ಕೆ ಯೆಹೋವ ನಿನಗೆ ಸೂಚನೆ ಕೊಡ್ತಿದ್ದಾನೆ ಮತ್ತು ಯೆಹೋವ ನಿನಗೆ+ 8 “ಆಹಾಜನ ಮೆಟ್ಟಿಲುಗಳ ಮೇಲಿರೋ ನೆರಳು ಹತ್ತು ಹೆಜ್ಜೆ ಹಿಂದೆ ಬರೋ ತರ ಮಾಡ್ತೀನಿ”+ ಅಂದಿದ್ದಾನೆ.’” ಹಾಗಾಗಿ ಈಗಾಗಲೇ ಮುಂದೆ ಹೋಗಿದ್ದ ಸೂರ್ಯನ ನೆರಳು ಹತ್ತು ಹೆಜ್ಜೆ ಹಿಂದೆ ಬಂತು.
9 ಹುಷಾರಿಲ್ಲದ ಯೆಹೂದದ ರಾಜ ಹಿಜ್ಕೀಯ ಚೇತರಿಸ್ಕೊಂಡ ಮೇಲೆ ಈ ಮಾತುಗಳನ್ನ ಬರೆದ.*
10 ನಾನು ಹೀಗೆ ಅಂದ್ಕೊಂಡೆ “ಆಯಸ್ಸು ಮುಗಿಯೋ ಮುಂಚೆನೇ
ನಾನು ಸಮಾಧಿಯ* ಬಾಗಿಲನ್ನ ಪ್ರವೇಶಿಸಬೇಕಾಗಿದೆ.
ನನ್ನ ಜೀವನದ ಉಳಿದಿರೋ ವರ್ಷಗಳನ್ನ ನನ್ನಿಂದ ಕಿತ್ಕೊಳ್ಳಲಾಗ್ತಿದೆ.”
11 ನಾನು ಹೀಗೆ ಹೇಳಿದೆ “ನಾನು ಯಾಹುವನ್ನ,* ಹೌದು ಯಾಹುವಿನ ಕೃಪೆಯನ್ನ ನೋಡೋಕೆ ಬದುಕಿರಲ್ಲ.*+
ಇನ್ಮುಂದೆ ಮನುಷ್ಯರನ್ನ ನೋಡೋಕೆ ನನ್ನಿಂದ ಆಗಲ್ಲ,
ಯಾಕಂದ್ರೆ ನಾನು ಸತ್ತವರ ಜೊತೆ ಇರ್ತೀನಿ.
12 ಕುರುಬನ ಡೇರೆಯನ್ನ ಕಿತ್ತುಹಾಕಿದ ಹಾಗೆ
ನನ್ನ ಸ್ವಂತ ನಿವಾಸಸ್ಥಳವನ್ನ ನನ್ನಿಂದ ಕಿತ್ಕೊಳ್ಳಲಾಯ್ತು.+
ಕೆಲಸ ಆದಮೇಲೆ ಬಟ್ಟೆ ಸುತ್ತಿಡೋ ಮಗ್ಗದ ಕೆಲಸಗಾರನ ತರ ನಾನು ನನ್ನ ಜೀವನವನ್ನ ಸುತ್ತಿಟ್ಟಿದ್ದೀನಿ,
ಕೆಲಸಮುಗಿದ ಮೇಲೆ ಬಟ್ಟೆ ಕತ್ತರಿಸಿ ಮಗ್ಗದಿಂದ ಬೇರೆ ಮಾಡೋ ತರ ನನ್ನನ್ನ ಕತ್ತರಿಸಲಾಗುತ್ತೆ.
ಬೆಳಿಗ್ಗೆಯ ಬೆಳಕಿನಿಂದ ರಾತ್ರಿಯ ಕತ್ತಲೆ ತನಕ ನೀನು ನನ್ನನ್ನ ಸಾವಿಗೆ ಇನ್ನಷ್ಟು ಹತ್ರ ತರ್ತಿದ್ದೀಯ.+
13 ಬೆಳಿಗ್ಗೆ ತನಕ ನನಗೆ ನಾನೇ ಸಮಾಧಾನ ಮಾಡಿಕೊಳ್ತೀನಿ.
ದೇವರು ನನ್ನ ಎಲ್ಲ ಎಲುಬುಗಳನ್ನ ಸಿಂಹದ ಹಾಗೆ ಮುರಿತಾ ಇದ್ದಾನೆ,
ಬೆಳಿಗ್ಗೆಯ ಬೆಳಕಿನಿಂದ ರಾತ್ರಿಯ ಕತ್ತಲೆ ತನಕ ನೀನು ನನ್ನನ್ನ ಸಾವಿಗೆ ಇನ್ನಷ್ಟು ಹತ್ರ ತರ್ತಿದ್ದೀಯ.+
14 ನಾನು ಬಾನಾಡಿ ಮತ್ತು ಸಿಳ್ಳಾರ ಹಕ್ಕಿ ತರ ಕಿಚುಗುಟ್ತಾ ಇರ್ತಿನಿ,+
ಪಾರಿವಾಳದ ಹಾಗೆ ಗುಟುರ್ ಗುಟುರ್ ಅಂತಾ ಇರ್ತಿನಿ.+
15 ನಾನು ಏನಂತ ಹೇಳಲಿ?
ಆತನು ಹೇಳಿದ ಹಾಗೆ ನಡೆದಿದ್ದಾನೆ.
ಕಷ್ಟದ ಸಮಯದಲ್ಲಿ ಆತನು ನನ್ನ ಕೈಬಿಡಲಿಲ್ಲ,
ಆ ಕಾರಣದಿಂದ ನಾನು ನನ್ನ ಜೀವಮಾನವೆಲ್ಲಾ ದೀನತೆಯಿಂದ ನಡ್ಕೊಳ್ತೀನಿ.
16 ‘ಯೆಹೋವನೇ, ಈ ವಿಷ್ಯಗಳಿಂದಾನೇ* ಪ್ರತಿಯೊಬ್ಬ ಮಾನವ ಜೀವಿಸ್ತಿದ್ದಾನೆ,
ಆ ವಿಷ್ಯಗಳಲ್ಲೇ ನನ್ನ ಉಸಿರು ಅಡಗಿದೆ.
ನೀನು ನನಗೆ ಮತ್ತೊಮ್ಮೆ ಒಳ್ಳೇ ಆರೋಗ್ಯ ಕೊಟ್ಟು ನನ್ನನ್ನ ಜೀವಂತವಾಗಿ ಇಡ್ತೀಯ.+
17 ನೋಡು! ಶಾಂತಿ ಸಮಾಧಾನದ ಬದಲಿಗೆ ದುಃಖ ಸಂಕಟನೇ ನನ್ನಲ್ಲಿ ತುಂಬಿಹೋಗಿದೆ,
ನಿನಗೆ ನನ್ನ ಮೇಲೆ ಅಕ್ಕರೆ ಇದೆ,
ಹಾಗಾಗಿ ನೀನು ನನ್ನನ್ನ ನಾಶನದ ಗುಂಡಿಯಿಂದ ಕಾಪಾಡಿದ್ದೀಯ.+
ನೀನು ನನ್ನ ಪಾಪಗಳನ್ನ ನಿನ್ನ ಕಣ್ಣ ಮುಂದಿಂದ ತೆಗೆದುಹಾಕಿದ್ದೀಯ.*+
ಯಾರೆಲ್ಲ ಗುಂಡಿಗೆ ಹೋಗ್ತಾರೋ ಅವರು ನಿನ್ನ ನಂಬಿಗಸ್ತಿಕೆಯನ್ನ ನಿರೀಕ್ಷಿಸೋಕಾಗಲ್ಲ.+
19 ಜೀವಿತರು, ಹೌದು ಬದುಕಿರುವವರು ಮಾತ್ರ,
ಇಂದು ನಾನು ನಿನ್ನನ್ನ ಸ್ತುತಿಸ್ತಿರೋ ಹಾಗೆ ಸ್ತುತಿಸೋಕೆ ಸಾಧ್ಯ.
ನಿನ್ನ ನಂಬಿಗಸ್ತಿಕೆಯ ಬಗ್ಗೆ ತಂದೆಯೊಬ್ಬ ತನ್ನ ಮಕ್ಕಳಿಗೆ ಕಲಿಸೋಕೆ ಸಾಧ್ಯ.+
20 ಯೆಹೋವನೇ, ನನ್ನನ್ನ ರಕ್ಷಿಸು,
ಆಗ ನಾನು ಬೇರೆಯವರ ಜೊತೆ ಸೇರಿ ಜೀವಮಾನವೆಲ್ಲ
ಯೆಹೋವನ ಆಲಯದಲ್ಲಿ ತಂತಿವಾದ್ಯಗಳನ್ನ ನುಡಿಸ್ತೀನಿ.’”+
21 ಆಮೇಲೆ ಯೆಶಾಯ “ಜಜ್ಜಿರೋ ಒಣ ಅಂಜೂರಗಳ ಒಂದು ಬಿಲ್ಲೆ ತಗೊಂಡು ಬಂದು ಅದನ್ನ ರಾಜನ ಹುಣ್ಣಿನ ಮೇಲೆ ಸವರಿ. ಆಗ ಅವನು ಚೇತರಿಸ್ಕೊಳ್ತಾನೆ”+ ಅಂದ. 22 ಈ ಮುಂಚೆ ಹಿಜ್ಕೀಯ “ನಾನು ಯೆಹೋವನ ಆಲಯಕ್ಕೆ ಹೋಗ್ತೀನಿ ಅನ್ನೋದಕ್ಕೆ ಏನಾದ್ರೂ ಸೂಚನೆ ಇದ್ಯಾ?”+ ಅಂತ ಕೇಳಿದ್ದ.