ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಅರಣ್ಯಕಾಂಡ 29
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಅರಣ್ಯಕಾಂಡ ಮುಖ್ಯಾಂಶಗಳು

      • ಬೇರೆ ಬೇರೆ ಅರ್ಪಣೆಗಳನ್ನ ಕೊಡೋ ವಿಧ (1-40)

        • ತುತ್ತೂರಿ ಊದೋ ದಿನ (1-6)

        • ಪ್ರಾಯಶ್ಚಿತ್ತ ದಿನ (7-11)

        • ಚಪ್ಪರಗಳ ಹಬ್ಬ (12-38)

ಅರಣ್ಯಕಾಂಡ 29:1

ಮಾರ್ಜಿನಲ್ ರೆಫರೆನ್ಸ್

  • +ಯಾಜ 23:24, 25
  • +ಅರ 10:2; ಕೀರ್ತ 81:3

ಅರಣ್ಯಕಾಂಡ 29:2

ಪಾದಟಿಪ್ಪಣಿ

  • *

    ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”

ಅರಣ್ಯಕಾಂಡ 29:6

ಪಾದಟಿಪ್ಪಣಿ

  • *

    ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”

ಮಾರ್ಜಿನಲ್ ರೆಫರೆನ್ಸ್

  • +ಅರ 28:11-13
  • +ಅರ 28:3, 5
  • +ಅರ 28:6, 7

ಅರಣ್ಯಕಾಂಡ 29:7

ಪಾದಟಿಪ್ಪಣಿ

  • *

    ಇದು ಸಾಮಾನ್ಯವಾಗಿ, ಉಪವಾಸ ಇರೋದನ್ನ ಬೇರೆ ಅನೇಕ ವಿಷ್ಯಗಳನ್ನ ಮಾಡದೇ ಇರೋದನ್ನ ಸೂಚಿಸುತ್ತೆ.

ಮಾರ್ಜಿನಲ್ ರೆಫರೆನ್ಸ್

  • +ಯಾಜ 16:29
  • +ಯಾಜ 23:27-31

ಅರಣ್ಯಕಾಂಡ 29:8

ಪಾದಟಿಪ್ಪಣಿ

  • *

    ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”

ಮಾರ್ಜಿನಲ್ ರೆಫರೆನ್ಸ್

  • +ಯಾಜ 1:3; 22:22; ಧರ್ಮೋ 15:21; 17:1

ಅರಣ್ಯಕಾಂಡ 29:11

ಮಾರ್ಜಿನಲ್ ರೆಫರೆನ್ಸ್

  • +ಯಾಜ 16:3

ಅರಣ್ಯಕಾಂಡ 29:12

ಮಾರ್ಜಿನಲ್ ರೆಫರೆನ್ಸ್

  • +ವಿಮೋ 23:16; ಯಾಜ 23:34-36; ಧರ್ಮೋ 16:13-15; ನೆಹೆ 8:14-18

ಅರಣ್ಯಕಾಂಡ 29:13

ಪಾದಟಿಪ್ಪಣಿ

  • *

    ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”

ಮಾರ್ಜಿನಲ್ ರೆಫರೆನ್ಸ್

  • +ಎಜ್ರ 3:4
  • +ಯಾಜ 22:22; ಧರ್ಮೋ 17:1

ಅರಣ್ಯಕಾಂಡ 29:16

ಮಾರ್ಜಿನಲ್ ರೆಫರೆನ್ಸ್

  • +ಅರ 28:3-8

ಅರಣ್ಯಕಾಂಡ 29:17

ಮಾರ್ಜಿನಲ್ ರೆಫರೆನ್ಸ್

  • +ಯಾಜ 22:22; ಧರ್ಮೋ 17:1

ಅರಣ್ಯಕಾಂಡ 29:19

ಮಾರ್ಜಿನಲ್ ರೆಫರೆನ್ಸ್

  • +ಅರ 28:3-8

ಅರಣ್ಯಕಾಂಡ 29:20

ಮಾರ್ಜಿನಲ್ ರೆಫರೆನ್ಸ್

  • +ಯಾಜ 22:22; ಧರ್ಮೋ 17:1

ಅರಣ್ಯಕಾಂಡ 29:22

ಮಾರ್ಜಿನಲ್ ರೆಫರೆನ್ಸ್

  • +ಅರ 28:3-8

ಅರಣ್ಯಕಾಂಡ 29:23

ಮಾರ್ಜಿನಲ್ ರೆಫರೆನ್ಸ್

  • +ಯಾಜ 22:22; ಧರ್ಮೋ 17:1

ಅರಣ್ಯಕಾಂಡ 29:25

ಮಾರ್ಜಿನಲ್ ರೆಫರೆನ್ಸ್

  • +ಅರ 28:3-8

ಅರಣ್ಯಕಾಂಡ 29:26

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 15:21; 17:1

ಅರಣ್ಯಕಾಂಡ 29:28

ಮಾರ್ಜಿನಲ್ ರೆಫರೆನ್ಸ್

  • +ಅರ 28:3-8

ಅರಣ್ಯಕಾಂಡ 29:29

ಮಾರ್ಜಿನಲ್ ರೆಫರೆನ್ಸ್

  • +ಯಾಜ 22:22; ಧರ್ಮೋ 17:1

ಅರಣ್ಯಕಾಂಡ 29:31

ಮಾರ್ಜಿನಲ್ ರೆಫರೆನ್ಸ್

  • +ಅರ 28:3-8

ಅರಣ್ಯಕಾಂಡ 29:32

ಮಾರ್ಜಿನಲ್ ರೆಫರೆನ್ಸ್

  • +ಯಾಜ 22:22; ಧರ್ಮೋ 17:1

ಅರಣ್ಯಕಾಂಡ 29:34

ಮಾರ್ಜಿನಲ್ ರೆಫರೆನ್ಸ್

  • +ಅರ 28:3-8

ಅರಣ್ಯಕಾಂಡ 29:35

ಮಾರ್ಜಿನಲ್ ರೆಫರೆನ್ಸ್

  • +ಯಾಜ 23:36, 39

ಅರಣ್ಯಕಾಂಡ 29:36

ಪಾದಟಿಪ್ಪಣಿ

  • *

    ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”

ಮಾರ್ಜಿನಲ್ ರೆಫರೆನ್ಸ್

  • +ಯಾಜ 22:22; ಧರ್ಮೋ 17:1

ಅರಣ್ಯಕಾಂಡ 29:38

ಮಾರ್ಜಿನಲ್ ರೆಫರೆನ್ಸ್

  • +ಅರ 28:3-8

ಅರಣ್ಯಕಾಂಡ 29:39

ಮಾರ್ಜಿನಲ್ ರೆಫರೆನ್ಸ್

  • +ಯಾಜ 23:2; ಧರ್ಮೋ 16:16
  • +ಧರ್ಮೋ 12:5, 6
  • +ಯಾಜ 7:16; 22:21
  • +ಯಾಜ 1:3
  • +ಯಾಜ 2:1
  • +ಅರ 15:5
  • +ಯಾಜ 3:1

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಅರ. 29:1ಯಾಜ 23:24, 25
ಅರ. 29:1ಅರ 10:2; ಕೀರ್ತ 81:3
ಅರ. 29:6ಅರ 28:11-13
ಅರ. 29:6ಅರ 28:3, 5
ಅರ. 29:6ಅರ 28:6, 7
ಅರ. 29:7ಯಾಜ 16:29
ಅರ. 29:7ಯಾಜ 23:27-31
ಅರ. 29:8ಯಾಜ 1:3; 22:22; ಧರ್ಮೋ 15:21; 17:1
ಅರ. 29:11ಯಾಜ 16:3
ಅರ. 29:12ವಿಮೋ 23:16; ಯಾಜ 23:34-36; ಧರ್ಮೋ 16:13-15; ನೆಹೆ 8:14-18
ಅರ. 29:13ಎಜ್ರ 3:4
ಅರ. 29:13ಯಾಜ 22:22; ಧರ್ಮೋ 17:1
ಅರ. 29:16ಅರ 28:3-8
ಅರ. 29:17ಯಾಜ 22:22; ಧರ್ಮೋ 17:1
ಅರ. 29:19ಅರ 28:3-8
ಅರ. 29:20ಯಾಜ 22:22; ಧರ್ಮೋ 17:1
ಅರ. 29:22ಅರ 28:3-8
ಅರ. 29:23ಯಾಜ 22:22; ಧರ್ಮೋ 17:1
ಅರ. 29:25ಅರ 28:3-8
ಅರ. 29:26ಧರ್ಮೋ 15:21; 17:1
ಅರ. 29:28ಅರ 28:3-8
ಅರ. 29:29ಯಾಜ 22:22; ಧರ್ಮೋ 17:1
ಅರ. 29:31ಅರ 28:3-8
ಅರ. 29:32ಯಾಜ 22:22; ಧರ್ಮೋ 17:1
ಅರ. 29:34ಅರ 28:3-8
ಅರ. 29:35ಯಾಜ 23:36, 39
ಅರ. 29:36ಯಾಜ 22:22; ಧರ್ಮೋ 17:1
ಅರ. 29:38ಅರ 28:3-8
ಅರ. 29:39ಯಾಜ 23:2; ಧರ್ಮೋ 16:16
ಅರ. 29:39ಧರ್ಮೋ 12:5, 6
ಅರ. 29:39ಯಾಜ 7:16; 22:21
ಅರ. 29:39ಯಾಜ 1:3
ಅರ. 29:39ಯಾಜ 2:1
ಅರ. 29:39ಅರ 15:5
ಅರ. 29:39ಯಾಜ 3:1
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
  • 35
  • 36
  • 37
  • 38
  • 39
  • 40
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಅರಣ್ಯಕಾಂಡ 29:1-40

ಅರಣ್ಯಕಾಂಡ

29 “‘ಏಳನೇ ತಿಂಗಳ ಮೊದಲನೇ ದಿನ ನೀವು ದೇವರ ಆರಾಧನೆಗೆ ಸೇರಿಬರಬೇಕು. ಆ ದಿನ ನೀವು ಕಷ್ಟದ ಕೆಲಸ ಮಾಡಬಾರದು.+ ಅವತ್ತು ತುತ್ತೂರಿ ಊದಬೇಕು.+ 2 ಒಂದು ಹೋರಿ, ಒಂದು ಟಗರು, ಒಂದು ವರ್ಷದ ಏಳು ಗಂಡು ಕುರಿಮರಿಗಳನ್ನ ಸರ್ವಾಂಗಹೋಮ ಬಲಿಯಾಗಿ ಅರ್ಪಿಸಬೇಕು. ಈ ಪ್ರಾಣಿಗಳಲ್ಲಿ ಯಾವ ದೋಷಾನೂ ಇರಬಾರದು. ಆ ಬಲಿಯ ಸುವಾಸನೆಯಿಂದ ಯೆಹೋವನಿಗೆ ಖುಷಿ* ಆಗುತ್ತೆ. 3 ಜೊತೆಗೆ ಧಾನ್ಯ ಅರ್ಪಣೆಗಳನ್ನ ಸಹ ಕೊಡಬೇಕು. ಹೋರಿ ಜೊತೆ ಒಂದು ಏಫಾ ಅಳತೆಯ ಹತ್ತನೇ ಮೂರು ಭಾಗದಷ್ಟು ನುಣ್ಣಗಿನ ಹಿಟ್ಟನ್ನ, ಟಗರಿನ ಜೊತೆ ಹತ್ತನೇ ಎರಡು ಭಾಗದಷ್ಟು ನುಣ್ಣಗಿನ ಹಿಟ್ಟನ್ನ, 4 ಏಳು ಗಂಡು ಕುರಿಮರಿಗಳಲ್ಲಿ ಒಂದೊಂದ್ರ ಜೊತೆನೂ ಹತ್ತನೇ ಒಂದು ಭಾಗದಷ್ಟು ನುಣ್ಣಗಿನ ಹಿಟ್ಟನ್ನ ಎಣ್ಣೆ ಹಾಕಿ ಕೊಡಬೇಕು. 5 ಅಷ್ಟೇ ಅಲ್ಲ ನಿಮಗಾಗಿ ಪ್ರಾಯಶ್ಚಿತ್ತ ಮಾಡೋಕೆ ಒಂದು ಗಂಡು ಆಡುಮರಿಯನ್ನ ಪಾಪಪರಿಹಾರಕ ಬಲಿಯಾಗಿ ಅರ್ಪಿಸಬೇಕು. 6 ನೀವು ಪ್ರತಿ ತಿಂಗಳು ಅರ್ಪಿಸೋ ಸರ್ವಾಂಗಹೋಮ ಬಲಿ, ಧಾನ್ಯ ಅರ್ಪಣೆ,+ ಪಾನ ಅರ್ಪಣೆ, ಪ್ರತಿ ದಿನ ಅರ್ಪಿಸೋ ಸರ್ವಾಂಗಹೋಮ ಬಲಿ, ಧಾನ್ಯ ಅರ್ಪಣೆ,+ ಪಾನ ಅರ್ಪಣೆ ಜೊತೆ ಈ ಅರ್ಪಣೆಗಳನ್ನ ಕೊಡಬೇಕು.+ ಈ ಸರ್ವಾಂಗಹೋಮ ಬಲಿಗಳನ್ನ ಯಾವಾಗ್ಲೂ ಅರ್ಪಿಸಬೇಕಾದ ಕ್ರಮದಲ್ಲೇ ಅರ್ಪಿಸಬೇಕು. ಬೆಂಕಿಯಲ್ಲಿ ಅರ್ಪಿಸೋ ಈ ಬಲಿಯ ಸುವಾಸನೆ ಯೆಹೋವನಿಗೆ ಖುಷಿ* ತರುತ್ತೆ.

7 ಏಳನೇ ತಿಂಗಳ ಹತ್ತನೇ ದಿನ ನೀವು ದೇವರ ಆರಾಧನೆಗೆ ಸೇರಿಬರಬೇಕು.+ ಆ ದಿನ ನಿಮ್ಮ ಪಾಪಗಳಿಗಾಗಿ ದುಃಖ ಪಡಬೇಕು.* ಅವತ್ತು ಯಾವ ಕೆಲಸನೂ ಮಾಡಬಾರದು.+ 8 ಒಂದು ಹೋರಿ, ಒಂದು ಟಗರು, ಒಂದು ವರ್ಷದ ಏಳು ಗಂಡು ಕುರಿಮರಿಗಳನ್ನ ಸರ್ವಾಂಗಹೋಮ ಬಲಿಯಾಗಿ ಅರ್ಪಿಸಬೇಕು. ಈ ಪ್ರಾಣಿಗಳಲ್ಲಿ ಯಾವ ದೋಷಾನೂ ಇರಬಾರದು.+ ಆ ಬಲಿಯ ಸುವಾಸನೆ ಯೆಹೋವನಿಗೆ ಖುಷಿ* ತರುತ್ತೆ. 9 ಈ ಪ್ರಾಣಿಗಳ ಜೊತೆ ಧಾನ್ಯ ಅರ್ಪಣೆಗಳನ್ನೂ ಕೊಡಬೇಕು. ಹೋರಿ ಜೊತೆ ಒಂದು ಏಫಾ ಅಳತೆಯ ಹತ್ತನೇ ಮೂರು ಭಾಗದಷ್ಟು ನುಣ್ಣಗಿನ ಹಿಟ್ಟನ್ನ, ಟಗರಿನ ಜೊತೆ ಹತ್ತನೇ ಎರಡು ಭಾಗದಷ್ಟು ನುಣ್ಣಗಿನ ಹಿಟ್ಟನ್ನ, 10 ಏಳು ಗಂಡು ಕುರಿಮರಿಗಳಲ್ಲಿ ಒಂದೊಂದರ ಜೊತೆನೂ ಹತ್ತನೇ ಒಂದು ಭಾಗದಷ್ಟು ನುಣ್ಣಗಿನ ಹಿಟ್ಟನ್ನ ಎಣ್ಣೆ ಹಾಕಿ ಕೊಡಬೇಕು. 11 ಪ್ರಾಯಶ್ಚಿತ್ತ ಮಾಡೋಕೆ ಅರ್ಪಿಸೋ ಪಾಪಪರಿಹಾರಕ ಬಲಿ,+ ಪ್ರತಿ ದಿನ ಅರ್ಪಿಸೋ ಸರ್ವಾಂಗಹೋಮ ಬಲಿ, ಧಾನ್ಯ ಅರ್ಪಣೆ, ಪಾನ ಅರ್ಪಣೆಗಳ ಜೊತೆ ಒಂದು ಆಡುಮರಿಯನ್ನ ಪಾಪಪರಿಹಾರಕ ಬಲಿಯಾಗಿ ಅರ್ಪಿಸಬೇಕು.

12 ಏಳನೇ ತಿಂಗಳ 15ನೇ ದಿನ ನೀವು ದೇವರ ಆರಾಧನೆಗೆ ಸೇರಿಬರಬೇಕು. ಆ ದಿನ ನೀವು ಕಷ್ಟದ ಕೆಲಸ ಮಾಡಬಾರದು. ಅವತ್ತಿಂದ ಏಳು ದಿನ ನೀವು ಯೆಹೋವನ ಘನತೆಗಾಗಿ ಹಬ್ಬ ಆಚರಿಸಬೇಕು.+ 13 ಸರ್ವಾಂಗಹೋಮ ಬಲಿಯಾಗಿ 13 ಹೋರಿ, 2 ಟಗರು, ಒಂದು ವರ್ಷದ 14 ಗಂಡು ಕುರಿಮರಿಗಳನ್ನ ಅರ್ಪಿಸಬೇಕು.+ ಈ ಪ್ರಾಣಿಗಳಲ್ಲಿ ಯಾವ ದೋಷಾನೂ ಇರಬಾರದು.+ ಆ ಬಲಿಯ ಸುವಾಸನೆ ಯೆಹೋವನಿಗೆ ಖುಷಿ* ತರುತ್ತೆ. 14 ಈ ಪ್ರಾಣಿಗಳ ಜೊತೆ ಧಾನ್ಯ ಅರ್ಪಣೆ ಸಹ ಕೊಡಬೇಕು. 13 ಹೋರಿಗಳನ್ನ ಕೊಡುವಾಗ ಪ್ರತಿಯೊಂದ್ರ ಜೊತೆ ಒಂದು ಏಫಾ ಅಳತೆಯ ಹತ್ತನೇ ಮೂರು ಭಾಗದಷ್ಟು ನುಣ್ಣಗಿನ ಹಿಟ್ಟನ್ನ, 2 ಟಗರುಗಳಲ್ಲಿ ಒಂದೊಂದ್ರ ಜೊತೆ ಹತ್ತನೇ ಎರಡು ಭಾಗದಷ್ಟು ನುಣ್ಣಗಿನ ಹಿಟ್ಟನ್ನ, 15 ಕುರಿಮರಿಗಳನ್ನ ಕೊಡುವಾಗ ಒಂದೊಂದ್ರ ಜೊತೆನೂ ಹತ್ತನೇ ಒಂದು ಭಾಗದಷ್ಟು ನುಣ್ಣಗಿನ ಹಿಟ್ಟನ್ನ ಎಣ್ಣೆ ಹಾಕಿ ಕೊಡಬೇಕು. 16 ಪ್ರತಿ ದಿನ ಅರ್ಪಿಸೋ ಸರ್ವಾಂಗಹೋಮ ಬಲಿ, ಧಾನ್ಯ ಅರ್ಪಣೆ, ಪಾನ ಅರ್ಪಣೆ ಜೊತೆ ಒಂದು ಆಡುಮರಿಯನ್ನ ಪಾಪಪರಿಹಾರಕ ಬಲಿಯಾಗಿ ಅರ್ಪಿಸಬೇಕು.+

17 ಹಬ್ಬದ ಎರಡನೇ ದಿನ 12 ಹೋರಿ, 2 ಟಗರು, ಒಂದು ವರ್ಷದ 14 ಗಂಡು ಕುರಿಮರಿಗಳನ್ನ ಅರ್ಪಿಸಬೇಕು. ಈ ಪ್ರಾಣಿಗಳಲ್ಲಿ ಯಾವ ದೋಷಾನೂ ಇರಬಾರದು.+ 18 ಯಾವಾಗ್ಲೂ ಕೊಡೋ ತರ ಪ್ರತಿಯೊಂದು ಹೋರಿ, ಪ್ರತಿಯೊಂದು ಟಗರು, ಪ್ರತಿಯೊಂದು ಗಂಡು ಕುರಿಮರಿ ಜೊತೆ ಅರ್ಪಿಸಬೇಕಾದ ಧಾನ್ಯ ಅರ್ಪಣೆ, ಪಾನ ಅರ್ಪಣೆ ಕೊಡಬೇಕು. 19 ಪ್ರತಿ ದಿನ ಅರ್ಪಿಸೋ ಸರ್ವಾಂಗಹೋಮ ಬಲಿ, ಧಾನ್ಯ ಅರ್ಪಣೆ, ಪಾನ ಅರ್ಪಣೆ ಜೊತೆ ಒಂದು ಆಡುಮರಿಯನ್ನ ಪಾಪಪರಿಹಾರಕ ಬಲಿಯಾಗಿ ಅರ್ಪಿಸಬೇಕು.+

20 ಹಬ್ಬದ ಮೂರನೇ ದಿನ 11 ಹೋರಿ, 2 ಟಗರು, ಒಂದು ವರ್ಷದ 14 ಗಂಡು ಕುರಿಮರಿಗಳನ್ನ ಅರ್ಪಿಸಬೇಕು. ಈ ಪ್ರಾಣಿಗಳಲ್ಲಿ ಯಾವ ದೋಷಾನೂ ಇರಬಾರದು.+ 21 ಯಾವಾಗ್ಲೂ ಕೊಡೋ ತರ ಪ್ರತಿಯೊಂದು ಹೋರಿ, ಪ್ರತಿಯೊಂದು ಟಗರು, ಪ್ರತಿಯೊಂದು ಗಂಡು ಕುರಿಮರಿ ಜೊತೆ ಅರ್ಪಿಸಬೇಕಾದ ಧಾನ್ಯ ಅರ್ಪಣೆ, ಪಾನ ಅರ್ಪಣೆ ಕೊಡಬೇಕು. 22 ಪ್ರತಿ ದಿನ ಅರ್ಪಿಸೋ ಸರ್ವಾಂಗಹೋಮ ಬಲಿ, ಧಾನ್ಯ ಅರ್ಪಣೆ, ಪಾನ ಅರ್ಪಣೆ ಜೊತೆ ಒಂದು ಆಡನ್ನ ಪಾಪಪರಿಹಾರಕ ಬಲಿಯಾಗಿ ಅರ್ಪಿಸಬೇಕು.+

23 ಹಬ್ಬದ ನಾಲ್ಕನೇ ದಿನ 10 ಹೋರಿ, 2 ಟಗರು, ಒಂದು ವರ್ಷದ 14 ಗಂಡು ಕುರಿಮರಿಗಳನ್ನ ಅರ್ಪಿಸಬೇಕು. ಈ ಪ್ರಾಣಿಗಳಲ್ಲಿ ಯಾವ ದೋಷಾನೂ ಇರಬಾರದು.+ 24 ಯಾವಾಗ್ಲೂ ಕೊಡೋ ತರ ಪ್ರತಿಯೊಂದು ಹೋರಿ, ಪ್ರತಿಯೊಂದು ಟಗರು, ಪ್ರತಿಯೊಂದು ಗಂಡು ಕುರಿಮರಿ ಜೊತೆ ಅರ್ಪಿಸಬೇಕಾದ ಧಾನ್ಯ ಅರ್ಪಣೆ, ಪಾನ ಅರ್ಪಣೆ ಕೊಡಬೇಕು. 25 ಪ್ರತಿ ದಿನ ಅರ್ಪಿಸೋ ಸರ್ವಾಂಗಹೋಮ ಬಲಿ, ಧಾನ್ಯ ಅರ್ಪಣೆ, ಪಾನ ಅರ್ಪಣೆ ಜೊತೆ ಒಂದು ಆಡುಮರಿಯನ್ನ ಪಾಪಪರಿಹಾರಕ ಬಲಿಯಾಗಿ ಅರ್ಪಿಸಬೇಕು.+

26 ಹಬ್ಬದ ಐದನೇ ದಿನ 9 ಹೋರಿ, 2 ಟಗರು, ಒಂದು ವರ್ಷದ 14 ಗಂಡು ಕುರಿಮರಿಗಳನ್ನ ಅರ್ಪಿಸಬೇಕು. ಈ ಪ್ರಾಣಿಗಳಲ್ಲಿ ಯಾವ ದೋಷಾನೂ ಇರಬಾರದು.+ 27 ಯಾವಾಗ್ಲೂ ಕೊಡೋ ಕ್ರಮದಲ್ಲೇ ಪ್ರತಿಯೊಂದು ಹೋರಿ, ಪ್ರತಿಯೊಂದು ಟಗರು, ಪ್ರತಿಯೊಂದು ಗಂಡು ಕುರಿಮರಿ ಜೊತೆ ಅರ್ಪಿಸಬೇಕಾದ ಧಾನ್ಯ ಅರ್ಪಣೆ, ಪಾನ ಅರ್ಪಣೆ ಕೊಡಬೇಕು. 28 ಪ್ರತಿ ದಿನ ಅರ್ಪಿಸೋ ಸರ್ವಾಂಗಹೋಮ ಬಲಿ, ಧಾನ್ಯ ಅರ್ಪಣೆ, ಪಾನ ಅರ್ಪಣೆ ಜೊತೆ ಒಂದು ಆಡನ್ನ ಪಾಪಪರಿಹಾರಕ ಬಲಿಯಾಗಿ ಅರ್ಪಿಸಬೇಕು.+

29 ಹಬ್ಬದ ಆರನೇ ದಿನ 8 ಹೋರಿ, 2 ಟಗರು, ಒಂದು ವರ್ಷದ 14 ಗಂಡು ಕುರಿಮರಿಗಳನ್ನ ಅರ್ಪಿಸಬೇಕು. ಈ ಪ್ರಾಣಿಗಳಲ್ಲಿ ಯಾವ ದೋಷಾನೂ ಇರಬಾರದು.+ 30 ಯಾವಾಗ್ಲೂ ಕೊಡೋ ಕ್ರಮದಲ್ಲೇ ಪ್ರತಿಯೊಂದು ಹೋರಿ, ಪ್ರತಿಯೊಂದು ಟಗರು, ಪ್ರತಿಯೊಂದು ಗಂಡು ಕುರಿಮರಿ ಜೊತೆ ಅರ್ಪಿಸಬೇಕಾದ ಧಾನ್ಯ ಅರ್ಪಣೆ, ಪಾನ ಅರ್ಪಣೆ ಕೊಡಬೇಕು. 31 ಪ್ರತಿ ದಿನ ಅರ್ಪಿಸೋ ಸರ್ವಾಂಗಹೋಮ ಬಲಿ, ಧಾನ್ಯ ಅರ್ಪಣೆ, ಪಾನ ಅರ್ಪಣೆ ಜೊತೆ ಒಂದು ಆಡನ್ನ ಪಾಪಪರಿಹಾರಕ ಬಲಿಯಾಗಿ ಅರ್ಪಿಸಬೇಕು.+

32 ಹಬ್ಬದ ಏಳನೇ ದಿನ 7 ಹೋರಿ, 2 ಟಗರು, ಒಂದು ವರ್ಷದ 14 ಗಂಡು ಕುರಿಮರಿಗಳನ್ನ ಅರ್ಪಿಸಬೇಕು. ಈ ಪ್ರಾಣಿಗಳಲ್ಲಿ ಯಾವ ದೋಷಾನೂ ಇರಬಾರದು.+ 33 ಯಾವಾಗ್ಲೂ ಕೊಡೋ ಕ್ರಮದಲ್ಲೇ ಪ್ರತಿಯೊಂದು ಹೋರಿ, ಪ್ರತಿಯೊಂದು ಟಗರು, ಪ್ರತಿಯೊಂದು ಗಂಡು ಕುರಿಮರಿ ಜೊತೆ ಅರ್ಪಿಸಬೇಕಾದ ಧಾನ್ಯ ಅರ್ಪಣೆ, ಪಾನ ಅರ್ಪಣೆ ಕೊಡಬೇಕು. 34 ಪ್ರತಿ ದಿನ ಅರ್ಪಿಸೋ ಸರ್ವಾಂಗಹೋಮ ಬಲಿ, ಧಾನ್ಯ ಅರ್ಪಣೆ, ಪಾನ ಅರ್ಪಣೆ ಜೊತೆ ಒಂದು ಆಡನ್ನ ಪಾಪಪರಿಹಾರಕ ಬಲಿಯಾಗಿ ಅರ್ಪಿಸಬೇಕು.+

35 ಎಂಟನೇ ದಿನ ನೀವು ದೇವರ ಆರಾಧನೆಗಾಗಿ ಸೇರಬೇಕಾದ ಒಂದು ವಿಶೇಷ ದಿನ. ಅವತ್ತು ನೀವು ಕಷ್ಟದ ಕೆಲಸ ಮಾಡಬಾರದು.+ 36 ಆ ದಿನ ಒಂದು ಹೋರಿ, ಒಂದು ಟಗರು, ಒಂದು ವರ್ಷದ ಏಳು ಗಂಡು ಕುರಿಮರಿಗಳನ್ನ ಸರ್ವಾಂಗಹೋಮ ಬಲಿಯಾಗಿ ಅರ್ಪಿಸಬೇಕು. ಈ ಪ್ರಾಣಿಗಳಲ್ಲಿ ಯಾವ ದೋಷಾನೂ ಇರಬಾರದು.+ ಆ ಬಲಿಯ ಸುವಾಸನೆ ಯೆಹೋವನಿಗೆ ಖುಷಿ* ತರುತ್ತೆ. 37 ಯಾವಾಗ್ಲೂ ಕೊಡೋ ಕ್ರಮದಲ್ಲೇ ಹೋರಿ, ಟಗರು, ಪ್ರತಿಯೊಂದು ಗಂಡು ಕುರಿಮರಿ ಜೊತೆ ಅರ್ಪಿಸಬೇಕಾದ ಧಾನ್ಯ ಅರ್ಪಣೆ, ಪಾನ ಅರ್ಪಣೆ ಕೊಡಬೇಕು. 38 ಪ್ರತಿ ದಿನ ಅರ್ಪಿಸೋ ಸರ್ವಾಂಗಹೋಮ ಬಲಿ, ಧಾನ್ಯ ಅರ್ಪಣೆ, ಪಾನ ಅರ್ಪಣೆ ಜೊತೆ ಒಂದು ಆಡನ್ನ ಪಾಪಪರಿಹಾರಕ ಬಲಿಯಾಗಿ ಅರ್ಪಿಸಬೇಕು.+

39 ವರ್ಷದ ಬೇರೆ ಬೇರೆ ಕಾಲಗಳಲ್ಲಿ ಹಬ್ಬಗಳನ್ನ+ ಆಚರಿಸುವಾಗ ಈ ಎಲ್ಲ ಬಲಿಗಳನ್ನ ನೀವು ಯೆಹೋವನಿಗೆ ಅರ್ಪಿಸಬೇಕು. ಹರಕೆ ಕಾಣಿಕೆಗಳನ್ನ,+ ಸ್ವಇಷ್ಟದ+ ಸರ್ವಾಂಗಹೋಮ ಬಲಿಗಳನ್ನ,+ ಧಾನ್ಯ ಅರ್ಪಣೆಗಳನ್ನ,+ ಪಾನ ಅರ್ಪಣೆಗಳನ್ನ,+ ಸಮಾಧಾನ ಬಲಿಗಳನ್ನ+ ಅರ್ಪಿಸೋದ್ರ ಜೊತೆ ಈ ಅರ್ಪಣೆಗಳನ್ನೂ ಕೊಡಬೇಕು.’” 40 ಯೆಹೋವ ಕೊಟ್ಟ ಎಲ್ಲ ಆಜ್ಞೆಗಳನ್ನ ಮೋಶೆ ಇಸ್ರಾಯೇಲ್ಯರಿಗೆ ಹೇಳಿದ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ