ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆರೆಮೀಯ 16
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಯೆರೆಮೀಯ ಮುಖ್ಯಾಂಶಗಳು

      • ಯೆರೆಮೀಯ ಮದ್ವೆ ಆಗಬಾರದು, ದುಃಖಪಡಬಾರದು, ಔತಣಕ್ಕೆ ಹೋಗಬಾರದು (1-9)

      • ಶಿಕ್ಷೆ, ಮತ್ತೆ ಮುಂಚಿನ ಸ್ಥಿತಿಗೆ (10-21)

ಯೆರೆಮೀಯ 16:4

ಮಾರ್ಜಿನಲ್ ರೆಫರೆನ್ಸ್

  • +ಯೆರೆ 15:2
  • +ಕೀರ್ತ 79:2, 3; ಯೆಶಾ 5:25; ಯೆರೆ 7:33; 9:22; 36:30
  • +ಯೆಹೆ 5:12

ಯೆರೆಮೀಯ 16:5

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 24:16, 17
  • +ಧರ್ಮೋ 31:17; ಯೆಶಾ 27:11; 63:10

ಯೆರೆಮೀಯ 16:6

ಪಾದಟಿಪ್ಪಣಿ

  • *

    ಧರ್ಮಭ್ರಷ್ಟ ಇಸ್ರಾಯೇಲಲ್ಲಿ ಶೋಕಾಚರಣೆ ಮಾಡುವಾಗ ಇಂಥ ಬೇರೆ ಧರ್ಮದ ಪದ್ಧತಿಗಳನ್ನ ಮಾಡ್ತಿದ್ರು.

ಯೆರೆಮೀಯ 16:9

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 24:7, 8; ಯೆರೆ 7:34; ಪ್ರಕ 18:23

ಯೆರೆಮೀಯ 16:10

ಮಾರ್ಜಿನಲ್ ರೆಫರೆನ್ಸ್

  • +ಯೆರೆ 5:19

ಯೆರೆಮೀಯ 16:11

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 2:12
  • +ಯೆರೆ 8:1, 2
  • +ದಾನಿ 9:11; ಆಮೋ 2:4

ಯೆರೆಮೀಯ 16:12

ಮಾರ್ಜಿನಲ್ ರೆಫರೆನ್ಸ್

  • +ಯೆರೆ 7:26
  • +ನೆಹೆ 9:29; ಯೆರೆ 6:28

ಯೆರೆಮೀಯ 16:13

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 7:20; ಯೆರೆ 15:14; 17:4
  • +ಧರ್ಮೋ 4:27, 28; 28:36

ಯೆರೆಮೀಯ 16:14

ಮಾರ್ಜಿನಲ್ ರೆಫರೆನ್ಸ್

  • +ವಿಮೋ 20:2; ಯೆರೆ 23:7, 8

ಯೆರೆಮೀಯ 16:15

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 30:1-3; ಯೆರೆ 3:18; 24:6; 30:3; 32:37; ಆಮೋ 9:14

ಯೆರೆಮೀಯ 16:16

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    4/2020, ಪು. 5

    ಕಾವಲಿನಬುರುಜು,

    4/1/2007, ಪು. 9

ಯೆರೆಮೀಯ 16:18

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 40:2
  • +ಯಾಜ 26:30; ಕೀರ್ತ 106:38

ಯೆರೆಮೀಯ 16:19

ಮಾರ್ಜಿನಲ್ ರೆಫರೆನ್ಸ್

  • +ಯೆರೆ 17:17
  • +ಯೆರೆ 10:5, 14

ಯೆರೆಮೀಯ 16:20

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 115:4; ಯೆರೆ 2:11; 1ಕೊರಿಂ 8:4

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಯೆರೆ. 16:4ಯೆರೆ 15:2
ಯೆರೆ. 16:4ಕೀರ್ತ 79:2, 3; ಯೆಶಾ 5:25; ಯೆರೆ 7:33; 9:22; 36:30
ಯೆರೆ. 16:4ಯೆಹೆ 5:12
ಯೆರೆ. 16:5ಯೆಹೆ 24:16, 17
ಯೆರೆ. 16:5ಧರ್ಮೋ 31:17; ಯೆಶಾ 27:11; 63:10
ಯೆರೆ. 16:9ಯೆಶಾ 24:7, 8; ಯೆರೆ 7:34; ಪ್ರಕ 18:23
ಯೆರೆ. 16:10ಯೆರೆ 5:19
ಯೆರೆ. 16:11ನ್ಯಾಯ 2:12
ಯೆರೆ. 16:11ಯೆರೆ 8:1, 2
ಯೆರೆ. 16:11ದಾನಿ 9:11; ಆಮೋ 2:4
ಯೆರೆ. 16:12ಯೆರೆ 7:26
ಯೆರೆ. 16:12ನೆಹೆ 9:29; ಯೆರೆ 6:28
ಯೆರೆ. 16:132ಪೂರ್ವ 7:20; ಯೆರೆ 15:14; 17:4
ಯೆರೆ. 16:13ಧರ್ಮೋ 4:27, 28; 28:36
ಯೆರೆ. 16:14ವಿಮೋ 20:2; ಯೆರೆ 23:7, 8
ಯೆರೆ. 16:15ಧರ್ಮೋ 30:1-3; ಯೆರೆ 3:18; 24:6; 30:3; 32:37; ಆಮೋ 9:14
ಯೆರೆ. 16:18ಯೆಶಾ 40:2
ಯೆರೆ. 16:18ಯಾಜ 26:30; ಕೀರ್ತ 106:38
ಯೆರೆ. 16:19ಯೆರೆ 17:17
ಯೆರೆ. 16:19ಯೆರೆ 10:5, 14
ಯೆರೆ. 16:20ಕೀರ್ತ 115:4; ಯೆರೆ 2:11; 1ಕೊರಿಂ 8:4
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಯೆರೆಮೀಯ 16:1-21

ಯೆರೆಮೀಯ

16 ಯೆಹೋವ ಮತ್ತೆ ನನಗೆ ಹೀಗೆ ಹೇಳಿದನು 2 “ನೀನು ಮದ್ವೆ ಆಗಬಾರದು, ನಿನಗೆ ಈ ಜಾಗದಲ್ಲಿ ಮಕ್ಕಳು ಇರಬಾರದು. 3 ಈ ದೇಶದಲ್ಲಿ ಹುಟ್ಟಿದ ಮಕ್ಕಳ ಬಗ್ಗೆ, ಅವ್ರನ್ನ ಹೆತ್ತ ತಂದೆತಾಯಂದಿರ ಬಗ್ಗೆ ಯೆಹೋವ ಹೇಳೋದು ಏನಂದ್ರೆ 4 ‘ಜೀವ ತೆಗಿಯೋ ಕಾಯಿಲೆಗಳು ಬಂದು ಅವರು ಸಾಯ್ತಾರೆ.+ ಅವ್ರಿಗಾಗಿ ಯಾರೂ ಎದೆ ಬಡ್ಕೊಳ್ಳಲ್ಲ, ಅವ್ರನ್ನ ಯಾರೂ ಸಮಾಧಿ ಮಾಡಲ್ಲ. ಅವ್ರ ಹೆಣಗಳು ಮಣ್ಣಿಗೆ ಗೊಬ್ಬರ ಆಗುತ್ತೆ.+ ಅವರು ಕತ್ತಿ, ಬರಗಾಲಕ್ಕೆ ತುತ್ತಾಗಿ ನಾಶ ಆಗ್ತಾರೆ.+ ಅವ್ರ ಶವಗಳನ್ನ ಪ್ರಾಣಿಪಕ್ಷಿಗಳು ತಿಂದುಬಿಡುತ್ತೆ.’

 5 ಯೆಹೋವ ಹೇಳೋದು ಏನಂದ್ರೆ

‘ದುಃಖದಲ್ಲಿ ಇರೋರಿಗೆ ಊಟ ಕೊಡೋ ಮನೆಗೆ ನೀನು ಹೋಗಬೇಡ.

ಗೋಳಾಡೋಕೆ ಸಮಾಧಾನ ಮಾಡೋಕೆ ಅಲ್ಲಿಗೆ ಹೋಗಬೇಡ.’+

ಯೆಹೋವ ಹೀಗೆ ಹೇಳ್ತಾನೆ

‘ಯಾಕಂದ್ರೆ ಈ ಜನ್ರಿಗೆ ನಾನು ಇನ್ಮುಂದೆ ಶಾಂತಿ ಕೊಡಲ್ಲ,

ಶಾಶ್ವತ ಪ್ರೀತಿ, ಕರುಣೆ ತೋರಿಸಲ್ಲ.+

 6 ಈ ದೇಶದಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳಿಂದ ಚಿಕ್ಕವರ ತನಕ ಎಲ್ರೂ ಸಾಯ್ತಾರೆ.

ಅವ್ರನ್ನ ಯಾರೂ ಸಮಾಧಿ ಮಾಡಲ್ಲ,

ಯಾರೂ ಅವ್ರಿಗಾಗಿ ಅಳಲ್ಲ,

ಅವರು ಸತ್ರು ಅಂತ ಯಾರೂ ಮೈಮೇಲೆ ಗಾಯಮಾಡ್ಕೊಳ್ಳಲ್ಲ, ತಲೆ ಬೋಳಿಸ್ಕೊಳ್ಳಲ್ಲ.*

 7 ಸತ್ತವರಿಗಾಗಿ ಎದೆ ಬಡ್ಕೊಳ್ಳುವವರನ್ನ ಸಮಾಧಾನ ಮಾಡೋಕೆ ಯಾರೂ ಊಟ ಕೊಡಲ್ಲ,

ಅಪ್ಪಅಮ್ಮನನ್ನ ಕಳ್ಕೊಂಡವರನ್ನ ಸಮಾಧಾನ ಮಾಡೋಕೆ ಯಾರೂ ದ್ರಾಕ್ಷಾಮದ್ಯ ಕೊಡಲ್ಲ.

 8 ಔತಣದ ಮನೆಗೆ ಹೋಗಬೇಡ,

ಅವರ ಜೊತೆ ತಿಂದು ಕುಡಿಬೇಡ.’

9 ಸೈನ್ಯಗಳ ದೇವರಾದ ಇಸ್ರಾಯೇಲಿನ ದೇವರಾದ ಯೆಹೋವ ಹೇಳೋದು ಏನಂದ್ರೆ ‘ನಿಮ್ಮ ಜೀವಮಾನದಲ್ಲೇ, ನಿಮ್ಮ ಕಣ್ಮುಂದೆನೇ ಈ ಜಾಗದಲ್ಲಿ ಸಂತೋಷ ಸಂಭ್ರಮದ ಸದ್ದು, ಮದುಮಗ ಮದುಮಗಳ ಸ್ವರ ನಿಲ್ಲಿಸಿಬಿಡ್ತೀನಿ.’+

10 ನೀನು ಈ ಮಾತುಗಳನ್ನೆಲ್ಲ ಜನ್ರಿಗೆ ಹೇಳುವಾಗ ಅವರು ನಿನಗೆ ‘ಯೆಹೋವ ಇಷ್ಟು ದೊಡ್ಡ ಕಷ್ಟಗಳನ್ನೆಲ್ಲ ನಮ್ಮ ಮೇಲೆ ತರ್ತಾನೆ ಅಂತ ಯಾಕೆ ಹೇಳಿದ್ದಾನೆ? ನಮ್ಮ ದೇವರಾದ ಯೆಹೋವನ ವಿರುದ್ಧ ನಾವು ಯಾವ ತಪ್ಪು ಮಾಡಿದ್ದೀವಿ? ಅಂಥದ್ದೇನು ಪಾಪ ಮಾಡಿದ್ದೀವಿ?’ ಅಂತ ಕೇಳ್ತಾರೆ.+ 11 ಆಗ ನೀನು ಅವ್ರಿಗೆ ಏನು ಹೇಳಬೇಕಂದ್ರೆ ‘ಯೆಹೋವ ಹೀಗೆ ಹೇಳ್ತಾನೆ “ಯಾಕಂದ್ರೆ ನಿಮ್ಮ ಪೂರ್ವಜರು ನನ್ನನ್ನ ಬಿಟ್ಟು+ ಬೇರೆ ದೇವರುಗಳನ್ನ ಆರಾಧಿಸ್ತಾ, ಅವುಗಳ ಸೇವೆ ಮಾಡ್ತಾ, ಅವುಗಳಿಗೆ ಅಡ್ಡಬೀಳ್ತಾರೆ.+ ಅವರು ನನ್ನಿಂದ ದೂರ ಆದ್ರು, ನನ್ನ ನಿಯಮಗಳನ್ನ ಪಾಲಿಸಲಿಲ್ಲ.+ 12 ಅವ್ರಿಗಿಂತ ನೀವು ಕಡೆ.+ ನಿಮ್ಮಲ್ಲಿ ಪ್ರತಿಯೊಬ್ಬ ನನ್ನ ಮಾತನ್ನ ಕೇಳ್ದೆ ಹಠಮಾರಿಯಾಗಿ ತನ್ನ ಕೆಟ್ಟಹೃದಯ ಹೇಳಿದ ಹಾಗೆ ನಡಿತಾ ಇದ್ದಾನೆ.+ 13 ಹಾಗಾಗಿ ನಿಮಗೆ, ನಿಮ್ಮ ಪೂರ್ವಜರಿಗೆ ಗೊತ್ತಿಲ್ಲದ ದೇಶಕ್ಕೆ ನಿಮ್ಮನ್ನ ಈ ದೇಶದಿಂದ ಬಿಸಾಡಿಬಿಡ್ತೀನಿ.+ ಅಲ್ಲಿ ನೀವು ಹಗಲೂರಾತ್ರಿ ಬೇರೆ ದೇವರುಗಳ ಸೇವೆ ಮಾಡಬೇಕಾಗುತ್ತೆ.+ ನಾನು ಸ್ವಲ್ಪನೂ ದಯೆ ತೋರಿಸಲ್ಲ.”’

14 ಯೆಹೋವ ಹೇಳೋದು ಏನಂದ್ರೆ ‘ಆಗ ಅವರು “ಇಸ್ರಾಯೇಲ್ಯರನ್ನ ಈಜಿಪ್ಟ್‌ ದೇಶದಿಂದ ಕರ್ಕೊಂಡು ಬಂದ ಜೀವ ಇರೋ ದೇವರಾದ ಯೆಹೋವನಾಣೆ!”+ ಅಂತ ಹೇಳಲ್ಲ. 15 ಅದ್ರ ಬದಲು “ಇಸ್ರಾಯೇಲ್ಯರನ್ನ ಉತ್ತರ ದೇಶದಿಂದ, ತಾನು ಚದರಿಸಿಬಿಟ್ಟಿದ್ದ ಎಲ್ಲ ದೇಶಗಳಿಂದ ಕರ್ಕೊಂಡು ಬಂದ ಜೀವ ಇರೋ ದೇವರಾದ ಯೆಹೋವನಾಣೆ” ಅಂತ ಹೇಳೋ ಕಾಲ ಬರುತ್ತೆ. ಅಷ್ಟೇ ಅಲ್ಲ ನಾನು ಅವ್ರ ಪೂರ್ವಜರಿಗೆ ಕೊಟ್ಟ ದೇಶಕ್ಕೆ ಅವ್ರನ್ನ ಮತ್ತೆ ಕರ್ಕೊಂಡು ಬರ್ತಿನಿ.’+

16 ಯೆಹೋವ ಹೇಳೋದು ಏನಂದ್ರೆ ‘ನಾನು ತುಂಬ ಮೀನುಗಾರರನ್ನ ಕರಿಸ್ತೀನಿ,

ಆ ಮೀನುಗಾರರು ಅವ್ರನ್ನ ಹುಡುಕಿ ಹಿಡಿತಾರೆ.

ಆಮೇಲೆ ತುಂಬ ಬೇಟೆಗಾರರನ್ನ ಕರಿಸ್ತೀನಿ.

ಆ ಬೇಟೆಗಾರರು ಅವ್ರನ್ನ ಪ್ರತಿಯೊಂದು ಪರ್ವತದ ಮೇಲೂ ಪ್ರತಿಯೊಂದು ಬೆಟ್ಟದ ಮೇಲೂ

ಕಡಿದಾದ ಬಂಡೆಗಳ ಸಂದುಗಳಲ್ಲೂ ಬೇಟೆ ಆಡ್ತಾರೆ.

17 ಅವರು ಮಾಡೋ ಪ್ರತಿಯೊಂದನ್ನ ನೋಡ್ತಾ ಇದ್ದೀನಿ,

ನನ್ನ ಕಣ್ಣಿಂದ ಯಾವುದನ್ನೂ ಬಚ್ಚಿಡೋಕೆ ಆಗಲ್ಲ.

ಅವ್ರಿಗೆ ತಮ್ಮ ತಪ್ಪುಗಳನ್ನ ನನ್ನಿಂದ ಮುಚ್ಚಿಡೋಕೆ ಆಗಲ್ಲ.

18 ಅವರು ಮಾಡಿದ ತಪ್ಪುಗಳಿಗೆ, ಪಾಪಗಳಿಗೆ ನಾನು ಮೊದಲು ಅವ್ರಿಗೆ ಪೂರ್ತಿ ಸೇಡು ತೀರಿಸ್ತೀನಿ.+

ಯಾಕಂದ್ರೆ ಅವರು ಜೀವ ಇಲ್ಲದ ಅಸಹ್ಯ ಮೂರ್ತಿಗಳನ್ನ ಆರಾಧಿಸಿ ನನ್ನ ದೇಶವನ್ನ ಅಪವಿತ್ರ ಮಾಡಿದ್ದಾರೆ.

ನನ್ನ ಆಸ್ತಿ ಆಗಿರೋ ದೇಶದಲ್ಲಿ ತಮ್ಮ ಅಸಹ್ಯ ವಸ್ತುಗಳನ್ನ ತುಂಬಿಸಿದ್ದಾರೆ.’”+

19 ಯೆಹೋವನೇ, ನನ್ನ ಬಲವೇ, ನನ್ನ ಭದ್ರವಾದ ಕೋಟೆಯೇ,

ಕಷ್ಟಕಾಲದಲ್ಲಿ ನಾನು ಓಡಿ ಹೋಗೋ ಆಶ್ರಯತಾಣವೇ,+

ಭೂಮಿಯ ಮೂಲೆಮೂಲೆಗಳಿಂದ ಜನ್ರು ನಿನ್ನ ಹತ್ರ ಬರ್ತಾರೆ,

ಅಷ್ಟೇ ಅಲ್ಲ ಅವರು “ನಮ್ಮ ಪೂರ್ವಜರು ಸುಳ್ಳು ದೇವರುಗಳನ್ನ ಆರಾಧಿಸೋ ಸಂಪ್ರದಾಯವನ್ನ ಅನುಸರಿಸ್ತಾ ಬಂದಿದ್ದಾರೆ,

ಅದ್ರಿಂದ ಏನೂ ಪ್ರಯೋಜನ ಇಲ್ಲ” ಅಂತಾರೆ.+

20 ಒಬ್ಬ ಮನುಷ್ಯ ತನಗಾಗಿ ದೇವರುಗಳನ್ನ ಮಾಡ್ಕೊಳ್ಳೋಕೆ ಹೇಗಾಗುತ್ತೆ?

ಅವನು ಮಾಡಿದ್ದು ಯಾವ್ದೂ ನಿಜ ದೇವರುಗಳಲ್ಲ.+

21 “ಹಾಗಾಗಿ ನನಗೆ ಎಷ್ಟು ಶಕ್ತಿಬಲ ಇದೆ ಅಂತ ಅವ್ರಿಗೆ ತೋರಿಸ್ತೀನಿ,

ಅದನ್ನ ಅವ್ರಿಗೆ ಅರ್ಥ ಮಾಡಿಸ್ತೀನಿ,

ನನ್ನ ಹೆಸ್ರು ಯೆಹೋವ ಅಂತ ಆಗ ಅವ್ರಿಗೆ ಗೊತ್ತಾಗುತ್ತೆ.”

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ